ಮಡಿಕೇರಿಯಂತೆ ಹಾಸನದಲ್ಲಿ ಗಲಾಟೆ, ಇಂದು ಬಂದ್‌

ಹಾಸನ, ನವೆಂಬರ್ 13 : ಮಡಿಕೇರಿ ಗಲಭೆ ಹಾಸನಕ್ಕೂ ಹಬ್ಬಿದೆ. ಗುರುವಾರ ಸಂಜೆ ಹಾಸನದಲ್ಲಿ ಕಲ್ಲು ತೂರಾಟ ನಡೆದಿದೆ. ಬೈಕುಗಳಿಗೆ ಬೆಂಕಿ ಹಚ್ಚಲಾಗಿದೆ. ಶುಕ್ರವಾರ 144 ಸೆಕ್ಷನ್ ಅನ್ವಯ ನಿ‍ಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಶಾಲಾ-ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ. [ಹಾಸನಾಂಬೆ ದರ್ಶನ ಪಡೆಯಲು ಇಂದು ಕೊನೆ ದಿನ]

ಹಿಂದೂ ಪರ ಸಂಘಟನೆಗಳು ಶುಕ್ರವಾರ ಹಾಸನ ಬಂದ್‌ಗೆ ಕರೆ ನೀಡಿದ್ದವು. ಇದರ ಅಂಗವಾಗಿ ಗುರುವಾರ ಸಂಜೆ ಬೈಕ್ ಜಾಥಾ ನಡೆಸಲಾಗುತ್ತಿತ್ತು. ಈ ಸಂದರ್ಭದಲ್ಲಿ ಟಿಪ್ಪು ಸುಲ್ತಾನ್ ವಿರುದ್ಧವಾಗಿ ಅವಹೇಳನಕಾರಿ ಘೋಷಣೆ ಕೂಗಿದ್ದು, ಕಲ್ಲು ತೂರಾಟ ನಡೆದಿದೆ. [ಇಂದು ಮಂಗಳೂರು ಬಂದ್]

hassan

ಹಲವು ಮನೆ, 8 ಕಾರುಗಳ ಮೇಲೆ ಗುರುವಾರ ಸಂಜೆ ಕಲ್ಲು ತೂರಾಟ ನಡೆಸಲಾಗಿದೆ. 10 ಬೈಕ್‌ಗಳಿಗೆ ಬೆಂಕಿ ಹಚ್ಚಲಾಗಿದೆ. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ 20ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ['ನವೆಂಬರ್ 10ರಂದು ಟಿಪ್ಪು ಜಯಂತಿ ಏಕೆ?']

ಶಾಲಾ-ಕಾಲೇಜಿಗೆ ರಜೆ : ಶುಕ್ರವಾರ ಹಿಂದೂಪರ ಸಂಘಟನೆಗಳು ಹಾಸನ ಬಂದ್‌ಗೆ ಕರೆ ನೀಡಿರುವುದರಿಂದ ಸೆಕ್ಷನ್ 144 ಅನ್ವಯ ಮೂರು ದಿಗಳ ಕಾಲ ನಿಷೇಧಾಜ್ಞೆ ಹೊರಡಿಸಲಾಗಿದೆ. ಶುಕ್ರವಾರ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಹಾಸನಾಂಬೆ ದರ್ಶನಕ್ಕೆ ಅವಕಾಶ : ಹಾಸನದಲ್ಲಿ 144 ಸೆಕ್ಷನ್ ಜಾರಿಗೊಳಿಸಿದ್ದರೂ ಪುರಾಣ ಪ್ರಸಿದ್ಧ ಹಾಸನಾಂಬೆ ದೇವಾಲಯದಲ್ಲಿ ಭಕ್ತರು ದರ್ಶನ ಮಾಡಲು ಅವಕಾಶ ಕಲ್ಪಿಸಲಾಗಿದೆ. ನ.5 ರಂದು ದೇವಾಲಯದ ಬಾಗಿಲು ತೆರೆದಿದ್ದು, ಇಂದು ದೇವಿಯ ದರ್ಶನ ಪಡೆಯಲು ಕೊನೆಯ ದಿನವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+