• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಿಳೆ ಮೇಲೆ ಅತ್ಯಾಚಾರವೆಸಗಿದ್ದ ಪೊಲೀಸ್ ಪೇದೆ ಜಾಮೀನು ರದ್ದು!

By ಎಸ್ ಎಸ್ ಎಸ್
|
Google Oneindia Kannada News

ಬೆಂಗಳೂರು, ಜು.10: ಮೂರು ವರ್ಷಗಳ ಕಾಲ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪ ಎದುರಿಸುತ್ತಿದ್ದ ಪೊಲೀಸ್‌ ಕಾನ್‌ಸ್ಟೇಬಲ್‌ಗೆ ವಿಚಾರಣಾ ನ್ಯಾಯಾಲಯ ನೀಡಿದ್ದ ನಿರೀಕ್ಷಣಾ ಜಾಮೀನನ್ನು ಹೈಕೋರ್ಟ್‌ ರದ್ದುಪಡಿಸಿದೆ. ಅಷ್ಟೇ ಅಲ್ಲದೆ, ಕೂಡಲೇ ಆರೋಪಿ ಮಹದೇವಪುರ ಪೊಲೀಸ್‌ ಠಾಣೆಯಲ್ಲಿ ಕಾನ್‌ಸ್ಟೇಬಲ್‌ ಫಕೀರಪ್ಪ ಹಟ್ಟಿಯನ್ನು ವಶಕ್ಕೆ ಪಡೆದುಕೊಳ್ಳುವಂತೆ ಆದೇಶಿಸಿದೆ.

ಪ್ರಕರಣದ ಸಂತ್ರಸ್ತೆ, ಬೆಂಗಳೂರಿನ ಸೆಷನ್ಸ್‌ ಕೋರ್ಟ್‌ ನೀಡಿದ್ದ ನಿರೀಕ್ಷಣಾ ಜಾಮೀನು ರದ್ದು ಕೋರಿದ್ದ ಅರ್ಜಿಯನ್ನು ಮಾನ್ಯ ಮಾಡಿದ ನ್ಯಾಯಮೂರ್ತಿ ಎಚ್‌.ಪಿ. ಸಂದೇಶ್‌ ಅವರಿದ್ದ ಪೀಠ ಈ ಆದೇಶ ಮಾಡಿದೆ.

ವಿವಾಹ ಬಲವಂತದ ಅತ್ಯಾಚಾರಕ್ಕೆ ಲೈಸನ್ಸ್ ಅಲ್ಲ: ಹೈಕೋರ್ಟ್ ಮಹತ್ವದ ಆದೇಶವಿವಾಹ ಬಲವಂತದ ಅತ್ಯಾಚಾರಕ್ಕೆ ಲೈಸನ್ಸ್ ಅಲ್ಲ: ಹೈಕೋರ್ಟ್ ಮಹತ್ವದ ಆದೇಶ

ನ್ಯಾಯಾಲಯ ಹೇಳಿದ್ದೇನು?: ''ಜಾಮೀನು ಅರ್ಜಿ ಪರಿಗಣಿಸುವ ಹಂತದಲ್ಲೇ ಆರೋಪಿ ಮತ್ತು ದೂರುದಾರರ ನಡುವೆ ಒಪ್ಪಿತ ಸಂಬಂಧವಿದೆ ಎಂದು ವಿಚಾರಣಾ ಕೋರ್ಟ್ ಭಾವಿಸಿದೆ. ಸಂತ್ರಸ್ತೆಯ ದೂರಿನಲ್ಲಿರುವ ಅಂಶಗಳನ್ನು ಪರಿಗಣಿಸದೆ, ಆಕೆಯ ವಿರುದ್ಧ ಆರೋಪಿ ನೀಡಿರುವ ದೂರಿನ ಅಂಶಗಳನ್ನಷ್ಟೇ ಪರಿಗಣಿಸಿದೆ'' ಎಂದು ನ್ಯಾಯಪೀಠ ಹೇಳಿದೆ.

ಅತ್ಯಾಚಾರದಂತಹ ಗಂಭೀರ ಪ್ರಕರಣದಲ್ಲಿ, ಅದರಲ್ಲೂ ಆರೋಪಿ ಒಬ್ಬ ಪೊಲೀಸ್‌ ಕಾನ್ಸ್‌ಸ್ಟೇಬಲ್‌ ಆಗಿರುವಾಗ ಆತನ ವಿರುದ್ಧದ ಆರೋಪಗಳನ್ನು ಪರಿಗಣಿಸದೆ ಹಾಗೂ ಸಕಾರಣಗಳನ್ನು ನೀಡದೆ ನಿರೀಕ್ಷಣಾ ಜಾಮೀನು ನೀಡಿರುವುದು ಸರಿಯಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

''ಆರೋಪಿಯ ವಿರುದ್ಧ ಸಂತ್ರಸ್ತೆ ಪೊಲೀಸರಿಗೆ ಹಲವು ದೂರುಗಳನ್ನು ನೀಡಿದ್ದರೂ ಅವುಗಳನ್ನು ಪರಿಗಣಿಸಿ ಯಾವುದೇ ಕ್ರಮ ಕೈಗೊಂಡಿಲ್ಲ. ಪ್ರಕರಣ ದಾಖಲಿಸುವುದು ಪೊಲೀಸರ ಕರ್ತವ್ಯವಾಗಿರುತ್ತದೆ. ಬೇರೊಂದು ಠಾಣೆಯ ವ್ಯಾಪ್ತಿಯಲ್ಲಿ ನಡೆದ ಕೃತ್ಯವಾದರೂ, ಮೊದಲು ಪ್ರಕರಣ ದಾಖಲಿಸಿ ಆ ಬಳಿಕ ಸಂಬಂಧಪಟ್ಟ ಠಾಣೆಗೆ ಕಳುಹಿಸಿಕೊಡಬೇಕು. ಆದರೆ, ಸೆಷನ್ಸ್‌ ಕೋರ್ಟ್‌ ಸಹ ವಿವೇಚನೆ ಬಳಸದೆ, ಕ್ಷುಲ್ಲಕ ಅಂಶಗಳ ಆಧಾರದಲ್ಲಿ ಒಪ್ಪಿತ ಸಂಬಂಧವೆಂಬ ನಿರ್ಧಾರಕ್ಕೆ ಬಂದಿರುವುದು ನಿಜಕ್ಕೂ ದುರಷೃಷ್ಟಕರ ಸಂಗತಿ'' ಎಂದು ಹೈಕೋರ್ಟ್‌ ಬೇಸರ ವ್ಯಕ್ತಪಡಿಸಿದೆ.

ಸಹೋದ್ಯೋಗಿ ಪತ್ನಿ ಅತ್ಯಾಚಾರಗೈಯ್ದ 8 ಸಿಐಎಸ್‌ಎಫ್ ಪೇದೆ ವಜಾ ಕಾಯಂಸಹೋದ್ಯೋಗಿ ಪತ್ನಿ ಅತ್ಯಾಚಾರಗೈಯ್ದ 8 ಸಿಐಎಸ್‌ಎಫ್ ಪೇದೆ ವಜಾ ಕಾಯಂ

ಪ್ರಕರಣದ ಹಿನ್ನೆಲೆ: ಪೊಲೀಸ್‌ ಕಾನ್‌ಸ್ಟೇಬಲ್‌ ಆಗಿರುವ ಫಕೀರಪ್ಪ ಹಟ್ಟಿ ಮದುವೆಯಾಗುವುದಾಗಿ ನಂಬಿಸಿ 2019ರಿಂದ ಸತತವಾಗಿ ದೈಹಿಕ ಸಂಪರ್ಕ ಬೆಳೆಸಿದ್ದಲ್ಲದೆ, ಇದೀಗ ಮದುವೆಯಾಗಲು ನಿರಾಕರಿಸುತ್ತಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು 2022ರ ಫೆ.14ರಂದು ಫಕೀರಪ್ಪ ಕರ್ತವ್ಯ ನಿರ್ವಹಿಸುತ್ತಿದ್ದ ಮಹದೇವ ಪುರ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ಆದರೆ, ಅಲ್ಲಿ ದೂರು ಸ್ವೀಕರಿಸದ ಹಿನ್ನೆಲೆಯಲ್ಲಿ ಫೆ.23 ಹಾಗೂ 24ರಂದು ಪೊಲೀಸ್‌ ಆಯುಕ್ತರು ಹಾಗೂ ಉಪ ಪೊಲೀಸ್‌ ಆಯುಕ್ತರಿಗೆ ದೂರು ನೀಡಿದ್ದರು. ಆದರೂ, ಯಾವುದೇ ಪ್ರಯೋಜನ ಆಗದ ಹಿನ್ನೆಲೆಯಲ್ಲಿ ಮ್ಯಾಜಿಸ್ಪ್ರೇಟ್‌ ಕೋರ್ಟ್‌ಗೆ ದೂರು ನೀಡಿದ್ದರು. ಪ್ರಕರಣದ ತನಿಖೆಗೆ ಮ್ಯಾಜಿಸ್ಪ್ರೇಟ್‌ ಆದೇಶಿಸಿದ್ದರು. ಇದರಿಂದ, ಕಾನ್‌ಸ್ಟೇಬಲ್‌ ಫಕೀರಪ್ಪ ನಿರೀಕ್ಷಣಾ ಜಾಮೀನು ಕೋರಿ ಸೆಷನ್ಸ್‌ ಕೋರ್ಟ್‌ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಾಲಯ ಏ.4ರಂದು ಆರೋಪಿಗೆ ನಿರೀಕ್ಷಣಾ ಜಾಮೀನು ನೀಡಿತ್ತು. ಇದರಿಂದ, ಮಹಿಳೆ ಹೈಕೋರ್ಟ್‌ ಮೆಟ್ಟಿಲೇರಿದ್ದರು.

English summary
Karnataka High Court cancelled anticipatory bail granted to police constable who is facing rape charges.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X