ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

20 ಜೆಡಿಎಸ್ ಶಾಸಕರ ಜೊತೆ ಹೈದರಾಬಾದ್ ತಲುಪಿದ ಹೆಚ್‌ಡಿಕೆ

|
Google Oneindia Kannada News

ಬೆಂಗಳೂರು, ಅ. 4: ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ತಮ್ಮ ಪಕ್ಷದ 20 ಶಾಸಕರ ಜೊತೆ ವಿಶೇಷ ವಿಮಾನದ ಮೂಲಕ ತೆಲಂಗಾಣಕ್ಕೆ ಹೋಗಿದ್ದಾರೆ. ಈಗಾಗಲೇ ಅವರು ಹೈದರಾಬಾದ್ ತಲುಪಿರುವುದು ತಿಳಿದುಬಂದಿದೆ. ನಾಳೆ ಬುಧವಾರದವರೆಗೆ ಅವರೆಲ್ಲರೂ ಹೈದರಾಬಾದ್‌ನಲ್ಲೇ ಇರಲಿದ್ದಾರೆ.

ಹೈದರಾಬಾದ್‌ಗೆ ಹೋದ ಎಚ್ ಡಿ ಕುಮಾರಸ್ವಾಮಿ ಜೊತೆ ಇರುವ ಜೆಡಿಎಸ್ ಶಾಸಕರಲ್ಲಿ ಎಚ್ ಡಿ ರೇವಣ್ಣ, ಸಾ ರಾ ಮಹೇಶ್ ಮೊದಲಾದವರಿದ್ದಾರೆ. ನಿಖಿಲ್ ಕುಮಾರಸ್ವಾಮಿಯೂ ಜೊತೆಯಲ್ಲಿದ್ದಾರೆ.

ಬಿಜೆಪಿಯ ಸಾವಿನ ರಾಜಕೀಯ ಸುತ್ತಲಿನ ಸಿದ್ದು ರಿಪೋರ್ಟ್‌!ಬಿಜೆಪಿಯ ಸಾವಿನ ರಾಜಕೀಯ ಸುತ್ತಲಿನ ಸಿದ್ದು ರಿಪೋರ್ಟ್‌!

ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅಕ್ಟೋಬರ್ 5ರಂದು ಹೊಸ ಪಕ್ಷ ಸ್ಥಾಪನೆಯನ್ನು ಘೋಷಿಸಲಿದ್ದು, ಹೈದರಾಬಾದ್‌ನಲ್ಲಿ ಇದರ ಕಾರ್ಯಕ್ರಮ ನಡೆಯಲಿದೆ. ಮುಂಬರುವ ಲೋಕಸಭಾ ಚುನಾವಣೆಗಳ ಮೇಲೆ ಕಣ್ಣಿಟ್ಟು ಕೆಸಿಆರ್ ಅವರು ಹೊಸ ರಾಷ್ಟ್ರೀಯ ಪಕ್ಷ ಸ್ಥಾಪನೆ ಮಾಡುತ್ತಿದ್ದಾರೆ.

HD Kumaraswamy at Hyderabad with 20 JDS MLAs, Welcomed by TRS Leaders

ತೆಲಂಗಾಣ ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಡಲು ಕೆಸಿಆರ್ ಈ ಹಿಂದೆ ತೆಲಂಗಾಣ ರಾಷ್ಟ್ರಸಮಿತಿ ಪಕ್ಷ ಕಟ್ಟಿದ್ದರು. ಅವರ ಹೋರಾಟವು ತೆಲಂಗಾಣದ ಪ್ರತ್ಯೇಕ ರಾಜ್ಯ ನಿರ್ಮಾಣಕ್ಕೆ ನೆರವಾಗಿತ್ತು. ಈಗ ಕೆಸಿಆರ್ ಭಾರತ ರಾಷ್ಟ್ರ ಸಮಿತಿ ಎಂದು ತಮ್ಮ ರಾಷ್ಟ್ರೀಯ ಪಕ್ಷಕ್ಕೆ ಹೆಸರಿಟ್ಟಿದ್ದಾರೆಂದು ಹೇಳಲಾಗುತ್ತಿದೆ. ದಸರಾ ವಿಜಯದಶಮಿಯಂದು ಅವರು ಹೊಸ ಪಕ್ಷದ ಉದ್ಘಾಟನೆ ಮಾಡುವುದಾಗಿ ಈ ಹಿಂದೆ ಹೇಳಿದ್ದರು. ಅದರಂತೆ ಅಕ್ಟೋಬರ್ 5 ವಿಜಯದಶಮಿಯಂದು ಅವರು ಹೊಸ ಪಕ್ಷದ ಉದ್ಘಾಟನೆ ಮಾಡುತ್ತಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಸುಪ್ರೀಂ: ವಲಸಿಗರಿಗೆ ಇನ್ನು ಮುಂದೆ ಆಟ?ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಸುಪ್ರೀಂ: ವಲಸಿಗರಿಗೆ ಇನ್ನು ಮುಂದೆ ಆಟ?

ಕೆಲ ಕಾಲದ ಹಿಂದೆ ಕೆ ಚಂದ್ರಶೇಖರ್ ರಾವ್ ಬೆಂಗಳೂರಿಗೆ ಬಂದಿದ್ದಾಗ ಹೆಚ್ ಡಿ ದೇವೇಗೌಡ ಮತ್ತು ಹೆಚ್ ಡಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಹೋಗಿದ್ದರು. ತೃತೀಯ ರಂಗ ರಚನೆ ನಿಮಿತ್ತ ಈ ಭೇಟಿ ಎಂಬ ಚರ್ಚೆಗಳು ನಡೆದಿದ್ದವು. ವಾಸ್ತವದಲ್ಲಿ ತಮ್ಮ ಹೊಸ ಪಕ್ಷ ಸ್ಥಾಪನೆ ಬಗ್ಗೆ ಚರ್ಚಿಸಲು ಕೆಸಿಆರ್ ಅವರು ದೇವೇಗೌಡ ಮತ್ತು ಕುಮಾರಸ್ವಾಮಿಯನ್ನು ಭೇಟಿ ಮಾಡಿದ್ದರು. ಅಂದೇ ಅವರು ಈ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದರೆಂಬುದು ತಿಳಿದುಬಂದಿದೆ.

ಟಿಆರ್‌ಎಸ್ ಹೆಸರು ಬದಲು?

ಇನ್ನೂ ಕೆಲ ವರದಿಗಳ ಪ್ರಕಾರ, ಕೆಸಿಆರ್ ಅವರು ಹೊಸ ಪಕ್ಷ ಸ್ಥಾಪನೆ ಮಾಡುವ ಬದಲು ತಮ್ಮ ಈಗಿನ ತೆಲಂಗಾಣ ರಾಷ್ಟ್ರಸಮಿತಿಯ ಹೆಸರನ್ನೇ ಬದಲಾಯಿಸಿ ಭಾರತ ರಾಷ್ಟ್ರಸಮಿತಿ ಎಂದು ಮರುನಾಮಕರಣ ಮಾಡುವ ಸಾಧ್ಯತೆ ಇದೆ. ಟಿಆರ್‌ಎಸ್ ಬದಲು ಬಿಆರ್‌ಎಸ್ ಆಗಿ ಹೆಸರು ಬದಲಾಗಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.

HD Kumaraswamy at Hyderabad with 20 JDS MLAs, Welcomed by TRS Leaders

ಮಮತಾ ಬ್ಯಾನರ್ಜಿ ಅವರ ಟಿಎಂಸಿ, ಅರವಿಂದ್ ಕೇಜ್ರಿವಾಲ್ ಅವರ ಎಎಪಿಯಂತೆ ತಮ್ಮ ಪಕ್ಷವನ್ನು ರಾಷ್ಟ್ರವ್ಯಾಪಿ ಬೆಳೆಸಲು ಕೆ ಚಂದ್ರಶೇಖರ್ ರಾವ್ ನಿರ್ಧರಿಸಿದ್ದಾರೆ. ಅದಕ್ಕಾಗಿ ಬಹಳಷ್ಟು ಪ್ರಯತ್ನಗಳನ್ನು ಅವರು ಮಾಡುತ್ತಿದ್ಧಾರೆ. ಅದರ ಜೊತೆಗೆ ಎಲ್ಲಾ ವಿಪಕ್ಷಗಳನ್ನೂ ಒಗ್ಗೂಡಿಸುವ ಕೆಲಸವನ್ನೂ ಅವರು ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಅವರು ಜೆಡಿಎಸ್ ಸೇರಿದಂತೆ ಹಲವು ವಿಪಕ್ಷಗಳ ಮುಖಂಡರನ್ನು ಭೇಟಿ ಮಾಡಿ ಮಾತನಾಡಿದ್ದಾರೆ.

ಇನ್ನು, ಅಕ್ಟೋಬರ್ 5ರಂದು ಹೈದರಾಬಾದ್‌ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಪಕ್ಷದ ಘೋಷಣೆಯ ಜೊತೆಗೆ ಕೆಸಿಆರ್ ಅವರು ತಮ್ಮ ಆಡಳಿತ ಅವಧಿಯ ಮಹತ್ವದ ಯೋಜನೆಗಳ ಬಗ್ಗೆಯೂ ಮಾತನಾಡುವ ನಿರೀಕ್ಷೆ ಇದೆ. 'ರೈತ ಬಂಧು', 'ದಲಿತ ಬಂಧು' ಇತ್ಯಾದಿ ಯೋಜನೆಗಳು ತೆಲಂಗಾಣದಲ್ಲಿ ಜನಪ್ರಿಯವಾಗಿವೆ. ರೈತ ಬಂಧು ಯೋಜನೆ ಮೂಲಕ ರೈತರಿಗೆ ಹೂಡಿಕೆಗೆ ನೆರವು ಒದಗಿಸಲಾಗುತ್ತದೆ. ಇನ್ನು, ದಲಿತ ಬಂಧು ಯೋಜನೆಯ ಅಡಿಯಲ್ಲಿ ದಲಿತರಿಗೆ ಯಾವುದೇ ಉದ್ಯಮ ವ್ಯವಹಾರಗಳನ್ನು ನಡೆಸಲು 10 ಲಕ್ಷ ರೂ ಧನಸಹಾಯ ಒದಗಿಸಲಾಗುತ್ತದೆ.

(ಒನ್ಇಂಡಿಯಾ ಸುದ್ದಿ)

English summary
Former Chief Minister HD Kumaraswamy alongwith 20 MLAs of his party has reached Hyderabad on Tuesday to attend the function organized by TRS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X