ಮತ್ತೆ ಜೀವ ಪಡೆದ ದೇವೇಗೌಡರ ಕಾಲದ ಬೆಂಗಳೂರು-ಸತ್ಯಮಂಗಲ-ಚಾಮರಾಜನಗರ ರೈಲ್ವೆ ಯೋಜನೆ

ಬೆಂಗಳೂರು, ಜೂನ್. 19: ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಸಿಲಿಕಾನ್ ಸಿಟಿ - ಸತ್ಯಮಂಗಲ - ಚಾಮರಾಜನಗರ ರೈಲು ಯೋಜನೆಗೆ ಮತ್ತೆ ಜೀವ ಬಂದಿದೆ. 1997-98 ರಲ್ಲಿ ಮುನ್ನೆಲೆಗೆ ಬಂದಿದ್ದ ಉದ್ದೇಶಿತ ರೈಲು ಮಾರ್ಗವು ಮಾಜಿ ಪ್ರಧಾನಿ ಎಚ್. ಡಿ ದೇವೇಗೌಡರ ಕಾಲದ್ದು. ಇದಕ್ಕೆ ಕೇಂದ್ರ ಸಚಿವ ಎಚ್. ಡಿ ಕುಮಾರಸ್ವಾಮಿ ಮತ್ತೆ ಜೀವ ನೀಡಿದ್ದಾರೆ.

ಬೆಂಗಳೂರು - ಕನಕಪುರ - ಚಾಮರಾಜನಗರ - ತಮಿಳುನಾಡು ಸತ್ಯಮಂಗಲ ಮಾರ್ಗಕ್ಕೆ ಈ ಹಿಂದೆ ಅನುಮತಿ ದೊರೆತಿತ್ತು. 2006ರಲ್ಲಿ ಮಂಜೂರಾದ ಬೆಂಗಳೂರು- ಸತ್ಯಮಂಗಲಂ ರೈಲು ಮಾರ್ಗ ಯೋಜನೆಗೆ ಸರ್ವೆ ಕಾರ್ಯ ಕೂಡ ನಡೆದಿತ್ತು. ಆದರೆ, ಚಾಮರಾಜನಗರದಿಂದ ಸತ್ಯಮಂಗಲದವರೆಗೆ ಮೀಸಲು ಅರಣ್ಯ ಪ್ರದೇಶ ಇರುವುದರಿಂದ ಭೂ ಸ್ವಾಧೀನ ಪ್ರಕ್ರಿಯೆಗೆ ಅಡ್ಡಿಯಾಗಿ ಯೋಜನೆ ಸ್ಥಗಿತವಾಗಿತ್ತು. ಬಳಿಕ ಈ ಮಾರ್ಗ ಹೆಜ್ಜಾಲ-ಚಾಮರಾಜನಗರಕ್ಕೆ ಸೀಮಿತಗೊಂಡಿತ್ತು

HD Kumaraswamy talks about Bangalore-Satyamangala-Chamarajanagar railway project

ಮತ್ತೆ ಜೀವ ಪಡೆದ ದೇವೇಗೌಡರ ಕನಸು

ಬುಧವಾರ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನ್ ವೈಷ್ಣವ್ ಅವರನ್ನು ಭೇಟಿಯಾಗಿರುವ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ರಾಜ್ಯದಲ್ಲಿ ನೆನೆಗುದಿಗೆ ಬಿದ್ದಿರುವ ಹಾಗೂ ಹಾಲಿ ನಡೆಯುತ್ತಿರುವ ರೈಲ್ವೆ ಯೋಜನೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಇದೇ ವೇಳೆ ದಶಕಗಳಿಂದ ಕನಸಾಗಿಯೇ ಇರುವ ಬೆಂಗಳೂರು - ಸತ್ಯಮಂಗಲ - ಚಾಮರಾಜನಗರ (ಕನಕಪುರ - ಮಳವಳ್ಳಿ ಮಾರ್ಗವಾಗಿ) ರೈಲ್ವೆ ಯೋಜನೆ ಬಗ್ಗೆಯೂ ಮಾತನಾಡಿದ್ದಾರೆ.

"ಕೇಂದ್ರ ಸರಕಾರದ ರೈಲ್ವೆ ಸಚಿವರಾದ ಅಶ್ವಿನ್ ವೈಷ್ಣವ್ ಅವರನ್ನು ರೈಲ್ವೆ ಭವನದಲ್ಲಿ ಸೌಹಾರ್ದಯುತವಾಗಿ ಭೇಟಿ ಮಾಡಲಾಯಿತು. ರಾಜ್ಯದಲ್ಲಿ ನೆನೆಗುದಿಗೆ ಬಿದ್ದಿರುವ ಹಾಗೂ ಹಾಲಿ ನಡೆಯುತ್ತಿರುವ ರೈಲ್ವೆ ಯೋಜನೆಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸುವುದು, ಹೊಸ ರೈಲ್ವೆ ಮಾರ್ಗಗಳಿಗೆ ಅನುಮೋದನೆ ನೀಡಿ ಹಣಕಾಸು ನೆರವು ಒದಗಿಸುವ ಬಗ್ಗೆ ಮಾನ್ಯ ಸಚಿವರೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಲಾಯಿತು" ಎಂದು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.

"ರೈಲ್ವೆ ಸಚಿವರು ಅತ್ಯಂತ ಸಕಾರಾತ್ಮಕವಾಗಿ ಸ್ಪಂದಿಸಿದ್ದು ನನಗೆ ಬಹಳ ಸಂತೋಷ ಉಂಟು ಮಾಡಿತು. ಅಲ್ಲದೆ; ಮಾನ್ಯ ಮಾಜಿ ಪ್ರಧಾನಿಗಳಾದ ಎಚ್.ಡಿ.ದೇವೇಗೌಡ ಅವರ ಕಾಲದಲ್ಲಿ ಮಂಜೂರಾಗಿದ್ದ ಬೆಂಗಳೂರು - ಸತ್ಯಮಂಗಲ - ಚಾಮರಾಜನಗರ (ಕನಕಪುರ - ಮಳವಳ್ಳಿ ಮಾರ್ಗವಾಗಿ) ರೈಲ್ವೆ ಯೋಜನೆಯನ್ನು ಕೈಗೆತ್ತಿಕೊಂಡು ಆದಷ್ಟು ಶೀಘ್ರವಾಗಿ ಪೂರ್ಣಗೊಳಿಸಲು ಮಾನ್ಯ ರೈಲ್ವೆ ಸಚಿವರಿಗೆ ಮನವಿ ಮಾಡಲಾಯಿತು" ಎಂದು ತಿಳಿಸಿದ್ದಾರೆ.

HD Kumaraswamy talks about Bangalore-Satyamangala-Chamarajanagar railway project

ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಹಣ ಬಿಡುಗಡೆ

ಇನ್ನು ದೇಶದ ರೈತರಿಗೆ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ 17ನೇ ಕಂತಿನ ಹಣ ಬಿಡುಗಡೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರ್ನಾಟಕ ಹಾಗೂ ಭಾರತದ ಸಮಸ್ತ ರೈತಬಂಧುಗಳ ಪರವಾಗಿ ಧನ್ಯವಾದಗಳು ಎಂದು ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ವಾರಾಣಸಿಯಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದಲ್ಲಿ ನಾನೂ ಸಹ ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ವರ್ಚುಯಲ್ ವೇದಿಕೆ ಮೂಲಕ ಭಾಗಿಯಾಗಿದ್ದೆ. ಈ ಕಂತಿನಲ್ಲಿ ಇಡೀ ದೇಶದ 9.58 ಕೋಟಿ ರೈತರ ಬ್ಯಾಂಕ್ ಖಾತೆಗಳಿಗೆ 20,000 ಕೋಟಿ ರೂಪಾಯಿ ಹಣವನ್ನು ಪ್ರಧಾನಿಗಳು ನೇರವಾಗಿ ತಲುಪಿಸಿದ್ದಾರೆ.

ಕರ್ನಾಟಕದಲ್ಲಿ 44,99,713 ರೈತ ಕುಟುಂಬಗಳಿಗೆ 913.42 ಕೋಟಿ ರೂಪಾಯಿ ವರ್ಗಾವಣೆ ಆಗುತ್ತಿದೆ. 2019ರಲ್ಲಿ ಆರಂಭಿಸಲಾದ ಈ ಯೋಜನೆಯಡಿ ಒಟ್ಟು 17 ಕಂತುಗಳಲ್ಲಿ 3.22 ಲಕ್ಷ ಕೋಟಿ ರೂಪಾಯಿ ಹಣವು ಅನ್ನದಾತರ ಮನೆ ತಲುಪಿದಂತಾಗಿದೆ. 3ನೇ ಬಾರಿ ಪ್ರಧಾನಿಯಾದ ಮೇಲೆ 17ನೇ ಕಂತಿನ ಹಣ ಬಿಡುಗಡೆಗೆ ಮೊದಲ ಸಹಿ ಹಾಕಿ ರೈತಪರ ನಿರ್ಧಾರ ಕೈಗೊಂಡ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+