ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೂವರು ಹೆಂಡಿರ ಮುದ್ದಿನ ಗಂಡನ ವಿರುದ್ಧದ ಕೇಸ್ ರದ್ದಿಗೆ ಹೈಕೋರ್ಟ್ ನಕಾರ..!

By ಎಸ್ ಎಸ್ ಎಸ್
|
Google Oneindia Kannada News

ಬೆಂಗಳೂರು ಜೂ.4. ಇದು ಇಬ್ಬರು, ಅಲ್ಲಲ್ಲ ಮೂವರು ಹೆಂಡತಿಯರ ಮುದ್ದಿನ ಗಂಡನ ಕತೆ. ಆದರೆ ಕಾನೂನಿನಲ್ಲಿ ಮಾನ್ಯತೆಯಿಲ್ಲದಿದ್ದರೂ ಸಹ ಮೂರು ಮದುವೆಯಾಗಿ ಇದೀಗ ಮೊದಲ ಪತ್ನಿ ಸಲ್ಲಿಸಿದ್ದ ದೂರಿನಲ್ಲಿ ಸಿಲುಕಿ ಕ್ರಿಮಿನಲ್ ಕೇಸ್ ಎದುರಿಸುವಂತಾಗಿದೆ.

ಆದರೆ ಹೈಕೋರ್ಟ್ ಕೂಡ ಅವರ ಅರ್ಜಿಯನ್ನು ವಜಾಗೊಳಿಸಿರುವ ಹಿನ್ನೆಲೆಯಲ್ಲಿ 76 ವರ್ಷದ ಬೆಂಗಳೂರಿನ ವಿಜಯನಗರದ ಸಿ. ಆನಂದ್ ಎನ್ನುವ ವ್ಯಕ್ತಿ ಇದೀಗ ವಿಚಾರಣೆಯನ್ನು ಎದುರಿಸಲೇಬೇಕಾಗಿದೆ. ಆತನ 69 ವರ್ಷದ ಮೊದಲ ಪತ್ನಿ ನೀಡಿದ್ದ ದೂರಿನ ಮೇರೆಗೆ ದಾಖಲಾಗಿದ್ದ ದೂರಿನಲ್ಲಿ ಆ ವ್ಯಕ್ತಿ ಸಂಕಷ್ಟಕ್ಕೆ ಸಿಲುಕಿದ್ದಾನೆ.

ಹೈಕೋರ್ಟ್ ಮೆಟ್ಟಿಲೇರಿದ ಕೆಎಸ್‌ಒಯು ಕುಲಪತಿ ಅವಧಿ ವಿಸ್ತರಣೆ ವಿವಾದಹೈಕೋರ್ಟ್ ಮೆಟ್ಟಿಲೇರಿದ ಕೆಎಸ್‌ಒಯು ಕುಲಪತಿ ಅವಧಿ ವಿಸ್ತರಣೆ ವಿವಾದ

ಅಪರಾಧದ ಜಾಲ :

ಬೆಂಗಳೂರಿನ ವಿಜಯನಗರದ ಆರ್‌ಪಿಸಿ ಬಡಾವಣೆಯ ನಿವಾಸಿಗಳಾದ 76 ವರ್ಷದ ಸಿ. ಆನಂದ್ ಮತ್ತು ಅವರ ಮೂರನೇ ಪತ್ನಿ ಸಲ್ಲಿಸಿದ್ದ ಅರ್ಜಿಗಳನ್ನು ತಿರಸ್ಕರಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ.

HC refused to quash case against husband on bigamy case

ಮೊದಲ ಪತ್ನಿ 2018ರಲ್ಲಿ ನೀಡಿದ ದೂರಿನ ಆಧಾರದ ಮೇಲೆ ಚನ್ನಪಟ್ಟಣದ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು 2021 ರಲ್ಲಿ ತಮ್ಮ ವಿರುದ್ಧ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿರುವ ಅಪರಾಧ ಪ್ರಕರಣದ ಕಾನೂನು ಬದ್ಧತೆಯನ್ನು ಅರ್ಜಿದಾರರು ಪ್ರಶ್ನಿಸಿದ್ದರು.

ಪ್ರಕರಣದ ವಿವರಗಳನ್ನೆಲ್ಲಾ ಗಮನಿಸಿದ ಬಳಿಕ ನ್ಯಾಯಪೀಠ, "ಪುರುಷನು ತಾನು ಮೂವರು ಮಹಿಳೆಯರ ಪತಿ ಎಂದು ಒಪ್ಪಿಕೊಂಡಾಗ, ಆತ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 494 (ಗಂಡ ಅಥವಾ ಹೆಂಡತಿಯ ಜೀವಿತಾವಧಿಯಲ್ಲಿ ಮತ್ತೆ ಮದುವೆಯಾಗುವುದು) ಅಡಿಯಲ್ಲಿ ಶಿಕ್ಷಾರ್ಹ "ಅಪರಾಧದ ಜಾಲ" ದಲ್ಲಿದ್ದಾನೆ ಎಂದರ್ಥ'' ಎಂದು ಹೈಕೋರ್ಟ್ ಹೇಳಿದೆ.

"ಅರ್ಜಿದಾರ-ಗಂಡ ಮೂರು ಬಾರಿ ಮದುವೆಯಾಗುವ ಮತ್ತು ಅದರ ಜೀವನಾಧಾರದ ಬಗ್ಗೆ ಒಪ್ಪಿಕೊಂಡ ಸತ್ಯದಲ್ಲಿ ಯಾವುದೇ ಹುರುಳಿಲ್ಲ. ಅಪರಾಧದ ಕೇಸು ದಾಖಲಿಸುವುದು ವಿಳಂಬವಾದರೂ ಸಹ ದ್ವಿಪತ್ನಿತ್ವವು ಪ್ರಕರಣದಲ್ಲಿ ನಿರಂತರ ಅಪರಾಧವಾಗಿದೆ. ಮೊದಲ ಹೆಂಡತಿಯ ಒಪ್ಪಿಗೆಯೊಂದಿಗೆ ಅಥವಾ ಮೂರನೇ ಬಾರಿಗೆ ಮೊದಲ ಮತ್ತು ಎರಡನೆಯ ಹೆಂಡತಿಯ ಒಪ್ಪಿಗೆಯೊಂದಿಗೆ ಅದು ದ್ವಿಪತ್ನಿತ್ವದ ಅಪರಾಧವನ್ನು ಪರಿಗಣಿಸಲು ಅಪ್ರಸ್ತುತವಾಗುತ್ತದೆ" ಎಂದು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಪ್ರಕರಣದ ಹಿನ್ನೆಲೆ:

ಅರ್ಜಿದಾರರೂ ಆಗಿರುವ ಪತಿ, 1968ರಲ್ಲಿ ಮೊದಲ ಮದುವೆಯಾದರು. ನಂತರ 1973ರಲ್ಲಿ ಮತ್ತೆ ಎರಡನೇ ವಿವಾಹವಾದರು ಮತ್ತು ಅವರ ಎರಡನೇ ಹೆಂಡತಿ ಅವರ ಮೊದಲನೇ ಹೆಂಡತಿಯ ಸಹೋದರಿಯೇ. ಈ ಇಬ್ಬರೂ ಹೆಂಡತಿಯರಿಂದ ಅವರು ಮಕ್ಕಳನ್ನು ಹೊಂದಿದ್ದರು. ಆದರೂ 1993ರಲ್ಲಿ ಅವರು ಮೂರನೇ ಮಹಿಳೆಯನ್ನು ವಿವಾಹವಾದರು, ಅವರಿಗೆ ಈಗ 49 ವರ್ಷ. ಮೊದಲ ಪತ್ನಿ ಎರಡನೇ ಮತ್ತು ಮೂರನೇ ಮದುವೆಗೆ ಒಪ್ಪಿಗೆ ಸೂಚಿಸಿದ್ದರೂ ತನ್ನ ಎರಡು ಆಸ್ತಿಯನ್ನು ಮೂರನೇ ಪತ್ನಿಗೆ ನೀಡಿದ ನಂತರವೇ ಆಕೆ ದೂರು ದಾಖಲಿಸಿದ್ದಾರೆ.

ಆದರೆ, ಅರ್ಜಿದಾರ-ಪತಿ ಮೊದಲ ಮದುವೆಯನ್ನು ಹತ್ತಿಕ್ಕಿ ಮೂರನೇ ಮಹಿಳೆಯನ್ನು ಮದುವೆಯಾಗಿದ್ದಾರೆ ಎಂದು ಮೊದಲ ಪತ್ನಿ ದೂರಿನಲ್ಲಿ ಆರೋಪಿಸಿದ್ದಾರೆ. ಈ ಮಧ್ಯೆ, ದೂರಿನಲ್ಲಿ ಯಾವುದೇ ಆರೋಪಗಳಿಲ್ಲದ ಕಾರಣ ಅರ್ಜಿದಾರರ-ಪತಿಯ ಕೆಲವು ಸಂಬಂಧಿಕರು ಮತ್ತು ಸ್ನೇಹಿತರ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಮೊಕದ್ದಮೆಯನ್ನು ಹೈಕೋರ್ಟ್ ರದ್ದುಗೊಳಿಸಿದೆ.

English summary
The 76-year-old man named C. Anand is facing a criminal case on a complaint filed by the first wife of three marriages.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X