Rain Alert: 5 ದಿನಗಳ ಕಾಲ ಭರ್ಜರಿ ಮಳೆ, ಎಲ್ಲೆಲ್ಲಿ ಗೊತ್ತಾ?
ಒಣಗಿ ಹೋಗಿರುವ ಬೆಳೆ, ಅಡಕೆ & ತೆಂಗಿನ ತೋಟಗಳಿಗೆ ನೀರು ಇಲ್ಲದೆ ತಲೆ ಮೇಲೆ ಕೈಹೊತ್ತು ಕೂತಿರುವ ರೈತ. ಇದು ಒಂದು ಅಥವಾ ಎರಡು ಹಳ್ಳಿಗಳ ಕಥೆ ಅಲ್ಲ. ಕರ್ನಾಟಕದ ಯಾವುದೇ ಹಳ್ಳಿಗೆ ಹೋದರೂ ಇಂತಹದ್ದೇ ಪರಿಸ್ಥಿತಿ ಇದೆ. ಅದರಲ್ಲೂ ಮಲೆನಾಡಿನ ಭಾಗದಲ್ಲೇ ಬರವೂ ಹೆಚ್ಚಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಇದೀಗ 5 ದಿನಗಳ ಕಾಲ ಭರ್ಜರಿ ಮಳೆ ಸುರಿಯುವ ಬಗ್ಗೆ ಮುನ್ಸೂಚನೆ ಸಿಕ್ಕಿದೆ!
2023 ಕರ್ನಾಟಕ ರಾಜ್ಯದ ಪಾಲಿಗೆ, ದುರದೃಷ್ಟಕರ ವರ್ಷ ಎನ್ನಬಹುದು. ಮುಂಗಾರು ಮಳೆಯೇ ಸರಿಯಾಗಿ ಬೀಳದೆ ಬರ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಪೈಕಿ ಮಳೆ ಆಶ್ರಯಿಸಿ, ಕೃಷಿ ಕೈಗೊಳ್ಳುವ ರೈತರಿಗೆ ಆತಂಕ ಎದುರಾಗಿದೆ. ಕರ್ನಾಟಕ ಸಾಕಷ್ಟು ಮಳೆ ಕೊರತೆ ಎದುರಿಸಿದೆ, ಕೆಲ ರಾಜ್ಯಗಳಲ್ಲಿ ವಿಪರೀತ ಮಳೆ ಬಂದಿದ್ದರೂ, ಹಲವು ರಾಜ್ಯಗಳ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಅದರಲ್ಲೂ ಈ ಪರಿಸ್ಥಿತಿಯಲ್ಲಿ ಕರ್ನಾಟಕದ ಅಡಕೆ ಬೆಳೆಗಾರರು ಪರದಾಡುತ್ತಿದ್ದು, ಹನಿ ಹನಿ ನೀರಿಗೂ ಈಗ ಸಂಕಷ್ಟ ಅನುಭವಿಸಿದ್ದಾರೆ. ಹೀಗಾಗಿ ಇದೀಗ ಟ್ಯಾಂಕರ್ ನೀರಿನ ಮೊರೆ ಹೋಗಿದ್ದಾರೆ ರೈತರು. ಇಂತಹ ಹೊತ್ತಲ್ಲೇ ಮಳೆಯ ಮುನ್ಸೂಚನೆ ಸಿಕ್ಕಿದೆ!

ಕರ್ನಾಟಕದಲ್ಲಿ ಯಾವಾಗ ಮಳೆ?
ಕರ್ನಾಟಕದ ರೈತರು ಬರದಿಂದ ಬೆಳೆ ನಷ್ಟ ಅನುಭವಿಸಿದ್ದು, ಇದೀಗ ತೋಟಗಾರಿಕೆ ಬೆಳೆಗಳನ್ನೂ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ನೀರಿನ ಸಮಸ್ಯೆ ಬಿಗಡಾಯಿಸಿದ್ದು ತೋಟಗಳಿಗೂ ಟ್ಯಾಂಕರ್ ಮೊರೆ ಹೋಗಿದ್ದಾರೆ. ಕಳೆದ ಎರಡು ಮೂರು ವರ್ಷಗಳಿಂದ ನೀರಿನ ಸಮಸ್ಯೆ ಇರಲಿಲ್ಲ. ಉತ್ತಮ ಮಳೆಯಾದ ಕಾರಣ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕರೆ & ಕಟ್ಟೆಗಳು ತುಂಬಿ ತುಳುಕುತ್ತಿದ್ದವು.
ಆದರೆ ಈಗ ಪರಿಸ್ಥಿತಿ ಬಿಗಡಾಯಿಸಿ ಹೋಗಿದ್ದು, ಮಳೆ ಇಲ್ಲದೆ ಭೀಕರ ಬರ ಎದುರಾಗಿದೆ. ಇದೇ ಕಾರಣಕ್ಕೆ ಬೆಳೆ ಉಳಿಸಿಕೊಳ್ಳಲು ಅಡಕೆ ಬೆಳೆಗಾರರು ಸಾವಿರ ಸಾವಿರ ಕೊಟ್ಟು ಟ್ಯಾಂಕರ್ ನೀರು ಹಾಕಿಸಿಕೊಳ್ಳುತ್ತಿದ್ದಾರೆ. ಹಾಗಾದ್ರೆ ಕರ್ನಾಟಕದಲ್ಲಿ ಮಳೆ ಬೀಳುವುದು ಯಾವಾಗ? ಮಳೆಯ ಬಗ್ಗೆ ಹವಾಮಾನ ಇಲಾಖೆ ತಜ್ಞರು ಏನು ಹೇಳುತ್ತಿದ್ದಾರೆ? ಮುಂದೆ ಓದಿ.
ಮಳೆ ಬೀಳುವ ಪ್ರದೇಶಗಳು ಇವು...
ಇದೀಗ ಸಿಕ್ಕಿರುವ ಮಾಹಿತಿ ಪ್ರಕಾರ ಭಾರತದ ಈಶಾನ್ಯ ಭಾಗದಲ್ಲಿ ಬಿರುಗಾಳಿ & ಮಳೆಯ ಅಬ್ಬರವು ಮುಂದುವರಿಯಲಿದೆ. ಮುಂದಿನ 5 ದಿನಗಳ ಕಾಲ ಈ ಭಾಗದಲ್ಲಿ ನಿರಂತರವಾಗಿ ಮಳೆ ಅಬ್ಬರ ಇರುವ ಮುನ್ಸೂಚನೆ ಸಿಕ್ಕಿದೆ. ಇನ್ನು ಕೇರಳ & ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲೂ ಲಘು ಮಳೆ ಆಗುವ ಸಾಧ್ಯತೆ ಇದೆ. ಹಾಗೇ ವಿದರ್ಭ, ಮಧ್ಯಪ್ರದೇಶ, ಉತ್ತರ ಆಂತರಿಕ ಕರ್ನಾಟಕ, ರಾಯಲಸೀಮಾ ಮತ್ತು ತೆಲಂಗಾಣದ ಭಾಗಗಳಲ್ಲಿ ಶಾಖದ ಅಲೆಯ ಪರಿಸ್ಥಿತಿ ಎದುರಾಗುತ್ತೆ ಅಂತ ಹೇಳಲಾಗಿದೆ. ಆದರೆ ಕರ್ನಾಟಕದಲ್ಲಿ ಮುಂದಿನ ಕೆಲವು ದಿನಗಳಲ್ಲಿ ಮಳೆಯಾಗುವ ಸೂಚನೆ, ಈಗಾಗಲೇ ಸಿಗುತ್ತಿದೆ. ಹೀಗಾಗಿ ಜನರು ಕೂಡ ಮಳೆಗಾಗಿ ಕಾಯುತ್ತಿದ್ದಾರೆ.
ಒಟ್ನಲ್ಲಿ ಏನೇ ಆಗಲಿ ಕರ್ನಾಟಕದಲ್ಲಿ ಬೇಗ ಮಳೆ ಬರಲಿ ಅನ್ನೋದೆ ಜನರ ಬೇಡಿಕೆ. ಅಕಸ್ಮಾತ್ ಮಳೆ ಬರದೇ ಇದ್ದರೆ ಸಮಸ್ಯೆ ದೊಡ್ಡದಾಗಲಿದೆ, ಹೀಗಾಗಿ ಬೇಗ ಮಳೆ ಬಂದರೆ ನದಿಗಳ ಜೊತೆ ಕೆರೆ & ಕಟ್ಟೆಗಳು ತುಂಬಿ ಪರಿಸ್ಥಿತಿ ಒಂದಷ್ಟು ಸರಿಯಾಗಲಿದೆ ಎಂಬ ನಂಬಿಕೆಯಿಂದ ಜನ ಈಗ ಕಾಯುತ್ತಿದ್ದಾರೆ. ಹೀಗಾಗಿ ಶೀಘ್ರದಲ್ಲೇ ಸಿಹಿಸುದ್ದಿ ಸಿಗುವ ನಿರೀಕ್ಷೆಯೂ ಇದೆ.
ಮಳೆ ನೀರು ಸಂಗ್ರಹ ಮಾಡಿ!
ಮನುಷ್ಯನ ಬದುಕಿಗೆ ಮೂಲ ಆಧಾರವೇ ನೀರು, ನೀರು ಇಲ್ಲದೆ ಮನುಷ್ಯನ ಜೀವನ ಊಹೆಗೂ ನಿಲುಕುವುದಿಲ್ಲ. ಹೀಗಾಗಿ ಜೀವಜಲ ಅಂತಾ ಕರೆಯುವ ನೀರನ್ನು ಮನುಷ್ಯ ಸೂಕ್ತ ರೀತಿಯಲ್ಲಿ ಸಂಗ್ರಹ ಮಾಡಿಕೊಳ್ಳಬೇಕು. ಹೀಗಿದ್ದರೂ ಮನುಷ್ಯರು ಮಾತ್ರ ನೀರಿನ ಸದ್ಬಳಕೆ ಮಾಡಿಕೊಳ್ತಿಲ್ಲ. ಇದೇ ಕಾರಣಕ್ಕೆ ಮನುಷ್ಯ ಈಗ ಹನಿ ಹನಿ ನೀರಿಗೂ ಪರದಾಡುತ್ತಿದ್ದಾನೆ. ಹೀಗಿದ್ದಾಗ ತಕ್ಷಣಕ್ಕೇ ಎಚ್ಚೆತ್ತುಕೊಂಡು, ಮಳೆ ನೀರು ಸಂಗ್ರಹ ಮಾಡಿಕೊಂಡರೆ ಮುಂದಕ್ಕೆ ಇಂತಹ ಸಮಸ್ಯೆ ಬರಲ್ಲ ಎಂಬ ಮಾತು ಕೇಳಿಬರುತ್ತಿದೆ. ಯಾಕಂದ್ರೆ ಮಳೆಗಾಲ ಆರಂಭಕ್ಕೆ ಇನ್ನು ಕೇವಲ 2 ತಿಂಗಳು ಬಾಕಿ ಇದೆ. ಹಾಗಾದರೆ ಮಳೆ ನೀರು ಸಂಗ್ರಹ ಹೇಗೆ ಮಾಡುವುದು? ಬನ್ನಿ ತಿಳಿಯೋಣ.
ಡ್ಯಾಂಗಳ ಪರಿಸ್ಥಿತಿ ಏನಾಗಿದೆ ಗೊತ್ತಾ?
ಕಳೆದ ವರ್ಷ ಮುಂಗಾರು ಮಳೆ ಕೈಕೊಟ್ಟ ಕಾರಣ ಭಾರಿ ಆತಂಕ ಎದುರಾಗಿತ್ತು. ಹೀಗಾಗಿಯೇ ಡ್ಯಾಂಗಳ ನೀರಿನ ಮಟ್ಟ ಕುಸಿದು ಬಿದ್ದು ರೈತರು ಆತಂಕದಲ್ಲೇ ದಿನದೂಡುವ ಸ್ಥಿತಿ ಇತ್ತು. ಬೇಸಿಗೆ ಬೇಗೆ ಮಧ್ಯೆ ಇದೀಗ ಮಳೆಯ ಅಬ್ಬರ ಮೆಲ್ಲಗೆ ಶುರುವಾಗಿದೆ. ಹವಾಮಾನ ತಜ್ಞರ ಮುನ್ಸೂಚನೆಯ ಪ್ರಕಾರ ಮಳೆ ಬೀಳುವ ನಿರೀಕ್ಷೆ ಇದೆ. ಈಗ ಅಲ್ಲಲ್ಲಿ ಮೋಡಗಳು ಕವಿದು, ಮಳೆಯ ಸೂಚನೆಯೂ ಶುರುವಾಗಿದೆ. ಹೀಗಾಗಿ ಉತ್ತಮವಾಗಿ ಮಳೆ ಬೀಳುತ್ತಿದೆ. ಆದರೆ ಸಾಕಷ್ಟು ಪ್ರಮಾಣದಲ್ಲಿ ಮಳೆ ಬೀಳದ ಕಾರಣ, ಕರ್ನಾಟಕದ ಜಲಾಶಯಗಳ ಪರಿಸ್ಥಿತಿ ಕೈಮೀರಿ ಹೋಗಿದೆ. ಹಾಗೇ ಇನ್ನು ಕೆಲವೇ ದಿನಗಳಲ್ಲಿ ಉತ್ತಮ ಮಳೆ ಬೀಳದೆ ಇದ್ದರೆ ಕರ್ನಾಟಕದ ಬಹುತೇಕ ಡ್ಯಾಂಗಳು ಒಣಗಿ ಹೋಗಲಿವೆ.
ಹಲವು ಜಿಲ್ಲೆಗಳಲ್ಲಿ ಭರ್ಜರಿ ಮಳೆ!
ಹವಾಮಾನ ಮುನ್ಸೂಚನೆ ಮಾಹಿತಿ ನೀಡುವಂತೆ ಶಿವಮೊಗ್ಗ, ಮೈಸೂರು, ಚಾಮರಾಜನಗರ, ಚಿಕ್ಕಮಗಳೂರು, ಕೊಡಗು, ಹಾಸನ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಏಪ್ರಿಲ್ 2ನೇ ವಾರದಿಂದಲೇ ಮಳೆಯಾಗಲಿದೆ ಅಂತಾ ಹೇಳಲಾಗಿದೆ. ಇದು ಒಂದು ಕಡೆಯಾದರೆ ಈಗಾಗಲೇ, ಕಾವೇರಿ ನದಿ ತವರು ಕೊಡಗು ಸೇರಿದಂತೆ ಚಿಕ್ಕಮಗಳೂರು, ಹುಬ್ಬಳ್ಳಿ & ಧಾರವಾಡ ಸೇರಿ ಗಡಿನಾಡು ಬೆಳಗಾವಿ ಜಿಲ್ಲೆಯಲ್ಲೂ ಮಳೆ ಬಿದ್ದಿದೆ. ನಿನ್ನೆ ಕೂಡ ಕೊಡಗು ಜಿಲ್ಲೆಯಲ್ಲಿ ಭರ್ಜರಿ ಮಳೆ ಬಿದ್ದಿದ್ದು ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಮತ್ತೊಂದು ಕಡೆ ಮುಂದಿನ ಕೆಲವೇ ದಿನದಲ್ಲಿ ಭರ್ಜರಿ ಮಳೆ ಶುರುವಾಗುವ ಮುನ್ಸೂಚನೆ ಕೂಡ ಸಿಗುತ್ತಿದೆ.
ತಕ್ಷಣ ಭರ್ಜರಿ ಮಳೆ ಬರಬೇಕು!
ಕರ್ನಾಟಕದಲ್ಲಿ ಮಳೆ ಇಲ್ಲದೆ ಭೀಕರ ಬರಗಾಲ ಎದುರಾದ ಕಾರಣಕ್ಕೆ ರಾಜ್ಯ ಸರ್ಕಾರಕ್ಕೆ ದೊಡ್ಡ ತಲೆನೋವು ಶುರುವಾಗಿದೆ. ಯಾಕಂದ್ರೆ ಪರಿಸ್ಥಿತಿ ಇದೇ ರೀತಿ ಮುಂದುವರಿದು, ಈ ಬರ ಇನ್ನೂ ಹಲವು ತಿಂಗಳು ಮುಂದುವರಿಯುತ್ತೆ ಎಂಬ ಭಯ ಆವರಿಸಿತ್ತು. ಈ ಕಾರಣಕ್ಕೆ, ತಕ್ಷಣವೇ ಮಳೆ ಬರಬೇಕು ಅಂತಾ ಹೇಳಿದ್ದರು ತಜ್ಞರು. ಅದೇ ರೀತಿ ಈಗ ಮಳೆಯ ಆಗಮನ ಆಗ್ತಿದೆ. ಅದರಲ್ಲೂ ಕನ್ನಡಿಗರ ರಾಜಧಾನಿ ಬೆಂಗಳೂರಿನಲ್ಲಿ ಭರ್ಜರಿ ಮಳೆ ಬೀಳೋದು ಗ್ಯಾರಂಟಿ ಆಗಿದೆ. ಹೀಗೆ ಬೆಂಗಳೂರಲ್ಲಿ ಮಳೆ ಬರಲಿದೆ ಅಂತಾ, ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯ ನೀಡಿದೆ. ಏಪ್ರಿಲ್ 9ರಿಂದ ಬೆಂಗಳೂರಿನಲ್ಲಿ ಭರ್ಜರಿ ಮಳೆ ಬೀಳುವ ನಿರೀಕ್ಷೆ ಇದೆ.
ಮಳೆ ಬರುತ್ತಾ? ಮಳೆ ಬರಲ್ವಾ?
ಹೌದು, ಮಳೆ ಬರದೇ ಇದ್ದರೆ ಕನ್ನಡಿಗರ ಪರಿಸ್ಥಿತಿ ವ್ಯತಿರಿಕ್ತ ಆಗಲಿದೆ. ಯಾಕಂದ್ರೆ ಇದೀಗ ಕರ್ನಾಟಕದ ಬಹುತೇಕ ನದಿ & ಕೆರೆ ಸೇರಿದಂತೆ ಜಲ ಮೂಲಗಳು ಬತ್ತಿ ಹೋಗಿವೆ. ಹೀಗಾಗಿ ಮಳೆ ಬರಲೇಬೇಕು ದೇವರೆ ಅಂತಾ ಕಾಯುತ್ತಿದ್ದಾರೆ ಕನ್ನಡಿಗರು. ಹೀಗಿದ್ದಾಗ ಭರ್ಜರಿಯಾದ ಸುದ್ದಿಯನ್ನ ಹವಾಮಾನ ಇಲಾಖೆ ಕೊಟ್ಟಿದೆ. ಈಗಾಗಲೇ ಕೊಡಗು, ಚಿಕ್ಕಮಗಳೂರು ಸೇರಿ ಶಿವಮೊಗ್ಗ, ದಾವಣಗೆರೆ, ಬೆಳಗಾವಿ ಜಿಲ್ಲೆಗಳಲ್ಲಿ ಒಂದೊಂದು ಭಾರಿ ಮಳೆ ಬಿದ್ದಿದೆ. ಈಗ, ಇಡೀ ಕರ್ನಾಟಕದಲ್ಲಿ ಮಳೆ ಅಬ್ಬರಿಸಲಿದೆ ಎನ್ನಲಾಗುತ್ತಿದೆ. ಈ ನಡುವೆ ಕಳೆದ ತಿಂಗಳು ಕೂಡ ಇದೇ ರೀತಿ ಮಳೆ ಬೀಳುವ ಮುನ್ಸುಚನೆ ಹವಾಮಾನ ತಜ್ಞರಿಂದ ಸಿಕ್ಕಿತ್ತು. ಆದರೂ ಮಳೆ ಬೀಳಲೇ ಇಲ್ಲ! ಈ ಬಾರಿ ಕೂಡ ಹಂಗೆ ಆಗುತ್ತಾ? ಕಾದು ನೋಡಬೇಕು.
ಕನ್ನಡಿಗರ ಆಸೆಯನ್ನ ವರುಣ ದೇವ...
ಕರ್ನಾಟಕದಲ್ಲಿ ಮಳೆ ಇಲ್ಲದೆ ಭೀಕರ ಬರಗಾಲ ಎದುರಾದ ಕಾರಣಕ್ಕೆ ರಾಜ್ಯ ಸರ್ಕಾರಕ್ಕೂ ದೊಡ್ಡ ತಲೆನೋವು ಶುರುವಾಗಿದೆ. ಯಾಕಂದ್ರೆ ಪರಿಸ್ಥಿತಿ ಇದೇ ರೀತಿ ಮುಂದುವರಿದು, ಈ ಬರ ಇನ್ನೂ ಹಲವು ತಿಂಗಳು ಮುಂದುವರಿಯುತ್ತೆ ಎಂಬ ಭಯ ಆವರಿಸಿತ್ತು. ಈ ಕಾರಣಕ್ಕೆ ತಕ್ಷಣಕ್ಕೆ ಮಳೆ ಬರಬೇಕು ಅಂತಾ ಹೇಳಿದ್ದರು ತಜ್ಞರು. ಅದೇ ರೀತಿ ಈಗ ಮಳೆಯ ಆಗಮನ ಆಗಿದೆ. ಅದರಲ್ಲೂ ಕಾವೇರಿ ನದಿಯ ತವರು ಕೊಡಗು ಜಿಲ್ಲೆಯಲ್ಲಿ ಭರ್ಜರಿ ಮಳೆ ಬಂದು, ಭೂಮಿ ಕೆಸರಾಗಿದೆ. ಕಾವೇರಿ ತಾಯಿಯ ಒಡಲಿಗೂ ಭರ್ಜರಿ ನೀರು ಸೇರ್ಪಡೆಯಾಗಿದೆ. ಈ ರೀತಿ ಕರ್ನಾಟಕದ ವಿವಿಧ ಪ್ರದೇಶದಲ್ಲೂ ಮಳೆಯಾಗುವ ಮುನ್ಸೂಚನೆ ಸಿಕ್ಕಿದೆ. ಹೀಗಾಗಿ ಮಳೆ ಬಂದ್ರೆ ಸಾಕಪ್ಪಾ ಅಂತಿದ್ದಾರೆ ಜನ. ಕನ್ನಡಿಗರ ಆಸೆಯನ್ನ ವರುಣ ದೇವ ಈಡೇರಿಸುತ್ತಾನಾ? ಅನ್ನೋದನ್ನ ಕಾದು ನೋಡಬೇಕಿದೆ.
ಕರ್ನಾಟಕದ ಪರಿಸ್ಥಿತಿ ಈಗ ಹೇಗಿದೆ?
ಮಳೆ ಬರಬೇಕಿದೆ, ಮಳೆ ಬರದೇ ಇದ್ದರೆ ಪರಿಸ್ಥಿತಿ ಕಷ್ಟವಾಗಲಿದೆ. ಅದರಲ್ಲೂ ಕರ್ನಾಟಕದ ಜನರಿಗೆ ಮಳೆ ಬರದೇ ಇದ್ದರೆ ಪರಿಸ್ಥಿತಿ ಕುತ್ತಿಗೆಗೆ ಬಂದು ಕೂರಲಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದ ಬಹುತೇಕ ದೊಡ್ಡ ದೊಡ್ಡ ನಗರಗಳಲ್ಲಿ ಕುಡಿವ ನೀರಿಗೆ ಸಮಸ್ಯೆ ಈಗ ಕಾಡತೊಡಗಿದೆ. ಮಳೆ ಬರದೇ ಇದ್ದರೆ ಕನ್ನಡಿಗರ ಪರಿಸ್ಥಿತಿ ವ್ಯತಿರಿಕ್ತ ಆಗಲಿದೆ. ಯಾಕಂದ್ರೆ ಇದೀಗ ಕರ್ನಾಟಕದ ಬಹುತೇಕ ನದಿ & ಕೆರೆ ಸೇರಿದಂತೆ ಜಲ ಮೂಲಗಳು ಬತ್ತಿ ಹೋಗಿವೆ. ಹೀಗಾಗಿ ಮಳೆ ಬರಲೇಬೇಕು ದೇವರೆ ಅಂತಾ ಕಾಯುತ್ತಿದ್ದಾರೆ ಕನ್ನಡಿಗರು. ಹೀಗಿದ್ದಾಗಲೇ, ಭರ್ಜರಿ ಸುದ್ದಿಯನ್ನ ಹವಾಮಾನ ಇಲಾಖೆ ಕೊಟ್ಟಿದೆ. ಕೊಡಗು, ಚಿಕ್ಕಮಗಳೂರು ಸೇರಿ ಶಿವಮೊಗ್ಗ, ದಾವಣಗೆರೆ, ಬೆಳಗಾವಿ ಜಿಲ್ಲೆಗಳಲ್ಲಿ ಭರ್ಜರಿ ಮಳೆ ಬಿದ್ದಿದೆ. ಈಗ ಇಡೀ ಕರ್ನಾಟಕದಲ್ಲಿ ಮಳೆ ಅಬ್ಬರಿಸುತ್ತೆ ಎನ್ನಲಾಗುತ್ತಿದೆ.
ನೀರು ಬೇಕೆಂದು ತಮಿಳುನಾಡು ಕಿರಿಕ್!
ಒಂದ್ಕಡೆ ಕಳೆದ ವರ್ಷ, ಅಂದ್ರೆ 2023ರಲ್ಲಿ ಕರ್ನಾಟಕದಲ್ಲಿ ಸರಿಯಾಗಿ ಮಳೆಯೇ ಬಂದಿಲ್ಲ ಎಂಬ ಕೊರಗು ಕಾಡುತ್ತಿತ್ತು. ಈ ನಡುವೆಯು ತಮಿಳುನಾಡು ಬೇರೆ ನೀರಿಗಾಗಿ ಭಾರಿ ಕಿರಿ, ಕಿರಿ ಮಾಡಿತ್ತು. ಹೀಗಾಗಿ ಕರ್ನಾಟಕ ಕೂಡ ಸಾಕಷ್ಟು ಪ್ರಮಾಣದ ನೀರನ್ನು ತಮಿಳುನಾಡು ರಾಜ್ಯಕ್ಕೆ ಹರಿಸಿತ್ತು. ಇಷ್ಟೆಲ್ಲದರ ಪರಿಣಾಮ ಇದೀಗ ಬೆಂಗಳೂರಿಗೂ ಮುಂದಿನ ದಿನಗಳಲ್ಲಿ, ಕುಡಿಯುವ ನೀರಿಗೆ ಸಂಕಷ್ಟ ಎದುರಾಗುತ್ತಾ? ಎಂಬ ಪ್ರಶ್ನೆ ಕಾಡುತ್ತಿದೆ. ಆದ್ರೆ ಕರ್ನಾಟಕದ ಕಾವೇರಿ ಕೊಳ್ಳದ ಡ್ಯಾಂಗಳಲ್ಲಿ 3 ತಿಂಗಳಿಗೆ ಆಗುವಷ್ಟು ನೀರು ಇದೆ ಎಂದು ಸರ್ಕಾರದಿಂದ ಮಾಹಿತಿ ಸಿಗುತ್ತಿದೆ. ಹೀಗಾಗಿ ಬೆಂಗಳೂರಿಗರು ಸೇರಿದಂತೆ ಹಳೇ ಮೈಸೂರು ಭಾಗದ ಜನರು ಇದರಿಂದ ಒಂದಷ್ಟು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ.
ಹಲವು ಜಿಲ್ಲೆಗಳಲ್ಲಿ ಮಳೆ ಆರ್ಭಟ
ಕರ್ನಾಟಕದ ಕರಾವಳಿ ಜಿಲ್ಲೆ ಸೇರಿ ಬೆಂಗಳೂರು ನಗರ, ಬೆಂಗಳೂರು ಗ್ರಾಂ. ರಾಮನಗರ ಜಿಲ್ಲೆ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು & ಹಾಸನ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು, ಶಿವಮೊಗ್ಗ, ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ ಬಳ್ಳಾರಿ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಮಳೆಯ ಸಿಂಚನ ಖುಷಿ ಕೊಟ್ಟಿದೆ. ಹಾಗೇ ಇಂದು ಕೂಡ ಭರ್ಜರಿ ಮಳೆ ಬಿದ್ದಿದ್ದು, ಮುಂದಿನ 24 ಗಂಟೆಯಲ್ಲಿ ಭಾರಿ ಮಳೆ ಬೀಳುತ್ತೆ ಎಂಬ ಮುನ್ಸೂಚನೆ ನೀಡಲಾಗಿದೆ. ಮುಂದಿನ ಕೆಲವು ದಿನಗಳ ಕಾಲ ಇದೇ ರೀತಿ ಮಳೆ ಬೀಳಲಿದೆ ಎನ್ನಲಾಗಿದೆ. ಹೀಗಾಗಿ ಜನರು ಕೂಡ ಫುಲ್ ಖುಷ್ ಆಗಿದ್ದಾರೆ.












Click it and Unblock the Notifications