Gruha Jyoti Schme: ಹಿಂಬಾಕಿ ಇರುವ ಗ್ರಾಹಕರಿಗೂ ವಿದ್ಯುತ್ ಉಚಿತ ಯೋಜನೆಯ ಲಾಭ: BESCOM

ಬೆಂಗಳೂರು, ಜಲೈ 02: ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರ ಈಗಾಗಲೇ ಹೇಳಿದಂತೆ ಜುಲೈ ತಿಂಗಳಿಂದ 200 ಯುನಿಟ್ ವರೆಗೆ ವಿದ್ಯುತ್ ಉಚಿತ ನೀಡಬಹುದಾದ 'ಗೃಹ ಜ್ಯೋತಿ' ಯೋಜನೆ ಜಾರಿ ಆಗಿದೆ. ಈ ಯೋಜನೆಗೆ ಗ್ರಾಹಕರು ವಿದ್ಯುತ್ ಬಿಲ್‌ನ ಹಿಂಬಾಕಿ ಉಳಿಸಿಕೊಂಡಿದ್ದರೂ ಅವರಿಗೆ ಸಹ ಗೃಹ ಜ್ಯೋತಿ ಯೋಜನೆಯ ಪ್ರಯೋಜನ ಸಿಗಲಿದೆ ಎಂದು ಬೆಂಗಳೂರು ವಿದ್ಯುತ್ ಪ್ರಸರಣ ನಿಗಮ (BESCOM) ತಿಳಿಸಿದೆ.

ಹಿಂದಿನ ತಿಂಗಳ ಬಾಕಿ ಇರುವ ವಿದ್ಯುತ್ ಹಿಂಬಾಕಿಯನ್ನು ಗ್ರಾಹಕರು ಸೆಪ್ಟಂಬರ್ 30 ರೊಳಗೆ ಪಾವತಿಸಬೇಕು ಎಂದು ಬೆಸ್ಕಾಂ ಹೇಳಿದೆ. 'ಗೃಹ ಜ್ಯೋತಿ' ಯೋಜನೆಗಾಗಿ ನೀವು ಜುಲೈ 25 ರೊಳಗೆ ನೋಂದಾಯಿಸಿಕೊಳ್ಳಬೇಕು. ಆಗಸ್ಟ್ ತಿಂಗಳ ಬಿಲ್‌ನಲ್ಲಿ ಯೋಜನೆಯ ಪ್ರಯೋಜನ ದೊರಕಲಿದೆ. ಹಾಗೆಯೇ, ಜುಲೈ 25 ರಿಂದ ಆಗಸ್ಟ್ 25 ರೊಳಗೆ ನೋಂದಾಯಿಸಿಕೊಂಡಲ್ಲಿ, ಸೆಪ್ಟೆಂಬರ್ ತಿಂಗಳ ಬಿಲ್‌'ನಲ್ಲಿ ಯೋಜನೆಯ ಪ್ರಯೋಜನ ದೊರೆಯಲಿದೆ.

Gruha Jyoti Scheme Benefit To Non-Payers Of Electricity Bills From July: BESCOM

ಸದ್ಯ ಯೋಜನೆ ಜಾರಿಯಾದ ಬಳಿಕ ಬಿಲ್ಲಿಂಗ್ ಅವಧಿ ಪ್ರತಿಯನ್ನು ಪ್ರತಿ ತಿಂಗಳ 25 ನೇ ದಿನಾಂಕದಿಂದ ಮುಂಬರುವ ತಿಂಗಳ 25 ದಿನಾಂಕವರೆಗೆ ಕೌಂಟ್ ಮಾಡಲಾಗುತ್ತದೆ. ಈ ಪ್ರಯೋಜನ ಪಡೆಯಲು ನಿಮ್ಮ ವಿದ್ಯುತ್ ಬಳಕೆಯ ಸರಾಸರಿ 200 ಯೂನಿಟ್ ಮೀರಿರಬಾರದು ಎಂದು ಬೆಸ್ಕಾಂ ತಿಳಿಸಿದೆ.

ಗೃಹ ಜ್ಯೋತಿ ಯೋಜನೆಗೆ ಗ್ರಾಹಕರು ಜುಲೈ 25ರ ನಂತರ ಅರ್ಜಿ ಸಲ್ಲಿಸಿದರೆ ಅವರಿಗೆ ಆಗಸ್ಟ್ ತಿಂಗಳಲ್ಲಿ ಬರುವ ಬಿಲ್'ನಲ್ಲಿ ಪ್ರಯೋಜನ ಸಿಗುವುದಿಲ್ಲ. ಆದರೆ ಅವರು ಆಗಸ್ಟ್‌ನಲ್ಲಿ ನೋಂದಣಿ ಮಾಡಿಕೊಂಡರೆ ಯೋಜನೆಯ ಪ್ರಯೋಜನವನ್ನು ಅವರು ಸೆಪ್ಟೆಂಬರ್ ತಿಂಗಳಲ್ಲಿ ಉಚಿತ ವಿದ್ಯುತ್ ಪಡೆಯುತ್ತಾರೆ. ಸಾಧ್ಯವಾದಷ್ಟು ಬೇಗವೇ ಜನರು ನೋಂದಣಿ ಪಡೆದುಕೊಳ್ಳುವ ಮೂಲಕ ಯೋಜನೆ ಫಲಾನುಭವಿಗಳಾಗಿ. ಯೋಜನೆಯ ನೋಂದಣಿಗೆ ವಿಳಂಬ ಬೇಡ ಎಂದ ಸಲಹೆ ನೀಡಿದೆ.

ಗೃಹ ಜ್ಯೋತಿ ಯೋಜನೆಯ ಲಾಭ ಪಡೆದುಕೊಳ್ಳಲು https://sevasindhugs.karnataka.gov.in/ ನಲ್ಲಿ ಇಂದೇ ನೋಂದಾಯಿಸಿಕೊಳ್ಳಿ ಎಂದು ಟ್ವೀಟ್ ಮೂಲಕ ಬೆಸ್ಕಾಂ ಹೇಳಿದೆ.

ಈಗಾಗಲೇ ಯೋಜನೆಗೆ ಕಾಂಗ್ರೆಸ್ ಸರ್ಕಾರವು ಗ್ರಾಹಕರು ಬಳಸುವ ಶೇಕಡಾ 10ರಷ್ಟು ಅಧಿಕವಾಗಿ ಉಚಿತ ವಿದ್ಯುತ್ ಪೂರೈಕೆ ಮಾಡಲಾಗುವುದು. ಇದು 200 ಯುನಿಟ್ ವರೆಗೆ ವಿದ್ಯುತ್ ಬಳಸುವ ಗ್ರಾಹಕರಿಗೆ ಅನ್ವಯವಾಗಲಿದೆ ಎಂದು ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+