ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇ-ಮೇಲ್ ಮತದಾನ: ಚುನಾವಣಾ ಆಯೋಗಕ್ಕೆ ಹೈಕೋರ್ಟ್ ನೋಟಿಸ್

By Nayana
|
Google Oneindia Kannada News

ಬೆಂಗಳೂರು, ಮೇ 5: ಸಾರ್ವತ್ರಿಕ ಚುನಾವಣೆಯಲ್ಲಿ ಕ್ಷೇತ್ರದ ಮತದಾರರು ಬೇರೆ ಊರಿನಲ್ಲಿ ಇದ್ದುಕೊಂಡೇ ಇ-ಮೇಲ್ ಮೂಲಕ ಮತ ಹಾಕಲು ಅವಕಾಶ ಕಲ್ಪಿಸಲುಇ ಒಪ್ಪಿಗೆ ನೀಡುವ ಕುರಿತು ಕೇಂದ್ರ ಚುನಾವಣಾ ಆಯೋಗ ಹಾಗೂ ಕೇಂದ್ರ ಕಾನೂನು ಅಚಿವಾಲಯಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.

ಬೆಂಗಳೂರಿನ ಜಯನಗರ ನಿವಾಸಿ ಎಂ.ನರಸಿಂಹ ಮೂರ್ತಿ ಅವರು ದಾಖಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಬಿ. ವೀರಪ್ಪ ಹಾಗೂ ನ್ಯಾ. ಎಸ್. ಸುನೀಲ್‌ದತ್ ಯಾದವ್ ಅವರಿದ್ಧ ರಜಾ ಕಾಲದ ವಿಭಾಗೀಯ ಪೀಠವು ಶುಕ್ರವಾರ ಈ ಆದೇಶ ಪ್ರಕಟಿಸಿದೆ.

ಪ್ರಣಾಳಿಕೆ ಈಡೇರಿಕೆಗೆ ಮುಚ್ಚಳಿಕೆ ನೀಡುವಂತೆ ಹೈಕೋರ್ಟ್‌ಗೆ ಪಿಐಎಲ್ ಪ್ರಣಾಳಿಕೆ ಈಡೇರಿಕೆಗೆ ಮುಚ್ಚಳಿಕೆ ನೀಡುವಂತೆ ಹೈಕೋರ್ಟ್‌ಗೆ ಪಿಐಎಲ್

ಚುನಾವಣಾ ಪ್ರಣಾಳಿಕೆ: ಆಯೋಗಕ್ಕೆ ನೋಟಿಸ್: ಚುನಾವಣೆ ವೇಳೆ ರಾಜಕೀಯ ಪಕ್ಷಗಳು ಬಿಡುಗಡೆ ಮಾಡುವ ಪ್ರಣಾಳಿಕೆಯನ್ನು ಅಧಿಕಾರಕ್ಕೆ ಬಂದ ಬಳಿಕ ಕಡ್ಡಾಯವಾಗಿ ಈಡೇರಿಸುವ ಸಂಬಂಧ ದಾಖಲಾಗಿರುವ ಪಿಐಎಲ್ ಆಧರಿಸಿದ ಕೇಂದ್ರ ಚುನಾವಣಾ ಆಯೋಗಕ್ಕೆ ತುರ್ತು ನೋಟಿಸ್ ನೀಡಿದೆ.

HC issues notice to CEC and law affairs dept regarding email vote

ಹುಸೇನ್ ಮೊಯಿನ್ ಫರೂಕ್ ಸಲ್ಲಿಸಿರುವ ಅರ್ಜಿಯನ್ನು ನ್ಯಾ. ಬಿ. ವೀರಪ್ಪ ಹಾಗೂ ನ್ಯಾ. ಸುನೀಲ್‌ದತ್ ಯಾದವ್ ಅವರಿದ್ದ ನ್ಯಾಯ ಪೀಠವು ಶುಕ್ರವಾರ ಈ ಆದೇಶ ನೀಡಿತು. ಆಯೋಗವೂ ಸೇರಿದಂತೆ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷ ಗಳಿಗೆ ನೋಟಿಸ್ ನೀಡಲು ಆದೇಶಿಸಿದೆ.

ಇ-ಮೇಲ್‌ ಮೂಲಕ ಮತದಾನ ಮಾಡಲು ಅವಕಾಶ ಕೋರಿ ಕೋರ್ಟ್‌ಗೆ ಅರ್ಜಿ ಇ-ಮೇಲ್‌ ಮೂಲಕ ಮತದಾನ ಮಾಡಲು ಅವಕಾಶ ಕೋರಿ ಕೋರ್ಟ್‌ಗೆ ಅರ್ಜಿ

ಅರ್ಜಿಯಲ್ಲಿ ಏನಿದೆ: ಪ್ರಣಾಳಿಕೆಯಲ್ಲಿ ಸುಳ್ಳು ಭರವಸೆ ನೀಡಬಾರದು ಮತದಾರರನ್ನು ಮರುಳು ಮಾಡುವಂತೆ ಭರವಸೆ ಪ್ರಕಟಿಸಬಾರದು. ಅಧಿಕಾರಕ್ಕೇರಿದ ಬಳಿಕ ಎಲ್ಲಾ ಭರವಸೆಯನ್ನು ಅನುಷ್ಠಾನಕ್ಕೆ ತರಬೇಕು. ವಾರ್ಷಿಕ ಬಜೆಟ್‌ನಲ್ಲಿ ಯೋಜನೆಗಳನ್ನು ಘೋಷಿಸಿದರೂ, ಹೆಚ್ಚಿನವು ಜಾರಿಗೆ ಬಾರದ ಕಾರಣ ಸಾರ್ವಜನಿಕರ ಹಣ ಪೋಲಾಗುತ್ತಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

English summary
Karnataka high court has issued notice to Central Election Commission and law affairs department of government of India asking reply on provision of email Karnataka high court has issued notice to Central Election Commission and law affairs department of government of India asking reply on provision of email voting option in the ongoing Karnataka assembly elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X