HMT Kannada: ಹೆಚ್‌ಎಂಟಿಗೆ "ಕನ್ನಡ" ರೂಪ ತಂದ ಎಚ್‌ಡಿ ಕುಮಾರಸ್ವಾಮಿ!
HMT Kannada: ಕನ್ನಡಿಗರ ಹೆಮ್ಮೆಯ ಬ್ರ್ಯಾಂಡ್‌ಗೆ ಹೆಚ್‌ಎಂಟಿ (HMT)ಗೆ ಕೇಂದ್ರ ಸರ್ಕಾರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ ಕುಮಾರಸ್ವಾಮಿ ಅವರು ಹೊಸ ಮೆರಗು ತಂದಿದ್ದಾರೆ. ಕನ್ನಡಿಗರ ಹೆಗ್ಗುರುತಾಗಿರುವ ಹೆಚ್‌ಎಂಟಿ ಕಂಪನಿಯ ಪುನಶ್ಚೇತನಕ್ಕೆ ಎಚ್.ಡಿ ಕುಮಾರಸ್ವಾಮಿ ಅವರು ಮುಂದಾಗಿದ್ದು. ಇದೀಗ ಈ ವಾಚ್‌ನಲ್ಲಿ ಕನ್ನಡದ ಸಂಖ್ಯೆಗಳು ರಾರಾಜಿಸುತ್ತಿವೆ. ಹೆಚ್‌ಎಂಟಿಯ ಹೊಸ ಸರಣಿಯ ವಾಚ್‌ಗಳು ಈಗ ಕನ್ನಡಿಗರ ಮನೆ ಮಾತಾಗುತ್ತಿದೆ ಅದೇನು ಎನ್ನುವುದನ್ನು ನೋಡೋಣ.
ಕನ್ನಡದ ಅಂಕಿಗಳು ಹಾಗೂ ಕರ್ನಾಟಕದ ಲಾಂಛನ "ಗಂಡಭೇರುಂಡ" ಇರುವ HMT ಹೊಸ ವಾಚ್‌ಗಳು ಯುವಜನತೆಯನ್ನು ಹೆಚ್ಚು ಆಕರ್ಷಿಸುತ್ತಿವೆ. ಈ ವಾಚುಗಳು ಮಾರುಕಟ್ಟೆಗೆ ಬಂದಿದ್ದು. ಮಾರುಕಟ್ಟೆಗೆ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಈ ಆವೃತ್ತಿಯ ವಾಚ್‌ಗಳು ಸಂಪೂರ್ಣ ಖಾಲಿಯಾಗಿದ್ದು, ಜನಪ್ರಿಯತೆಯ ಜೊತೆಗೆ ಗ್ರಾಹಕರಿಂದ ಹೆಚ್ಚು ಬೇಡಿಕೆ ಸೃಷ್ಟಿಯಾಗಿರುವುದು ಸಂತೋಷದ ವಿಷಯ ಎಂದು ಎಚ್.ಡಿ ಕುಮಾರಸ್ವಾಮಿ ಅವರು ಹೇಳಿದ್ದಾರೆ. ಕನ್ನಡಿಗರ ಹೆಮ್ಮೆಯ HMT ವಾಚ್ ಕಟ್ಟೋಣ, HMT ಸಂಸ್ಥೆ ಉಳಿಸೋಣ ಎಂದಿದ್ದಾರೆ.

ಕನ್ನಡ ವಾಚ್‌ಗೆ ಡಿಮ್ಯಾಂಡ್: ಕನ್ನಡಿಗರು ಈ ವಾಚ್ ಖರೀದಿಸಿ ಆ ಸಂತೋಷದ ವಿಷಯವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ರೀತಿಯ ವಿಶೇಷ ವಿನ್ಯಾಸ ಸಿಕ್ಕಿದ್ದು ಖುಷಿಯಾಗಿದೆ ಎಂದು ಕನ್ನಡಿಗರ ಹೇಳಿದ್ದಾರೆ. ಹೆಚ್‌ಎಂಟಿ ವಾಚ್‌ನೊಂದಿಗೆ ಬೆಂಗಳೂರು ಹಾಗೂ ಕನ್ನಡಿಗರಿಗೆ ವಿಶೇಷ ಅನುಬಂಧವಿದೆ. ಈ ಬಗ್ಗೆ ಹಲವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಕಾರ್ತಿಕ್ ವೆಂಕಟೇಶ್ ಎನ್ನುವವರು, ಕನ್ನಡಿಗರ ಹೆಮ್ಮೆಯ ಬ್ರ್ಯಾಂಡ್ ಹೆಚ್‌ಎಂಟಿ. ಕನ್ನಡದ ಅಂಕಿಗಳು ಹಾಗೂ ಕರ್ನಾಟಕದ ಲಾಂಛನ "ಗಂಡಭೇರುಂಡ" ಇರುವ ಹೆಚ್‌ಎಂಟಿ ಹೊಸ ವಾಚ್‌ಗಳು ಯುವಜನತೆಯನ್ನು ಹೆಚ್ಚು ಆಕರ್ಷಿಸುತ್ತಿದೆ.
ಮಾರುಕಟ್ಟೆಗೆ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಈ ಆವೃತ್ತಿಯ ವಾಚ್‌ಗಳು ಸಂಪೂರ್ಣ ಖಾಲಿಯಾಗಿದ್ದು, ಜನಪ್ರಿಯತೆಯ ಜೊತೆಗೆ ಗ್ರಾಹಕರಿಂದ ಹೆಚ್ಚು ಬೇಡಿಕೆ ಸೃಷ್ಟಿಯಾಗಿರುವುದು ಸಂತೋಷದ ವಿಷಯ ಎಂದು ಹೇಳಿದ್ದಾರೆ.
The HMT Kannada Dial fever is real.!!
— ಗುಗ್ಗು | GuGGu (@GuGGu_07) June 24, 2025
~ Couple piece of Kannada pride on our wrist ⌚❤️
Rare, Classy & Timeless. 💎
~ Big thanks to Living Lord @MallikarjunaNH Mutthya for making this possible! 🙏
GandaBerunda stocks >> @HMTLtd #Gandaberunda pic.twitter.com/kPjX0o8zpC
ಸಮಸ್ತ ಭಾರತೀಯರ ಹೃದಯ ಬಡಿತವೇ ಆಗಿದ್ದ ಹೆಚ್‌ಟಿಎಂ ಕೈಗಡಿಯಾರ ಇವತ್ತಿಗೂ ಯಾವತ್ತಿಗೂ ಜನರ ಅಚ್ಚುಮೆಚ್ಚಿನ ಕೈಗಡಿಯಾರವೇ ಆಗಿದೆ. ನಾವಿನ್ಯತೆ ಮತ್ತು ಉತೃಷ್ಟತೆಗೆ ಮತ್ತೊಂದು ಹೆಸರೇ ಹೆಚ್‌ಟಿಎಂ. ಇತ್ತೀಚೆಗೆ ಕಂಪನಿ ತಯಾರಿಸಿದ್ದ ಕರ್ನಾಟಕದ ರಾಜಲಾಂಛನ ಗಂಡಭೇರುಂಡ ಹಾಗೂ ಕನ್ನಡ ಸಂಖ್ಯೆಗಳುಳ್ಳ ಡಯಲಿನ ಕೈಗಡಿಯಾರಗಳು ಬಹಳಷ್ಟು ಜನಪ್ರಿಯವಾಗಿವೆ. ಗಡಿಯಾರಪ್ರಿಯರು ಅವನ್ನು ಪ್ರೀತಿಯಿಂದ ಖರೀದಿ ಮಾಡುತ್ತಿರುವುದು ಅತ್ಯಂತ ಸಂತೋಷದ ಸಂಗತಿ ಎಂದು ಜೆಡಿಎಸ್ ಟ್ವೀಟ್ ಮಾಡಿದೆ.











Click it and Unblock the Notifications