• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಿಬಿಐ ತನಿಖೆ ಆಗ್ರಹಕ್ಕೆ ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ ತಿರುಗೇಟು!

|
Google Oneindia Kannada News

ಬೆಂಗಳೂರು, ಸೆ. 12: ಸರ್ಕಾರಿ ಉಪಕರಣಾಗಾರ ಹಾಗೂ ತರಬೇತಿ ಕೇಂದ್ರ (ಜಿಟಿಟಿಸಿ)ದ ಟೆಂಡರ್‌ನಲ್ಲಿ ಅಕ್ರಮ ನಡೆದಿದೆ ಎಂದು ಸುಳ್ಳು ಆರೋಪ ಮಾಡಿರುವ ಕಾಂಗ್ರೆಸ್ ನಾಯಕರಾದ ವಿ.ಎಸ್. ಉಗ್ರಪ್ಪ ಹಾಗೂ ಎಚ್.ಎಂ. ರೇವಣ್ಣ ಅವರಿಗೆ ಕಾನೂನು ಮೂಲಕವೇ ಉತ್ತರ ಕೊಡುತ್ತೇನೆ ಎಂದು ಕೌಶಲ್ಯಾಭಿವೃದ್ಧಿ ಸಚಿವ ಡಾ.ಸಿ.ಎನ್. ಅಶ್ವಥ್ ನಾರಾಯಣ ಹೇಳಿದ್ದಾರೆ. ಒಬ್ಬರು ಮಾಜಿ ಸಚಿವರು, ಇನ್ನೊಬ್ಬರು ಮಾಜಿ ಸಂಸದರು. ಮಾಜಿ ಸಂಸದರು ವಕೀಲರೂ ಹೌದು. ಆದರೂ ಇಷ್ಟು ಬೇಜವಾಬ್ದಾರಿಯಾಗಿ ಆರೋಪ ಮಾಡಿರುವ ಅವರಿಗೆ ಲೀಗಲ್ ನೋಟೀಸ್ ಕೊಡುತ್ತೇನೆ ಎಚ್ಚರಿಸಿದ್ದಾರೆ.

ರಾಜಕೀಯವಾಗಿ ದೂರುವ, ಗಾಳಿಯಲ್ಲಿ ಗುಂಡು ಹೊಡೆಯುವ ಕೀಳುಮಟ್ಟದ ಆರೋಪವಾಗಿದೆ. ಅಲ್ಲದೆ, ನಮಗೆ ಮಸಿ ಬಳಿಯುವ ದುರುದ್ದೇಶವಷ್ಟೇ. ಉಪಕರಣ ಖರೀದಿಯಲ್ಲಿ ಕೋಟ್ಯಂತರ ರೂ. ಅಕ್ರಮ ನಡೆದಿದೆ ಎಂಬುದು ಶುದ್ಧ ಸುಳ್ಳು ಎಂದು ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ ತಿರುಗೇಟು ಕೊಟ್ಟಿದ್ದಾರೆ.

ಅಷ್ಟಕ್ಕೂ ಟೆಂಡರ್‌ನಲ್ಲಿ ಅಕ್ರಮ ನಡೆದಿಲ್ಲ, ಕಿಕ್‌ಬ್ಯಾಕ್‌ ಮಾತೇ ಇಲ್ಲ ಎಂದು ಡಾ. ಅಶ್ವಥ್ ನಾರಾಯಣ ಕೊಟ್ಟಿರುವ ಸ್ಪಷ್ಟನೆಯಲ್ಲಿ ಏನೇನಿದೆ? ಮುಂದಿದೆ ಮಾಹಿತಿ!

ಅತ್ಯಂತ ಪಾರದರ್ಶಕ ಪ್ರಾಮಾಣಿಕ ಟೆಂಡರ್ ಪ್ರಕ್ರಿಯೆ

ಅತ್ಯಂತ ಪಾರದರ್ಶಕ ಪ್ರಾಮಾಣಿಕ ಟೆಂಡರ್ ಪ್ರಕ್ರಿಯೆ

ಟೆಂಡರ್ ಪ್ರಕ್ರಿಯೆ ಅತ್ಯಂತ ಪಾರದರ್ಶಕವಾಗಿ, ಪ್ರಾಮಾಣಿಕವಾಗಿ ನಡೆದಿದೆ. ಎಡಿಎ (Aeronautical Development Agency), ಡಿಆರ್ʼಡಿಒ (Defence Research and Development Organisation) ಹಾಗೂ ಎಂಎಸ್ʼಎಂಇ (Ministry of Micro, Small and Medium Enterprises) ಸಂಸ್ಥೆಗಳ ವಿಜ್ಞಾನಿಗಳು ಮತ್ತು ಅಧಿಕಾರಿಗಳು ಟೆಂಡರ್ ತಾಂತ್ರಿಕ ಸಮಿತಿಯ ಸದಸ್ಯರು. ಅವರ ಸಲಹೆ ಮೇಲೆಯೇ ಎಲ್ಲವೂ ನಡೆಯುವುದು ಎಂದು ಡಾ. ಅಶ್ವಥ್‌ ನಾರಾಯಣ ವಿವರಿಸಿದ್ದಾರೆ.

ಬಹುತೇಕ‌ ಉಪಕರಣಗಳನ್ನು ಕೇಂದ್ರ ಸರಕಾರಿ ಸ್ವಾಮ್ಯದ ಎಚ್‌ಎಂಟಿ ಸಂಸ್ಥೆಯಿಂದ ಖರೀದಿ ಮಾಡಲಾಗುತ್ತಿದೆ. ಅದೂ ಟೆಂಡರ್ ಮೂಲಕ ಪಾರದರ್ಶಕವಾಗಿ ನಡೆಯುತ್ತದೆ ಎಂದು ವಿವರಿಸಿದ್ದಾರೆ.

ಕಿಕ್‌ಬ್ಯಾಕ್, ಫುಲ್‌ಬ್ಯಾಕ್ ಕಾಂಗ್ರೆಸ್ ಸಂಸ್ಕೃತಿ

ಕಿಕ್‌ಬ್ಯಾಕ್, ಫುಲ್‌ಬ್ಯಾಕ್ ಕಾಂಗ್ರೆಸ್ ಸಂಸ್ಕೃತಿ

ಕಿಕ್‌ಬ್ಯಾಕ್ ತೆಗೆದುಕೊಂಡು ಖರೀದಿ ಮಾಡಲಾಗಿದೆ ಎಂಬ ಕಾಂಗ್ರೆಸ್ ನಾಯಕರ ಆರೋಪಕ್ಕೆ, ಕಿಕ್‌ಬ್ಯಾಕ್, ಫುಲ್‌ಬ್ಯಾಕ್ ಎನ್ನುವುದು ಕಾಂಗ್ರೆಸ್ ನಾಯಕರ ಸಂಸ್ಕೃತಿ. ನಮ್ಮದೇನಿದ್ದರೂ ಕಾಯಕ ಸಂಸ್ಕೃತಿ. ಚೆನ್ನಾಗಿ ಕೆಲಸ ಮಾಡುತ್ತಿರುವವರ ಮೇಲೆ ಕೆಸರು ಚೆಲ್ಲುವುದು ಕೂಡ ಅವರ ಹೀನ ರಾಜಕೀಯಕ್ಕೆ ಹಿಡಿದ ಕನ್ನಡಿ ಎಂದು ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ ಅವರು ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ.

ವೃಥಾ ಯಾರೂ ಆರೋಪ ಮಾಡಬಾರದು. ದಾಖಲೆಗಳನ್ನು ಇಟ್ಟುಕೊಂಡು ದೂರಬೇಕು ಎಂದು ಡಾ. ಅಶ್ವಥ್ ನಾರಾಯಣ ತಿಳಿಸಿದ್ದಾರೆ.

ಟೆಂಡರ್ ಅಕ್ರಮ: ಸಿಬಿಐ ತನಿಖೆಗೆ ಕಾಂಗ್ರೆಸ್ ಆಗ್ರಹ!

ಟೆಂಡರ್ ಅಕ್ರಮ: ಸಿಬಿಐ ತನಿಖೆಗೆ ಕಾಂಗ್ರೆಸ್ ಆಗ್ರಹ!

ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರಗಳಿಗೆ ವಸ್ತುಗಳ ಖರೀದಿಯಲ್ಲಿ ಅಕ್ರಮವಾಗಿ ಟೆಂಡರ್ ಕರೆಯಲಾಗಿದ್ದು, ಅದನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಕಾಂಗ್ರೆಸ್ ನಾಯಕರು ಸುದ್ದಿಗೋಷ್ಠಿ ಮಾಡಿ, ದಾಖಲೆ ಬಿಡುಗಡೆ ಮಾಡಿ ಆರೋಪಿಸಿದ್ದರು. ಜೊತೆಗೆ ಟೆಂಡರ್‌ನಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ ಅವರಿಗೆ ಕಿಕ್‌ಬ್ಯಾಕ್ ಸಿಕ್ಕಿದೆ ಎಂದು ಗಂಭೀರ ಆರೋಪ ಮಾಡಿದ್ದರು. ಇದೀಗ ಕಾಂಗ್ರೆಸ್ ನಾಯಕರ ಆರೋಪಕ್ಕೆ ಡಾ. ಅಶ್ವಥ್ ನಾರಾಯಣ ಅವರು ಕಾನೂನು ಕ್ರಮದ ಎಚ್ಚರಿಕೆ ಕೊಟ್ಟಿದ್ದಾರೆ.

  ನೆಟ್ ಪ್ರಾಕ್ಟೀಸ್ ನಲ್ಲಿ ನಿರತರಾಗಿರುವ Mr.360 | Oneindia Kannada
   ಕಾಂಗ್ರೆಸ್ ನಾಯಕರ ಆಗ್ರಹ

  ಕಾಂಗ್ರೆಸ್ ನಾಯಕರ ಆಗ್ರಹ

  ಹೀಗೆ ಮೂವರು ಅಧಿಕಾರಿಗಳು ರಾಜ್ಯ ಸರ್ಕಾರದ ಬೆಕ್ಕಸವನ್ನು ಲೂಟಿ ಮಾಡುತ್ತಿದ್ದಾರೆ. ಈ ತಿಮಿಂಗಲಗಳನ್ನು ಪೋಷಣೆ ಮಾಡುತ್ತಿರುವುದು ಡಾ. ಅಶ್ವಥ್ ನಾರಾಯಣ್ ಅವರು ಎಂದು ಆರೋಪಿಸಿರುವ ಕಾಂಗ್ರೆಸ್ ನಾಯಕರು, ಅಶ್ವಥ್ ನಾರಾಯಣ ಅವರೇ ನಿಮಗೂ ಆ ಅಧಿಕಾರಿ ರಘುನಾಥ್ ಅವರಿಗೂ ಇರುವ ಸಂಬಂಧ ಏನು? ಎಂದು ಗಂಭೀರ ಪ್ರಶ್ನೆ ಮಾಡಿದ್ದಾರೆ.

  ಜೊತೆಗೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಕಾಂಗ್ರೆಸ್ ನಾಯಕರು ಆಗ್ರಹಿಸಿದ್ದಾರೆ.

  English summary
  GTTC Tender: legal answer to false allegations CN Ashwath Narayana clarification. Know more.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X