Karnataka Rain: ಮಳೆ.. ಮಳೆ.. ಭಾರಿ ಮಳೆ ಮುನ್ಸೂಚನೆ, ಯಾವ ಯಾವ ಜಿಲ್ಲೆಗೆ?

ಮಳೆ.. ಮಳೆ.. ಹೀಗೆ 2024ರ ವರ್ಷದಲ್ಲಿ ಭಾರಿ ಭರ್ಜರಿ ಮಳೆ ಸುರಿದು ಕರ್ನಾಟಕದ ರೈತ ಸಮುದಾಯ & ಜನರು ಫುಲ್ ಖುಷಿಯಾಗಿದ್ದರು. ಆದರೆ ಚಳಿಗಾಲಯದಲ್ಲೂ ಮಳೆ ಸುರಿದು ಒಂದಷ್ಟು ಅವಾಂತರ ಸೃಷ್ಟಿಯಾಗಿತ್ತು. ಹೀಗಿದ್ದಾಗ ಮಳೆಗಾಲ ಮುಗಿದು, ಚಳಿಗಾಲ ಮುಗಿದು ಇದೀಗ ಬೇಸಿಗೆ ಶುರುವಾಗಿದ್ದರೂ ಮಳೆ ಅರ್ಭಟ ಏನು ಕಡಿಮೆ ಆಗಿಲ್ಲ. ಇದೀಗ ಮತ್ತೆ ಭಾರಿ ಮಳೆ ಸುರಿಯುವ ಮುನ್ಸೂಚನೆ ಸಿಕ್ಕಿದೆ! ಹಾಗಾದ್ರೆ ಯಾವೆಲ್ಲಾ ಜಿಲ್ಲೆಗಳಲ್ಲಿ?

ಕರ್ನಾಟಕದ ಜನ ಮಾನ್ಸೂನ್ ಅಂದ್ರೆ ಮುಂಗಾರು ಮಳೆ ಅವಲಂಬಿಸಿ ಜೀವನದ ಬಂಡಿಯನ್ನು ಸಾಗಿಸುತ್ತಾರೆ. ಉತ್ತರ ಕರ್ನಾಟಕ ಇರಲಿ & ದಕ್ಷಿಣ ಕರ್ನಾಟಕ ಇರಲಿ, ಈ ನಮ್ಮ ಕರ್ನಾಟಕಕ್ಕೆ ಮುಂಗಾರು ಮಳೆಯೇ ಆಧಾರ. ಅಕಸ್ಮಾತ್ ಮುಂಗಾರು ಮಳೆ ಕೈಕೊಟ್ಟು ಹೋದರೆ, ಪರಿಸ್ಥಿತಿ ಭೀಕರ. ಜನರು ಕೂಡ ಹನಿ ಹನಿ ನೀರಿಗೂ ಒದ್ದಾಡುತ್ತಾರೆ ಎನ್ನಬಹುದು. 2023ರಲ್ಲಿ ಕೂಡ ಮಳೆರಾಯ ಕೈಕೊಟ್ಟು ಮುಂಗಾರು ಮಳೆ ಸುರಿಯಲೇ ಇಲ್ಲ. ಹೀಗಾಗಿ ಬರ ಆವರಿಸಿತ್ತು, ಆದ್ರೆ 2024ರ ಆರಂಭದಿಂದಲೇ ಭರ್ಜರಿ ಮಳೆ ಸುರಿದು ಕರ್ನಾಟಕದ ಡ್ಯಾಂಗಳು ತುಂಬಿ ತುಳುಕಿವೆ. ಹೀಗಿದ್ದಾಗಲೇ ಮಳೆ.. ಮಳೆ.. ಭಾರಿ ಮಳೆ ಮುನ್ಸೂಚನೆ ಈಗ ಮತ್ತೆ ಸಿಕ್ಕಿದೆ! ಹಾಗಾದ್ರೆ ಯಾವ ಯಾವ ಜಿಲ್ಲೆಗಳಲ್ಲಿ ಮಳೆ ಸುರಿಯಲಿದೆ?

Heavy Rain Alert Has Been Issued After 10 03 2025 In These Areas

ಮಳೆ.. ಮಳೆ.. ಭಾರಿ ಮಳೆ!

ಹೌದು, ಇದೀಗ ಮತ್ತೊಮ್ಮೆ ಭಾರಿ ಮಳೆಯು ಬೀಳುವ ಮುನ್ಸೂಚನೆ ನೀಡಲಾಗಿದೆ. ಬಂಗಾಳ ಕೊಲ್ಲಿಯಲ್ಲಿ ಇದೀಗ ಮತ್ತೆ ವಾಯುಭಾರ ಕುಸಿಯುವ ಲಕ್ಷಣಗಳು ಗೋಚರಿಸಿದೆ. ಅಲ್ಲದೆ ಈ ಹಿನ್ನೆಲೆಯಲ್ಲಿ ಈಗಾಗಲೇ ಭಾರಿ ದೊಡ್ಡ ದೊಡ್ಡ ಮಳೆ ಮೋಡಗಳು ಕರ್ನಾಟಕದ ಸಮೀಪ ಆವರಿಸುತ್ತಿವೆ. ಬೇಸಿಗೆ ಸಮಯದಲ್ಲೂ ಕರ್ನಾಟಕಕ್ಕೆ ಇದೀಗ ಮಳೆಯ ಆತಂಕ ಶುರುವಾಗಿದೆ. ಅದರಲ್ಲೂ ಮಾರ್ಚ್ 10ರ ನಂತರ ಅಂದ್ರೆ ಮುಂದಿನ ಸೋಮವಾರದ ನಂತರ ಭಾರಿ ಮಳೆ ಸುರಿಯುವ ಮುನ್ಸೂಚನೆ ಸಿಕ್ಕಿದೆ.

ಬೆಂಗಳೂರು & ಈ ಜಿಲ್ಲೆಗಳಿಗೆ ಮಳೆ!

ಬೆಂಗಳೂರು ಸೇರಿದಂತೆ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಮಂಡ್ಯ, ಮೈಸೂರು & ಚಾಮರಾಜನಗರ ಭಾಗದಲ್ಲಿ ಇದೀಗ ಭಾರಿ ಮಳೆಯ ಸಾಧ್ಯತೆ ಬಗ್ಗೆ ಮುನ್ಸೂಚನೆ ಸಿಕ್ಕಿದೆ. ಹಾಗೇ ತಮಿಳುನಾಡು ರಾಜ್ಯದ ಹಲವು ಭಾಗಗಳಲ್ಲಿ ಭಾನುವಾರವೇ ಮಳೆ ಶುರುವಾಗಲಿದ್ದು, ಈ ಮೋಡಗಳು ಸೋಮವಾರದ ನಂತರ ಕರ್ನಾಟಕದ ದಕ್ಷಿಣ ಭಾಗ ಸೇರಿದಂತೆ ರಾಜಧಾನಿ ಬೆಂಗಳೂರಿಗೂ ಆವರಿಸುವ ಮುನ್ನೆಚ್ಚರಿಕೆ ನೀಡಲಾಗಿದೆ.

ಈ ಮೂಲಕ ಬೇಸಿಗೆ ಸಮಯದಲ್ಲಿ ಮತ್ತೆ ಭಾರಿ ಮಳೆಯ ಕಾರ್ಮೋಡ ಆವರಿಸಿದ್ದು, ಬಿಸಿಲ ಧಗೆ ನಡುವೆ ಒಂದಷ್ಟು ರಿಲೀಫ್ ಸಿಗಲಿದೆ ಅಂತಾ ನಗರ ಭಾಗದ ಜನರು ಇದೀಗ ಯೋಜನೆ ಹಾಕುತ್ತಿದ್ದಾರೆ. ಆದರೆ ಇದೇ ವೇಳೆ ಹಳ್ಳಿ & ಗ್ರಾಮೀಣ ಭಾಗದ ರೈತರು ಅಕಾಲಿಕ ಮಳೆ ಬಗ್ಗೆ ತಲೆ ಕೆಡಿಸಿಕೊಳ್ಳುವಂತೆ ಆಗಿದೆ.

ಅಕಾಲಿಕ ಮಳೆಗೆ ಕನ್ನಡಿಗರು ಸುಸ್ತು!

ಮಳೆ ಆರ್ಭಟ ಇಷ್ಟಕ್ಕೇ ಸೈಲೆಂಟ್ ಆಗುವ ಯಾವುದೇ ಲಕ್ಷಣ ಕೂಡ ಕಾಣುತ್ತಿಲ್ಲ. ನಿಮಗೆಲ್ಲಾ ಗೊತ್ತಿರುವಂತೆ, ಬಂಗಾಳ ಕೊಲ್ಲಿ ಭಾಗದಲ್ಲಿ ಪದೇ ಪದೇ ವಾಯುಭಾರ ಕುಸಿತ ಉಂಟಾಗುತ್ತಿದೆ. ವಾಯುಭಾರ ಕುಸಿತ & ಚಂಡಮಾರುತ ಅಪ್ಪಳಿಸುತ್ತಿರುವ ಹಿನ್ನೆಲೆಯಲ್ಲಿ ದೊಡ್ಡ ಅವಾಂತರ ಸೃಷ್ಟಿಯಾಗ್ತಿದೆ. ಹೀಗಾಗಿ ಪದೇ ಪದೇ ಮಳೆ ಬರುತ್ತಿದ್ದು, ಕನ್ನಡಿಗರು ಹೀಗೆ ಅಕಾಲಿಕ ಮಳೆಯ ಪರಿಣಾಮ ಬೆಚ್ಚಿ ಬಿದ್ದಿದ್ದಾರೆ. ಮಳೆ ಯಾಕಪ್ಪಾ ಬರುತ್ತೆ? ಅಂತಾನೂ ಗೊಣಗುತ್ತಿದ್ದಾರೆ. ಈ ಸಮಯದಲ್ಲೇ ಬೇಸಿಗೆ ಹೊತ್ತಲ್ಲೂ ಮಳೆರಾಯ ಅಬ್ಬರಿಸಲು ಸಜ್ಜಾಗಿದ್ದಾನೆ. ಹೀಗಾಗಿ ಬೆಳೆ ಉಳಿಸಿಕೊಳ್ಳಲು ರೈತರು ಚಿಂತೆ ಮಾಡುವಂತೆ ಆಗಿದೆ.

ಮಳೆ ಬಂತು ಮಳೆ... ಮಳೆ ಬಂತು ಮಳೆ...

ಒಟ್ನಲ್ಲಿ ಅಕಾಲಿಕ ಮಳೆಯಿಂದಾಗಿ ಎಲ್ಲಾ ಅಲ್ಲೋಲ ಕಲ್ಲೋಲ ಆಗಿ ಹೋಗುತ್ತಿದೆ. ಹೀಗೆ ಮತ್ತೊಮ್ಮೆ ಅಕಾಲಿಕ ಮಳೆಯು ಅಪ್ಪಳಿಸುವ ಎಲ್ಲಾ ಮುನ್ಸೂಚನೆ ಇದೀಗ ಸಿಗುತ್ತಿದ್ದು, ಈ ಹಿನ್ನೆಲೆ ಜನರು ಕೂಡ ಚಿಂತೆ ಮಾಡುವಂತೆ ಆಗಿದೆ. ಇದನ್ನೆಲ್ಲಾ ಈಗ ನೋಡುತ್ತಿದ್ದರೆ, ಮಳೆ ಕೋಪ ಕಡಿಮೆ ಆಗಿಲ್ಲ ಅಂತಾ ಕಾಣ್ತಿದೆ. ಹೀಗಾಗಿ 2024 ಕಳೆದು 2025 ಶುರುವಾಗಿದ್ದರೂ ಮಳೆ ಅರ್ಭಟ ಕಡಿಮೆ ಆಗುತ್ತಿಲ್ಲ. ಇನ್ನೇನು ಬೇಸಿಗೆ ಕಾಲ ಶುರುವಾಯ್ತು ಬಿಡು ಅಂತ ಖುಷಿ ಪಡುವ ಸಮಯದಲ್ಲೇ ಮತ್ತೆ ಮಳೆ ಅಬ್ಬರ ಹೆಚ್ಚಾಗಿದೆ. ಸೋಮವಾರ ನಂತರ ಮತ್ತೆ ಮಳೆ ಮೋಡಗಳು ಹಲವು ಜಿಲ್ಲೆಗಳನ್ನು ಆವರಿಸಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+