ಲೋಕಸಭೆ ಚುನಾವಣೆ ಗೆಲ್ಲಲು ತಮಿಳುನಾಡಿಗೆ ನಮ್ಮ ರಾಜ್ಯವನ್ನೇ ಅಡ ಇಟ್ಟಿದ್ದಾರೆ: ಹೆಚ್ ಡಿ ರೇವಣ್ಣ

ಕಲಬುರಗಿ, ಸೆಪ್ಟೆಂಬರ್‌ 28: ಕರ್ನಾಟಕ ಮತ್ತು ತಮಿಳುನಾಡು ಎ ಟೀಂ ಬಿ ಟೀಂ ಆಗಿವೆ. ಇಂಡಿಯಾ ಪಕ್ಷದ ಸೀಟುಗಳನ್ನು ಗೆಲ್ಲಲು ತಮಿಳುನಾಡಿಗೆ ಕರ್ನಾಟಕ ವನ್ನು ಅಡವಿಟ್ಟಿದ್ದಾರೆ ಎಂದು ಮಾಜಿ ಸಚಿವ ಎಚ್ ಡಿ ರೇವಣ್ಣ ಹೇಳಿದ್ದಾರೆ.

ಈ ಕುರಿತು ಗುರುವಾರ ಕಲಬುರಗಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಇಂಡಿಯಾ ಒಕ್ಕೂಟ ಉಳಿಸಿಕೊಳ್ಳಲು ರಾಜ್ಯದ ಹಿತ ಅಡ ಇಡುತ್ತಿದ್ದಾರೆ. ಕಾವೇರಿ ಭಾಗದ ಅಚ್ಚುಕಟ್ಟು ರೈತರನ್ನು ಅಡ ಇಡುತ್ತಿದ್ದಾರೆ. ಲೋಕ‌ಸಭೆಯಲ್ಲಿ ಕಾಂಗ್ರೇಸ್ ಅವರು 40 ಸೀಟು ಗೆಲ್ಲಲು ರಾಜ್ಯವನ್ನೆ ಅಡ ಇಟ್ಟಿದ್ದಾರೆ ಎಂದು ಕಾಂಗ್ರೆಸ್ ವಿರುದ್ದ ಹೆಚ್.ಡಿ. ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು.

HD Revanna Fierce Attack Against Congress Government

ಇನ್ನೂ ಲೋಕಸಭಾ ಚುನಾವಣೆ ಹಿನ್ನೆಲೆ ರಾಜ್ಯದಲ್ಲಿ ಆಪರೇಷನ್ ಹಸ್ತದ ವಿಚಾರವಾಗಿ ಮಾನಾಡಿದ ಅವರು, ಆಪರೇಷನ್ ಹಸ್ತದ ಬಗ್ಗೆ ತಲೆ‌ಕಡೆಸಿಕೊಳ್ಳುವ ಅವಶ್ಯಕತೆ ಇಲ್ಲ. ಆಪರೇಷನ್ ಹಸ್ತಕ್ಕೆ ಹೆದರುವ ಸನ್ನಿವೇಶ ನಮಗಿಲ್ಲ. ಕಾಂಗ್ರೆಸ್‌ ಇಂದು ಕೋಮುವಾದಿಗಳನ್ನು ದೂರ ಇಡಬೇಕು ಎನ್ನುತ್ತಿದೆ. ಈ ಹಿಂದೆ ನಮ್ಮನ್ನು ಯಾವ ರೀತಿ‌ ನಡೆಸಿಕೊಂಡಿದೆ ಎನ್ನುವುದು ಗೊತ್ತೆ ಇದೆ ಎಂದು ಹೇಳಿದರು.

ಲೋಕಸಭಾ ಚುನಾವಣೆಗೆ ಬಿಜೆಪಿ ಜೊತೆಗೆ ಮೈತ್ರಿ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿ ಜೆಡಿಎಸ್ ಮೈತ್ರಿಯಿಂದ ನಮ್ಮಲ್ಲಿ ಯಾವುದೇ ಅಸಮಾಧಾನ ಇಲ್ಲ. ದೇವೇಗೌಡರು, ಕುಮಾರಸ್ವಾಮಿ‌ ಅವರು ಏನು ಹೇಳುತ್ತಾರೋ ಅದೇ ಫೈನಲ್. ಸಿಎಂ‌ ಇಬ್ರಾಹಿಂ ಎಲ್ಲೂ ಹೊಗಲ್ಲ, ಏನು ಆಗೋದಿಲ್ಲ. ಬಿಜೆಪಿ, ಜೆಡಿಎಎಸ್ ಮೈತ್ರಿ ಎಲ್ಲರೂ ಕುಳಿತು, ಚರ್ಚೆ ಮಾಡಿಯೇ ತೀರ್ಮಾನ ಮಾಡಿದ್ದೆವೆ. ಜೆಡಿಎಸ್ ಬಿಟ್ಟು ಯಾರು ಎಲ್ಲೂ ಹೋಗೊದಿಲ್ಲ. ಕಾಂಗ್ರೇಸ್ 135 ಗೆದ್ದರೂ ಆಪರೆಷನ್ ಹಸ್ತ ಮಾಡುವ ಪರಿಸ್ಥಿತಿ‌ ಬಂದಿದೆ ಎಂದು ವ್ಯಂಗವಾಡಿದರು.

ಬಿಜೆಪಿ ಹಾಗೂ ಜೆಡಿಎಸ್ ಎ ಟೀಂ ಹಾಗೂ ಬಿ ಟೀಂ ಎಂದು ಕಾಂಗ್ರೆಸ್‌ ನವರು ಹೇಳುತ್ತಾರೆ. ಈಗ ಕರ್ನಾಟಕ ಎ ಟೀಂ ಆಗಿದೆ ತಮಿಳುನಾಡು ಬಿ ಟೀಂ ಆಗಿದೆ ಎಂದು ಮಾಜಿ ಸಚಿವ ಹೆಚ್ ಡಿ‌ ರೇವಣ್ಣ ಅವರು ಗುಡುಗಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+