ಮಳೆ.. ಮಳೆ.. ಸಿಲ್ಕ್ ಬೋರ್ಡ್ ಹೆಸರು ಬದಲಾಣೆ, ಸಿಂಕ್ ಬೋರ್ಡ್ ಅಂತಾ... Rain Alert

ಮಳೆ.. ಮಳೆ.. ಭರ್ಜರಿಯಾಗಿ ಮಳೆ ಸುರಿಯುತ್ತಿದೆ... ಅದರಲ್ಲೂ ನಮ್ಮ ಬೆಂಗಳೂರಿನ ತುಂಬಾ ಬರೀ ಮಳೆಯದ್ದೇ ಆರ್ಭಟ ಶುರುವಾಗಿ ಜನರು ಕೂಡ ತತ್ತರಿಸಿ ಹೋಗಿದ್ದಾರೆ. ಈ ರೀತಿ ಸರಾಸರಿ 100 ಮಿಲಿ ಮೀಟರ್ ಮಳೆ ಸುರಿದು ದೊಡ್ಡ ಅವಾಂತರ ಸೃಷ್ಟಿಯಾಗಿದೆ. ಜನ ಕೂಡ ಮಳೆ ಕಾಟಕ್ಕೆ ನರಳಿ ಹೋಗಿದ್ದು ಆಫಿಸ್‌ಗೆ ಹೋಗಲು ಕೂಡ ಒದ್ದಾಡಿದ್ದಾರೆ. ಇಂತಹ ಸಮಯದಲ್ಲೇ, ಮಳೆ.. ಮಳೆ.. ಸಿಲ್ಕ್ ಬೋರ್ಡ್ ಹೆಸರು ಬದಲಾಣೆ, ಸಿಂಕ್ ಬೋರ್ಡ್ ಅಂತಾ...

ಮಳೆ... ಮಳೆ... ಮಳೆ... ಈ ರೀತಿ ಮಳೆ ಯಾಕಾದರೂ ಒಂದೇ ಸಮನೇ ಬೀಳುತ್ತಿದೆಯೋ ಗೊತ್ತಿಲ್ಲ. ಮಳೆ ಬೀಳುತ್ತಿರುವ ರಭಸಕ್ಕೆ ಕನ್ನಡ ನಾಡು ತತ್ತರಿಸಿ ಹೊಗಿದ್ದು, ಜನ ಅದರಲ್ಲೂ ಅನ್ನದಾತ ರೈತರು ತಲೆ ಮೇಲೆ ಕೈಹೊತ್ತು ಕೂರುವ ಸ್ಥಿತಿ ನಿರ್ಮಾಣ ಆಗಿದೆ. ಇದು ಸಾಲದು ಎನ್ನುವಂತೆ ಮತ್ತೆ ಮಳೆ ಎಚ್ಚರಿಕೆ ಇದೀಗ ನೀಡಲಾಗಿದೆ. ಅದರಲ್ಲೂ ಐಟಿ ಸಿಟಿ ಬೆಂಗಳೂರು ಕೂಡ ಭಾರಿ ಭರ್ಜರಿ ಮಳೆ ಕಾರಣಕ್ಕೆ ಎಲ್ಲೆಲ್ಲೂ ನೀರು ತುಂಬಿಕೊಂಡು ಒದ್ದಾಡಿ ಹೋಗಿದೆ. ಈ ಪೈಕಿ ನಮ್ಮ ಬೆಂಗಳೂರಿನ ಸಿಲ್ಕ್ ಬೋರ್ಡ್ ಕೂಡ ಮುಳುಗಿ ಹೋಗಿದೆ!

Heavy Rain In Bengaluru And Silk Board Name Is On Trending For This Reason

ಮಳೆ.. ಮಳೆ.. ಸಿಲ್ಕ್ ಬೋರ್ಡ್ ಹೆಸರು...

ಮಳೆ ಆರ್ಭಟ ಇಷ್ಟಕ್ಕೇ ಸೈಲೆಂಟ್ ಆಗುವ ಯಾವುದೇ ಲಕ್ಷಣಗಳು ಕೂಡ ಕಾಣ್ತಿಲ್ಲ. ನಿಮಗೆಲ್ಲಾ ಗೊತ್ತಿರುವಂತೆ ವಾಯುಭಾರ ಕುಸಿತ ಉಂಟಾಗುತ್ತಿದೆ. ವಾಯುಭಾರ ಕುಸಿತ & ಚಂಡಮಾರುತ ಅಪ್ಪಳಿಸುತ್ತಿರುವ ಹಿನ್ನೆಲೆಯಲ್ಲಿ ದೊಡ್ಡ ಅವಾಂತರ ಸೃಷ್ಟಿಯಾಗುತ್ತಿದೆ. ಹೀಗಾಗಿ ಪದೇ ಪದೇ ಮಳೆ ಬರುತ್ತಿದ್ದು, ಕನ್ನಡಿಗರು ಹೀಗೆ ಅಕಾಲಿಕ ಮಳೆಯ ಪರಿಣಾಮ ಬೆಚ್ಚಿ ಬಿದ್ದಿದ್ದಾರೆ. ಬೇಸಿಗೆ ಸಮಯದಲ್ಲೂ ಭರ್ಜರಿ ಮಳೆಯು ಸುರಿಯುತ್ತಿದೆ. ಇಂತಹ ಸಮಯದಲ್ಲೇ, ಸಿಲ್ಕ್ ಬೋರ್ಡ್ ಹೆಸರು ಬದಲಾಣೆ ಆಗಿದೆಯಂತೆ!

ಸಿಲ್ಕ್ ಬೋರ್ಡ್ ಅಲ್ಲ, ಸ್ವಿಮ್ಮಿಂಗ್ ಬೋರ್ಡ್!

ಹೌದು, ಬೆಳ್ಳಂಬೆಳಗ್ಗೆ ಸಿಲ್ಕ್ ಬೋರ್ಡ್ ಭಾಗದಲ್ಲಿ ದೊಡ್ಡ ಕೆರೆ ನಿರ್ಮಾಣ ಆಗಿತ್ತು. ಹೀಗೆ ಜನರು ಕೂಡ ಸಿಲ್ಕ್ ಬೋರ್ಡ್ ಭಾಗದಲ್ಲಿ ಇಂತಹ ಅವಾಂತರ ನೋಡಿ ರೊಚ್ಚಿಗೆದ್ದಿದ್ದಾರೆ & ಈ ಬಗ್ಗೆ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ. ಜೊತೆಗೆ ಸಿಲ್ಕ್ ಬೋರ್ಡ್ ಅಲ್ಲ, ಸ್ವಿಮ್ಮಿಂಗ್ ಬೋರ್ಡ್! ಅಂತಾ ಹೊಸ ಹೆಸರು ಕೂಡ ಕೊಟ್ಟಿದ್ದಾರೆ. ಬೆಂಗಳೂರಲ್ಲಿ ನಿನ್ನೆ ಒಂದೇ ದಿನ ಸುರಿದ ಮಳೆ ಇಡೀ ವರ್ಷ ಸುರಿಯಬೇಕಿತ್ತು, ಅಷ್ಟು ದೊಡ್ಡ ಪ್ರಮಾಣದಲ್ಲಿ ಮಳೆ ಬಿದ್ದ ಕಾರಣಕ್ಕೆ ಕನ್ನಡಿಗರು ನರಳಾಡುವ ಸ್ಥಿತಿ ಬಂದೆರಗಿದೆ. ಇಂತಹ ಸಮಯದಲ್ಲೇ ಹವಾಮಾನ ಇಲಾಖೆ ನೀಡಿರುವ ಮಾಹಿತಿ ಜನರನ್ನು ಇನ್ನಷ್ಟು & ಮತ್ತಷ್ಟು ಭಯಪಡುವಂತೆ ಮಾಡಿದೆ. ಬೆಂಗಳೂರಿನಲ್ಲಿ ನಿನ್ನೆ ಸುರಿದ ಮಳೆ 2011ರ ದಾಖಲೆ ಉಡೀಸ್ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+