ನಮ್ಮದೇ ಒರಿಜಿನಲ್ ಜನತಾ ದಳ, ನಾನೇ ಅದರ ಅಧ್ಯಕ್ಷ ಎಂದ ಸಿಎಂ ಇಬ್ರಾಹಿಂ: ಶರವಣ ಹೇಳಿದ್ದೇನು?
ಬೆಂಗಳೂರು, ಅಕ್ಟೋಬರ್ 17: ಲೋಕಸಭಾ ಚುನಾವಣೆಗೆ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಾದ ಬೆನ್ನಲ್ಲೇ ಜೆಡಿಎಸ್ ಪಾಳಯದಲ್ಲಿ ಅಸಮಾಧಾನದ ಬೆಂಕಿ ಹೊತ್ತಿಕೊಂಡಿದ್ದು, ನಮ್ಮದೇ ಒರಿಜಿನಲ್, ನಾನೃ ಅದರ ಅಧ್ಯಕ್ಷ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿಕೆ ದಳಪತಿಗಳ ಕೋಟೆಯಲ್ಲಿ ಸಂಚಲನ ಸೃಷ್ಟಿಸುವಂತೆ ಮಾಡಿದೆ.
ಹೌದು, ಈ ಕುರಿತು ವಿಧಾನಸೌಧದಲ್ಲಿ ವಿಧಾನ ಪರಿಷತ್ ಸದಸ್ಯ ಟಿ. ಎ. ಶರವಣ ಮಾತನಾಡಿ, ನಾನೊಬ್ಬ ಸಾಮಾನ್ಯ ಕಾರ್ಯಕರ್ತ, ಹಿರಿಯರಾದ ಹಾಗು ನಮ್ಮ ವರಿಷ್ಠರು ಪ್ರತಿಯೊಂದು ನಡೆಗಳನ್ನು ಗಮನಿಸುತ್ತಿದ್ದಾರೆ. ನಮ್ಮ ದೇಶ ಮತ್ತು ರಾಜ್ಯವನ್ನು ಆಳಿರತಕ್ಕಂತ ದೇವೇಗೌಡ ಸಾಹೇಬರು ಸೂಕ್ತ ಸಮಯದಲ್ಲಿ ನಿರ್ಧಾರ ಕೈಗೊಳ್ಳುತ್ತಾರೆ. ಸಮಾನ ಮನಸ್ಕರ ಚಿಂತನ ಮಂಥನ ಚಿಂತನ ಮಂಥನ ಅಲ್ಲ, ಸಮಾನ ದುಃಖದಲ್ಲಿ ಇರುವವರ ಚಿಂತನ ಮಂಥನ ಎಂದೆನಿಸುತ್ತದೆ ಎಂದು ಹೇಳಿದರು.

ಪಕ್ಷದ ವೇದಿಕೆ ಅಂದಮೇಲೆ ಪಕ್ಷದ ಶಾಸಕರು ಮುಖಂಡರು, ಪಕ್ಷದ ಪ್ರಮುಖರು ಎಲ್ಲರ ಸಮ್ಮುಖದಲ್ಲಿ ರಾಜ್ಯಾಧ್ಯಕ್ಷರ ಸಭೆ ಮಾಡಿದರೆ ಅದಕ್ಕೆ ಒಂದು ಬೆಲೆ ಇರುತ್ತದೆ , ಜೆಡಿಯು ಪಕ್ಷದ ಇಬ್ಬರು ಶಾಸಕರು ಇದ್ದರೆ ಹೊರತು ನಮ್ಮ ಪಕ್ಷದ ಯಾವುದೇ ಶಾಸಕರಾಗಲಿ ಅದರಲ್ಲಿ ಭಾಗಿಯಾಗಲಿಲ್ಲ, ಅದರಿಂದ ಇದನ್ನು ಪಕ್ಷದ ವೇದಿಕೆ ಆಗಲಿ ಸಭೆಯಾಗಲಿ ಎಂದು ಕರೆಯಲಾಗುವುದಿಲ್ಲ ಎಂದು ಹೇಳಿದರು.
ಪ್ರತಿಯೊಂದು ಹೆಜ್ಜೆಯನ್ನು ನಮ್ಮ ಹಿರಿಯರು ಗಮನಿಸುತ್ತಿದ್ದಾರೆ, ಯಾರು ಪಕ್ಷಕ್ಕಾಗಿ ಶ್ರಮಿಸುತ್ತಿದ್ದಾರೆ, ಯಾರು ನಕಲಿ. ನಮ್ಮ ಹಿರಿಯರ ಗುರಿ ಏನೆಂದರೆ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತಂದು, ನಾಡಿನ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುವುದು. ಅದಕ್ಕಾಗಿ ಸಭೆ ಸಂಘಟನೆಗಳನ್ನು ಮಾಡಿ ರಾಜ್ಯದ ಎಲ್ಲೆಡೆ ಪಕ್ಷದ ಬಲವರ್ಧನೆಗಾಗಿ ದುಡಿಯುತ್ತಿದ್ದಾರೆ ಈ ಒಂದು ಕಷ್ಟದ ಸಮಯದಲ್ಲಿ ನಾವೆಲ್ಲ ಅವರೊಂದಿಗೆ ಇದ್ದೇವೆ ಎಂದು ತಿಳಿಸಿದರು.
ಮುಂಬರುವ ಪಾರ್ಲಿಮೆಂಟ್ ಚುನಾವಣೆಗೆ ಯಾವ ರೀತಿಯಲ್ಲಿ ಪಕ್ಷವನ್ನು ಸಂಘಟಿಸಬೇಕು ಅದರ ಬಗ್ಗೆ ನಾವು ಚಿಂತಿಸುತ್ತಿದ್ದೇವೆ, ಅದರ ಬದಲು ಇಂಥ ಚಿಂತನ ಮಂಥನ ಅಥವಾ ದುಃಖದ ಸಭೆಯ ಬಗ್ಗೆ ನಮಗೆ ಆಸಕ್ತಿ ಇಲ್ಲವೆಂದು ಈ ವೇಳೆ ತಿಳಿಸಿದರು. ಪ್ರತಿಯೊಂದು ಹೆಜ್ಜೆಯನ್ನು ಗಮನಿಸುತ್ತಿರುವ ಸರ್ವೋಚ್ಚ ನಾಯಕರದ ದೇವೇಗೌಡ ಅವರು ಇದರ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಾರೆ ಎಂದು ಯಾರನ್ನು ಕರೆಸಿ ಮಾತನಾಡಬೇಕೆಂಬುದು ಅವರಿಗೆ ತಿಳಿದಿದೆ ಎಂದು ಹೇಳಿದರು.
ಪಕ್ಷದ ವರಿಷ್ಟರಾದ ದೇವೇಗೌಡ ಅವರು ಬಿಜೆಪಿಯೊಂದಿಗೆ ಮೈತ್ರಿ ಮಾಡುವ ಮೊದಲು ಅವರು ಶಾಸಕರ ರಾಜ್ಯದ್ಯಕ್ಷರು, ಕೋರ್ ಕಮಿಟಿ ಮೆಂಬರ್ , ಪಕ್ಷದ ಎಲ್ಲಾ ಪ್ರಮುಖರ ಸಭೆಯನ್ನು ಕರೆದಿದ್ದರು. ಪ್ರತಿಯೊಬ್ಬರಿಗೂ ಅವರ ಅನಿಸಿಕೆಗಳನ್ನು ಹೇಳಲು ವೇದಿಕೆ ಕಲ್ಪಿಸಿದರು, ಅವರ ಭಾವನೆಗಳನ್ನು ವ್ಯಕ್ತಪಡಿಸಲು ಅವಕಾಶವನ್ನು ನೀಡಿದರು. ಯಾವ ರೀತಿಯ ತೀರ್ಮಾನವನ್ನು ಕೈಗೊಳ್ಳಬೇಕು ಎಂಬ ಸಲಹೆಯನ್ನು ಪಡೆದಿದ್ದರು ಎಂದು ತಿಳಿಸಿದರು.
ಪಕ್ಷದ ಬಗ್ಗೆ ಹೀಗೆ ಮಾತನಾಡಿದ್ದನ್ನು ಕೇಳಿ ಮನಸ್ಸಿಗೆ ಅತೀವ ನೋವಾಯಿತು. ಕುಮಾರಸ್ವಾಮಿಯವರು ದೆಹಲಿಗೆ ರಾಷ್ಟ್ರೀಯ ಅಧ್ಯಕ್ಷರೊಂದಿಗೆ ಮಾತುಕತೆ ನಡೆಸಿಯೆ ಹೋಗಿದ್ದಾರೆ, ಇಲ್ಲಿ ಪ್ರತಿಯೊಂದು ನಿರ್ಧಾರಗಳು ರಾಷ್ಟ್ರೀಯ ಅಧ್ಯಕ್ಷರ ಅನುಮತಿಯನ್ನು ಪಡೆದೆ ನಡೆಯುತ್ತಿರುವುದು ಆದರೂ ಯಾಕೆ ಈ ರೀತಿ ಹೇಳಿಕೆ ನೀಡಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ ಎಂದು ತಿಳಿಸಿದರು.
ಇಳಿಯ ವಯಸ್ಸಿನಲ್ಲಿ ಪಕ್ಷದ ಸಂಘಟನೆಗಾಗಿ ಪಕ್ಷದ ಉಳಿವಿಗಾಗಿ ಶ್ರಮಿಸುತ್ತಿರುವ ಎಚ್ ಡಿ ದೇವೇಗೌಡ ಅವರಿಗೆ ಯಾವುದೇ ರೀತಿಯ ನೋವನ್ನು ನೀಡಬಾರದು. ಪಕ್ಷದ ಉಳಿವಿಗಾಗಿ ನಾಡಿನ ಸೇವೆಗಾಗಿ ಹೋರಾಡುತ್ತಿರುವ ದೇವಗೌಡ ಅಪ್ಪಾಜಿ ಹಾಗೂ ಕುಮಾರಸ್ವಾಮಿಯವರಿಗೆ ನಾವೆಲ್ಲರೂ ಹೆಗಲಿಗೆ ಹೆಗಲು ಕೊಟ್ಟು ನಿಲ್ಲಬೇಕು ಎಂದು ತಿಳಿಸಿದರು.












Click it and Unblock the Notifications