ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈತರ ಪ್ರತಿಭಟನೆ : ಎಚ್.ಡಿ.ಕುಮಾರಸ್ವಾಮಿ ಹೇಳಿದ್ದೇನು?

|
Google Oneindia Kannada News

Recommended Video

ಬೆಂಗಳೂರಿನಲ್ಲಿ ರೈತರ ಪ್ರತಿಭಟನೆ ಬಗ್ಗೆ ಎಚ್ ಡಿ ಕುಮಾರಸ್ವಾಮಿ ಪ್ರತಿಕ್ರಿಯೆ | Oneindia Kannada

ಬೆಳಗಾವಿ, ನವೆಂಬರ್ 18 : ಬೆಳಗಾವಿಯಲ್ಲಿ ರೈತರ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಸುವರ್ಣ ವಿಧಾನಸೌಧಕ್ಕೆ ಕಬ್ಬಿನ ಲಾರಿಯನ್ನು ರೈತರು ನುಗ್ಗಿಸಿದ್ದಾರೆ. 50ಕ್ಕೂ ಹೆಚ್ಚು ರೈತರನ್ನು ಬಂಧಿಸಲಾಗಿದ್ದು, 10 ರೈತರ ವಿರುದ್ಧ ಎಫ್‌ಐಆರ್ ದಾಖಲು ಮಾಡಿದ್ದಾರೆ.

ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರೈತರ ಪ್ರತಿಭಟನೆ ಬಗ್ಗೆ ಹೇಳಿಕೆ ನೀಡಿದ್ದಾರೆ. 'ನಮ್ಮ ರೈತರು ಶಾಂತಿ ಪ್ರಿಯರು, ಸುವರ್ಣ ವಿಧಾನಸೌಧದ ಬೀಗ ಒಡೆದಿದ್ದು ರೈತರಲ್ಲ' ಎಂದು ಹೇಳಿದರು.

ಸುವರ್ಣ ವಿಧಾನಸೌಧಕ್ಕೆ ಲಾರಿ ನುಗ್ಗಿಸಿದ ರೈತರ ಬಂಧನ, ಎಫ್‌ಐಆರ್ಸುವರ್ಣ ವಿಧಾನಸೌಧಕ್ಕೆ ಲಾರಿ ನುಗ್ಗಿಸಿದ ರೈತರ ಬಂಧನ, ಎಫ್‌ಐಆರ್

'4 ವರ್ಷದಿಂದ ಒಬ್ಬ ಸಕ್ಕರೆ ಕಾರ್ಖಾನೆ ಮಾಲೀಕರು ಹಣ ಕೊಟ್ಟಿಲ್ಲ ಎಂದು ಈಗ ರೈತರು ಹೇಳುತ್ತಿದ್ದಾರೆ. ನಾನು ಮುಖ್ಯಮಂತ್ರಿ ಆಗಿರುವುದು ಈಗ 8 ತಿಂಗಳ ಹಿಂದೆ. ನಾಲ್ಕು ವರ್ಷದಿಂದ ಹಣ ಕೊಡದ ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಚುನಾವಣೆಯಲ್ಲಿ ವೋಟು ಹಾಕಿಲ್ಲವೇ?' ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ರೈತರ ಪ್ರತಿಭಟನೆ, ಸುವರ್ಣ ವಿಧಾನಸೌಧಕ್ಕೆ ಲಾರಿ ನುಗ್ಗಿಸಿದ ರೈತರುರೈತರ ಪ್ರತಿಭಟನೆ, ಸುವರ್ಣ ವಿಧಾನಸೌಧಕ್ಕೆ ಲಾರಿ ನುಗ್ಗಿಸಿದ ರೈತರು

HD Kumarasway statement on sugarcane farmers protest

'ಒಬ್ಬ ರೈತ ಮಹಿಳೆ ಪ್ರತಿಭಟನೆ ನಡೆಸುತ್ತಿದ್ದಾಳೆ. ಕುಮಾರಸ್ವಾಮಿ ಅವರು ಬಾಕಿ ಹಣ ಕೊಡಿಸುತ್ತಿಲ್ಲ ಎಂದು ಕೇಳುತ್ತಿದ್ದಾಳೆ. ನಾಲ್ಕು ವರ್ಷದಿಂದ ಎಲ್ಲಿ ಮಲಗಿದ್ದೆ ತಾಯಿ ನೀನು?' ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಮುಖ್ಯಮಂತ್ರಿಗಳ ಭರವಸೆ ಬಳಿಕವೂ ನಿಲ್ಲದ ಕಬ್ಬು ಬೆಳೆಗಾರರ ಪ್ರತಿಭಟನೆಮುಖ್ಯಮಂತ್ರಿಗಳ ಭರವಸೆ ಬಳಿಕವೂ ನಿಲ್ಲದ ಕಬ್ಬು ಬೆಳೆಗಾರರ ಪ್ರತಿಭಟನೆ

'ನಾನು ಬಡವರ, ರೈತರ ಪರವಾಗಿ ಮಾನವೀಯತೆಯನ್ನು ಬೆಳೆಸಿಕೊಂಡಿದ್ದೇನೆ. ನಿಮಗೆ ಮಾತನಾಡುವ ಚಟ ಇದ್ದರೆ ಮಾತನಾಡಿ ಪರವಾಗಿಲ್ಲ. ನೀವು ಸುವರ್ಣವಿಧಾನಸೌಧದ ಗೇಟು ಒಡೆಯುವ ಕೆಲಸ ಮಾಡಿದರೆ ನಿಮ್ಮ ಮೇಲೆ ಕ್ರಮ ತೆಗೆದುಕೊಳ್ಳಬೇಕೇ? ಬೇಡವೇ?' ಎಂದರು.

'ನಮ್ಮ ಸರ್ಕಾರ ರೈತರ ಮೇಲೆ ಗದಾ ಪ್ರಹಾರ ಮಾಡುವುದಿಲ್ಲ. ಆದರೆ, ರೈತರ ಹೆಸರನ್ನು ದುರುಪಯೋಗ ಪಡಿಸಿಕೊಂಡು ಈ ರೀತಿ ವರ್ತನೆ ಮಾಡಿದರೆ ಅದಕ್ಕೆ ಅವಕಾಶ ನೀಡಲು ಆಗುವುದಿಲ್ಲ ಎಂದು ನಾನು ಸ್ಪಷ್ಟವಾಗಿ ಹೇಳುತ್ತೇನೆ' ಎಂದು ತಿಳಿಸಿದರು.

English summary
More than 20 Sugarcane farmers were arrested for protesting in Suvarna Vidhana soudha, Belagavi. H.D.Kumaraswamy statement on Farmers protest in Belagavi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X