ಬಂಗಾರಪ್ಪ ಬಗ್ಗೆ ಮಾತನಾಡ್ತೀರಿ, 1995ರಲ್ಲಿ ಪರಿಸ್ಥಿತಿ ಗೊತ್ತೇನ್ರಿ: ಎಚ್ಡಿಡಿ

Posted By:
Subscribe to Oneindia Kannada

ಬೆಂಗಳೂರು, ಸೆ. 21: ತಮಿಳುನಾಡು ಹಾಗೂ ಕರ್ನಾಟಕ ನಡುವಿನ ಐತಿಹಾಸಿಕ ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಹೊರಗೆ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬಹುದು ಎಂದು ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ ಅವರು ಈಗ 1995ರಲ್ಲಿ ಇದ್ದ ಪರಿಸ್ಥಿತಿ ನಿಭಾಯಿಸಿದ್ದನ್ನು ವಿವರಿಸಿದ್ದಾರೆ.

ಜಲ ವಿವಾದಕ್ಕೆ ಇದೊಂದು ಸೂಕ್ತ ಮಾರ್ಗ, ಮೋದಿ ಮನಸ್ಸು ಮಾಡುತ್ತಿಲ್ಲ, ಬಂಗಾರಪ್ಪ ಮಾಡಿದ್ದು ಸರಿಯಲ್ಲ ಎಂದು ದೇವೇಗೌಡ ಅವರು ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಮನಸ್ಸು ಮಾಡಿದರೆ ಕರ್ನಾಟಕ ಹಾಗೂ ತಮಿಳುನಾಡು ನಡುವಿನ ಐತಿಹಾಸಿಕ ಕಾವೇರಿ ವಿವಾದವನ್ನು ಅಂತ್ಯಗೊಳಿಸಬಹುದು. ಆದರೆ, ಇಚ್ಛಾಶಕ್ತಿ ಕೊರತೆಯನ್ನು ಎದುರಿಸುತ್ತಿದ್ದಾರೆ ಎಂದು ಮಾಜಿ ಪ್ರಧಾನಿ ದೇವೇಗೌಡ ಅವರು ಅಭಿಪ್ರಾಯಪಟ್ಟಿದ್ದಾರೆ.

ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರದ ಮುಖ್ಯಮಂತ್ರಿಗಳ ಸಭೆ ಕರೆದು ನರ್ಮದಾ ನದಿ ಅಣೆಕಟ್ಟಿನ ಎತ್ತರ ವಿವಾದಕ್ಕೆ ಹೇಗೆ ಪರಿಹಾರ ಕಂದುಕೊಳ್ಳಲಾಯಿತು ಎಂದು ತಾವು ಪ್ರಧಾನಿಯಾಗಿದ್ದ ದಿನಗಳಲ್ಲಿ ಅನುಸರಿಸಿದ ಕ್ರಮದ ಬಗ್ಗೆ ಹೇಳಿಕೊಂಡಿದ್ದಾರೆ. [ಪೂರ್ಣ ವರದಿ ಇಲ್ಲಿ ಓದಿ]

ಬಂಗಾರಪ್ಪ ಬಗ್ಗೆ ಪ್ರಚಾರಕ್ಕೆ ಅಸಮಾಧಾನ

ಬಂಗಾರಪ್ಪ ಬಗ್ಗೆ ಪ್ರಚಾರಕ್ಕೆ ಅಸಮಾಧಾನ

ರಲ್ಲಿ ಸಿಎಂ ಆಗಿದ್ದ ಬಂಗಾರಪ್ಪ ಅವರು ತಮಿಳುನಾಡಿಗೆ ನೀರು ಬಿಡುವುದಿಲ್ಲ ಎಂಬ ಕಠಿಣ ನಿರ್ಧಾರ ಕೈಗೊಂಡಿದ್ದರು ಎಂದು ಎಲ್ಲರೂ ಈಗ ಹಾಡಿಹೊಗಳುತ್ತಿದ್ದಾರೆ. ಇದು ಕನ್ನಡಿಗರ, ರೈತರ ಹಿತದೃಷ್ಟಿಯಿಂದ ಸೂಕ್ತವಾದ ನಿರ್ಧಾರ ಒಪ್ಪೋಣ. ಆದರೆ, ರಾಷ್ಟ್ರಮಟ್ಟದಲ್ಲಿ ಕರ್ನಾಟಕದ ಮಾನ ಹರಾಜು ಆಗಿಬಿಟ್ಟಿತು.

30 ಟಿಎಂಸಿ ಅಡಿ ನೀರು ಬಿಡುವಂತೆ ಸೂಚಿಸಲಾಗಿತ್ತು

30 ಟಿಎಂಸಿ ಅಡಿ ನೀರು ಬಿಡುವಂತೆ ಸೂಚಿಸಲಾಗಿತ್ತು

ಕರ್ನಾಟಕ ಹಠಿಮಾರಿ ಧೋರಣೆ ಅನುಸರಿಸುತ್ತದೆ ಎಂಬ ಪೂರ್ವಗ್ರಹ ಎಲ್ಲರಲ್ಲೂ ಮೂಡಿ ಬಿಟ್ಟಿದೆ. ಇದು ಇಂದಿಗೂ ಅಳಿಸಲು ಸಾಧ್ಯವಾಗಿಲ್ಲ. ಸುಪ್ರೀಂಕೋರ್ಟ್ ಕೂಡಾ ಕರ್ನಾಟಕಕ್ಕೆ ಛೀಮಾರಿ ಹಾಕಿತು. 1995ರಲ್ಲಿ ತಮಿಳುನಾಡಿಗೆ 30 ಟಿಎಂಸಿ ಅಡಿ ನೀರು ಬಿಡುವಂತೆ ಸೂಚಿಸಲಾಯಿತು.

ಕಾವೇರಿ ಕೊಳ್ಳದ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ

ಕಾವೇರಿ ಕೊಳ್ಳದ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ

ಅಂದಿನ ಪ್ರಧಾನಿ ನರಸಿಂಹ ರಾವ್ ಅವರು ಕಾವೇರಿ ಕೊಳ್ಳದ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯನ್ನು ಕರೆದರು. ನಾವೆಲ್ಲರೂ ಹೋಗಿದ್ದೆವು. ತಮಿಳುನಾಡಿನ ಸಿಎಂ(ಜೆ ಜಯಲಲಿತಾ) ಬಂದಿದ್ದರು. ಒಣಗಿ ಹೋದ ಭತ್ತದ ಸಸಿಗಳನ್ನು ಕೈಯಲ್ಲಿ ಹಿಡಿದುಕೊಂಡೇ ಸಭೆಗೆ ಹಾಜರಾಗಿದ್ದರು. ನಾವು ಪ್ರಧಾನಿಗೆ ಸಿಡಿ ನೀಡಿದೆವು.

11 ಟಿಎಂಸಿ ಅಡಿ ನೀರು ಹರಿಸಲು ನಮಗೆ ಆದೇಶ

11 ಟಿಎಂಸಿ ಅಡಿ ನೀರು ಹರಿಸಲು ನಮಗೆ ಆದೇಶ

ಕರ್ನಾಟಕ ಹಾಗೂ ತಮಿಳುನಾಡಿನ ಅಣೆಕಟ್ಟುಗಳಲ್ಲಿರುವ ನೀರಿನ ಪ್ರಮಾಣದ ಅಂಕಿ ಅಂಶ, ಚಿತ್ರಗಳನ್ನು ಸಿಡಿ ಒಳಗೊಂಡಿತ್ತು. ಈ ಮೂಲಕ ಬೆಳೆಗೆ ನೀರು ಬಿಡುವ ಬಗ್ಗೆ ನಮ್ಮ ನಿರ್ಧಾರವನ್ನು ತಿಳಿಸಿದೆವು. ಕೇವಲ ಬೆಳೆಗಳ ರಕ್ಷಣೆಗಾಗಿ ನೀರು ಬೇಕೆಂದರೆ ಸಾಧ್ಯವಿಲ್ಲ ಎಂದು ಹೇಳಿದಾಗ ಕೋಪಗೊಂಡು ಜಯಲಲಿತಾ ಅವರು ಸಭೆಯಿಂದ ಹೊರ ನಡೆದರು. ಕೊನೆಗೆ 30 ಟಿಎಂಸಿ ಅಡಿ ನೀರಿನ ಬದಲು 11 ಟಿಎಂಸಿ ಅಡಿ ನೀರು ಹರಿಸಲು ನಮಗೆ ಆದೇಶ ಸಿಕ್ಕಿತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
HD Deve Gowda as CM in 1995 a distress year, how did he as he Karnataka CM manage to release lesser water to Tamil Nadu?
Please Wait while comments are loading...