ಮೆಟ್ರೊ ಯೋಜನೆಗೆ ಮರಗಳ ಸ್ಥಳಾಂತರ ವಿವರ ವೆಬ್‌ಸೈಟ್‌ನಲ್ಲಿ ಪ್ರಕಟಿಸಿ-ಹೈಕೋರ್ಟ್

ಬೆಂಗಳೂರು, ಜು.13. ಮೆಟ್ರೊ ರೈಲು ಯೋಜನೆಗಾಗಿ ಕತ್ತರಿಸಲಿರುವ ಮರಗಳ ಬದಲಿಗೆ ಬೆಂಗಳೂರಿನ ಕೃಷಿ ವಿಜ್ಞಾನಗಳ ಸಂಸ್ಥೆಯ ನಿರ್ದೇಶನದಂತೆ ಪರಿಹಾರ ರೂಪದಲ್ಲಿ ನಡೆತ್ತಿರುವ ಸಸಿಗಳ ವಿವರ ಹಾಗೂ ಸ್ಥಳಾಂತರ ಮಾಡುತ್ತಿರುವ ಮರಗಳ ವಿವರಗಳನ್ನು ಬಿಎಂಆರ್‌ಸಿಎಲ್ ತನ್ನ ವೆಬ್‌ಸೈಟ್ ನಲ್ಲಿ ಪ್ರಕಟಿಸಬೇಕು ಎಂದು ಕರ್ನಾಟಕ ಹೈಕೋರ್ಟ್‌ ಆದೇಶಿಸಿದೆ.

ಅಲ್ಲದೆ, ಮೆಟ್ರೋ ಯೋಜನೆಗಾಗಿ ಮರಗಳನ್ನು ತೆರವುಗೊಳಿಸುವ ಕುರಿತು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ಸಲ್ಲಿಸಿದ ತ್ರೈಮಾಸಿಕ ವರದಿಗಳನ್ನು ವೆಬ್‌ಸೈಟ್ ಮೂಲಕ ಲಭ್ಯವಾಗುವಂತೆ ಬೆಂಗಳೂರು ಮಹಾನಗರ ಪಾಲಿಕೆಯ ಟ್ರೀ ಆಫೀಸರ್‌ಗೆ ಕರ್ನಾಟಕ ಹೈಕೋರ್ಟ್ ಮಂಗಳವಾರ ನಿರ್ದೇಶನ ನೀಡಿದೆ.

ಕರ್ನಾಟಕ ವೃಕ್ಷ ಸಂರಕ್ಷಣಾ ಕಾಯ್ದೆ 1976ರ ನಿಬಂಧನೆಗಳನ್ನು ಅನುಷ್ಠಾನಗೊಳಿಸದಿರುವುದಕ್ಕೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ಮತ್ತು ನ್ಯಾಯಮೂರ್ತಿ ಜೆ.ಎಂ.ಖಾಜಿ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.

HC directed BBMP to web host BMRCL reports on tree plantation in the website

2639 ಸಸಿಗಳನ್ನು ನೆಡಲು ಸೂಚನೆ: ಏತನ್ಮಧ್ಯೆ ನ್ಯಾಯಪೀಠ, ರಸ್ತೆ ಅಭಿವೃದ್ಧಿ ಯೋಜನೆಗಾಗಿ 91 ಬೃಹತ್ ಮರಗಳನ್ನು ಕಡಿಯಲು ಬೆಂಗಳೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ (ಯುಎಎಸ್) ಶಿಫಾರಸು ಮಾಡಿದಂತೆ 2,693 ಸಸಿಗಳನ್ನು ನೆಡಲು ಪರಿಹಾರದ ನೆಡುತೋಪು ಯೋಜನೆಯನ್ನು ಜಾರಿಗೆ ತರಲು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ಲಿಮಿಟೆಡ್‌ಗೆ (ಕೆಆರ್‌ಡಿಸಿಎಲ್)ನಿರ್ದೇಶನ ನೀಡಿದೆ.

ಪರಿಹಾರ ರೂಪದಲ್ಲಿ ಸಸಿಗಳನ್ನು ನಡೆಲಿರುವ ಪ್ಲಾಂಟೇಶನ್ ಯೋಜನೆಯನ್ನು ಆರು ವಾರಗಳಲ್ಲಿ ಪೂರ್ಣಗೊಳಿಸಬೇಕು ಎಂದು ನ್ಯಾಯಪೀಠ ಹೇಳಿದೆ.

ಅಲ್ಲದೆ, ಸಿಲ್ಕ್ ಬೋರ್ಡ್ ಸಿಗ್ನಲ್ ಮತ್ತು ಕಾಡುಬೀಸನಹಳ್ಳಿ ಜಂಕ್ಷನ್ ನಡುವೆ ಮೆಟ್ರೋ ಯೋಜನೆಗಾಗಿ 14 ಮರಗಳನ್ನು ಮತ್ತು ವೆಲ್ಲರಾ ಜಂಕ್ಷನ್ ಮತ್ತು ರಾಷ್ಟ್ರೀಯ ಸೈನಿಕ ಶಾಲೆ ಪ್ರದೇಶದಲ್ಲಿ ಏಳು ಮರಗಳನ್ನು ಕಡಿಯಲು ಟ್ರೀ ಆಫೀಸರ್ ನೀಡಿದ ಅನುಮತಿಯನ್ನು ಕಾರ್ಯಗತಗೊಳಿಸಲು ನ್ಯಾಯಪೀಠವು ಬಿಎಂಆರ್‌ಸಿಎಲ್‌ಗೆ ಅನುಮತಿ ನೀಡಿತು.

ಮರಗಳನ್ನು ಕಡಿಯುವ ಬದಲು ಬೆಂಗಳೂರಿನ ಯುಎಎಸ್ ಶಿಫಾರಸು ಮಾಡಲು ಬಿಎಂಆರ್‌ಸಿಎಲ್ ಪರಿಹಾರ ಪ್ಲಾಂಟೇಶನ್ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ನ್ಯಾಯಪೀಠವು ಬೆಂಗಳೂರು ಮೆಟ್ರೊ ರೈಲು ನಿಗಮಕ್ಕೆ ನಿರ್ದೇಶನ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+