ಭ್ರೂಣ ಹತ್ಯೆ ಪ್ರಕರಣ; ಖಡಕ್‌ ಎಚ್ಚರಿಕೆ ಕೊಟ್ಟು ಸುತ್ತೋಲೆ

ಬೆಂಗಳೂರು, ಡಿಸೆಂಬರ್ 04; ಕರ್ನಾಟಕದಲ್ಲಿ ಭ್ರೂಣ ಲಿಂಗ ಪತ್ತೆ ಮತ್ತು ಭ್ರೂಣ ಹತ್ಯೆ ಕುರಿತು ಭಾರೀ ಚರ್ಚೆ ನಡೆಯುತ್ತಿದೆ. ಈಗಾಗಲೇ ಕರ್ನಾಟಕ ಸರ್ಕಾರ ಈ ಕುರಿತು ಸಿಐಡಿ ತನಿಖೆಗೆ ಆದೇಶಿಸಿದೆ. ಆರೋಗ್ಯ ಇಲಾಖೆ ಸುತ್ತೋಲೆಯ ಮೂಲಕ ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೆ ಖಡಕ್ ಎಚ್ಚರಿಕೆ ನೀಡಿದೆ.

ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಈ ಕುರಿತು ಸುತ್ತೋಲೆ ಹೊರಡಿಸಿದ್ದಾರೆ. ಎಲ್ಲಾ ಖಾಸಗಿ ವೈದ್ಯಕೀಯ ಸಂಸ್ಥೆಗಳು ಕಡ್ಡಾಯವಾಗಿ ಕೆ.ಪಿ.ಎಂ.ಇ ಅಡಿಯಲ್ಲಿ ನೋಂದಣಿ ಪಡೆಯುವ ಬಗ್ಗೆ ಎಂಬ ವಿಷಯವನ್ನು ಸುತ್ತೋಲೆ ಒಳಗೊಂಡಿದೆ.

private-clinic-news

ಸುತ್ತೋಲೆಯ ವಿವರ; ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮ 2007 ಮತ್ತು ತಿದ್ದುಪಡಿ ಅಧಿನಿಯಮ 2017ರ ಸೆಕ್ಷನ್ (5) ರನ್ವಯ, ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಖಾಸಗಿ ವೈದ್ಯಕೀಯ ಸಂಸ್ಥೆಗಳು, ಕೆ.ಪಿ.ಎಂ.ಇ ಅಡಿಯಲ್ಲಿ ನೋಂದಣಿ ಪಡೆಯುವುದು ಕಡ್ಡಾಯವಾಗಿದೆ.

ಅದಾಗ್ಯೂ, ವೈದ್ಯಕೀಯ ವೃತ್ತಿ ನಡೆಸಲು ಅಗತ್ಯ ವಿದ್ಯಾರ್ಹತೆ ಇಲ್ಲದ ಕೆಲವು ನಕಲಿ ವೈದ್ಯರು, ಅನಧಿಕೃತ ಕ್ಲಿನಿಕ್ ಮತ್ತು ಪ್ರಯೋಗಾಲಯಗಳನ್ನು ನಡೆಸುತ್ತಿರುವುದು ಈ ಆಯುಕ್ತಾಲಯದ ಗಮನಕ್ಕೆ ಬಂದಿರುತ್ತದೆ ಎಂದು ಸುತ್ತೋಲೆ ಹೇಳಿದೆ.

ಇತ್ತೀಚಿನ ದಿನಗಳಲ್ಲಿ, ನಕಲಿ ಕ್ಲಿನಿಕ್ ಮತ್ತು ನಕಲಿ ವೈದ್ಯರುಗಳ ಸಂಖ್ಯೆ ಕ್ರಮೇಣವಾಗಿ ಹೆಚ್ಚಾಗುತ್ತಿದ್ದು, ಈ ಬಗ್ಗೆ ಕೆ.ಪಿ.ಎಂ.ಇ ತಿದ್ದುಪಡಿ ಅಧಿನಿಯಮ 2017ರ ಸೆಕ್ಷನ್ (19)ರಂತೆ ಸೂಕ್ತ ಕ್ರಮವಹಿಸಲು, ಸಂಬಂಧಿಸಿದ ತಾಲ್ಲೂಕು ಆರೋಗ್ಯಾಧಿಕಾರಿಗಳು ಮತ್ತು ಪ್ರಾಧಿಕೃತ ಅಧಿಕಾರಿಗಳು (Inspection Officers), ಬೆಂಗಳೂರು ನಗರ ಜಿಲ್ಲೆ, ಇವರುಗಳಿಗೆ ನಿರ್ದೇಶಿಸುವಂತೆ ಎಲ್ಲಾ ಜಿಲ್ಲೆಯ ಜಿಲ್ಲಾ ಆರೋಗ್ಯ & ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಆದೇಶಿಸಿದೆ.

ಕೆ.ಪಿ.ಎಂ.ಇ ತಿದ್ದುಪಡಿ ಅಧಿನಿಯಮ 2017 ರ ಸೆಕ್ಷನ್ 19 ಕೆಳಕಂಡಂತೆ ಇದೆ

* ಯಾವೊಬ್ಬ ವ್ಯಕ್ತಿಯು, 7ನೇ ಪ್ರಕರಣದ ಅಡಿಯಲ್ಲಿ ಮಂಜೂರು ಮಾಡಲಾಗುವ ನೋಂದಣಿ ಇಲ್ಲದ ಒಂದು ಖಾಸಗಿ ವೈದ್ಯಕೀಯ ಸಂಸ್ಥೆಯನ್ನು ಸ್ಥಾಪಿಸಿದಲ್ಲಿ, ನಡೆಸುತ್ತಿದ್ದಲ್ಲಿ ಅಥವಾ ನಿರ್ವಹಿಸುತ್ತಿದ್ದಲ್ಲಿ, ಅವನು, ಅಪರಾಧ ನಿರ್ಣಯವಾದ ನಂತರ ಮೂರು ವರ್ಷಗಳಿಗೆ ವಿಸ್ತರಿಸಬಹುದಾದ ಅವಧಿಯ ಕಾರಾವಾಸ ಶಿಕ್ಷೆಯಿಂದ ಮತ್ತು ಒಂದು ಲಕ್ಷ ರೂಪಾಯಿಗಳವರಗೆ ವಿಸ್ತರಿಸಬಹುದಾದ ಜುಲ್ಮಾನೆಯಿಂದ ದಂಡನೀಯನಾಗತಕ್ಕದ್ದು.

* ಒಬ್ಬ ವ್ಯಕ್ತಿಯು, (1)ನೇ ಉಪ-ಪ್ರಕರಣದ ಅಡಿಯಲ್ಲಿ ನಿರ್ಣಿತ ಅಪರಾಧಿಯಾಗಿದ್ದಲ್ಲಿ ನೋಂದಣಿ ಮತ್ತು ಕುಂದುಕೊರತೆ ನಿವಾರಣಾ ಪ್ರಾಧಿಕಾರವು, ಅಂಥ ನೋಂದಾಯಿತವಲ್ಲದ ಖಾಸಗಿ ವೈದ್ಯಕೀಯ ಸಂಸ್ಥೆಯನ್ನು ಅಂಥ ನೋಂದಣಿಯು ರದ್ದು ಅಥವಾ ಅಮಾನತುಗೊಂಡಿದ್ದು ಅಂಥ ರದ್ದತಿ ಅಥವಾ ಅಮಾನತಿನ ವಿರುದ್ಧ ದಾಖಲಿಸಲಾದ ಅಪೀಲು ಇತ್ಯರ್ಥದಲ್ಲಿದ್ದ ಹೊರತು ಅದನ್ನು ಕೂಡಲೇ ಮುಚ್ಚುವಂತೆ ಆದೇಶಿಸತಕ್ಕದ್ದು,

* (1)ನೇ ಉಪ-ಪುಕರಣದ ಅಡಿಯಲ್ಲಿ ಮಾಡಿದ ಪ್ರತಿಯೊಂದು ಆದೇಶವು, ಅಂಥ ನೋಂದಾಯಿತವಲ್ಲದ ಖಾಸಗಿ ವೈದ್ಯಕೀಯ ಸಂಸ್ಥೆಯ ಒಳರೋಗಿಗಳನ್ನು ಆ ಆದೇಶದಲ್ಲಿ ನಿರ್ದಿಷ್ಟ ಪಡಿಸಬಹುದಾದಂಥ ಇತರೆ ಖಾಸಗಿ ವೈದ್ಯಕೀಯ ಸಂಸ್ಥೆಗೆ ವರ್ಗಾಯಿಸತಕ್ಕದ್ದೆಂದು ನಿರ್ದೇಶನದಲ್ಲಿ ತಿಳಿಸಿರತಕ್ಕದ್ದು ಮತ್ತು ಅದು, ಅಂಥ ವರ್ಗಾವಣೆ ಮಾಡುವವರೆಗೂ ಒಳರೋಗಿಗಳ ಸುರಕ್ಷತೆ ಮತ್ತು ಅಭಿರಕ್ಷೆಗೆ ಸಂಬಂಧಪಟ್ಟ ಇತರ ಉಪಬಂಧಗಳನ್ನು ಸಹ ಒಳಗೊಂಡಿರತಕ್ಕದ್ದು.

ಮುಂದುವರೆದು, ಅಂತಹ ಅನಧಿಕೃತ ವೈದ್ಯಕೀಯ ಸಂಸ್ಥೆ ಅಥವಾ ಕ್ಲಿನಿಕ್ ಅಥವಾ ಆಸ್ಪತ್ರೆ ಅಥವಾ ಚಿಕಿತ್ಸಾ ಪ್ರಯೋಗಾಲಯಗಳನ್ನು ಸೀಲ್ ಮಾಡಿರುವ ಬಗ್ಗೆ ಮತ್ತು ಅವುಗಳನ್ನು ನಡೆಸುತ್ತಿರುವ ನಕಲಿ ವೈದ್ಯರುಗಳ ಬಗ್ಗೆ ಕಡ್ಡಾಯವಾಗಿ ಅಲ್ಲಿನ ಕೆ.ಪಿ.ಎಂ.ಇ ನೋಂದಣಿ ಮತ್ತು ಕುಂದು ಕೊರತೆ ನಿವಾರಣೆ ಪ್ರಾಧಿಕಾರದಲ್ಲಿ ನಿರ್ಧರಿಸಿ, ಮುಂದಿನ ಕ್ರಮಕ್ಕಾಗಿ ವೈಯಕ್ತಿಕ ಕ್ರಿಮಿನಲ್ ದೂರನ್ನು (PCR) ಮ್ಯಾಜಿಸ್ಟ್ರೇಟ್ ನ್ಯಾಯಲಯಕ್ಕೆ ಸಲ್ಲಿಸುವಂತೆ ಮತ್ತು Indian Penal Code (IPC) ಪ್ರಕಾರ ಕ್ರಮವಹಿಸಲು ಪ್ರಕರಣವನ್ನು ಪೊಲೀಸರಿಗೆ ತಿಳಿಸುವಂತೆ ಎಲ್ಲಾ ತಪಾಸಣಾ ಅಧಿಕಾರಿಗಳಿಗೆ ಈ ಮೂಲಕ ನಿರ್ದೇಶಿಸಿದೆ.

ಹಾಗೂ ತೆಗೆದುಕೊಂಡ ಕ್ರಮದ ಬಗ್ಗೆ ತಾಲ್ಲೂಕುವಾರು ಕೂಢೀಕೃತ ವರದಿಯನ್ನು ಪ್ರತಿ ತಿಂಗಳ 5ನೇ ತಾರೀಖಿನಂದು ಆಯುಕ್ತಾಲಯಕ್ಕೆ [email protected]ಗೆ ಸಲ್ಲಿಸಲು ಎಲ್ಲಾ ಜಿಲ್ಲೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸೂಚಿಸಿದೆ ಎಂದು ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+