ಹ್ಯಾಪಿ ನ್ಯೂ ಇಯರ್ ಹೇಳಲು ಹೋಗಿ ಆಸ್ಪತ್ರೆ ಸೇರಿದ ಸುಂದರ ಹುಡುಗಿಯರು! ವಿಡಿಯೋ ನೋಡಿ... Happy New Year 2025
ಹ್ಯಾಪಿ ನ್ಯೂ ಇಯರ್.. ಹ್ಯಾಪಿ ನ್ಯೂ ಇಯರ್... ಅಂತಾ ಎಲ್ಲರೂ ಶುಭಾಶಯ ಹೇಳ್ತಿದ್ದಾರೆ. 2024 ಮುಗಿದು 2025 ಶುರುವಾಗಿದ್ದು, ಹೊಸ ವರ್ಷ ಆರಂಭವಾಗಿದೆ. ಹೀಗಾಗಿ ಜನ ಕೂಡ ವಿಶ್ ಮಾಡಿ ಶುಭಾಶಯ ಕೋರುತ್ತಿದ್ದಾರೆ. ಆದರೆ ಇಲ್ಲೊಂದು ವಿಡಿಯೋದಲ್ಲಿ, ನಾಲ್ವರು ಸುಂದರ ಯುವತಿಯರು ಹ್ಯಾಪಿ ನ್ಯೂ ಇಯರ್... ಅಂತಾ ಹೇಳಲು ಹೋಗಿ ಆಸ್ಪತ್ರೆ ಸೇರಿದ್ದು, ವಿಡಿಯೋ ಫುಲ್ ವೈರಲ್ ಆಗುತ್ತಿದೆ!
ಹೊಸ ವರ್ಷದಲ್ಲಿ ಕೆಲವರು ಎಣ್ಣೆ ಬಿಡುವ ನಿರ್ಧಾರ ಮಾಡಿದ್ದರೆ, ಇನ್ನೂ ಕೆಲವರು ಈ ದಿನ ಅಂದ್ರೆ ಹೊಸ ವರ್ಷದಿಂದಲೇ ಎಣ್ಣೆ ಹೊಡೆಯಲು ಶುರು ಮಾಡುವ ನಿರ್ಧಾರ ಕೂಡ ಮಾಡಿದ್ದಾರೆ. ಹೀಗೆ ಹೊಸ ವರ್ಷದಲ್ಲಿ ಏನಾದರೂ ಹೊಸ ಹೊಸ ಕೆಲಸ ಮಾಡುತ್ತಿದ್ದಾರೆ ಜನ. ಅಲ್ಲದೆ ಫುಲ್ ಜೋಶ್ ಅಲ್ಲಿ ರಾತ್ರಿ ಪೂರ್ತಿ ಪಾರ್ಟಿ ಮಾಡಿ, ಬೆಳಗ್ಗೆ ಎಣ್ಣೆ ಹ್ಯಾಂಗ್ ಓವರ್ ಆಗಿ ಆಫಿಸ್‌ಗೆ ಚಕ್ಕರ್ ಹಾಕುವ ಜನರು ಕೂಡ ಇದ್ದಾರೆ. ಹೀಗಿದ್ದಾಗ, ಹ್ಯಾಪಿ ನ್ಯೂ ಇಯರ್... ಹೇಳಲು ಹೋಗಿ ಸುಂದರ ಯುವತಿಯರು ಆಸ್ಪತ್ರೆಗೆ ಸೇರಿದ್ದು ಯಾಕೆ ಗೊತ್ತಾ?

ಹ್ಯಾಪಿ ನ್ಯೂ ಇಯರ್... ಹೇಳಲು ಹೋಗಿ!
ಹೌದು, ಹೊಸ ವರ್ಷದ ನೆಪದಲ್ಲಿ ಚನ್ನಾಗಿ ಕುಡಿದು ಮತ್ತಲ್ಲಿ ಹುಡುಗಿಯರು ತೂರಾಡುವ ವಿಡಿಯೋಗಳು ವೈರಲ್ ಆಗುತ್ತಿವೆ. ನಿನ್ನೆಯಿಂದ ಹಲವು ವಿಡಿಯೋಗಳು ವೈರಲ್ ಆಗುತ್ತಿವೆ. ಈ ರೀತಿಯ ವಿಡಿಯೋಗಳ ನಡುವೆ ಸುಂದರ ಹುಡುಗಿಯರ ಗುಂಪು ಒಂದು ಹ್ಯಾಪಿ ನ್ಯೂ ಇಯರ್... ಅಂತಾ ಕನ್ನಡಿಗರಿಗೆ ಕನ್ನಡದಲ್ಲೇ ವಿಶ್ ಮಾಡಲು ಹೋಗಿ ಆಸ್ಪತ್ರೆ ಸೇರಿದ್ದಾರೆ. ವಿಡಿಯೋ ಮುಂದೆ ಇದೆ ನೋಡಿ.
ನೋಡಿದ್ರಲ್ಲ ವಿಡಿಯೋ, ಈ ರೀತಿಯಾಗಿ ಬೈಕ್ & ಸ್ಕೂಟರ್ ಏರಿ ಹೊರಟ್ಟಿದ್ದ ಯುವತಿಯರ ತಂಡ ಹ್ಯಾಪಿ ನ್ಯೂ ಇಯರ್... ಅಂತಾ ಶುಭಾಶಯ ಕೋರಿ ವಿಶ್ ಮಾಡಿ ರೀಲ್ಸ್ ಅಪ್‌ಲೋಡ್ ಮಾಡುವ ಭರದಲ್ಲಿ ಆಕ್ಸಿಡೆಂಟ್ ಮಾಡಿಕೊಂಡಿದ್ದಾರೆ. ಒಂದು ಕಡೆ ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಪಡ್ಡೆ ಹೈಕ್ಳು ಪ್ರಶ್ನೆ ಕೇಳ್ತಾ ಇದ್ದಾರೆ!
ಮತ್ತೊಂದು ಕಡೆ ಜನರು ಈ ವಿಡಿಯೋ ಹಳೆಯದು ಅಂತಾ ಕೂಡ ಹೇಳುತ್ತಿದ್ದಾರೆ. ಇದೆಲ್ಲಾ ಏನೇ ಇರಲಿ, ಪಾಪಾ ಆ ಸುಂದರ ಯುವತಿಯರ ಗುಂಪು ಮುದ್ದು ಮುದ್ದಾಗಿ ಹ್ಯಾಪಿ ನ್ಯೂ ಇಯರ್... ಅಂತಾ ವಿಶ್ ಮಾಡುವಾಗಲೇ ಆಕ್ಸಿಡೆಂಟ್ ಆಗಬೇಕಿತ್ತಾ ದೇವರೇ? ಅಂತಾ ಈ ಸಮಯದಲ್ಲಿ ನಮ್ಮ ಪಡ್ಡೆ ಹೈಕ್ಳು ಪ್ರಶ್ನೆ ಕೇಳ್ತಾ ಇದ್ದಾರೆ!












Click it and Unblock the Notifications