ಮುಂದಿನ ಸಿಎಂ ಕುಮಾರಣ್ಣ, ಜೆಡಿಎಸ್ ಶಾಸಕಾಂಗ ಸಭೆಯಲ್ಲಿ ಕಂಡ ಕನಸು!

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 17: ಜಾತ್ಯಾತೀತ ಜನತಾ ದಳ(ಜೆಡಿಎಸ್) ಮತ್ತೆ ಅಧಿಕಾರಕ್ಕೆ ತಂದು, ಕುಮಾರಸ್ವಾಮಿ ಅವರು ಮತ್ತೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಕನಸನ್ನು ಶನಿವಾರದಂದು ಶಾಸಕಾಂಗ ಸಭೆಯಲ್ಲಿ ಕಾಣಲಾಯಿತು. ಮುಂದಿನ ವಿಧಾನಸಭೆ ಚುನಾವಣೆಯನ್ನು ಸಾಮೂಹಿಕ ನಾಯಕತ್ವದಲ್ಲಿ ಎದುರಿಸಲು ನಿರ್ಧರಿಸಿದರೂ, ಕುಮಾರಸ್ವಾಮಿ ಅವರನ್ನು ಸಿಎಂ ಅಭ್ಯರ್ಥಿಯಾಗಿ ಘೋಷಿಸಲಾಯಿತು.[ಮತ್ತೆ ಆಪರೇಷನ್ ಕಮಲ, ನಾಲ್ವರು ಶಾಸಕರು ಬಿಜೆಪಿಗೆ?]

2018ರ ವಿಧಾನಸಭೆ ಚುನಾವಣೆ ಎದುರಿಸಲು ಭಾರತೀಯ ಜನತಾ ಪಕ್ಷ ಸಿದ್ಧತೆ ನಡೆಸುತ್ತ್ತಿದ್ದು, ಏಪ್ರಿಲ್ 14ರಂದು ಮಾಜಿ ಮುಖ್ಯಮಂತ್ರಿ, ಸಂಸದ ಬಿಎಸ್ ಯಡಿಯೂರಪ್ಪ ಅವರನ್ನು ರಾಜ್ಯಾಧ್ಯಕ್ಷರಾಗಿ ನೇಮಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಈಗ ಜೆಡಿಎಸ್ ಸರದಿ. ಯಡಿಯೂರಪ್ಪ ಅವರ ಸರಿಸಾಟಿಯಾಗಿ ರಾಜ್ಯದೆಲ್ಲೆಡೆ ಪ್ರವಾಸ ಕೈಗೊಂಡು ಚುನಾವಣೆಯಲ್ಲಿ ಪಕ್ಷವನ್ನು ಮುನ್ನಡೆಸಲು ಕುಮಾರಸ್ವಾಮಿ ಅವರನ್ನು ನೇಮಿಸಲಾಗಿದೆ.

ಜಮೀರ್ ಅಹಮದ್, ಚೆಲುವರಾಯಸ್ವಾಮಿ, ಅಖಂಡ ಶ್ರೀನಿವಾಸ್‌ಮೂರ್ತಿ ಅವರ ಗೈರುಹಾಜರಿ ಬಗ್ಗೆ ವ್ಯಂಗ್ಯವಾಗಿ ಪ್ರತಿಕ್ರಿಯಿಸುತ್ತಾ, ಒಬ್ಬರಿಗೆ ಪೈಲ್ಸ್ ಆಗಿದ್ದರೆ, ಇನ್ನೊಬ್ಬರಿಗೆ 104 ಡಿಗ್ರಿ ಜ್ವರ... ಮಗದೊಬ್ಬರಿಗೆ ಆರೋಗ್ಯ ಸರಿಯಿಲ್ಲ ಎಂದು ಕುಮಾರಸ್ವಾಮಿ ಹೇಳಿದರು. [ಸಭೆಯ ಪೂರ್ಣ ವರದಿ ಇಲ್ಲಿ ಓದಿ]

H D Kumaraswamy named as CM candidate for JD(S)

ಭಿನ್ನಮತ ಶಮನಗೊಳಿಸಿ, ಪಕ್ಷವನ್ನು ಸಂಘಟಿಸಿ, ಪಕ್ಷವನ್ನು ಮುನ್ನಡೆಸುವ ಹೊಣೆಗಾರಿಕೆಯನ್ನು ಕುಮಾರಸ್ವಾಮಿ ಅವರಿಗೆ ನೀಡಲಾಗಿದೆ.ಈ ತಿಂಗಳೊಳಗೆ ಬೂತ್ ಮಟ್ಟದಿಂದ ರಾಜ್ಯಮಟ್ಟದವರೆಗೆ ಪದಾಧಿಕಾರಿಗಳನ್ನು ಪುನರ್​ನೇಮಕ ಮಾಡುವ ಜವಾಬ್ದಾರಿಯೂ ಕುಮಾರಸ್ವಾಮಿ ಅವರ ಹೆಗಲೇರಿದೆ.[ಬದುಕಿರುವವರೆಗೆ ಸಹೋದರ ರೇವಣ್ಣನ ಜೊತೆ ಜಗಳವಾಡಲ್ಲ]

ಚಲುರಾಯಸ್ವಾಮಿ, ಜಮೀರ್ ಅಹಮ್ಮದ್, ಪುಟ್ಟಣ್ಣ ಅವರೊಂದಿಗೆ ಗುರುತಿಸಿಕೊಂಡಿದ್ದ ಮಾಗಡಿ ಶಾಸಕ ಬಾಲಕೃಷ್ಣ ಸಭೆಯಲ್ಲಿ ಕಾಣಿಸಿಕೊಂಡರು. ಕಾಂಗ್ರೆಸ್​ನಿಂದ ಉಚ್ಚಾಟನೆಗೊಂಡಿರುವ ದೇವರ ಹಿಪ್ಪರಗಿ ಕ್ಷೇತ್ರದ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರು ಬೆಂಗಳೂರಿನಲ್ಲಿ ನಡೆದ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಗೆ ಬಂದು ಅಚ್ಚರಿ ಮೂಡಿಸಿದರು.

ಉಳಿದಂತೆ ಶಾಸಕರಾದ ಇಕ್ಬಾಲ್ ಅನ್ಸಾರಿ, ಅಪ್ಪಾಜಿಗೌಡ, ಬಸವರಾಜ ಹೊರಟ್ಟಿ, ಮಾನಪ್ಪ ಮಜ್ಜದ್, ಶಿವರಾಜಪಾಟೀಲ್, ಕೃಷ್ಣರೆಡ್ಡಿ, ಅಖಂಡ ಶ್ರೀನಿವಾಸ್​ವುೂರ್ತಿ, ಸಂದೇಶ್ ನಾಗರಾಜು, ಸುಧಾಕರರಾವ್, ಮಲ್ಲಿಕಾರ್ಜುನ ಅವರು ಅನಾರೋಗ್ಯದ ಕಾರಣ ನೀಡಿ ಗೈರು ಹಾಜರಾಗಿದ್ದರು.

ಚಾಮುಂಡಿ ತಾಯಿ ದರ್ಶನ: ರಾಜ್ಯದಲ್ಲಿ ಭೀಕರ ಬರ ಪರಿಸ್ಥಿತಿ ಇದೆ. ಜನರ ಹಿತ ಕಾಯುವಂತೆ ಬೆಟ್ಟದ ತಾಯಿ ಚಾಮುಂಡೇಶ್ವರಿಯಲ್ಲಿ ಬೇಡಿಕೊಂಡಿರುವುದಾಗಿ ಕುಮಾರಸ್ವಾಮಿ ಹೇಳಿದರು. ಭಾನುವಾರ ಬೆಳಗ್ಗೆ ಮೈಸೂರಿನ ದೇಗುಲಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು. 2018ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಉತ್ತಮ ಫಲಿತಾಂಶ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In a swift reaction to BJP's move of placing former Chief Minister B S Yeddyurappa in the helm of state affairs, the JD(S) has unanimously selected it's state chief, H D Kumaraswamy as chief ministerial candidate for 2018 assembly elections.
Please Wait while comments are loading...