School Holidays: ರಾಜ್ಯದ ಈ ಜಿಲ್ಲೆಗಳ ಶಾಲೆಗಳಿಗೆ ರಜೆ ಘೋಷಣೆ...Rain Alert

Karnataka School Holidays: ಮುಂಗಾರು ಮಳೆ ರಾಜ್ಯಾದ್ಯಂತ ಅಬ್ಬರಿಸುತ್ತಿದೆ. ಈ ಪೈಕಿ ಒಂದೆರಡು ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಅತ್ಯಧಿಕ ಮಳೆ ಆಗುವ ಸೂಚನೆ ಇದೆ. ಅದರಲ್ಲಿ ಉಡುಪಿ ಜಿಲ್ಲೆಯು ಒಂದು. ಇಲ್ಲಿ ಕನಿಷ್ಠ 200 ಮಿಲಿ ಮೀಟರ್ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿ ಎರಡು ದಿನ 'ರೆಡ್ ಅಲರ್ಟ್'‌ ನೀಡಿದೆ. ಈ ಜಿಲ್ಲೆ ಸೇರಿದಂತೆ ಎರಡು ಜಿಲ್ಲೆಗಳಲ್ಲಿ ಭಾರೀ ಮಳೆಯ ಕಾರಣಕ್ಕೆ ಶಾಲೆಗಳು, ಅಂಗನವಾಡಿಗಳಿಗೆ ರಜೆ ನೀಡಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ರಾಜ್ಯದಲ್ಲಿ ಕೆಲವು ವಾರಗಳಿಂದ ಮಳೆ ಆಗುತ್ತಿದೆ. ಇದೀಗ ಉಡುಪಿಯಲ್ಲಿ ಹಾಗೂ ಧಾರವಾಡ ಜಿಲ್ಲೆಯಲ್ಲಿ ಅದರ ತೀವ್ರತೆ ಮತ್ತಷ್ಟು ಜೋರಾಗಿದೆ. ನಿರಂತರ ಮಳೆ ಸುರಿಯುತ್ತಿದೆ. ಉಡುಪಿ ವ್ಯಾಪ್ತಿಯ ಶಾಲೆ-ಕಾಲೇಜುಗಳಿಗೆ ಹಾಗೂ ಧಾರವಾಡದಲ್ಲಿ ಶಾಲೆ-ಅಂಗನವಾಡಿ ಕೇಂದ್ರಗಳಿಗೆ ಆಗಸ್ಟ್ 19ರಂದು ಮಂಗಳವಾರ ರಜೆ ಘೋಷಣೆ ಮಾಡಿ ಆದೇಶ ಹೊರಡಿಸಲಾಗಿದೆ.

Heavy Rain Alert Karnataka s These 2 Districts Declare School Holidays on Aug 19 20

ಹವಾಮಾನದಲ್ಲಿ ಉಂಟಾಗುತ್ತಿರುವ ನಿರಂತರ ಬದಲಾವಣೆ ಆಗುತ್ತಿದೆ. ಚಂಡಮಾರುತ ಪರಿಚಲನೆಯ ಸೃಷ್ಟಿಯಾಗಿದೆ, ಅರಬ್ಬಿ ಸಮುದ್ರದ ಮೇಲ್ಮೈನಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಒಡಿಶಾ ಕರಾವಳಿ ಹಾಗೂ ತಮಿಳುನಾಡು ಕರಾವಳಿ ಭಾಗದಲ್ಲಿ ವೈಪರೀತ್ಯಗಳು ಸಂಭವಿಸಿವೆ. ಹೀಗಾಗಿ ಬಿಟ್ಟು ಬಿಡದೇ ಸುರಿಯುತ್ತಿದ್ದ ಮಳೆ ಇದೀಗ ಕರ್ನಾಟಕದಲ್ಲಿ ತೀವ್ರ ಸ್ವರೂಪದಲ್ಲಿ ತಾಳಿದೆ.

ಕರಾವಳಿಯ ಉಡುಪಿ ಜಿಲ್ಲೆಗೆ ಆಗಸ್ಟ್ 19 & 20ರಂದು ಬಿರುಗಾಳಿ ಸಹಿತ ಅತ್ಯಧಿಕ ಭಾರೀ ಮಳೆ ಆಗಲಿದೆ. ಕನಿಷ್ಠ 200 ಮಿಲಿ ಮೀಟರ್‌ನಷ್ಟು ಮಳೆ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಜಿಲ್ಲಾಧಿಕಾರಿಗಳು ಹವಾಮಾನ ತಜ್ಞರ ಜತೆ ನಿರಂತರ ಸಂಪರ್ಕದಲ್ಲಿದ್ದಾರೆ. ಇನ್ನೂ ಧಾರವಾಡ ಜಿಲ್ಲೆಯಲ್ಲಿ ಮಂಗಳವಾರ ಮಳೆ ಆಗಲಿದೆ, ಅದಕ್ಕಿಂತಲೂ ಹೆಚ್ಚು ಬುಧವಾರ ಮಳೆ ಮತ್ತಷ್ಟು ತೀವ್ರಗೊಳ್ಳಲಿದೆ. ಅಂದು ಕನಿಷ್ಠ 150 ಮಿಲಿ ಮೀಟರ್ ಮಳೆ ಸಾಧ್ಯತೆ ಇದೆ.

ಆಗಸ್ಟ್ 20ರಂದು ಇಲ್ಲಿ ಶಾಲೆಗಳಿಗೆ ರಜೆ ಘೋಷಣೆ

ಭಾರೀ ಮಳೆ ಬುಧವಾರವಾರವರೆಗೂ ಮುಂದುವರಿಯುವ ಲಕ್ಷಣ ಇದೆ. ಈ ಉಡುಪಿ, ಧಾರವಾಡ ಎರಡು ಜಿಲ್ಲೆಗಳ ಶಾಲೆಗಳು, ಅಂಗನವಾಡಿ ಹಾಗೂ ಕಾಲೇಜುಗಳಿಗೆ ಆಗಸ್ಟ್ 20ರಂದು ಸಹ ರಜೆ ವಿಸ್ತರಣೆ ಆಗುವ ನಿರೀಕ್ಷೆ ಇದೆ. ಇವು ಸೇರಿದಂತೆ ರಾಜ್ಯದ ಮಲೆನಾಡಿನ ಜಿಲ್ಲೆಗಳಿಗೂ ಧಾರಾಕಾರ ಮಳೆ ಆಗಿದೆ. ಶಿವಮೊಗ್ಗ, ಕೊಪ್ಪಳ, ಹಾಸನ, ಚಿಕ್ಕಮಗಳೂರು, ಕೊಡಗು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆ ಆರ್ಭಟಿಸುತ್ತಿದೆ. ಈ ಜಿಲ್ಲೆಗಳ ಶಾಲೆಗಳಿಗೆ ಸೋಮವಾರ (ಆ.18)ರಂದು ರಜೆ ನೀಡಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+