ಗಮನಿಸಿ.. ಹಾಸನಾಂಬೆ ದರ್ಶನದ ಎಲ್ಲಾ ವಿವಿಐಪಿ ಪಾಸ್ ಹಾಗೂ ವಿಶೇಷ ಬಸ್ ಸಂಚಾರ ರದ್ದು!
ಹಾಸನ ಅಕ್ಟೋಬರ್ 31: ಹಾಸನಾಂಬೆ ದರ್ಶನದ ಎಲ್ಲಾ ಪಾಸ್‌ಗಳನ್ನು ಹಾಗೂ ಹಾಸನಾಂಬೆ ದರ್ಶನಕ್ಕೆ ಬಿಟ್ಟಿದ್ದ ವಿಶೇಷ ಬಸ್ ಸಂಚಾರವನ್ನು ರದ್ದುಗೊಳಿಸಿ ದೇಗುಲದ ಆಡಳಿತ ಮಂಡಳಿ ಆದೇಶ ಹೊರಡಿಸಿದೆ. ಸರತಿ ಸಾಲಿನಲ್ಲಿ ನಿಂತಿರೊ ಜನರನ್ನು ಹೊರತುಪಡಿಸಿ ಯಾವುದೇ ಪಾಸ್ ಬಳಸದಂತೆ ಹಾಸನಾಂಬೆ ದೇವಾಲಯ ಆಡಳಿತ ಅಧಿಕಾರಿ ಮಾರುತಿ ಆದೇಶ ಹೊರಡಿಸಿದ್ದಾರೆ.
ಇಲ್ಲಿನ ಆಡಳಿತ ವ್ಯವಸ್ಥೆ ವಿವಿಐಪಿ ಪಾಸ್‌ಗಳನ್ನು ಬೇಕಾಬಿಟ್ಟಿಯಾಗಿ ಹಂಚಿಕೆ ಮಾಡಿದೆ. ಇದರಿಂದಾಗಿ ಸರತಿ ಸಾಲಿನಲ್ಲಿ ಬರುವ ಭಕ್ತರಿಗೆ ತೊಂದರೆಯಾಗಿದ್ದು ಜನರು ಆಕ್ರೋಶ ವ್ಯಕ್ತಪಡಿಸಿದ್ದರಿಂದ ಪಾಸ್‌ಗಳನ್ನು ರದ್ದುಗೊಳಿಸಿ ದೇವಸ್ಥಾನ ಮಂಡಳಿ ಪ್ರಾಯಶ್ಚಿತದ ಕ್ರಮ ಕೈಗೊಂಡಿದೆ.

ಹಾಸನಾಂಬೆ ದರ್ಶನಕ್ಕೆ ವಿವಿಐಪಿ ಪಾಸ್ ಪಡೆದು ಬಂದ ಸಹಸ್ರಾರು ಭಕ್ತರು ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ನಿಂತು, ಸುಡು ಬಿಸಿಲಲ್ಲಿ ಬಳಲಿ ಬೆಂಡಾದರು. ಇತಿಮಿತಿ ಇಲ್ಲದೆ ಪಾಸ್ ಹಂಚಿಕೆ ಮಾಡಿದ್ದರಿಂದ ಭಕ್ತರು ಜಿಲ್ಲಾಡಳಿತ ಹಾಗೂ ರಾಜಕಾರಣಿಗಳನ್ನು ಶಪಿಸಿದ್ದಾರೆ. ವರ್ಷಕ್ಕೆ ಒಮ್ಮೆ ದರ್ಶನ ಕೊಡುವ ಹಾಸನಾಂಬೆಯನ್ನು ಕಣ್ತುಂಬಿಕೊಳ್ಳಲು ದೇಶ ವಿದೇಶದಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ.
ಹೀಗೆ ದೇವಸ್ಥಾನಕ್ಕೆ ಆಗಮಿಸುವ ಹೆಚ್ಚು ಜನ ಶಾಸಕರು, ಸಚಿವರು, ಅಧಿಕಾರಿಗಳಿಂದ ಶಿಫಾರಸು ಪತ್ರ ತರುವುದು ಪ್ರತಿವರ್ಷ ನಡೆಯುತ್ತದೆ. ಆದರೆ ಈ ಬಾರಿ ಇಂತಹ ಪಾಸ್‌ಗಳನ್ನು ಮೂವತ್ತು ಸಾವಿರಕ್ಕೂ ಹೆಚ್ಚು ಮುದ್ರಿಸಲಾಗಿದೆ ಎನ್ನಲಾಗುತ್ತದೆ. ಮತ್ತೊಂದು ಮೂಲದ ಪ್ರಕಾರ ಚುನಾವಣೆ ಇರುವುದರಿಂದ 75 ಸಾವಿರಕ್ಕೂ ಹೆಚ್ಚು ಪಾಸ್ ವಿತರಿಸಲಾಗಿದೆ ಎಂದು ಹೇಳಲಾಗುತ್ತಿದೆ. ಈ ಪಾಸ್ ಈ ಬಾರಿ ಭಕ್ತರ ಆಕ್ರೋಶಕ್ಕೆ ಗುರಿಯಾಗಿದೆ. ಇದರಿಂದ ಎಚ್ಚೆತ್ತುಕೊಂಡ ದೇವಸ್ಥಾನದ ಆಡಳಿತ ಮಂಡಳಿ ಪಾಸ್‌ಗಳನ್ನು ರದ್ದುಗೊಳಿಸಿದೆ.

ವಿವಿಐಪಿ ಪಾಸ್ ಪಡೆದು ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ಕಾದು ಹೈರಾಣಾಗಿ ವಾಪಸ್ ಬಂದವರ ಕಿರಿಕಿರಿ ಹೆಚ್ಚಾದ ಬೆನ್ನೆಲ್ಲೆ ಜನಸಾಮಾನ್ಯರು ಆಕ್ರೋಶಗೊಂಡಿದ್ದಾರೆ. ಪಾಸ್ ಪಡೆದು ಮುಂದೆ ಹೋಗಲು ಆಗದೆ ವಾಪಸ್ ಬರಲೂ ಆಗದೆ ಪೇಚಾಟಕ್ಕೆ ಸಿಲುಕಿ ಉಳಿದ ಭಕ್ತರಿಗೆ ತೊಂದರೆ ಉಂಟಾಗಿರುವ ಘಟನೆಗಳು ಹೆಚ್ಚಾದ ಬೆನ್ನಲ್ಲೇ ಪಾಸ್‌ಗಳನ್ನು ಇಂದು ದೇವಸ್ಥಾನ ಮಂಡಳಿ ರದ್ದುಗೊಳಿಸಿದೆ.
ಮತದಾರರನ್ನು ಓಲೈಸಲು ಜಿಲ್ಲಾಡಳಿತದ ಮೇಲೆ ಒತ್ತಡ ತಂದು ಮನಸೋಯಿಚ್ಚೆ ಪಾಸ್ ಪಡೆದು ಹಂಚಿದ್ದೇ ಭಕ್ತಾದಿಗಳ ಸಂಖ್ಯೆ ಹೆಚ್ಚಾಗಲು ಕಾರಣ ಎನ್ನಲಾಗುತ್ತಿದೆ. ವ್ಯಾಪಕ ಪ್ರಚಾರ ನೀಡಿ ಎಲ್ಲರನ್ನೂ ಆಹ್ವಾನಿಸಿದ್ದು ಹಾಗೂ ಇತಿಮಿತಿ ಇಲ್ಲದೆ ವಿವಿಐಪಿ ಪಾಸ್ ಹಂಚಿಕೆ ಮಾಡಿದ್ದೇ ಭಕ್ತಾದಿಗಳ ಸಂಖ್ಯೆ ಹೆಚ್ಚಳಕ್ಕೆ ಕಾರಣ ಎನ್ನಲಾಗುತ್ತಿದೆ.
ಹಾಸನಾಂಬೆ ದರ್ಶನಕ್ಕೆ ಬಿಟ್ಟಿದ್ದ ವಿಶೇಷ ಬಸ್ ಸಂಚಾರ ರದ್ದು
ಅಲ್ಲದೆ ಹಾಸನಾಂಬೆ ದರ್ಶನಕ್ಕೆ ನಿಯಂತ್ರಣಕ್ಕೆ ಸಿಗದಂತೆ ಜನರು ಆಗಮಿಸುತ್ತಿರುವುದರಿಂದ ಹಾಸನಾಂಬೆ ದರ್ಶನಕ್ಕೆ ಬಿಟ್ಟಿದ್ದ ವಿಶೇಷ ಬಸ್ ಸಂಚಾರವನ್ನೂ ಸರ್ಕಾರ ರದ್ದು ಮಾಡಿದೆ. ಬೆಂಗಳೂರು ಸೇರಿದಂತೆ ವಿವಿಧೆಡೆಯಿಂದ ಸಂಚರಿಸುತ್ತಿದ್ದ ಐದು ನೂರು ಬಸ್‌ಗಳ ಸಂಚಾರವನ್ನು ಸರ್ಕಾರ ರದ್ದು ಮಾಡಿದೆ.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications