Rain Alert: ಮುಂದಿನ 24 ಗಂಟೆಯಲ್ಲಿ ಗುಡುಗು ಸಹಿತ ಭರ್ಜರಿ ಮಳೆ! ಶಾಲಾ & ಕಾಲೇಜಿಗೆ ರಜೆ ಘೋಷಣೆ, ಪರೀಕ್ಷೆಗಳು ಮುಂದೂಡಿಕೆ?
ಹೂ ಮಳೆ.. ಹೂ ಮಳೆ.. ಅಂತಾ ಹಾಡುವ ಕಾಲ ಹೊರಟು ಹೋಯ್ತು. ಯಾಕೆ ಅಂದ್ರೆ ಈಗಿನ ಕಾಲದಲ್ಲಿ ಮಾಮೂಲಿ ಮಳೆ ಬೀಳೋದೆ ಕಷ್ಟ ಆಗಿದೆ. ಹೀಗಿದ್ದಾಗ ಹೂ ಮಳೆಯ ಬಗ್ಗೆ ನಿರೀಕ್ಷೆ ಇಟ್ಟುಕೊಳ್ಳಲು ಆಗುತ್ತಾ ಹೇಳಿ? ಹೌದು, ಇಡೀ ಕರ್ನಾಟಕ ಇದೀಗ ಮಳೆಯ ಕೊರತೆ ಕಾರಣಕ್ಕೆ ನಲುಗಿ ಹೋಗಿದೆ. ಹೀಗಿದ್ದಾಗ ಹಮಾವಾನ ಇಲಾಖೆ ಇದೀಗ ಸಿಹಿಸುದ್ದಿ ನೀಡಿದೆ, ಹಾಗಾದರೆ ಏನದು ಮಳೆ ಬಗ್ಗೆ ಕನ್ನಡಿಗರಿಗೆ ಗುಡ್ ನ್ಯೂಸ್??
ಸಾಮಾನ್ಯವಾಗಿ ಶಿವರಾತ್ರಿ ಹಬ್ಬಕ್ಕೂ ಮೊದಲು ಒಂದು ಮಳೆ ಬರುತ್ತದೆ ಹಾಗೂ ಉಗಾದಿ ಅಥವಾ ಯುಗಾದಿ ಹಬ್ಬಕ್ಕೂ ಮೊದಲು ಒಂದು ಮಳೆ ಬರುತ್ತದೆ. ಹೀಗೆ ಬೇಸಿಗೆ ಸಮಯಕ್ಕೆ ಭರ್ಜರಿ ಮಳೆ ಜನರಿಗೆ ಒಂದು ರಿಲೀಫ್ ನೀಡುತ್ತದೆ. ಅದೇ ನಿರೀಕ್ಷೆಯಲ್ಲಿ ಈ ಬಾರಿ ಕೂಡ ಜನರು ಇದ್ದಾರೆ. ಹೀಗೆ ಜನರ ನಿರೀಕ್ಷೆಗಳ ನಡುವೆ ಹವಾಮಾನ ಇಲಾಖೆ ಕೂಡ ಗುಡ್ ನ್ಯೂಸ್ ಕೊಟ್ಟಿದೆ. ಹಾಗಾದರೆ ಏನದು ಗುಡ್ ನ್ಯೂಸ್? ರಾಜ್ಯದಲ್ಲಿ ಭರ್ಜರಿ ಮಳೆ ಬೀಳುತ್ತಾ? ಈ ಬಗ್ಗೆ ಏನ್ ಹೇಳುತ್ತೆ ಹವಾಮಾನ ಇಲಾಖೆ? ಬನ್ನಿ ತಿಳಿಯೋಣ.

ಮಳೆ.. ಮಳೆ.. ಮಳೆ.. ಹೀಗೆ ಮಳೆಗಾಗಿ ರೈತರು, ಜನರು ಕಾಯುತ್ತಾ ಕೂತಿದ್ದಾರೆ. ಆದರೂ ಈವರೆಗೂ ಮಳೆರಾಯ ಕರುಣೆ ತೋರಿಸುತ್ತಿಲ್ಲ. ಮಳೆ ಬಿಡಿ ಬೇಸಿಗೆ ಆರಂಭಕ್ಕೂ ಮೊದಲು ಈ ಸಮಯದಲ್ಲಿ ಕೊತ ಕೊತ ಕುದಿಯುವ ಬಿಸಿಲು ಇದೆ. ಹೀಗಾಗಿ ಜನರು ಪ್ರತಿನಿತ್ಯ ಭಾರಿ ದೊಡ್ಡ ಸಂಕಷ್ಟ ಎದುರಿಸುವಂತಾಗಿದೆ. ಇಂತಹ ಸಮಯದಲ್ಲೇ ಉತ್ತರ ಭಾರತ ಇದೀಗ ಭಾರಿ ಮಳೆ ಆರ್ಭಟಕ್ಕೆ ತತ್ತರಿಸಿ ಹೋಗಿದೆ. ಹಿಮಾಚಲ ಪ್ರದೇಶ, ಜಮ್ಮು & ಕಾಶ್ಮೀರ, ಉತ್ತರ ಪ್ರದೇಶ ಸೇರಿ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಾರಿ ಮಳೆ ಸುರಿಯುತ್ತಿದೆ. ಈ ಮಧ್ಯೆ ಕನ್ನಡಿಗರ ನಾಡು ಕರ್ನಾಟಕಕ್ಕೆ ಕೂಡ ಗುಡ್ ನ್ಯೂಸ್ ಸಿಕ್ಕಿದೆ. ಅಂದ್ರೆ ಕರ್ನಾಟಕದಲ್ಲಿ ಕೂಡ ಮಳೆಯ ಅಬ್ಬರ ಗ್ಯಾರಂಟಿ ಎನ್ನಲಾಗುತ್ತಿದೆ.
ಭಾರಿ ಮಳೆ, ಶಾಲಾ & ಕಾಲೇಜು...
ಉತ್ತರ ಭಾರತದ ಬಹುತೇಕ ರಾಜ್ಯದಲ್ಲಿ ಗುಡುಗು & ಸಿಡಿಲು ಸಹಿತ ಮಳೆ ಬೀಳುತ್ತಿದೆ. ಈ ಕಾರಣಕ್ಕೆ ಅಲ್ಲಿನ ಜನರು ಸಂಪೂರ್ಣ ನಲುಗಿ ಹೋಗಿದ್ದಾರೆ. ಅದರಲ್ಲೂ ಪರೀಕ್ಷೆ ಆರಂಭ ಆಗಿರುವ ಸಮಯದಲ್ಲೇ ಇಂತಹ ಪರಿಸ್ಥಿತಿ ನಿರ್ಮಾಣ ಆಗಿದೆ. ಹೀಗಾಗಿ ಉತ್ತರ ಭಾರತದಲ್ಲಿ ಬಹುತೇಕ ರಾಜ್ಯಗಳ ಶಾಲಾ & ಕಾಲೇಜು ಬಂದ್ ಮಾಡಿ ರಜೆ ಘೋಷಣೆ ಮಾಡಲಾಗಿದ್ದು, ಪರೀಕ್ಷೆಗಳು ಮುಂದೂಡಿಕೆ ಆಗುವ ಸಾಧ್ಯತೆ ಇದೆ. ಅಲ್ಲದೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಹಾಗಾದರೆ ಕರ್ನಾಟಕದ ಪರಿಸ್ಥಿತಿ ಏನು?

ಹವಾಮಾನ ಇಲಾಖೆ ತಜ್ಞರ ಪ್ರಕಾರ ಕರ್ನಾಟಕದಲ್ಲಿ ವರುಣ ದೇವ ಕರುಣೆಯ ತೋರಿಸಲಿದ್ದು, ಮುಂದಿನ ಕೆಲವು ದಿನದಲ್ಲಿ ಮಳೆ ಬೀಳುವ ನಿರೀಕ್ಷೆ ಇದೆ. ಮುಖ್ಯವಾಗಿ ಗಮನಿಸಬೇಕಾದ ಅಂಶ ಏನೆಂದರೆ ಮಾರ್ಚ್ ಮೊದಲನೇ ವಾರದಲ್ಲಿ ದಾವಣಗೆರೆ, ಬೆಂಗಳೂರು, ಮೈಸೂರು, ಕೊಡಗು & ಚಿಕ್ಕಮಗಳೂರು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮಳೆ ಬರಲಿದೆ ಅಂತಾ ಹವಾಮಾನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ರು. ಇದರ ಜೊತೆ ಕರ್ನಾಟಕದ ಇನ್ನು ಹಲವು ಜಿಲ್ಲೆಗಳಲ್ಲಿ ಮಳೆ ಬೀಳುವ ನಿರೀಕ್ಷೆ ದಟ್ಟವಾಗಿದೆ ಎನ್ನಲಾಗಿತ್ತು. ಹೀಗಾಗಿ ಈ ವಾರ ಅಥವಾ ಮುಂದಿನ ವಾರ ಗುಡ್ ನ್ಯೂಸ್ ಸಿಗುವ ನಿರೀಕ್ಷೆ ಇದೆ.
ಒಟ್ನಲ್ಲಿ ಮಳೆ ಬರಬೇಕಿದೆ, ಇಲ್ಲವಾದರೆ ಕರ್ನಾಟಕದ ಪರಿಸ್ಥಿತಿ ಮತ್ತಷ್ಟು ಘೋರವಾಗುವುದು ಪಕ್ಕಾ. ಅದರಲ್ಲೂ ಜನರು ಬೇಸಿಗೆಯ ರಣ ಬಿಸಿಲಿಗೆ ಪರದಾಡಿ ಹೋಗಿದ್ದಾರೆ. ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ಹೀಗಾಗಿ ಒಂದು ಭರ್ಜರಿ ಮಳೆಯ ಎಂಟ್ರಿ ಆದರೆ, ಕನ್ನಡಿಗರು ಒಂದಷ್ಟು ನೆಮ್ಮದಿಯಾಗಿ ಇರಬಹುದು.












Click it and Unblock the Notifications