Gruha Jyothi: ಕೋಟಿ ದಾಟಿದ ನೋಂದಣಿ, ಎಸ್ಕಾಂವಾರು ಅರ್ಜಿ ಸಲ್ಲಿಸಿದವರೆಷ್ಟು? ಅಂಕಿ ಸಂಖ್ಯೆ ನೋಡಿ

ಬೆಂಗಳೂರು, ಜಲೈ 06: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಕಾರಣವಾದ ಗ್ಯಾರಂಟಿಗಳಲ್ಲಿ ಒಂದಾಗಿರುವ ಮಹತ್ವಾಕಾಂಕ್ಷೆ 'ಗೃಹ ಜ್ಯೋತಿ' ಯೋಜನೆಗೆ ಜನರು ವ್ಯಾಪಕವಾಗಿ ಸ್ಪಂದಿಸಿದ್ದಾರೆ. 200 ಯುನಿಟ್ ವರೆಗಿನ ಉಚಿತ ವಿದ್ಯುತ್ ಪಡೆಯಲು ಜನರು ಉತ್ಸುಕರಾಗಿದ್ದು, ಕೆಲವೇ ದಿನಗಳಲ್ಲಿ ಅರ್ಜಿ ಸಲ್ಲಿಕೆ ಹೆಚ್ಚಾಗುತ್ತಿದೆ.

ಸರ್ಕಾರದ ಗೃಹ ಜ್ಯೋತಿ ಯೋಜನೆಯಿಂದ ಇಂಧನ ಇಲಾಖೆ ಹೊಸ ಮೈಲ್ಲಿಗಲ್ಲು ಸಾಧಿಸಿದೆ. ಅತ್ಯಂತ ವೇಗದಲ್ಲಿ ಜನರು ಯೋಜನೆಯ ಫಲಾನುಭವಿಗಳಾಗಲು ನೋಂದಾಯಿಸಿಕೊಳ್ಳುತ್ತಿದ್ದಾರೆ. ಗೃಹಜ್ಯೋತಿ ಯೋಜನೆಗೆ ಅರ್ಜಿ ಆರಂಭವಾಗಿ ಹದಿನೇಳು ದಿನಗಳಲ್ಲಿ ಒಂದು ಕೋಟಿ ಜನಗೂ ಹೆಚ್ಚು ಮಂದಿ ನೋಂದಾಯಿಸಿಕೊಂಡಿದ್ದಾರೆ. ಯೋಜನೆ ಭಾರೀ ಯಶಸ್ಸು ದೊರೆತಿದೆ.

Gruha Jyothi: Till July 5th More than 1 Crore People Registered For Free Electricity Scheme Benefits

ಗೃಹಜ್ಯೋತಿ ಫಲಾನುಭವಿಗಳಾಗಲು ಸರ್ಕಾರ ಹೆಸರು ನೋಂದಾಯಿಸಿಕೊಳ್ಳುವಂತೆ ಲಿಂಕ್ ಒಂದನ್ನು ನೀಡಿತ್ತು. ಜೂನ್ 18ರಿಂದ ನೋಂದಣಿ ಆರಂಭವಾಗಿತ್ತು. ಅಲ್ಲಿಂದ ಈವರೆಗೆ ಒಟ್ಟು 1,00,20,160 ಮಂದಿ ಅರ್ಜಿ ಸಲ್ಲಿಸಿದ್ದಾರೆ.

ಜುಲೈ 05 ರಂದು ಬುಧವಾರ ಒಂದೇ ದಿನ ಹೆಚ್ಚಿನ ಪ್ರಮಾಣದಲ್ಲಿ ಅರ್ಜಿ ಸಲ್ಲಕೆಯಾಗಿವೆ. ಆದರೆ‌ ಇಂದು ಜುಲೈ 06 ಗುರುವಾರ ಈ ನೋಂದಣಿಯಲ್ಲಿ ದುಪ್ಪಟ್ಟು ಏರಿಕೆ ಆಗುವ ಸಂಭವವಿದೆ. ಬುಧವಾರ ರಾತ್ರಿ 10.15ರ ವೇಳೆಗೆ ಒಟ್ಟು 2.13.465 ಲಕ್ಷ ಜನ ಅರ್ಜಿ ಸಲ್ಲಿಸಿದ್ದಾರೆ ಎಂದು ಸರ್ಕಾರದ ಮೂಲಗಳು ಮಾಹಿತಿ ನೀಡಿದರು.

ಎಸ್ಕಾಂವಾರು ನೋಂದಾಯಿತರ ಅಂಕಿ ಸಂಖ್ಯೆಯ ಮಾಹಿತಿ

ಬೆಸ್ಕಾಂ ವ್ಯಾಪ್ತಿಯಲ್ಲಿ ಒಟ್ಟು 41,14,567 ಲಕ್ಷ ಜನರು ಅರ್ಜಿ ಸಲ್ಲಿಸಿದ್ದಾರೆ. ಅದೇ ರೀತಿ ಮೆಸ್ಕಾಂ ವ್ಯಾಪ್ತಿಯಲ್ಲಿ ಒಟ್ಟು 11,56,294 ಲಕ್ಷ ಗ್ರಾಹಕರು, ಚೆಸ್ಕಾಂ ವ್ಯಾಪ್ತಿಯಲ್ಲಿ ಒಟ್ಟು 15,35,045 ಲಕ್ಷ ಜನ, ಜೆಸ್ಕಾಂ ವ್ಯಾಪ್ತಿಯಲ್ಲಿ ಒಟ್ಟು 10.54.359 ಲಕ್ಷ ಜನರು ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ.

Gruha Jyothi: Till July 5th More than 1 Crore People Registered For Free Electricity Scheme Benefits

ಇನ್ನೂ ಹೆಸ್ಕಾಂ ವ್ಯಾಪ್ತಿಯಲ್ಲಿ ಒಟ್ಟು 21.09.473 ಲಕ್ಷ ಗ್ರಾಹಕರಿಂದ ಅರ್ಜಿ ಸಲ್ಲಿಸಿದರೆ, ಹುಕ್ಕೇರಿ ರೂರಲ್ ಎಲೆಕ್ಟ್ರಿಸಿಟಿ ಕೋಆಪರೇಟಿವ್ ಸೊಸೈಟಿ (HRECS) ವ್ಯಾಪ್ತಿಯಲ್ಲಿ ಒಟ್ಟು 50.425ಸಾವಿರ ಜನರಿಂದ ಅರ್ಜಿ ಸಲ್ಲಿಸಿದ್ದಾರೆ. ಇದೆಲ್ಲವುಗಳನ್ನು ಒಟ್ಟು ಗೂಡಿಸಿದರೆ ಸದ್ಯ ಒಂದು ಕೋಟಿ ಇಪ್ಪತ್ತು ಸಾವಿರ ಮಂದಿ ಫಲಾನುಭವಿಗಳಾಗಿದ್ದಾರೆ ಎಂದು ತಿಳಿದು ಬಂದಿದೆ.

ಇದೇ ತಿಂಗಳಿನಿಂದ ಉಚಿತ ವಿದ್ಯುತ್ ಅನ್ವಯ

ರಾಜ್ಯ ಇಂಧನ ಇಲಾಖೆ ಈಗಾಗಲೆ ಅರ್ಜಿ ಸಲ್ಲಿಕೆಗೆ ವೈಬ್​​​​ಸೈಟ್​​ ಸರಳೀಕರಣಗೊಳಿಸಿದೆ. ಹೀಗಾಗಿ ಮುಂದಿನ ಕೆಲವೇ ದಿನಗಳಲ್ಲಿ ಈ ನೋಂದಣಿ ಸಲ್ಲಿಕೆ 1.50 ಕೋಟಿ ತಲುಪಲಿದೆ. ಗೃಹಜ್ಯೋತಿ ಯೋಜನೆ ಜುಲೈ 1ರಿಂದ ಅನ್ವಯವಾಗಲಿದೆ ಸಿಎಂ ಸಿದ್ದರಾಮಯ್ಯ ಅವರು ಈ ಹಿಂದೆಯೇ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಆಗಸ್ಟ್ ತಿಂಗಳಿನಿಂದ ಜನರ ವಿದ್ಯುತ್ ಬಿಲ್ ಕಟ್ಟುವಂತಿಲ್ಲ.

ಇನ್ನೂ ನೋಂದಣಿಗೆ ಕೊನೆಯ ದಿನಾಂಕ ಜುಲೈ 25 ಕೊನೆಯ ದಿನವಾಗಿದೆ. ಒಂದು ವೇಳೆ ನೀವು ಜುಲೈ 25 ರ ನಂತರ ಅರ್ಜಿ ಸಲ್ಲಿಸಿದರೇ ನಿಮಗೆ ಅದರ ಮುಂದಿನ ತಿಂಗಳು ಆಗಸ್ಟ್​ನಿಂದ ಉಚಿತ ವಿದ್ಯುತ್ ಸಿಗಲಿದೆ ಎಂದು ಸರ್ಕಾರ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+