Karnataka Rains: ಕರ್ನಾಟಕದ ಮುಂದಿನ 05 ದಿನದ ಹವಾಮಾನ ಮುನ್ಸೂಚನೆ ಇಲ್ಲಿದೆ

ಬೆಂಗಳೂರು, ಸೆಪ್ಟಂಬರ್ 25: ಕರ್ನಾಟಕದ ಕರಾವಳಿ ಹಾಗೂ ಒಳನಾಡಿನ ಅನೇಕ ಜಿಲ್ಲೆಗಳಲ್ಲಿ ಮುಂದಿನ ಏಳು ದಿನಗಳಲ್ಲಿ ಮಳೆಯ ಮುನ್ಸೂಚನೆ ನೀಡಲಾಗಿದೆ. ಕೆಲವು ಭಾಗಗಳಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ ಬರುವ ಮುನ್ಸೂಚನೆ ಇದೆ. ಕರಾವಳಿ, ಮಲೆನಾಡಿನಲ್ಲಿ ಗಾಳಿಯ ವೇಗ ಹೆಚ್ಚಾಗಬಹುದೆಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ತಂಪು ವಾತಾವರಣ ಆಗಾಗ ಹಗುರ ಮಳೆ ಆಗುತ್ತಿದೆ. ಈ ಮಳೆ 25ರಂದು ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ತೀವ್ರಗೊಳ್ಳಲಿದೆ. ಈ ಭಾಗದಲ್ಲಿ ಭಾರೀ ಮಳೆಯ ಆಗಲಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಗುರದಿಂದ ಸಾಧಾರಣ ಮಳೆ ಸಂಭವವಿದೆ. 27ರಿಂದ 30ರ ಅವಧಿಯಲ್ಲಿ ಮುಂಗಾರು ಮಳೆ ತೀವ್ರತೆ ಹೆಚ್ಚಾಗಲಿದೆ.

Heavy Rain Alert in Karnataka IMD Forecasts Showers Across Coastal and Interior Districts

ಒಳನಾಡು ಜಿಲ್ಲೆಗಳಲ್ಲಿ ಸಾಧಾರಣ-ಭಾರೀ ಮಳೆ

ಇನ್ನೂ ಒಳನಾಡು ಜಿಲ್ಲೆಗಳ ಪೈಕಿ ಬಾಗಲಕೋಟೆ, ಬೆಳಗಾವಿ, ಬೀದರ್, ಕಲಬುರಗಿ, ವಿಜಯಪುರ, ಯಾದಗಿರಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆ ನಿರೀಕ್ಷೆ ಇದೆ. ಅಲ್ಲಲ್ಲಿ ಗುಡುಗು ಮಿಂಚು ಸಹಿತ ವ್ಯಾಪಕ ಮಳೆ ಸಹ ಆಗಬಹುದು. ಸೆಪ್ಟೆಂಬರ್ 26ರ ನಂತರ ಇದೇ ಜಿಲ್ಲೆಗಳಳ್ಲಿ ಭಾರೀ ಮಳೆ ನಿರೀಕ್ಷೆ ಇದೆ ಎಂದು ಐಎಂಡಿ ತಿಳಿಸಿದೆ.

ಬೆಂಗಳೂರು ನಗರ ಹಾಗೂ ಗ್ರಾಮಾಂತರ, ಮೈಸೂರು, ತುಮಕೂರು, ಶಿವಮೊಗ್ಗ, ಹಾಸನ, ಕೊಡಗು, ಚಿಕ್ಕಮಗಳೂರು, ದಾವಣಗೆರೆ, ಮಂಡ್ಯ, ರಾಮನಗರ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಹಗುರ ಮಳೆ ಆಗಬಹುದು. ಚಿಕ್ಕಮಗಳೂರು ಮತ್ತು ಶಿವಮೊಗ್ಗದಲ್ಲಿ ಭಾರೀ ಮಳೆ ಸಾಧ್ಯತೆ ಇದ್ದು, ಈ ಭಾಗಗಳಲ್ಲಿ ಸೆಪ್ಟೆಂಬರ್ 26ರಿಂದ ಮಳೆ ಹೆಚ್ಚಿನ ಪ್ರಮಾಣದಲ್ಲಿ ಸುರಿಯುವ ಮುನ್ಸೂಚನೆ ಇದೆ.

ಬೆಂಗಳೂರು ಹವಾಮಾನ ಮುನ್ಸೂಚನೆ

ರಾಜಧಾನಿ ಬೆಂಗಳೂರಿನಲ್ಲಿ 48 ಗಂಟೆಗಳ ಕಾಲ ಮೋಡ ಕವಿದ ಆಕಾಶ ಕಂಡ ಬರಲಿದೆ. ವಿವಿಧ ಬಡಾವಣೆಗಳಲ್ಲಿ ಸಾಮಾನ್ಯ, ಕೆಲವೆಡೆ ಜೋರು ಮಳೆ ಸಂಭವವಿದೆ. ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ಕಂಡು ಬರಲಿದೆ. ರಾಜ್ಯದಲ್ಲಿ ಕರ್ನಾಟಕದ ಕರಾವಳಿ ಹಾಗೂ ಒಳನಾಡಿನ ಜಿಲ್ಲೆಗಳಲ್ಲಿ ಮುಂದಿನ ವಾರ ಮಳೆಯ ಪ್ರಮಾಣ ಹೆಚ್ಚಾಗುವ ನಿರೀಕ್ಷೆಯಿದೆ. ಮೀನುಗಾರರು, ಬೆಳೆ ಬೆಳೆದ ರೈತರು ಹಾಗೂ ವಾಹನ ಸವಾರರು ಜಾಗೃತೆ ವಹಿಸಬೇಕೆಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ನೆನ್ನೆ ಹಲವೆಡೆ ಸಾಮಾನ್ಯ ಮಳೆ ದಾಖಲು, ಎಲ್ಲೆಲ್ಲಿ?

ಕರ್ನಾಟಕದ ಹಲವೆಡೆ ನೆನ್ನೆ ಮಳೆಯಾಗಿದೆ. ಹೋನ್ನಾವರದಲ್ಲಿ 7.7 ಮಿಮೀ, ವಿಜಯಪುರದಲ್ಲಿ 5.2 ಮಿಮೀ ಹಾಗೂ ಬೆಂಗಳೂರಿನ ಕೆಐಎಲ್ ವಿಮಾನ ನಿಲ್ದಾಣದಲ್ಲಿ 2.2 ಮಿಮೀ ಮಳೆಯಾಗಿದೆ. ಕುಡಗಿನಲ್ಲಿ ಗೋಣಿಕೊಪ್ಪಲ್‌ನಲ್ಲಿ 8 ಮಿಮೀ, ಅಗುಂಬೆಯಲ್ಲಿ 10 ಮಿಮೀ, ಮೂಡಿಗೆರೆಯಲ್ಲಿ 1 ಮಿಮೀ ಹಾಗೂ ಚಿಕ್ಕಮಗಳೂರಿನ ಹಾರ್ದನಹಳ್ಳಿಯಲ್ಲಿ 4.5 ಮಿಮೀ ಮಳೆಯಾಗಿದೆ. ಕರಾವಳಿಯಲ್ಲಿ ಮಂಗಳೂರಿನಲ್ಲಿ 3 ಮಿಮೀ ಮಳೆಯಾದರೆ, ಬೆಂಗಳೂರಿನ ಗೋಪಾಲನಗರದಲ್ಲಿ 2.5 ಮಿಮೀ, ಹೆಸರಘಟ್ಟ ಮತ್ತು ದೊಡ್ಡಬಳ್ಳಾಪುರದಲ್ಲಿ ತಲಾ 0.5 ಮಿಮೀ, ರಾಮನಗರದ ಚಂದ್ರಾಯಣಗಲ್ಲಿ ಪ್ರದೇಶದಲ್ಲಿ 1 ಮಿಮೀ ಮತ್ತು ಕೋಲಾರದ ತಮಕದಲ್ಲಿ 1.2 ಮಿಮೀ ಮಳೆಯಾಗಿದೆ. ಉತ್ತರ ಕರ್ನಾಟಕದ ಗಂಗಾವತಿಯಲ್ಲಿ 2 ಮಿಮೀ ಹಾಗೂ ಕಲಬುರಗಿಯ ಆಲಂದ್‌ನಲ್ಲಿ 0.5 ಮಿಮೀ ಮಳೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+