ಎಚ್‌ಡಿ ಕುಮಾರಸ್ವಾಮಿ ಯಾವುದೇ ದಾಖಲೆ ಇದ್ದರೆ ಬಿಡುಗಡೆ ಮಾಡಲಿ: ಡಿಕೆ ಶಿವಕುಮಾರ್ ಸವಾಲು
ಬೆಂಗಳೂರು, ಆಗಸ್ಟ್ 21: ನೈಸ್ ಹಗರಣದ ದಾಖಲೆಯನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬಿಡುಗಡೆ ಮಾಡಲಿ, ಯಾರ್ ಬೇಡ ಅಂದ್ರು ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಕುಮಾರಸ್ವಾಮಿ ಅವರನ್ನ ತಡೆದಿರೋದು ಯಾರು, ಯಾವ ದಾಖಲೆ ಬಿಡುಗಡೆ ಮಾಡಲಿ, ಯಾರ್ಯಾದು ಎಲ್ಲೆಲ್ಲಿ ಇದೆ ನಮಗೆ ಗೊತ್ತಿಲ್ವ, ಬಿಡದಿಗೆ, ಚನ್ನಪಟ್ಟಣಕ್ಕೆ ಏನೇನು ಲಾಸ್ ಆಗಿದೆ ಗೊತ್ತಿದೆ, ಕುಮಾರಸ್ವಾಮಿ ಗೆ ನಾನು ಎಷ್ಟು ಹೆದರುತ್ತೆನೆ ಅಂತ ಗೊತ್ತಿದೆ, ಬಿಚ್ಚೋದು,ದಾಖಲೆ ಬಿಡುಗಡೆ ಮಾಡೋರಿಗೆ ಬೇಡ ಅನ್ನೋಕೆ ಆಗುತ್ತದೆ. ಮೀಡಿಯಾದಲ್ಲಿ ಇರಬೇಕು ಅಂತ ಕುಮಾರಸ್ವಾಮಿ ಹೀಗೆಲ್ಲ ಹೇಳಿಕೆ ಕೊಡುತ್ತಾರೆ. ಅವರ ಹೇಳಿಕೆಗೆಲ್ಲ ಉತ್ತರ ಕೊಡೋಕೆ ಆಗುತ್ತದೆ ಎಂದರು.

ಬಿಟ್ಟ ನೀರಿನ ಲೆಕ್ಕ ಇದ್ದು ವಾಸ್ತವಾಂಶ ಅರಿವಿದೆ. ಬುಧುವಾರ ಸರ್ವಪಕ್ಷ ನಾಯಕರ ಸಭೆ ಕರೆಯುತ್ತೇವೆ. ರಾಜ್ಯದ ಗೌರವ ಉಳಿಯಬೇಕು, ರೈತರಿಗೂ ಒಳ್ಳೆಯದಾಗಬೇಕು. ಮಹದಾಯಿ ವಿಚಾರ ಕೂಡ ಚರ್ಚೆ ಆಗಬೇಕು. ಕೇಂದ್ರ ಕ್ಕೆ ಸರ್ವ ಪಕ್ಷಗಳ ನಿಯೋಗ ಹೋಗಲು ಸಿದ್ದವಿದ್ದೇನೆ ಎಂದು ಹೇಳಿದರು.
ದಾಖಲೆ ಬಿಡುಗಡೆ ಮಾಡುವ ಕುಮಾರಸ್ವಾಮಿಯನ್ನು ತಡೆದಿರುವವರು ಯಾರು? ಬಿಡದಿ, ರಾಮನಗರ ಕ್ಕೆ ಏನು ಲಾಸ್ ಆಗಿದೆ ಎಂದು ಗೊತ್ತಿದೆ. ನನ್ನ ಬಳಿ ಯಾವ ದಾಖಲೆ ಇಲ್ಲ. ಬಿಚ್ಚೇನೆ, ಬಿಡುಗಡೆ ಮಾಡ್ತೀನಿ ಅಂತಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಡೆಯಲಾಗುತ್ತಾ? ಕುಮಾರಸ್ವಾಮಿಗೆ ಡಿಕೆಶಿ ಟಕ್ಕರ್ ಕುಮಾರಸ್ವಾಮಿ ಹೇಗೆ ಬೇಕಾದರೂ ಮಾತಾಡಲಿ, ವ್ಯಾಖ್ಯಾನ ಮಾಡ್ತಿರಲಿ ಎಂದು ಡಿಕೆ ಶಿವಕುಮಾರ್ ಹೇಳಿದರು.
ರಾಜ್ಯ ಸರ್ಕಾರದ ವಿರುದ್ಧ ಕೋರ್ಟ್ ಗೆ ಹಿಂದೆ ಹೋಗಿರಲಿಲ್ಲ. ಕೇಂದ್ರ ಸರ್ಕಾರ ಅಪಿಡವಿಟ್ ಸಲ್ಲಿಸಲಿಲ್ಲ. ಬೊಮ್ಮಾಯಿ , ಕುಮಾರಸ್ವಾಮಿಗೆ ಗೊತ್ತಿರುವ ವಿಚಾರ. ಕುಳಿತು ಮಾತಾಡೋಣ ಎಂದು ಇದ್ದೆ. ಕುಮಾರಸ್ವಾಮಿ ಓಲೈಕೆಗೆ ನೀರು ಬಿಡುಗಡೆ ಮಾಡಿದ್ದಾರೆ ಎಂದಿದ್ದಾರೆ. ಅಣ್ಣ ತಮ್ಮಂದಿರಂತೆ ಎಂದು ಜೂನ್ 22ರಲ್ಲಿ ಕುಮಾರಸ್ವಾಮಿ ಹೇಳಿದ್ದರು. ಕುಮಾರಸ್ವಾಮಿ ಹೇಳಿದಂತೆ ಪಾಲನೆ ಮಾಡ್ತಿರುವೆ ಎಂದರು.
ತಮಿಳುನಾಡು ಏನು ಬೆಳೆಯುತ್ತೆ ಎಂದು ನಾನು ಹೇಗೆ ಪ್ರಶ್ನೆ ಮಾಡಲಿ. ನಾನು ಯಾವುದೇ ಹೆಚ್ಚಿನ ನೀರನ್ನ ಬಿಟ್ಟಿಲ್ಲ, ಆಗಸ್ಟ್ 31 ರವರೆಗೂ ದಿನ 10 ಸಾವಿರ ಕ್ಯೂಸೆಕ್ಸ್ ನೀರು ಬಿಡಬೇಕೆಂದು ಹೇಳಿದ್ದಾರೆ. ರಾಜ್ಯದ ಜನತೆಗೆ ನಾನು ಉತ್ತರ ಕೊಡಬೇಕು. ಜೆಡಿಎಸ್‌ನವರು, ಬಿಜೆಪಿಯವರಿಗೆ ನಾನು ಉತ್ತರ ಕೊಡೊಕ್ಕಾಗೊಲ್ಲ, ರಾಜ್ಯ ಕಾಪಾಡಬೇಕು, ರೈತರನ್ನ ಕಾಪಾಡಬೇಕು ಅದು ನಮ್ಮ ಉದ್ದೇಶ ಎಂದರು.
ವಿಪಕ್ಷದವರಿಗೆ ಉತ್ತರ ಕೊಡೊಕ್ಕಾಗೊಲ್ಲ. ಅವರು ಏನು ಬೇಕಾದರು ಮಾತನಾಡಲಿ. ನಮ್ಮ ಜನಕ್ಕೂ ಗೊತ್ತಿದೆ, ರಾಜಕಾರಣ ಮಾಡ್ತಿದಾರೆ ಎಂದು ಗೊತ್ತಿದೆ. ಹಿಂದೆ ಇವರೆಲ್ಲ ಎಷ್ಟು ನೀರು ಕೊಟ್ಟಿದ್ರು, ನಮ್ಮ ಕುಮಾರಣ್ಣ ಎಷ್ಟು ಬಿಟ್ಟಿದ್ರು, ಸಾರಿ ಕುಮಾರಸ್ವಾಮಿಯವರು. ಕಳೆದ 30,40, ವರ್ಷ ಈ ರೀತಿಯ ಸಮಸ್ಯೆ ಆಗ್ತಿರಲಿಲ್ಲ. ನಮ್ಮ ಬಳಿ ಈಗ ಇರೊದೆ 55 ಟಿಎಂಸಿ ನೀರು ಅವರಿಗೆ 177.8 ಟಿಎಂಸಿ ಬಿಡಬೇಕು ಎಂದು ಹೇಳಿದರು.
ಅವರ ಕಾಲದಲ್ಲಿ ಎಷ್ಟೇಷ್ಟು ನೀರು ಬಿಟ್ಟಿದ್ದಾರೆ ಎಲ್ಲ ಮಾಹಿತಿ ಇದೆ. ತ್ರಿಸದಸ್ಯ ಪೀಠ ಆದೇಶ ಮಾಡಿದೆ. ಆದರೆ ನಮ್ಮ ವಾಸ್ತವ ಪರಿಸ್ಥಿತಿ ಏನು ಅದನ್ನ ಮುಂದೆ ಇಡ್ತಿದೇವೆ. ಕೆಆರ್‌ಎಸ್ 22 ಟಿಎಂಸಿ, ಕಬಿನಿ 7 ಟಿಎಂಸಿ, ಹಾರಂಗಿಯಲ್ಲಿ 6 ಟಿಎಂಸಿ, ಹೇಮಾವತಿಯಲ್ಲಿ 20 ಟಿಎಂಸಿ ಇದೆ. 2021 ಜೂನ್ ನಲ್ಲಿ ಕುಮಾರ ಸ್ವಾಮಿ ಅರ್ಥ ಮಾಡಿಕೊಳ್ಳಬೇಕು. ಕರ್ನಾಟಕ-ತಮಿಳುನಾಡು ಅಣ್ಣತಂಮ್ಮಂದಿರಿದ್ದಂತೆ. ಸೌಹಾರ್ದಯುತವಾಗಿ ಇದನ್ನ ಬಗೆಹರಿಸಬೇಕೆಂದು ಹೇಳಿದ್ದಾರೆ.
ಅವರ ಹಕ್ಕಿನ ನೀರನ್ನ ಬಳಸಿಕೊಳ್ಳಲು ಅವರಿಗೆ ಅವಕಾಶ ಇದೆ. ಬುಧವಾರ ಸಿಎಂ ಅಧ್ಯಕ್ಷತೆಯಲ್ಲಿ ಪ್ಲೋರ್ ಲೀಡರ್ಸ್ ಸಭೆ ಕರೆದಿದ್ದೇವೆ. ಸಭೆಯಲ್ಲಿ ಏನು ತೀರ್ಮಾನ ಆಗುತ್ತೊ ಆ ರೀತಿ ಹೋಗ್ತಿವಿ. ಸರ್ವಪಕ್ಷ ನಿಯೋಗ ಹೋಗೋಣ ನಡಿರಿ ಅಂದ್ರೆ ಅದಕ್ಕೂ ರೆಡಿ. ಇವತ್ತು ಏನಾಗುತ್ತೆ ಎಂದು ಕಾದು ನೋಡ್ತಿದೇವೆ. ಏನು ಮಾಡಬೇಕೆಂದು ಎಲ್ಲ ಲೀಗಲ್ ತಂಡದ ಜೊತೆ ಚರ್ಚೆ ಮಾಡ್ತೀದಿವೆ. ಸರ್ವಪಕ್ಷ ಸಭೆಯಲ್ಲೂ ಚರ್ಚೆ ಮಾಡಿ ಮುಂದಿನ ತೀರ್ಮಾನ ಮಾಡ್ತೀವಿ ಎಂದರು.
ತಮಿಳುನಾಡು ಏನು ಬೆಳೆಯುತ್ತೆ ಎಂದು ನಾನು ಹೇಗೆ ಪ್ರಶ್ನೆ ಮಾಡಲಿ. ನಾನು ಯಾವುದೇ ಹೆಚ್ಚಿನ ನೀರನ್ನ ಬಿಟ್ಟಿಲ್ಲ, ಆಗಸ್ಟ್ 31 ರವರೆಗೂ ದಿನ 10 ಸಾವಿರ ಕ್ಯೂಸೆಕ್ಸ್ ನೀರು ಬಿಡಬೇಕೆಂದು ಹೇಳಿದ್ದಾರೆ. ರಾಜ್ಯದ ಜನತೆಗೆ ನಾನು ಉತ್ತರ ಕೊಡಬೇಕು. ಜೆಡಿಎಸ್‌ನವರು, ಬಿಜೆಪಿಯವರಿಗೆ ನಾನು ಉತ್ತರ ಕೊಡೊಕ್ಕಾಗೊಲ್ಲ, ರಾಜ್ಯ ಕಾಪಾಡಬೇಕು, ರೈತರನ್ನ ಕಾಪಾಡಬೇಕು ಅದು ನಮ್ಮ ಉದ್ದೇಶ ಎಂದರು.
ವಿಪಕ್ಷದವರಿಗೆ ಉತ್ತರ ಕೊಡೊಕ್ಕಾಗೊಲ್ಲ. ಅವರು ಏನು ಬೇಕಾದರು ಮಾತನಾಡಲಿ. ನಮ್ಮ ಜನಕ್ಕೂ ಗೊತ್ತಿದೆ, ರಾಜಕಾರಣ ಮಾಡ್ತಿದಾರೆ ಎಂದು ಗೊತ್ತಿದೆ. ಹಿಂದೆ ಇವರೆಲ್ಲ ಎಷ್ಟು ನೀರು ಕೊಟ್ಟಿದ್ರು, ನಮ್ಮ ಕುಮಾರಣ್ಣ ಎಷ್ಟು ಬಿಟ್ಟಿದ್ರು, ಸಾರಿ ಕುಮಾರ ಸ್ವಾಮಿಯವರು. ಕಳೆದ 30,40, ವರ್ಷ ಈ ರೀತಿಯ ಸಮಸ್ಯೆ ಆಗ್ತಿರಲಿಲ್ಲ. ನಮ್ಮ ಬಳಿ ಈಗ ಇರೊದೆ 55 ಟಿಎಂಸಿ ನೀರು ಅವರಿಗೆ 177.8 ಟಿಎಂಸಿ ಬಿಡಬೇಕು ಎಂದರು.











Click it and Unblock the Notifications