
ನೆಲಮಂಗಲ ಸ್ಯಾಟಲೈಟ್ ಸಿಟಿ; ಮೂರು ವರ್ಷದಲ್ಲಿ ಮಾಡದವರು, ಮೂರು ತಿಂಗಳಲ್ಲಿ ಮಾಡ್ತಾರಾ ಹೆಚ್ಡಿಕೆ ವ್ಯಂಗ್ಯ
ನೆಲಮಂಗಲ,ನವೆಂಬರ್ 30: ನೆಲಮಂಗಲವನ್ನ ಮೂರುವರೆ ವರ್ಷಗಳಿಂದ ಸ್ಯಾಟಲೈಟ್ ಸಿಟಿಯಾಗಿ ಮಾಡದವರು, ಮೂರು ತಿಂಗಳಿಲ್ಲ ಮಾಡ್ತಾರಾ ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದರು.
ಅವಕಾಶ ಸಿಕ್ಕದರೆ ಮುಸ್ಲಿಂ ಸಮುದಾಯದವರು ಮುಖ್ಯಮಂತ್ರಿ ಯಾಕಾಗಬಾರದು: ಎಚ್.ಡಿ ಕುಮಾರಸ್ವಾಮಿ
ಬುಧವಾರ ನೆಲಮಂಗಲದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೆಲಮಂಗಲವನ್ನ ಸ್ಯಾಟಲೈಟ್ ಸಿಟಿಯಾಗಿ ಮಾಡುವುದಾಗಿ ಸಚಿವ ಸುಧಾಕರ್ ಹೇಳಿಕೆಗೆ ಎಚ್.ಡಿ ಕುಮಾರಸ್ವಾಮಿ ಕಿಡಿಕಾಪರಿದ್ದಾರೆ. 2006ರಲ್ಲಿ ಮೂರು ಸ್ಯಾಟಲೈಟ್ ನಗರ ಮಾಡಲು ಮುಂದಾದೆ. ಬಿಡದಿಯಲ್ಲಿ ಸ್ಯಾಟಲೈಟ್ ಟೌನ್ ಮಾಡುವಾಗ ಕಾಂಗ್ರೆಸ್ ವಿರೋಧಿಸಿದ್ರು. ಈಗ ಬೆಂಗಳೂರು ಏನು ಮಾಡಿದ್ದಾರೆ ಗೊತ್ತಿಲ್ವಾ.? ನೆಲಮಂಗಲ ಈಗಾಗಲೇ ಸಾಕಷ್ಟು ಬೆಳದಿದೆ. ನೆಲಮಂಗಲ ಈಗಾಗಲೇ ಬೆಂಗಳೂರಿಗೆ ಸೇರಿಕೊಂಡಿದೆ. ಇನ್ಯಾವಾಗ ಇವರು ಸ್ಯಾಟಲೈಟ್ ಟೌನ್ ಮಾಡೋದು. ಬಹುಷ ಅವರು ಮುಂದಿನ ಚುನಾವಣೆ ಮುಗಿದ ಮೇಲೆ ಮಾಡಬಹುದೇನೋ ಎಂದು ವ್ಯಂಗ್ಯವಾಡಿದರು.
ಅಸ್ಪೃಶ್ಯತೆ;ವಿರೋಧಿಗಳ ಅಪಪ್ರಚಾರಕ್ಕೆ ತಿರುಗೇಟು
ನಾನು ಮಾತನಾಡಿರೋ ಕೆಲ ಮಾತನ್ನ ಸೋಶಿಯಲ್ ಮೀಡಿಯಾದಲ್ಲಿ ತಿರುಚಿ ಹೇಳಲಾಗ್ತಿದೆ. ಜನರ ದಾರಿ ತಪ್ಪಿಸೋ ಕೆಲಸ ಮಾಡ್ತಿದ್ದಾರೆ. ಯಾವುದೇ ವ್ಯಕ್ತಿ ನನನ್ನು ಭೇಟಿ ಮಾಡಲು ಬಂದ್ರೆ ಅಸ್ಪೃಷ್ಯವಾಗಿ ನೋಡಿಲ್ಲ. ನಾನು ಎಲ್ಲರನ್ನೂ ಸಮಾನವಾಗಿ ಕಾಣುತ್ತೇನೆ ಎಂದು ಕೃತಿಯಲ್ಲಿ ತೋರಿಸಿದ್ದೇನೆ. ಮೊನ್ನೆ ಇಬ್ರಾಹಿಂ ಹುಬ್ಬಳ್ಳಿಯಲ್ಲಿ ನಾನು ಸಿಎಂ ಅಭ್ಯರ್ಥಿ ಆಗ್ತೀನಿ. ಕುಮಾರಸ್ವಾಮಿ ದೆಹಲಿಗೆ ಹೋಗುವ ಸಮಯ ಬಂದಿದೆ ಅಂತ ಹೇಳಿದ್ದಾರೆ. ಆದ್ರೆ ನಮ್ಮಲ್ಲಿ ಮುಸ್ಲಿಮರ ಬಗ್ಗೆ, ಅವರು ಪಾಕಿಸ್ತಾನದವರು, ಪಾಕಿಸ್ತಾನಕ್ಕೆ ಕಳಿಸಿ ಅಂತ ಕೆಲವರು ಚರ್ಚೆ ಮಾಡುತ್ತಿದ್ದಾರೆ. ಬಿಜೆಪಿಯವರು ಈ ರೀತಿ ಮಾಡಿದ್ದಾರೆ.ಇದು ಸರಿಯಲ್ಲ ಎಂದು ಹೇಳಿದ್ದೆ. ಯಾಕೆ ಮುಸ್ಲಿಮರು ಸಿಎಂ ಆಗಬಾರದಾ? ಅವರೇನು ಅಸ್ಪೃಶ್ಯರ ಅಂತಾ ಪ್ರಶ್ನೆ ಮಾಡಿದೆ. ನಾನು ಕೊಟ್ಟ ಈ ಹೇಳಿಕೆ ಅಸ್ಪೃಶ್ಯತೆಯನ್ನು ಪೋಷಿಸುವ ಉದ್ದೇಶ ಇಟ್ಟುಕೊಂಡು ಹೇಳಿದ್ದಲ್ಲ. ನಾನು ಅಸೃಷ್ಯತೆಗೆ ವಿರೋಧಿ. ಅದೆಲ್ಲವನ್ನೂ ಕೃತಿಯಲ್ಲಿ ತೋರಿಸಿದ್ದೇನೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದ್ರೂ ಹೀಗೆ ಚರ್ಚೆಯಾಗ್ತಿದೆ. ಮೊನ್ನೆ ಸಿದ್ದರಾಮಯ್ಯ ಕೂಡ ಅವರೇನು ಅಸ್ಪೃಶ್ಯರ ಅಂತ ಒಂದು ಹೇಳಿದ್ದಾರೆ. ನನಗೂ ಯಾರೋ ಆ ವಿಡಿಯೋ ತೋರಿಸಿದರು. ಸಿದ್ದರಾಮಯ್ಶ ಹೇಳಿಕೆ ಬಗ್ಗೆ ಯಾಕೆ ಚರ್ಚೆ ಮಾಡಿಲ್ಲ. ನನ್ನ ಹೇಳಿಕೆ ಬಗ್ಗೆ ದೊಡ್ಡ ರೀತಿಯಲ್ಲಿ ಚರ್ಚೆ ಆಗುತ್ತಿದೆ. ಇದನ್ನು ನೋಡಿದರೆ ತಿಳಿಯುತ್ತೆ, ಇದು ಪಿತೂರಿ ಅಂತ ಎಂದು ಕಿಡಿಕಾರಿರು.
ಕಳೆದ 75 ವರ್ಷಗಳಿಂದ ದಲಿತರನ್ನು ಶೋಷಣೆ ಮಾಡಿದ ಜನ ನನ್ನ ಹೇಳಿಕೆ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ನನ್ನ ಬಳಿ ಕಷ್ಟ ಹೇಳಿಕೊಳ್ಳಲು ಬರುವ ಹೆಚ್ಚು ಜನ ಶೋಷಿತ ಜನರೇ. ಅಂತಹ ಜನಕ್ಕೆ ಆರ್ಥಿಕ ಮತ್ತು ಶೈಕ್ಷಣಿಕ ಚೈತನ್ಯ ಕಲಿಸುವುದೇ ನನ್ನ ಉದ್ದೇಶ. ಅದಕ್ಕೆ ಪಂಚರತ್ನ ಕಾರ್ಯಕ್ರಮ ರೂಪಿಸಿದ್ದೇನೆ. ರಾಜಕೀಯವಾಗಿ ರಾಷ್ಟ್ರೀಯ ಪಕ್ಷಗಳು ನನ್ನ ಹೇಳಿಕೆಯನ್ನು ತಿರುಚಿ ಅಪಪ್ರಚಾರ ಮಾಡುತ್ತಿವೆ. ದುರ್ಬಳಕೆ ಮಾಡಿಕೊಳ್ಳುವವರು ಬಿಜೆಪಿಯಂತವರು. ಇದಕ್ಕೆ ನಾನು ಹೆದರಲ್ಲ. ಅಪಪ್ರಚಾರಕ್ಕೇ ಸೊಪ್ಪು ಹಾಕಲ್ಲ. ಕೆಲವರಿಗೆ ಸುಳ್ಳು ಹಬ್ಬಿಸೋದೆ ಕೆಲ್ಸ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೊಡ್ಡಬಳ್ಳಾಪುರದಲ್ಲಿ ಘನತ್ಯಾಜ್ಯ ವಿಲೇವಾರಿ ವಿಚಾರವಾಗಿ ಮಾತನಾಡಿ, ಬೆಂಗಳೂರು ಕಸವನ್ನು ಎಲ್ಲೆಂದರಲ್ಲಿ ಸುರಿಯುವ ಕೆಲ್ಸ ನಡೆಯುತ್ತಿದೆ ಮಂಡೂರಿನಲ್ಲಿ ಘನತ್ಯಾಜ್ಯ ತೆರವಿಗೆ 900ಕೋಟಿ ವ್ಯಯ ಆಗಿದೆ. ಹೀಗೇ ತ್ಯಾಜ್ಯ ವಿಲೇವಾರಿ ಮಾಡಿದರೆ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದರೆ ಇಲ್ಲಿ ಕೆಲ ಮಾಫಿಯಾಗಳಿವೆ. ಕಸದ ಸಮಸ್ಯೆಯನ್ನು ಪರಿಹರಿಸಲು ಬಿಡಲ್ಲ. ನಮ್ಮ ಸರ್ಕಾರ ಬಂದ್ರೆ ಇದಕ್ಕೆ ಶಾಶ್ವತ ಪರಿಹಾರ ನೀಡುತ್ತೇವೆ ಎಂದರು.
ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಘೋಷಣೆ ವಿಚಾರವಾಗಿ ಮಾತನಾಡಿ, ಹೆಚ್ಚು ಕಡಿಮೆ 12 ದಿನದಲ್ಲಿ 11 ಜನ ಅಭ್ಯರ್ಥಿ ಘೋಷಣೆ ಮಾಡಿದ್ದೇವೆ. ದೊಡ್ಡಬಳ್ಳಾಪುರದಲ್ಲಿ ಮುನೇಗೌಡರ ಹೆಸರು ಘೋಷಣೆ ಮಾಡುತ್ತೇವೆ. ಆದರೆ ಇಲ್ಲಿ ಕೆಲ ಸಮಸ್ಯೆಗಳಿವೆ, ಪರಿಹಾರ ಮಾಡುತ್ತೇನೆ ಈಗಾಗಲೇ ಪಟ್ಟಿ ಅಂತ್ಯವಾಗಿದೆ. ಅದರಲ್ಲಿ ದೊಡ್ಡಬಳ್ಳಾಪುರ ಅಭ್ಯರ್ಥಿ ಹೆಸರೂ ಕೂಡ ಇರಲಿದೆ.ದೊಡ್ಡಬಳ್ಳಾಪುರ ಗೆಲ್ಲೋದೆ ನಮ್ಮ ಗುರಿ ಎಂದರು.
ಚಿಕ್ಕಬಳ್ಳಾಪುರಕ್ಕೆ ಎಚ್. ಡಿ ಕುಮಾರಸ್ವಾಮಿ ಅವರ ಕೊಡುಗೆ ಏನು ಎಂಬ ಸುಧಾಕರ್ ಹೇಳಿಕೆ ವಿಚಾರವಾಗಿ ಮಾತನಾಡಿ, ಆ ಜಿಲ್ಲೆ ರಚನೆ ಮಾಡಿದ್ದು ನಾನು, ಅವರಿಂದ ಸರ್ಟಿಫಿಕೇಟ್ ಪಡೆಯೋ ಅವಶ್ಯಕತೆ ಇಲ್ಲ ಎಂದು ಸಿಡಿಮಿಡಿಗೊಂಡರು.