'ಗೃಹ ಲಕ್ಷ್ಮಿ' ಫಲಾನುಭವಿಗಳಿಗೆ ಬಾಕಿ ಕಂತು ಜಮೆ ಯಾವಾಗ: ಲಕ್ಷ್ಮಿ ಹೆಬ್ಬಾಳ್ಕರ್ ಕೊಟ್ರು ಅಪ್ಡೇಟ್
ಬೆಂಗಳೂರು, ಸೆಪ್ಟಂಬರ್ 10: ರಾಜ್ಯ ಮಹಿಳೆಯರನ್ನು ಆರ್ಥಿಕವಾಗಿ ಸಬಲವಾಗಿಸಲು ಅವರ ಖಾತೆ ರಾಜ್ಯ ಕಾಂಗ್ರೆಸ್ ಸರ್ಕಾರ ಮಾಸಿಕವಾಗಿ 2000 ರೂ. ಹಣ ನೀಡುವ ಗೃಹ ಲಕ್ಷ್ಮೀ ಯೋಜನೆ ಜಾರಿಗೆ ತಂದಿತ್ತು. ಯೋಜನೆ ಅನುಷ್ಠಾನ ಬಳಿಕ ಸರ್ಕಾರ ವಿಪಕ್ಷಗಳಿಂದ ಅನೇಕ ಟೀಕೆಗಳನ್ನು ಎದುರಿಸಿದೆ. ಯೋಜನೆ ನಿಲ್ಲಿಸಲಾಗುತ್ತದೆ ಎಂದೆಲ್ಲ ಬಿಜೆಪಿ, ಜೆಡಿಎಸ್ ಟೀಕಿಸಿತ್ತು. ಇದಕ್ಕೆ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ ನೀಡುವ ಜೊತೆಗೆ ಮಹಿಳೆಯರಿಗೆ ಖುಷಿ ಸುದ್ದಿ ಸಹ ಹಂಚಿಕೊಂಡಿದ್ದಾರೆ.
ಗೃಹ ಲಕ್ಷ್ಮಿ ಯೋಜನೆಯಡಿ ಬಾಕಿ ಇದ್ದ ಎರಡು ತಿಂಗಳ ಪೈಕಿ ಜೂನ್ ತಿಂಗಳ ಕಂತು ಮಾತ್ರ ಜಮೆ ಆಗಿದೆ. ಆದರೆ ಜೂನ್ ಜೊತೆಗೆ ಜುಲೈ ತಿಂಗಳ ಹಣವು ಜಮೆ ಆಗಲಿದೆ ಎಂಬ ನಿರೀಕ್ಷೆ ಹುಸಿಯಾಗಿದೆ. ಹೀಗಾಗಿ ಯೋಜನೆ ನಿಲ್ಲಿಸಿ ಬಿಡುತ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ದವು.

ಸದ್ಯ ಯೋಜನೆ ಫಲಾನುಭವಿಗಳಿಗೆ ಜುಲೈ ಮತ್ತು ಆಗಸ್ಟ್ ತಿಂಗಳ ಎರಡು ಕಂತುಗಳ ಹಣ ಜಮೆ ಆಗಬೇಕಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್, ಯಾವ ಕಾರಣಕ್ಕೂ ಯೋಜನೆ ನಿಲ್ಲಿಸುವುದಿಲ್ಲ. ತಾಂತ್ರಿಕ ಕಾರಣಗಳಿಂದ ಹಣ ಜಮೆ ಆಗುವುದು ವಿಳಂಬವಾಗಿದೆ.
ಜುಲೈ ಮತ್ತು ಆಗಸ್ಟ್ ಬಾಕಿ ಕಂತು ಬಿಡುಗಡೆ ಯಾವಾಗ?
ಉಂಟಾಗಿರುವ ತಾಂತ್ರಿಕ ಅಡಚಣೆ, ಸಮಸ್ಯೆ ನಿವಾರಣೆಗಾಗಿ ಅಧಿಕಾರಿಗಳ ಜೊತೆಗೆ ಮಾತುಕತಡೆ ನಡೆಸಿದ್ದೇನೆ. ಫಲಾನುಭವಿಗಳಿಗೆ ಸದ್ಯ ಜೂನ್ ತಿಂಗಳ ಕಂತು ಜಮೆ ಆಗಿದೆ. ಶೀಘ್ರವೇ ಆಗಿರುವ ಸಮಸ್ಯೆ ನಿವಾರಿಸಿ ಜುಲೈ ಮತ್ತು ಆಗಸ್ಟ್ ಎರಡು ತಿಂಗಳ ಹಣ ವರ್ಗಾಯಿಸಲಾಗುವುದು ಎಂದು ಅವರು ತಿಳಿಸಿದರು.

ಮೂರು ತಿಂಗಳ ಹಣದ ಪೈಕಿ ಕಳೆದ ಎರಡು ತಿಂಗಳ ಹಣ ಮಹಿಳೆ ಕೈ ಸೇರಿಲ್ಲ. ಸದ್ಯ ಸರ್ಕಾರವು ಬಾಕಿ ಹಣ ಪಾವತಿಗೆ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿಲ್ಲ. ಸಮಸ್ಯೆ ಸರಿಪಡಿಸಿದ ಬಳಕವೇ ಎರಡು ತಿಂಗಳ ಹಣ ಬರಲಿದೆ. ಈ ಕುರಿತು ಯಾವುದೇ ಅನುಮಾನ ಬೇಡ ಎಂದು ಅವರು ಹೇಳಿದ್ದಾರೆ.
ಕಂತು ಹಾಕಲು ಹಣದ ಕೊರತೆ ಇದೆಯೇ?
ಇನ್ನೂ ಜೂನ್ ತಿಂಗಳ ಹವೇ ಕೆಲವರಿಗೆ ಬಂದಿರಲಿಲ್ಲ. ಹೀಗಾಗಿ ವಿರೋಧ ಪಕ್ಷಗಳು ಗ್ಯಾರೆಂಟಿ ಯೋಜನೆಗಳಿಂದಾಗಿ ಹಣ ಕೊರೆತೆ ಎದುರಿಸುತ್ತಿದೆ. ಯೋಜನೆಗಳನ್ನು ನಿಲ್ಲಿಸಿಬಿಡುತ್ತವೆ ಎಂದೆಲ್ಲ ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವೆ, ಎಲ್ಲರಿಗೂ ಹಣ ವರ್ಗಾಯಿಸಲಾಗಿದೆ. ಎಸ್‌ಸಿ, ಎಸ್‌ಟಿ ಪೋರ್ಟಲ್ ಬೇರೆ ಇದೆ. ಹೀಗಾಗಿ ಸಣ್ಣ ಪುಟ್ಟ ತೊಂದರೆ ಆಗಿತ್ತು. ಸರ್ಕಾರಕ್ಕೆ ಹಣದ ಕೊರತೆ ಎದುರಾಗಿಲ್ಲ ಎಂದು ವಿಪಕ್ಷಗಳ ಆರೋಪಗಳಿಗೆ ತಿರುಗೇಟು ಕೊಟ್ಟಿದ್ದಾರೆ.
ಯೋಜನೆ ನಿಲ್ಲಿಸಲ್ಲ ಎಂದ ಸಚಿವೆ
ರಾಜ್ಯ ಕಾಂಗ್ರೆಸ್ ಸರ್ಕಾರ ಬಡವರಿಗಾಗಿಯೇ ಈ ಯೋಜನೆ ಜಾರಿಗೆ ತರಲಾಗಿದೆ. ಮಹಿಳೆಯರ ಆರ್ಥಿಕತೆಯನ್ನು ಗಮನದಲ್ಲಿಟ್ಟುಕೊಂಡೆ ಈ ಯೋಜನೆ ಜಾರಿಗೆ ತರಲಾಗಿದೆ. ಆದ್ದರಿಂದ ಡಿಬಿಟಿ ಮೂಲಕ ಹಣ ವರ್ಗಾವಣೆ ಮಾಡಲಾಗುತ್ತದೆ. ಹೀಗಾಗಿ ಕೆಲವೊಮ್ಮೆ ತಾಂತ್ರಿಕ ಲೋಪದೋಷಗಳು ಕಂಡು ಬಂದಿವೆ. ಆದರೆ ಬಾಕಿ ಹಣ ಉಳಿಸಿಕೊಳ್ಳದೇ ಫಲಾನುಭವಿಗಳಿಗೆ ಹಾಕುತ್ತೇವೆ. ಯೋಜನೆ ನಿಲ್ಲಿಸುವು ಪ್ರಶ್ನೆಯೇ ಇಲ್ಲ ಎಂದು ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಮಾಹಿತಿ ನೀಡಿದರು.












Click it and Unblock the Notifications