ದ್ವೇಷ ಭಾಷಣ ನಿಷೇಧ ಕಾಯ್ದೆ: ಸುಳ್ಳು ಮಾಹಿತಿ ಹಂಚಿದ ಪ್ರಿಯಾಂಕ್ ಖರ್ಗೆಗೆ ಶಿಕ್ಷೆಯಾಗುತ್ತದೆಯೇ: ಸಿ.ಟಿ ರವಿ ಪ್ರಶ್ನೆ
ಸಚಿವ ಪ್ರಿಯಾಂಕ್ ಖರ್ಗೆ ಅವರು ಮಾಡಿರುವ ಟ್ವೀಟ್‌ವೊಂದು ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಸೋಷಿಯಲ್ ಮೀಡಿಯಾ ಕರ್ನಾಟಕ ಬಿಜೆಪಿ ಖಾತೆ ಹಾಗೂ ವಿವಿಧ ಬಿಜೆಪಿ ನಾಯಕರು ಪ್ರಿಯಾಂಕ್ ಖರ್ಗೆ ಅವರನ್ನು ತರಾಟೆ ತೆಗೆದುಕೊಂಡಿದ್ದಾರೆ. ದ್ವೇಷ ಭಾಷಣ ನಿಷೇಧ ಕಾಯ್ದೆಯಡಿ ಸುಳ್ಳು ಮಾಹಿತಿ ಹಂಚಿದ ಪ್ರಿಯಾಂಕ್ ಖರ್ಗೆ ಅವರಿಗೆ ಶಿಕ್ಷೆಯಾಗುತ್ತದೆಯೇ ಎಂದು ಪ್ರಶ್ನೆ ಮಾಡಲಾಗಿದೆ.
ಈ ಸಂಬಂಧ ಮಾತನಾಡಿರುವ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಅವರು, ಇತ್ತೀಚೆಗೆ ಅತ್ಯಂತ ವಿವಾದ ತಲೆದೋರಿದ್ದ ದ್ವೇಷ ಭಾಷಣ ಕಾಯ್ದೆಯನ್ನು ಬೆಂಬಲಿಸಿದ್ದ ಸಚಿವ ಪ್ರಿಯಾಂಕ್ ಖರ್ಗೆ ಅವರು ಸ್ವತಃ ಎಐ ನಿರ್ಮಿತ ಫೇಕ್ ಚಿತ್ರವನ್ನು ಹಂಚಿಕೊಂಡಿದ್ದಾರೆ. ಜೈಲಿನಲ್ಲಿರುವ ಅತ್ಯಾಚಾರ ಆರೋಪಿ ಕುಲ್‌ದೀಪ್ ಸಿಂಗ್ ಸೆಂಗಾರ್ ಅವರು ಬಿಡುಗಡೆಯಾಗಿರುವಂತೆ, ಅವರನ್ನು ಬಿಜೆಪಿ ನಾಯಕರು ಸನ್ಮಾನಿಸುತ್ತಿರುವಂತೆ ತೋರಿಸುವ ಸುಳ್ಳು ಚಿತ್ರವನ್ನು ಸಚಿವರು ಹಾಕಿಕೊಂಡಿದ್ದಾರೆ. ಇದು ಸ್ವತಃ ಸಚಿವರೇ ಬೆಂಬಲಿಸಿದ್ದ ಕಾನೂನಿನ ಸ್ಪಷ್ಟ ಉಲ್ಲಂಘನೆ ಅಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ.

ಜನರನ್ನು ಹಾದಿ ತಪ್ಪಿಸುವ ಗುರಿ
ಪ್ರಿಯಾಂಕ್ ಖರ್ಗೆ ಅವರು ಫೇಕ್ ಚಿತ್ರವನ್ನು ಹಂಚಿಕೊಂಡಿರುವ ಉದ್ದೇಶ ಸ್ಪಷ್ಟವಾಗಿದೆ. ಅತ್ಯಾಚಾರಿ ವ್ಯಕ್ತಿಯನ್ನು ಬಿಜೆಪಿ ಸನ್ಮಾನಿಸಿದೆ ಎಂಬಂತೆ ಬಿಂಬಿಸಿ, ಜನರ ಮನಸ್ಸಿನಲ್ಲಿ ಬಿಜೆಪಿ ಕುರಿತು ಅಪಾರ್ಥ, ದ್ವೇಷ ಮೂಡಿಸುವುದು ಪ್ರಿಯಾಂಕ್ ಖರ್ಗೆಯವರ ಗುರಿಯಾಗಿತ್ತು. ಇದಕ್ಕಾಗಿ ಅವರು ಯಾವ ಮಟ್ಟಕ್ಕೆ ಇಳಿಯಲು ಬೇಕಾದರೂ ಸಿದ್ಧರಿದ್ದಾರೆ ಎಂದು ಸಿ.ಟಿ ರವಿ ಅವರು ದೂರಿದ್ದಾರೆ.
ಪ್ರಕರಣದ ಸತ್ಯಾಂಶ ಏನು?
ಕುಲ್‌ದೀಪ್ ಸೆಂಗಾರ್‌ಗೆ ಒಂದು ಪ್ರಕರಣದಲ್ಲಿ ಮಾತ್ರ ದೆಹಲಿ ಹೈಕೋರ್ಟ್ ಜಾಮೀನು ನೀಡಿದೆ. ಆದರೆ, ಆತ ಜೈಲಿನಿಂದ ಬಿಡುಗಡೆಯಾಗಿಲ್ಲ. ಸಂತ್ರಸ್ತೆಯ ತಂದೆಯ ಹತ್ಯೆ ಪ್ರಕರಣದಲ್ಲಿ ಸೆಂಗಾರ್ ಇನ್ನೂ ಜೈಲಿನಲ್ಲೇ ಇದ್ದಾರೆ. ಈಗಾಗಲೇ ನೀಡಿರುವ ಜಾಮೀನಿಗೆ ತಡೆ ನೀಡಬೇಕು ಎಂದು ಸಿಬಿಐ ಸುಪ್ರೀಂ ಕೋರ್ಟಿಗೆ ಮನವಿ ಸಲ್ಲಿಸಿದೆ. ಇಷ್ಟು ದಿನ ಕೇಂದ್ರೀಯ ಸಂಸ್ಥೆಗಳು ಬಿಜೆಪಿಯ ಅಣತಿಗೆ ತಕ್ಕಂತೆ ಕೆಲಸ ಮಾಡುತ್ತಿವೆ ಎಂದು ಆರೋಪಿಸಿದ್ದ ಪ್ರಿಯಾಂಕ್ ಖರ್ಗೆಯವರು ಸಿಬಿಐ ನಡೆಯನ್ನು ಗಮನಿಸಲೇ ಇಲ್ಲವೇ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಮುಂದುವರಿದು ಕಾಂಗ್ರೆಸ್ ಸರ್ಕಾರ ಸ್ವತಃ ಹಠಕ್ಕೆ ಬಿದ್ದು ದ್ವೇಷ ಭಾಷಣ ಮತ್ತು ಸುಳ್ಳು ಮಾಹಿತಿ ನಿಯಂತ್ರಣ ಕಾಯ್ದೆ ಜಾರಿಗೆ ತಂದಿದೆ. ಈ ಕಾಯಿದೆಯ ಪ್ರಕಾರ, ಜನರ ಭಾವನೆಗಳನ್ನು ಕೆಣಕುವ, ಸುಳ್ಳು ಅಥವಾ ತಪ್ಪು ಮಾಹಿತಿ ಹಂಚಿಕೊಳ್ಳಲು ಹಂಚಿಕೊಳ್ಳುವ, ಎಐ ನಿರ್ಮಿತ ನಕಲಿ ಚಿತ್ರಗಳು ಮತ್ತು ದೃಶ್ಯಗಳನ್ನು ಹಂಚಿಕೊಳ್ಳುವುದು ಅಪರಾಧ.
ಸ್ವತಃ ಈ ಕಾಯ್ದೆಯ ಪ್ರಬಲ ಸಮರ್ಥಕರಾಗಿದ್ದ ಪ್ರಿಯಾಂಕ್ ಖರ್ಗೆಯವರಿಗೆ ಇದು ಅಪರಾಧ ಎನ್ನುವುದು ಅರಿವಿರಲಿಲ್ಲವೇ? ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಡವೇ. ಬಿಜೆಪಿ ನಿರಂತರವಾಗಿ ಈ ಕಾಯಿದೆ ವಾಕ್ ಸ್ವಾತಂತ್ರ್ಯಕ್ಕೂ ಧಕ್ಕೆ ತರಲಿದೆ ಎಂದಾಗ ಅದಕ್ಕೆ ಕಾಂಗ್ರೆಸ್ ನಾಯಕರು ಕಿವಿಗೊಡಲಿಲ್ಲ. ಈಗ ಸ್ವತಃ ಕಾಂಗ್ರೆಸ್ ನಾಯಕರು ಕಾನೂನು ಉಲ್ಲಂಘನೆ ಮಾಡಿರುವುದನ್ನು ಅದೇ ವಾಕ್ ಸ್ವಾತಂತ್ರ್ಯ ಎನ್ನುತ್ತೀರಾ ಎಂದು ಕೇಳಿದ್ದಾರೆ.
ಕಾಂಗ್ರೆಸ್ ಸರ್ಕಾರದ ದ್ವಂದ್ವ ನೀತಿ ಇದರಲ್ಲಿ ಸ್ಪಷ್ಟವಾಗಿದೆ. ಬಿಜೆಪಿ ನಾಯಕರು ಏನಾದರೂ ಹೇಳಿಕೆ ನೀಡಿದ್ದರೆ ತಕ್ಷಣವೇ ಪ್ರಕರಣ ದಾಖಲಿಸಲು ಸರ್ಕಾರ ತುದಿಗಾಲಲ್ಲಿ ನಿಂತಿರುತ್ತದೆ. ಆದರೆ, ಕಾಂಗ್ರೆಸ್ ಸರ್ಕಾರದ ಪ್ರಭಾವಿ ಸಚಿವರು ಕಾಯ್ದೆ ಉಲ್ಲಂಘಿಸಿದಾಗ ಮಾತ್ರ ಸರ್ಕಾರ ಜಾಣ ಕುರುಡು - ಜಾಣ ಕಿವುಡು ಕ್ರಮ ಅನುಸರಿಸುತ್ತದೆ. ಈ ಕಾಯಿದೆ ಎಲ್ಲರಿಗೂ ಸಮಾನವಾಗಿ ಅನ್ವಯವಾಗುತ್ತದೋ, ಅಥವಾ ಕಾಂಗ್ರೆಸ್ ವಿರೋಧಿಗಳನ್ನು ಹಣಿಯುವುದಕ್ಕೆ ಮಾತ್ರ ಬಳಕೆಯಾಗುತ್ತದೋ ಎನ್ನುವುದನ್ನು ಗೃಹ ಸಚಿವರಾದ ಡಾ. ಜಿ ಪರಮೇಶ್ವರ ಅವರು ಸ್ಪಷ್ಟಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ತನ್ನ ಟ್ವಿಟರ್ ಖಾತೆಯಲ್ಲಿ ಸುಳ್ಳು ಮಾಹಿತಿ ಹಂಚಿಕೊಂಡಿದ್ದ ಪ್ರಿಯಾಂಕ್ ಖರ್ಗೆ, ವಿವಾದದ ರೂಪ ಪಡೆಯುತ್ತಿದ್ದಂತೆ ಅದನ್ನು ಅಳಿಸಿ ಸುಮ್ಮನೆ ಕುಳಿತಿದ್ದಾರೆ. ಆದರೆ, ಬಿಜೆಪಿಯ ಕುರಿತು ಅವಹೇಳನಕಾರಿ ಚಿತ್ರಣ ಮೂಡುವಂತೆ ಮಾಡಿರುವುದಕ್ಕೆ ಕನಿಷ್ಠ ಕ್ಷಮೆ, ವಿಷಾದ ವ್ಯಕ್ತಪಡಿಸುವ ಮನಸ್ಸೂ ಅವರಿಗಿಲ್ಲ. ಇದು ಕಾಂಗ್ರೆಸ್ಸಿನ ನೈತಿಕ ಅಧಃಪತನದ ಸಾಕ್ಷಿಯಷ್ಟೇ.
The self-proclaimed 'fact-checker' @PriyankKharge is caught spreading fake news!
— BJP Karnataka (@BJP4Karnataka) December 26, 2025
Despite holding the IT & BT portfolio, he circulated a malicious, AI-generated image to attack PM Shri @narendramodi and mislead the public about a court order.
𝐇𝐞 𝐬𝐡𝐚𝐦𝐞𝐟𝐮𝐥𝐥𝐲… pic.twitter.com/PMDIbmYKff
ಈ ಕಾಯ್ದೆ ಜಾರಿಗೆ ಬಂದರೆ, ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರವನ್ನು ಟೀಕಿಸಿದರೆ ಜನಸಾಮಾನ್ಯರನ್ನೂ ಬಂಧಿಸುವ ಕೆಲಸ ಸರ್ಕಾರ ಮಾಡಬಹುದು ಎಂದು ಬಿಜೆಪಿ ಹೇಳಿತ್ತು. ಸರ್ಕಾರ ಈಗ ಸಾಗುತ್ತಿರುವ ರೀತಿ ನೋಡಿದರೆ, ಇದು ಆ ಹಂತ ಮುಟ್ಟುವಂತೆ ಕಾಣುತ್ತಿದೆ. ಜನರು ನಿರೀಕ್ಷಿಸುವುದು ಎಲ್ಲರಿಗೂ ಸಮಾನ ನ್ಯಾಯ ಮತ್ತು ಹಕ್ಕೇ ಹೊರತು ಕಾಂಗ್ರೆಸ್ ಹಿತ ಕಾಯುವ ಕಾಯ್ದೆಗಳಲ್ಲ ಎಂದು ಅವರು ಹೇಳಿದ್ದಾರೆ.
-
ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್ Viral: ದಿನಕ್ಕೆ 3 ಸಾವಿರ ರೂ. ಗಳಿಕೆ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ












Click it and Unblock the Notifications