ಬೇಕಾಬಿಟ್ಟಿ ಗ್ಯಾರಂಟಿ ಘೋಷಿಸಿದ ಕಾಂಗ್ರೆಸ್ ಸರ್ಕಾರ: ಬಿಜೆಪಿ!

ಬೆಂಗಳೂರು: ಕಾಂಗ್ರೆಸ್ & ಬಿಜೆಪಿ ಮಧ್ಯೆ ಗ್ಯಾರಂಟಿ ವಾರ್ ಮುಗಿಯುವ ಲಕ್ಷಣ ಕಾಣ್ತಿಲ್ಲ. ಇಷ್ಟುದಿನ ಗ್ಯಾರಂಟಿ ಘೋಷಣೆ ಮಾಡುತ್ತಿಲ್ಲ ಅಂತಾ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ಬಿಜೆಪಿ, ಇದೀಗ ಗ್ಯಾರಂಟಿ ಘೋಷಣೆ ಮಾಡಿದ್ರೂ ಗರಂ ಆಗುತ್ತಿದೆ. ಬೇಕಾಬಿಟ್ಟಿ ಗ್ಯಾರಂಟಿ ಘೋಷಿಸಿದ ಕಾಂಗ್ರೆಸ್ ಸರ್ಕಾರ ಅಂತಾ ಬಿಜೆಪಿ ಆರೋಪಿಸಿದೆ.

ಹೌದು, 2024ರ ಲೋಕಸಭೆ ಚುನಾವಣೆಗೆ ಇನ್ನೇನು ಕೆಲವೇ ತಿಂಗಳು ಬಾಕಿ. ಇದು ಬಿಜೆಪಿ & ಕಾಂಗ್ರೆಸ್ ಎರಡೂ ಪಕ್ಷಗಳಿಗೆ ಚೆನ್ನಾಗಿ ಗೊತ್ತು. ಈ ಕಾರಣಕ್ಕೆ ಜನರಿಗೆ ಸಿಕ್ಕ ಗ್ಯಾರಂಟಿ ಯೋಜನೆಗಳನ್ನ ಇಟ್ಕೊಂಡು ರಾಜಕೀಯ ಮಾಡುತ್ತಿರುವ ಆರೋಪ ಈಗ ಕೇಳಿಬರುತ್ತಿದೆ. ಒಂದ್ಕಡೆ ಕಾಂಗ್ರೆಸ್ ಗ್ಯಾರಂಟಿ ಯೋಜನೆ ಮೂಲಕ ಜನರ ಗಮನವನ್ನು ಸೆಳೆಯುತ್ತಿದ್ದರೆ, ಇನ್ನೊಂದು ಕಡೆ ಬಿಜೆಪಿ ನಾಯಕರು ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಬಗ್ಗೆ ವಾಗ್ದಾಳಿ ನಡೆಸಿ ಮತ ಸೆಳೆಯಲು ನೋಡುತ್ತಿದ್ದಾರೆ ಅನ್ನೋ ಆರೋಪವಿದೆ. ಈ ಮಧ್ಯೆ ಕಾಂಗ್ರೆಸ್ ಸರ್ಕಾರದ ಯೋಜನೆಯನ್ನ 'ಬೇಕಾಬಿಟ್ಟಿ ಗ್ಯಾರಂಟಿ' ಅಂತಿದೆ ಬಿಜೆಪಿ!

Guarantee war between Congress & BJP is reached next level

ಹಣಕಾಸು ಇಲಾಖೆ ಅಸಹಾಯಕ!

ಟ್ವೀಟ್ ಮೂಲಕ ಬಿಜೆಪಿ & ಕಾಂಗ್ರೆಸ್ ಕಚ್ಚಾಟ ಜೋರಾಗಿದೆ. ಎರಡೂ ಪಕ್ಷಗಳ ಮಧ್ಯೆ ಈ ವೇಳೆ ಟ್ವೀಟ್ ಮಹಾಯುದ್ಧವೇ ಆರಂಭವಾಗಿದೆ. ಈಗ ಸಿಎಂ ಸಿದ್ದರಾಮಯ್ಯ ಸರ್ಕಾರದ ಗ್ಯಾರಂಟಿಗಳ ಬಗ್ಗೆ, 'ಬೇಕಾಬಿಟ್ಟಿ ಗ್ಯಾರಂಟಿಗಳನ್ನು ಘೋಷಿಸಿದ @INCKarnataka ಸರ್ಕಾರ ಅನುಷ್ಠಾನ ಮಾಡುವುದಕ್ಕೆ ಪತರುಗುಟ್ಟಿದೆ. ಹಣಕಾಸು ಇಲಾಖೆ ಅಸಹಾಯಕವಾಗಿದೆ. ಹಣ ಕ್ರೋಢೀಕರಣದ ಬಗ್ಗೆ ಶ್ವೇತ ಪತ್ರ ಹೊರಡಿಸಲು, ಆ ಮಾರ್ಗ ಯಾವುದೆಂದು ಉತ್ತರಿಸಲು @BJP4Karnataka ಆಗ್ರಹಿಸುತ್ತಲೇ ಇದೆ. ಆದರೆ, ಸಿಎಂ @siddaramaiah ಸರ್ಕಾರ ಮೌನಕ್ಕೆ ಜಾರಿದೆ.' ಎದು ಕಮಲ ಪಡೆ ಬಿಜೆಪಿ ಆರೋಪಿಸಿದೆ.

ಬಿಜೆಪಿ ವಿರುದ್ಧ ಕಾಂಗ್ರೆಸ್ ಅಸ್ತ್ರ!

ಅತ್ತ ಬಿಜೆಪಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಹಲವು ಆರೋಪ ಮಾಡಿ ಟ್ವೀಟ್ ಅಸ್ತ್ರ ಪ್ರಯೋಗ ಮಾಡ್ತಿದೆ. ಅದೇ ರೀತಿ ಕಾಂಗ್ರೆಸ್ ಕೂಡ ಬಿಜೆಪಿ ವಿರುದ್ಧ ಪ್ರತ್ಯಸ್ತ್ರ ಪ್ರಯೋಗ ಮಾಡುತ್ತಿದೆ. 'ಹಾಲು ಉತ್ಪಾದಕರಿಗೆ ಯಾವುದೇ ಪ್ರೋತ್ಸಾಹಧನ ಕಡಿತಗೊಳಿಸುವ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಸಿಎಂ ಕೆಎಂಎಫ್ ನಿರ್ದೇಶಕರಿಗೆ ಆದೇಶಿಸಿದ್ದಾರೆ. ವಿಶೇಷ ಪ್ರೋತ್ಸಾಹಧನವನ್ನು ಸ್ಥಗಿತಗೊಳಿಸುವ ಬಮೂಲ್ ನಿರ್ಧಾರವನ್ನು ಹಿಂಪಡೆಯಲಿದೆ. ಜನರ ಹಿತವೇ ಕಾಂಗ್ರೆಸ್ ಧ್ಯೇಯ' ಎಂದು ಬಿಜೆಪಿ ನಿನ್ನೆ ಮಾಡಿದ್ದ ಆರೋಪಕ್ಕೆ ರೀಪ್ಲೇ ಕೊಟ್ಟಿದೆ.

2024ರ ತನಕ ಟ್ವೀಟ್ ವಾರ್?

ಹೀಗೆ ಕಾಂಗ್ರೆಸ್ & ಬಿಜೆಪಿ ಮಧ್ಯೆ ನಡೆಯುತ್ತಿರುವ ಗ್ಯಾರಂಟಿ ವಾರ್ 2024ರ ತನಕವೂ ನಿಲ್ಲುವ ಸಾಧ್ಯತೆ ಇಲ್ಲ. ಮೊದಲೇ ಹೇಳಿದಂತೆ ಕಾಂಗ್ರೆಸ್ ಇದೇ ಗ್ಯಾರಂಟಿಗಳ ಆಧಾರ ಇಟ್ಟುಕೊಂಡು ಲೋಕಸಭೆ ಚುನಾವಣೆಗೆ ಸಜ್ಜಾಗುತ್ತಿದೆ, ಅದೇ ರೀತಿ ಈ ಕಡೆ ಕಾಂಗ್ರೆಸ್‌ನ ಗ್ಯಾರಂಟಿಗಳ ವಿರುದ್ಧ ವಾಗ್ದಾಳಿ ನಡೆಸುತ್ತಾ ಬಿಜೆಪಿ ಲೋಕಸಭೆ ಚುನಾವಣೆಗೆ ತಯಾರಿ ನಡೆಸುತ್ತಿದೆ. ಹೀಗಾಗಿ ಇವರ ನಡುವೆ ಟ್ವಿಟ್ಟರ್‌ ವಾರ್ ಮುಂದುವರಿಯೋದು ಗ್ಯಾರಂಟಿ. ಸೋಷಿಯಲ್ ಮೀಡಿಯಾಗೂ ಗ್ಯಾರಂಟಿ ವಾರ್ ಬಿಸಿ ತಟ್ಟುತ್ತಿದ್ದು, ಚರ್ಚೆ ಕೂಡ ಬಲು ಜೋರಾಗಿದೆ.

Guarantee war between Congress & BJP is reached next level

ಇದಕ್ಕೆ ಜನರ ರಿಯಾಕ್ಷನ್ ಏನು?

ಒಟ್ನಲ್ಲಿ ಹೊಸ ಸರ್ಕಾರ ಬಂದು, ಸಿಎಂ ಸಿದ್ದರಾಮಯ್ಯ ಗ್ಯಾರಂಟಿ ಘೋಷಣೆ ಮಾಡಿದ್ರು ವಾಗ್ದಾಳಿ ಮುಂದುವರಿದಿಲ್ಲ. ರಾಜ್ಯದಲ್ಲಿ ಬೇರೆ ಬೇರೆ ಸಮಸ್ಯೆಗಳು ಇರುವಾಗಲೇ ಗ್ಯಾರಂಟಿ ವಿಚಾರ ಬಿಟ್ಟು ಬೇರೆ ಏನೂ ಚರ್ಚೆ ಆಗುತ್ತಿಲ್ಲ. ಜನರು ಕೂಡ ಈ ಬಗ್ಗೆ ತಮ್ಮ ಬೇಸರ ಹೊರಹಾಕುತ್ತಿದ್ದಾರೆ. ಮುಂದಿನ ದಿನಗಳಲ್ಲಾದರೂ ಈ ಮಾತಿನ ಮಲ್ಲಯುದ್ಧ ನಿಲ್ಲುತ್ತಾ? ಕಾದು ನೋಡಬೇಕು. ಹಾಗೇ ಅಕಸ್ಮಾತ್ ಇದೇ ಗ್ಯಾರಂಟಿ ವಿಚಾರ ಮುಂದಿನ ಚುನಾವಣೆಗೆ ರಾಜಕೀಯ ವಸ್ತುವಾಗಿ ಉಳಿದರೆ ಕಷ್ಟ ಕಷ್ಟ ಅಂತಿದ್ದಾರೆ ಸೋಷಿಯಲ್ ಮೀಡಿಯಾದ ಬಳಕೆದಾರರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+