ಹಾಸನಾಂಬ ದೇಗುಲ: 11 ದಿನಗಳಲ್ಲಿ ದೇವಾಲಯಕ್ಕೆ ಬಂತು ಕೋಟಿ.. ಕೋಟಿ!

ಹಾಸನದ ಪ್ರಸಿದ್ಧ ದೇವಾಲಯಗಳಲ್ಲಿ ಹಾಗೂ ಕರ್ನಾಟಕದ ಪ್ರಸಿದ್ಧ ದೇವಾಲಯವಾಗಿರು ಹಾಸನಾಂಬ ದೇವಾಲಯದಲ್ಲಿ ಈ ಬಾರಿ ದೇವಿಯ ದರ್ಶನ ಮಾಡಲು ಭಕ್ತಾಧಿಗಳು ಸಾಕಷ್ಟು ಸಂಕಷ್ಟ ಅನುಭವಿಸಿದ್ದಾರೆ. ವರ್ಷದಲ್ಲಿ ಒಮ್ಮೆ ಮಾತ್ರ ದೇವಸ್ಥಾನದ ಬಾಗಿಲುಗಳು ತೆಗೆಯಲಾಗುತ್ತದೆ. ಈ ಬಾರಿ ಲಕ್ಷಾಂತರ ಜನ ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ. ದೇವಿಯ ದರ್ಶನ ಪಡೆಯುವುದಕ್ಕೆ ಬಂದ ಭಕ್ತಾಧಿಗಳು ಇಲ್ಲಿನ ಜಿಲ್ಲಾಡಳಿತದ ಅವ್ಯವಸ್ಥೆಗೆ ಕೆಂಡವಾಗಿದ್ದರು. ಇದರ ಹೊರತಾಗಿ ಈ ಬಾರಿ ಉತ್ಸವಕ್ಕೆ 18 ಲಕ್ಷ ಜನ ಆಗಮಿಸಿದ್ದು, ಕೋಟಿ ಕೋಟಿ ಆದಾಯ ಸಂಗ್ರಹವಾಗಿದೆ.

ಕರ್ನಾಟಕದ ಪ್ರಸಿದ್ಧ ದೇವಾಲಯಗಳಲ್ಲಿ ಹಾಸನದ ಹಾಸನಾಂಬ ದೇವಾಲಯವೂ ಒಂದು. ಈ ದೇವಾಲಯ ಹಲವು ಕಾರಣಗಳಿಗೆ ಪ್ರಸಿದ್ಧಿ ಗಳಿಸಿದೆ. ವರ್ಷದಲ್ಲಿ ಒಮ್ಮೆ ಮಾತ್ರ ಈ ದೇವಾಲಯದ ಬಾಗಿಲುಗಳನ್ನು ತೆಗೆಯುವುದು ಹಾಗೂ ವರ್ಷ ಪೂರ್ತಿ ಇಲ್ಲಿ ದೇವಿಗೆ ಇರಿಸಿದ ದೀಪ ಉರಿಯುತ್ತದೆ ಎನ್ನುವುದು ವಿಶೇಷ.

Hasanamba Temple In 11 days crores came to the temple crores

ಇನ್ನು ಈ ವರ್ಷ 11 ದಿನಗಳ ಕಾಲ ನಡೆದಿರುವ ಉತ್ಸವವರು ಭಾನುವಾರ ಅಂತ್ಯವಾಗಿದೆ. ಪ್ರತಿ ವರ್ಷಕ್ಕೆ ಒಮ್ಮೆ ಮಾತ್ರ ದೇವಿಯ ದರ್ಶನ ಪಡೆಯಲು ಅವಕಾಶ ಇದೆ. ಇನ್ನು ಮುಂದಿನ ವರ್ಷ ಅಂದರೆ 2025ನೇ ಸಾಲಿನ ಅಕ್ಟೋಬರ್‌ನಲ್ಲಿ ದೇವಸ್ಥಾನದಲ್ಲಿ ದೇವಿಯ ದರ್ಶನ ಶುರುವಾಗಲಿದೆ. ಉಳಿದೆಲ್ಲ ವರ್ಷಗಳಿಗಿಂತಲೂ ಈ ಬಾರಿ ದೇವಾಲಯದ ನಿರ್ವಹಣೆಯಲ್ಲಿ ಲೋಪವಾಗಿತ್ತು ಎಂದು ಭಕ್ತಾಧಿಗಳು ಅಸಮಾಧಾನ ವ್ಯಕ್ತಪಡಿಸಿದ್ದರು. ದೇವರ ದರ್ಶನಕ್ಕೆ ಈ ಬಾರಿ ನೀಡಲಾಗಿದ್ದ ಪಾಸ್‌ನಿಂದಲೇ ಭಾರೀ ವಿವಾದ ಸೃಷ್ಟಿಯಾಗಿತ್ತು. ಕೊನೆಯ ಕ್ಷಣದಲ್ಲಿ ಎಲ್ಲಾ ಪಾಸ್‌ಗಳನ್ನು ರದ್ದು ಮಾಡಿ ಗೊಂದಲಕ್ಕೆ ತೆರೆ ಎಳೆಯಲಾಗಿತ್ತು.

11 ದಿನಗಳ ವಿಜೃಂಭಣೆಯ ಉತ್ಸವ: 11 ದಿನಗಳಿಂದ ಹಾಸನದ ಹಾಸನಾಂಬ ದೇವಾಲಯದಲ್ಲಿ ದೇವಿಗೆ ಅದ್ಧೂರಿ ಹಾಗೂ ವಿಶೇಷ ಪೂಜೆಗಳನ್ನು ನಡೆಸಲಾಯಿತು. ನಿತ್ಯವೂ ಲಕ್ಷಾಂತರ ಜನ ಭಕ್ತಾಧಿಗಳು ದೇವಿಯ ದರ್ಶನ್‌ ಪಡೆದಿದ್ದಾರೆ. ಅಕ್ಟೋಬರ್‌ 24ರಿಂದ ದೇವಸ್ಥಾನದ ಬಾಗಿಲು ತೆಗೆಯಲಾಗಿತ್ತು. ಅಕ್ಟೋಬರ್ 25ರಿಂದ ಭಕ್ತಾಧಿಗಳ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಅಂದಿನಿಂದ ಇಂದಿನ ವರೆಗೆ ಅಂದರೆ, ನವೆಂಬರ್ 3ರ ಬೆಳಿಗ್ಗೆ 6 ಗಂಟೆಯ ವರೆಗೆ ಲಕ್ಷಾಂತರ ಜನ ಭಕ್ತಾಧಿಗಳು ದೇವರ ದರ್ಶನ ಪಡೆದಿದ್ದಾರೆ.

ನಸುಕಿನ ಜಾವ 6 ಗಂಟೆಯವರೆಗೂ ಭಕ್ತರ ದರ್ಶನಕ್ಕೆ ಅವಕಾಶ ಮಾಡಲಾಗಿತ್ತು. ದೇವಸ್ಥಾನಕ್ಕೆ ಈ 11 ದಿನಗಳಲ್ಲಿ ಕೋಟ್ಯಾಂತರ ರೂಪಾಯಿ ಆದಾಯ ಬಂದಿದೆ.

ಕಳೆದ ವರ್ಷಕ್ಕಿಂತ ಹೆಚ್ಚು ಭಕ್ತಾಧಿಗಳಿಂದ ದರ್ಶನ: ಈ ಬಾರಿ ವಿವಾದಗಳ ಹೊರತಾಗಿಯೂ ಕಳೆದ ಬಾರಿಗಿಂತ ಹೆಚ್ಚು ಭಕ್ತಾಧಿಗಳು ದೇವಿಯ ದರ್ಶನ ಪಡೆದಿದ್ದಾರೆ. 2023ನೇ ಸಾಲಿನಲ್ಲಿ ನಡೆದ ಹಸನಾಂಬ ದೇವಿಯ ಉತ್ಸವಕ್ಕೆ 14 ಲಕ್ಷ ಜನ ಭಕ್ತಾಧಿಗಳು ಆಗಮಿಸಿದ್ದರು. ಈ ಬಾರಿ ಕಳೆದ ಬಾರಿಗಿಂತ ಹೆಚ್ಚು ಜನ ಅಂದರೆ, 18 ಲಕ್ಷಕ್ಕೂ ಹೆಚ್ಚು ಜನ ಭಕ್ತಾಧಿಗಳು ದೇವಿಯ ದರ್ಶನ ಪಡೆದುಕೊಂಡಿದ್ದಾರೆ.

ಬರೋಬ್ಬರಿ 9.3 ಕೋಟಿ ರೂ ಆದಾಯ: ಇನ್ನು ಈ ಬಾರಿ ದೇವಿಯ ದರ್ಶನಕ್ಕೆ ಲಕ್ಷಾಂತರ ಜನ ಬಂದಿದ್ದು. 9.3 ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿದೆ. ಇನ್ನು ಇಲ್ಲಿಯವರೆಗೆ ದೇವಾಲಯದ ಕಾಣಿಕೆ ಹುಂಡಿ ಹಾಗೂ ಹುಂಡಿಯಲ್ಲಿನ ಹಣವನ್ನು ಲೆಕ್ಕ ಹಾಕಿಲ್ಲ. ಇದು ಟಿಕೆಟ್‌ ಹಾಗೂ ಪ್ರಸಾದದಿಂದ ಸಂಗ್ರಹವಾಗಿರುವ ದುಡ್ಡು.

1000 ರೂಪಾಯಿ ಹಾಗೂ 300 ರೂಪಾಯಿಯ ಟಿಕೆಟ್‌ ಮಾರಾಟ ಹಾಗೂ ಲಡ್ಡು ಪ್ರಸಾದ ಮಾರಾಟದಿಂದಲೇ ಬರೋಬ್ಬರಿ 9.3 ಕೋಟಿ ಆದಾಯ ಸಂಗ್ರಹವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+