Karnataka Alert: ಮಳೆ ಆರ್ಭಟ ಮತ್ತೆ ಶುರು.. ಕರ್ನಾಟಕದ ಈ ಜಿಲ್ಲೆಗಳಲ್ಲಿ ಭಾರಿ ಮಳೆ...

ಮಳೆ ಆರ್ಭಟ ಕಂಟ್ರೋಲ್‌ಗೆ ಸಿಗುತ್ತಿಲ್ಲ, ಕರ್ನಾಟಕದಲ್ಲಿ ಈ ಬಾರಿ ಮುಂಗಾರು ಮಳೆಯ ಆರ್ಭಟಕ್ಕೆ ನದಿಗಳು ಉಕ್ಕಿ ಹರಿದು ಕರ್ನಾಟಕ ರಾಜ್ಯದಲ್ಲಿ ಇರುವ ಪ್ರತಿಯೊಂದು ಡ್ಯಾಂ & ಕೆರೆ, ಹೊಂಡಗಳು ತುಂಬಿ ತುಳುಕುತ್ತಿವೆ. ಅನ್ನದಾತ ರೈತರು & ಕನ್ನಡಿಗರು ಈ ರೀತಿ ಭಾರಿ ಮಳೆ ಕಂಡು ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ.

ಪರಿಸ್ಥಿತಿ ಹೀಗಿದ್ದಾಗಲೇ ಈ ಬಾರಿ ಒಳ್ಳೆಯ ಬೆಳೆ ಅಂದ್ರೆ ಫಸಲು ಕೈಗೆ ಸೇರಬಹುದು ಎಂಬ ನಿರೀಕ್ಷೆಯಲ್ಲಿ ನಮ್ಮ ನಾಡಿನ ರೈತರು ಇದ್ದರು. ಆದರೆ, ರೈತರ ಆಸೆಯನ್ನು ಮಣ್ಣುಪಾಲು ಮಾಡುತ್ತಿದೆ ಮಳೆ. ಹೊಲ & ಗದ್ದೆಯಲ್ಲಿ ಬೆಳೆದು ನಿಂತಿರುವ ಫಸಲು ಉಳಿಸಿಕೊಳ್ಳಲು ಈಗ ರೈತರು ಪರದಾಡುತ್ತಿರುವ ಸಮಯಕ್ಕೆ ಕರ್ನಾಟಕದ ಈ ಜಿಲ್ಲೆಗಳಿಗೆ ಮತ್ತೊಮ್ಮೆ ಭಾರಿ ಮಳೆಯ ಎಚ್ಚರಿಕೆ ನೀಡಲಾಗಿದೆ.

Heavy Rain Alert Has Been Issued From 14Th Of November 2024 For These Parts Of Karnataka

ಹಿಂಗಾರು ಮಳೆಯ ಅಬ್ಬರ ಮತ್ತೆ ಶುರು!

ಮಳೆ... ಮಳೆ... ಮಳೆ... ಹೀಗೆ 2024ರ ವರ್ಷದಲ್ಲಿ ಬರೀ ಮಳೆಯದ್ದೇ ಗದ್ದಲ ಇತ್ತು. ಯಾಕಂದ್ರೆ ಕರ್ನಾಟಕದಲ್ಲಿ ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ ಭಾರಿ ಮಳೆ ಸುರಿದಿತ್ತು. ಹೀಗೆ ಭಾರಿ ಮಳೆ ಕಾರಣಕ್ಕೆ ಜನರು ಕೂಡ ತತ್ತರಿಸಿ ಹೋಗಿದ್ದರು. ಹೀಗಿದ್ದಾಗ ಇನ್ನೇನು ಮುಂಗಾರು ಮಳೆ ಮುಗಿದ ತಕ್ಷಣ ನೆಮ್ಮದಿ ಸಿಗಲಿದೆ ಅಂತಾನೇ ಜನರು ಅಂದುಕೊಂಡಿದ್ದರು. ಆದರೆ ಈ ಆಸೆಯನ್ನು ಮತ್ತೊಮ್ಮೆ ಮಳೆರಾಯ ಸುಳ್ಳು ಮಾಡುತ್ತಿದ್ದು, ಹಿಂಗಾರು ಮಳೆಯ ಅಬ್ಬರ ಮತ್ತೆ ಶುರುವಾಗಿದೆ. ಹಾಗಾದ್ರೆ, ಮತ್ತೆ ಭಾರಿ ಮಳೆ ಸುರಿಯಲಿರುವ ಜಿಲ್ಲೆಗಳು ಯಾವುವು?

ಮಳೆ.. ಮಳೆ.. ಭಾರಿ ಮಳೆ!

ಬಂಗಾಳ ಕೊಲ್ಲಿಯಲ್ಲಿ ಇದೀಗ ವಾತಾವರಣ ಮತ್ತೆ ಕೈಮೀರಿ ಹೋಗುತ್ತಿದೆ. ಹೀಗಾಗಿ ಬಂಗಾಳ ಕೊಲ್ಲಿ ಭಾಗದಲ್ಲಿ ಇದೀಗ ಚಂಡಮಾರುತ ಸೃಷ್ಟಿಯಾಗಿದೆ. ಹೀಗೆ ಚಂಡಮಾರುತ ಹಿನ್ನೆಲೆ, ನವೆಂಬರ್‌ 14 ರಿಂದ ನವೆಂಬರ್‌ 18ರ ತನಕ ಕರ್ನಾಟಕದಲ್ಲಿ ಭಾರಿ ಮಳೆಯ ಮುನ್ನೆಚ್ಚರಿಕೆ ನೀಡಲಾಗಿದೆ. ಹವಾಮಾನ ಇಲಾಖೆ ಭಾರಿ ಮಳೆ ಸುರಿಯುವ ಜಿಲ್ಲೆಗಳ ಬಗ್ಗೆ ಮಾಹಿತಿಯನ್ನ ನೀಡಿದ್ದು, ಮತ್ತೊಮ್ಮೆ ರೈತರಲ್ಲಿ ಈ ಬಗ್ಗೆ ಟೆನ್ಷನ್ ಶುರುವಾಗಿದೆ. ಹಾಗಾದ್ರೆ ಭಾರಿ ಮಳೆ ಸುರಿಯುವ ಕರ್ನಾಟಕದ ಜಿಲ್ಲೆಗಳು ಯಾವುವು?

ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಿಗೆ...

ಹವಾಮಾನ ಇಲಾಖೆ ಮಾಹಿತಿ ಪ್ರಕಾರ ನವೆಂಬರ್‌ 14 ರಿಂದ 16ರ ತನಕವೂ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಬೀಳಲಿದ್ದು, ಈ ಪೈಕಿ ಕರಾವಳಿ ಜಿಲ್ಲೆಗಳು ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳ ಕೆಲವೆಡೆ ವ್ಯಾಪಕ ಮಳೆ ಬೀಳಲಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಸೇರಿದಂತೆ, ಮಲೆನಾಡಿನ ಚಿಕ್ಕಮಗಳೂರು, ಕೊಡಗು & ಶಿವಮೊಗ್ಗ ಜಿಲ್ಲೆಗಳಿಗೆ ಭಾರಿ ಮಳೆ ಬೀಳುವ ಮುನ್ಸೂಚನೆ ಇರುವ ಕಾರಣಕ್ಕೆ ಯೆಲ್ಲೊ ಅಲರ್ಟ್‌ ಘೋಷಣೆ ಮಾಡಲಾಗಿದೆ.

ಹಾಗೇ ಕನ್ನಡಿಗರ ರಾಜಧಾನಿ ಬೆಂಗಳೂರು ಸೇರಿದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕೂಡ ಮಳೆ ಅಬ್ಬರಿಲಿಸದೆ. ಮಂಡ್ಯ, ಮೈಸೂರು, ರಾಮನಗರ, ಚಿಕ್ಕಬಳ್ಳಾಪುರ & ಕೋಲಾರ ಜಿಲ್ಲೆಗಳಲ್ಲೂ ಭಾರಿ ಮಳೆಯ ಮುನ್ಸೂಚನೆ ನೀಡಲಾಗಿದೆ. ಹೀಗಾಗಿ ಕನ್ನಡಿಗರಿಗೆ ಮಳೆಯ ಬಗ್ಗೆ ಹೊಸ ಚಿಂತೆ ಕೂಡ ಶುರುವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+