Karnataka Rain: 24 ಗಂಟೆ ಭರ್ಜರಿ ರಣಮಳೆ, ಯಾವ ಯಾವ ಜಿಲ್ಲೆಗಳಿಗೆ?

ಮುಂಗಾರು ಮಳೆ ಅಬ್ಬರ ಕಡಿಮೆ ಆಗುವ ಬದಲು ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಇದ್ದು, ಕನ್ನಡ ನಾಡಲ್ಲಿ ಆತಂಕದ ವಾತಾವರಣ ನಿರ್ಮಾಣ ಆಗಿದೆ. ಅದರಲ್ಲೂ ಕರ್ನಾಟಕದಲ್ಲಿ ಹುಟ್ಟಿ ಹರಿಯುವ ಬಹುತೇಕ ನದಿಗಳು ಈಗಾಗಲೇ ತುಂಬಿ ತುಳುಕುತ್ತಿವೆ. ಅಲ್ಲದೆ ಬಹುತೇಕ ಡ್ಯಾಂಗಳು ಫುಲ್ ಆಗಿವೆ. ಹೀಗಿದ್ದಾಗಲೇ ಮುಂದಿನ 24 ಗಂಟೆ ಕಾಲ ಮತ್ತಷ್ಟು ಭರ್ಜರಿಯಾಗಿ ಮಳೆ ಬೀಳುವ ಬಗ್ಗೆ ಈ ಕೆಳಗಿನ ಜಿಲ್ಲೆಗಳಿಗೆ ಎಚ್ಚರಿಕೆ ನೀಡಲಾಗಿದೆ.

ಮಳೆ ಎಲ್ಲೆಲ್ಲೂ ಆರ್ಭಟಿಸುತ್ತಿದ್ದು, ಕರ್ನಾಟಕದಲ್ಲಿ ಮುಂಗಾರು ಮಳೆ ಅಬ್ಬರಕ್ಕೆ ಎಲ್ಲವು ಈಗ ಅಲ್ಲೋಲ & ಕಲ್ಲೋಲ ಎಬ್ಬಿಸುತ್ತಿದೆ ಕಳೆದ ಕೆಲವು ವಾರಗಳಿಂದಲೂ ಹೀಗೆ ನಿರಂತರವಾಗಿ ಮಳೆ ಬೀಳುತ್ತಿರುವುದು ಜನರ ಚಿಂತೆಗೆ ಕಾರಣ ಆಗಿತ್ತು. ಹೀಗಿದ್ದಾಗ, ಮಳೆ ಆರ್ಭಟ ಕಡಿಮೆ ಆಗಲಿದೆ ಎನ್ನಲಾಗಿತ್ತು. ಆದರೆ ಈಗ ಹವಾಮಾನ ಇಲಾಖೆ ಹಲವು ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಗಳ ಕಾಲ ಭರ್ಜರಿ ಮಳೆ ಬೀಳಲಿದೆ ಎಂದು ಎಚ್ಚರಿಕೆ ನೀಡಿದೆ. ಹಾಗಾದ್ರೆ ಭಾರಿ ಮಳೆ ಬೀಳುವ ಜಿಲ್ಲೆಗಳು ಯಾವುವು? ಮುಂದೆ ಓದಿ.

Heavy Rain Alert Has Been Given To These Districts Of Karnataka For 29th Of July 2024

ಯಾವ ಯಾವ ಜಿಲ್ಲೆಗಳಲ್ಲಿ ಮಳೆ?

ಹವಾಮಾನ ಇಲಾಖೆ ಇದೀಗ ನೀಡಿರುವ ಮಾಹಿತಿ ಪ್ರಕಾರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭರ್ಜರಿ ಮಳೆ ಬೀಳಲಿದೆ. ಈ ಪೈಕಿ ಕರಾವಳಿ ಕರ್ನಾಟಕದ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು & ಹಾಸನ ಜಿಲ್ಲೆ ಮಲೆನಾಡು ಭಾಗದಲ್ಲಿ ಮುಂದಿನ 24 ಗಂಟೆ ಭರ್ಜರಿ ಮಳೆ ಬಿಳುವ ಕುರಿತು ಮುನ್ನೆಚ್ಚರಿಕೆ ನೀಡಲಾಗಿದೆ. ಹಾಗಾದರೆ, ಬೆಂಗಳೂರು ಸೇರಿದಂತೆ ಇನ್ನುಳಿದ ಜಿಲ್ಲೆಗಳಲ್ಲಿ ಮಳೆ ಪರಿಸ್ಥಿತಿ ಹೇಗಿದೆ? ಮಾಹಿತಿಗಾಗಿ ಮುಂದೆ ಓದಿ.

ಬೆಂಗಳೂರಿನಲ್ಲಿ ಮಳೆ ಆಗುತ್ತಾ?

ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಇದೀಗ ಬೆಂಗಳೂರಿನಲ್ಲಿ ಮಳೆ ಬೀಳದೇ ಇದ್ದರೂ ಮೋಡ ಮುಸುಕಿದ ವಾತಾವರಣ ಇರಲಿದೆ. ಆದರೂ ಅಲ್ಲಲ್ಲಿ ತುಂತುರು ಮಳೆ & ತೇವ ಮಿಶ್ರಿತ ವಾತಾವರಣ ಇರಲಿದೆ ಎಂದು ಮುನ್ಸೂಚನೆ ನೀಡಲಾಗಿದೆ. ಕರಾವಳಿ ಕರ್ನಾಟಕ ಪ್ರದೇಶ ಈಗ ಮತ್ತಷ್ಟು ಸೂಕ್ಷ್ಮವಾಗಿರುವ ಕಾರಣ ಇದೀಗ ಮತ್ತಷ್ಟು ಮುನ್ನೆಚ್ಚರಿಕೆ ನೀಡಿದೆ ಹವಾಮಾನ ಇಲಾಖೆ.

ಕಳೆದ 1 ತಿಂಗಳಿಂದ ಕೂಡ ಕರಾವಳಿ ಕರ್ನಾಟಕದ ಜಿಲ್ಲೆಗಳೂ ಸೇರಿ ಮಲೆನಾಡು ಭಾಗದಲ್ಲಿ ಮಳೆ ಅಬ್ಬರಿಸುತ್ತಿದೆ. ಈಗಾಗಲೇ ಹಲವು ಕಡೆ ಗುಡ್ಡ ಕುಸಿತ ಸಂಭವಿಸಿ ಜನರ ಪ್ರಾಣ ಕೂಡ ಹೋಗಿದೆ, ಹೀಗಿದ್ದರೂ ಮಳೆ ಮಾತ್ರ ಸೈಲೆಂಟ್ ಆಗುವ ಮುನ್ಸೂಚನೆ ಸಿಗುತ್ತಿಲ್ಲ. ಶಾಲೆ & ಕಾಲೇಜುಗಳಿಗೆ ಪದೇ ಪದೇ ರಜೆ ನೀಡುವ ಪರಿಸ್ಥಿತಿ ನಿರ್ಮಾಣ ಆಗುತ್ತಿದೆ. ಹೀಗಾಗಿ ಮಳೆಗೆ ಬ್ರೇಕ್ ಹಾಕು ವರುಣ ದೇವ ಅಂತಾ ಜನರು ಬೇಡಿಕೊಳ್ಳುವ ಪರಿಸ್ಥಿತಿ ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+