ದಳಪತಿಗಳಿಗೆ ಶಾಕ್;‌ ಜಿ ಟಿ ದೇವೇಗೌಡರು ಕಾಂಗ್ರೆಸ್‌ ಸೇರ್ಪಡೆ ಕುರಿತು ಮಹತ್ವದ ಮಾಹಿತಿ

ಶಿವಮೊಗ್ಗ, ನವೆಂಬರ್‌ 15: 2024 ರ ಲೋಕಸಭಾ ಚುನಾವಣೆಯನ್ನ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ ನ ಅಸಾಧಾನಗೊಂಡ ಬಿಜೆಪಿ ಹಾಗೂ ಜೆಡಿಎಸ್‌ ನಾಯಕರಿಗೆ ಗಾಳ ಹಾಕುತ್ತಿದೆ.

ಹೌದು, ಈ ಹಿಂದೆ ನಡೆದ ವಿಧಾನಸಭಾ ಚುನಾವನೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಅವರು ವಿಧಾನಸಭೆ ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಸೇರುತ್ತಾರೆ ಎಂದು ಭಾರೀ ಚರ್ಚೆಗಳು ನಡೆದಿದ್ದವು. ಆದರೆ, ಪಕ್ಷದ ವರಿಷ್ಠ ಹೆಚ್​ಡಿ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ಅವರು ಜಿಟಿ ದೇವೇಗೌಡರ ಜೊತೆ ಮಾತುಕತೆ ನಡೆಸಿ ಪಕ್ಷದಲ್ಲೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.

GT Devegowda Joins Congress In A Few Days Says Minister Madhu Bangarappa

ಇನ್ನೂ ಲೋಕಸಭಾ ಚುನಾವಣೆಯ ಹೊತ್ತಲಿ ಮತ್ತೆ ಮುನ್ನಲೇಗೆ ಬಂದ ಆಪರೇಷನ್‌ ಹಸ್ತದಿಂದ ಇದೀಗ ಮತ್ತೆ ಜಿಟಿ ದೇವೇಗೌಡ ಕಾಂಗ್ರೆಸ್ ಸೇರುತ್ತಾರೆ ಎಂಬ ಚರ್ಚೆಗಳು ಶುರುವಾಗಿದ್ದು, ಕಾಂಗ್ರೆಸ್‌ ಸಚಿವ ಮಧು ಬಂಗಾರಪ್ಪ ಅವರು ಜೆಡಿಎಸ್‌ ಹಿರಿಯ ನಾಯಕ ಕಾಂಗ್ರೆಸ್‌ ಸೇರ್ಪಡಯಾಗಲಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.

ಈ ಕುರಿತು ಮಂಗಳವಾರ ಶಿವಮೊಗ್ಗದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಮಧು ಬಂಗಾರಪ್ಪ, ಕಾಂಗ್ರೆಸ್‌ ಪಕ್ಷಕ್ಕೆ ಈಗಾಗಲೇ ಕೆಲವರು ಸೇರ್ಪಡೆಯಾಗಿದ್ದಾರೆ. ಕೆಲವೇ ದಿನಗಳಲ್ಲಿ ಜಿ.ಟಿ.ದೇವೇಗೌಡ ಕಾಂಗ್ರೆಸ್ ಪಕ್ಷ ಸೇರುತ್ತಾರೆ. ಅವರು ನಮಗೆ ಬಹಳ ಹಳಬರು, ಸ್ವಲ್ಪ ದಿನ ದೂರವಾಗಿದ್ದರು. ಈಗ ಮತ್ತೆ ಪಕ್ಷಕ್ಕೆ ಹತ್ತಿರವಾಗಲಿದ್ದಾರೆ. ನಮ್ಮ ಹತ್ತಿರವೇ ಇರುವ ಹಾಗೆ ನೋಡಿಕೊಳ್ಳುತ್ತಿದ್ದೇವೆ ಎಂದು ಹೇಳಿದ್ದಾರೆ.

ಕಳೆದ ಹಲವು ದಿನಗಳಿಂದ ರಾಜ್ಯ ರಾಜಕಾರಣದಲ್ಲ ಆಪರೇಷನ್‌ ಹಸ್ತದ ವಿಚಾರ ಸಾಕಷ್ಟು ಚರ್ಚೆಯಲ್ಲಿದ್ದು, ಬಿಜೆಪಿ ಹಾಗೂ ಜೆಡಿಎಸ್‌ ನ ಅಸಮಾಧಾನಿತ ಹಲವು ನಾಯಕರುಗೆ ಕಾಂಗ್ರೆಸ್‌ ಈಗಾಗಲೇ ಗಾಳ ಹಾಕುತ್ತಿದೆ. ಈ ಹಿಂದೆಯೂ ಸಹ ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ಅವರು ನಮ್ಮ 19 ಶಾಸಕಿರ ಪೈಕಿ 13 ಜನ ಶಾಸಕರನ್ನ ಸಂಪರ್ಕಿಸಿದೆ ಎಂದು ಕಾಂಗ್ರೆಸ್‌ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ರು.

ಅಲ್ಲದೇ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆಗಿನ ಮೈತ್ರಿಯಿಂದ ಹಲವು ನಾಯಕರು ಅಸಮಾಧಾನದಿಂದಾಗಿ ಕಾಂಗ್ರೆಸ್‌ ನತ್ತ ತೆರಳಲು ಮುಂದಾಗಿದ್ದಾರೆ. ಇನ್ನೂ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್‌ ರಾಜ್ಯಾಧ್ಯಕ್ಷ ಹೆಚ್‌ ಡಿ ಕುಮಾರಸ್ವಾಮಿ ಅವರು ಇತ್ತೀಚೆಗಷ್ಟೇ ಹಾಸನದಲ್ಲಿರುವ ಹಾಸನಾಂಬೆ ದೇವಾಲಯಕ್ಕೆ ಭೇಟಿ ನೀಡಿದ್ದ ಜಿಟಿ ದೇವೇಗೌಡ ಮತ್ತಿತರರು ಪಕ್ಷ ಬಿಡಲ್ಲ ಎಂಬ ಆಣೆ ಪ್ರಮಾಣ ಮಾಡಿದ್ದಾರೆ ಎನ್ನಲಾಗಿತ್ತು. ಆದರೆ, ಪಕ್ಷ ಬಿಡುವುದಿಲ್ಲ ಎಂಬ ಕುರಿತು ಆಣೆ ಪ್ರಮಾಣ ಮಾಡಿಲ್ಲ. ಪಕ್ಷ ಕಟ್ಟುವ ಬಗ್ಗೆ ಪ್ರತಿಜ್ಞೆ ಮಾಡಿದ್ದೇವೆ ಎಂದು ಮಾಜಿ ಸಚಿವ ಹಾಗೂ ಜೆಡಿಎಸ್‌ ನಾಯಕ ಜಿ ಟಿ ದೇವೇಗೌಡ ಅವರು ಹೇಳಿದ್ದರು.

ಇನ್ನೂ ಜೆಡಿಎಸ್‌ ನ ಇಬ್ಬರು ಮಾಜಿ ಶಾಸಕರಾದ ಡಿ ಸಿ ಗೌರಿಶಂಕರ್‌ ಹಾಗೂ ಮಂಜುನಾಥ್‌ ಅವರು ಕಾಂಗ್ರೆಸ್‌ ಸೇರ್ಪಡೆಯಾಗುವುದು ಖಚಿತವಾಗಿದ್ದು, ಇಂದು(ಬುಧವಾರ) ಅಧಿಕೃತವಾಗಿ ಕಾಂಗ್ರೆಸ್ಪಕ್ಷ ಸೇರ್ಪಡೆಯಾಗಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+