ನಿರಾಶ್ರಿತರಿಗೆ ಬಿಸ್ಕೆಟ್ ಎಸೆದಿದ್ದಕ್ಕೆ ಸ್ಪಷ್ಟನೆ ನೀಡಿದ ಸಚಿವ ರೇವಣ್ಣ

Recommended Video

      ಪ್ರವಾಹ ಸಂತ್ರಸ್ತರಿಗೆ ಬಿಸ್ಕೆಟ್ ಎಸೆದ ಬಗ್ಗೆ ಸ್ಪಷ್ಟನೆ ಕೊಟ್ಟ ಎಚ್ ಡಿ ರೇವಣ್ಣ | Oneindia Kannada

      ಬೆಂಗಳೂರು, ಆಗಸ್ಟ್ 21: ಕೊಡಗಿನ ನಿರಾಶ್ರಿತರ ಶಿಬಿರದಲ್ಲಿ ನಿರಾಶ್ರಿತರಿಗೆ ಬಿಸ್ಕೆಟ್‌ ಅನ್ನು ದರ್ಪದಿಂದ ಎಸೆದು ಸಾಮಾಜಿಕ ಮಾಧ್ಯಮಗಳಿಂದ ಹಾಗೂ ಸಾರ್ವಜನಿಕರಿಂದ ತೀವ್ರ ಕೋಪಕ್ಕೆ ಗುರಿ ಆಗಿರುವ ಸಚಿವ ರೇವಣ್ಣ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

      ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೂರದಲ್ಲಿ ಇರುವವರಿಗೆ ಬಿಸ್ಕೆಟ್ ಸಿಗುವುದಿಲ್ಲ ಎಂಬ ಕಾರಣಕ್ಕೆ ಬಿಸ್ಕೆಟ್ ಅನ್ನು ಎಸೆದೆ, ಒಳ್ಳೆಯ ಭಾವನೆಯಿಂದಲೇ ಅವರಿಗೆ ನೆರವು ಮಾಡಿದ್ದೇನೆ ಎಂದಿದ್ದಾರೆ.

      ನಿರಾಶ್ರಿತರ ಬಗ್ಗೆ ಕಾಳಜಿ ಇದ್ದ ಕಾರಣದಿಂದಲೇ ಅವರಿಗೆ ಸಹಾಯ ಮಾಡಿದ್ದೇನೆ, ಇಲ್ಲದಿದ್ದರೆ ನಾನೇಕೆ ನಾಲ್ಕು ದಿನ ಅಲ್ಲಿ ಇದ್ದು ಸೇವೆ ಮಾಡುತ್ತಿದ್ದೆ, ಬಿಸ್ಕೆಟ್ ಎಸೆಯುವಾಗ ಕೆಟ್ಟ ಉದ್ದೇಶ ಇರಲಿಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

      HD Revanna gives clarification about his trowing biscuit incident

      ರಾಮನಾಥಪುರದ ನಿರಾಶ್ರಿತರ ಶಿಬಿರಕ್ಕೆ ಭೇಟಿ ನೀಡಿದ್ದ ಸಚಿವ ರೇವಣ್ಣ ಅವರು, ಬಿಸ್ಕೆಟ್‌ ಪ್ಯಾಕೆಟ್‌ಗಳನ್ನು ನಿರಾಶ್ರಿತರತ್ತ ಎಸೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಭಾರಿ ಆಕ್ರೋಶಕ್ಕೆ ಗುರಿ ಆಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+