ಮಾಲೀಕರು, ಬಾಡಿಗೆದಾರರಿಗೂ 200 ಯುನಿಟ್‌ ವಿದ್ಯುತ್‌ ಉಚಿತ: ಸಿದ್ದರಾಮಯ್ಯ

ಬೆಂಗಳೂರು, ಜೂನ್‌ 2: ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್‌ ತಮ್ಮ ಪ್ರಣಾಳಿಕೆಯಲ್ಲಿ ನೀಡಿದ್ದ ಎಲ್ಲ ಗ್ಯಾರಂಟಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಸ್ತು ಎಂದಿದ್ದಾರೆ. ಇದರಲ್ಲಿ ಮುಖ್ಯವಾಗಿ ಗೃಹಜ್ಯೋತಿ ವಿದ್ಯುತ್‌ ಬಗ್ಗೆ ಮಾತನಾಡಿ ಸ್ಪಷ್ಟನೆ ನೀಡಿದ್ದಾರೆ.

ಈ ಸಂಬಂಧ ವಿಧಾನಸೌಧದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಬಡವರು ಹಾಗೂ ಮಧ್ಯಮ ವರ್ಗದವರಿಗೆ ಸಿಹಿಸುದ್ದಿ ನೀಡಿದ್ದಾರೆ. ಗೃಹಜ್ಯೋತಿ ಯೋಜನೆಯಡಿ 200 ಯುನಿಟ್‌ ವಿದ್ಯುತ್‌ ಅನ್ನು ಯಾವುದೇ ಜಾತಿ, ಧರ್ಮ, ಭಾಷೆಗಳ ತಾರತಮ್ಯವಿಲ್ಲದೆ ಜಾರಿ ಮಾಡುತ್ತಿದ್ದೇವೆ ಎಂದರು.

Gruha Jyothi Scheme: 200 Units Free Electricity Even For the Rental Tenants in karnataka

ಗೃಹಜ್ಯೋತಿ ಯೋಜನೆಯಡಿ 200 ಯುನಿಟ್‌ ಉಚಿತ ವಿದ್ಯುತ್‌ ಇದು ನಮ್ಮ ಮೊದಲ ಗ್ಯಾರಂಟಿಯಾಗಿದೆ. ಇದರ ಜಾರಿಗೂ ತೀರ್ಮಾನ ಮಾಡಿದ್ದೇವೆ. ಇದಕ್ಕೆ 12 ತಿಂಗಳ ಅವಧಿ ಸರಾಸರಿ ಲೆಕ್ಕ ತೆಗೆದುಕೊಳ್ಳಲಾಗುತ್ತದೆ. ಇದಕ್ಕೆ ಶೇಕಡ 10 ಹೆಚ್ಚು ಮಾಡುತ್ತೇವೆ. ಅಲ್ಲಿ 200 ಯುನಿಟ್‌ವರೆಗಿನ ವಿದ್ಯುತ್‌ ಬಳಸಿದರೆ ಶುಲ್ಕ ವಿಧಿಸಲ್ಲ ಎಂದರು.

ಇಲ್ಲಿ ಬೆಂಗಳೂರು ಸೇರಿದಂತೆ ವಿವಿಧೆಡೆ ಬಾಡಿಗೆ ಮನೆಗಳನ್ನು ವಾಸ ಇರುವ ಬಾಡಿಗೆದಾರರು ಸೇರಿದಂತೆ ಎಲ್ಲ ಮನೆಗಳಿಗೂ ಈ ಗೃಹಶಕ್ತಿ ಯೋಜನೆಯಡಿ 200 ಯುನಿಟ್‌ ವಿದ್ಯುತ್‌ ಉಚಿತವಾಗಲಿದ್ದು ಶುಲ್ಕ ಭರಿಸಬೇಕಿಲ್ಲ. ಒಂದು ವರ್ಷದ ಸರಾಸರಿ ಯುನಿಟ್‌ ವಿದ್ಯುತ್‌ ಲೆಕ್ಕ ಹಾಕಲಾಗುತ್ತದೆ. ಇಲ್ಲಿ ನೀವು ನಿಮ್ಮ ಮನೆಯಲ್ಲಿ ಬಳಸುವ ವಿದ್ಯುತ್ 199ರವೆಗೂ ಇದ್ದರೆ ಅದು ಉಚಿತವಾಗಿರುತ್ತದೆ. ಇಲ್ಲಿ ವಿದ್ಯುತ್‌ ದುರುಪಯೋಗವಾಗುವಾಗುವುದರಿಂದ ಅದನ್ನು 199 ಭಾಗಕಾರ 12 ಮಾಡಲಾಗುತ್ತದೆ. ಅಂದರೆ ಒಂದು ವರ್ಷದಲ್ಲಿ ನೀವು ಬಳಸಿರುವ ವಿದ್ಯುತ್‌ ಯುನಿಟ್‌ ಪರಿಗಣಿಸಿ ಇಲ್ಲಿ ಸರಾಸರಿ ಬಂದ ವಿದ್ಯುತ್‌ ಯುನಿಟ್‌ಗೆ ಶೇಕಡ 10ರಷ್ಟು ಸೇರಿಸಲಾಗುತ್ತದೆ. ಆಗ ಮುಂದೆ ಬರುವ ವಿದ್ಯುತ್‌ ಯುನಿಟ್‌ 200ರ ಒಳಗೆ ಇರಬೇಕು. ಆಗ ಮಾತ್ರ ವಿದ್ಯುತ್‌ ಉಚಿತ ಅನ್ವಯವಾಗುತ್ತದೆ.

ನೀವು 70, 80, 199 ಯುನಿಟ್‌ವರೆಗೂ ವಿದ್ಯುತ್‌ ಬಳಸಿದರೆ ಶೇಕಡ 10ರಷ್ಟು ಹೆಚ್ಚಿಸಿ ನೋಡುತ್ತೇವೆ. ಆಗಲು 200 ಯುನಿಟ್‌ ಬರಲಿಲ್ಲ ಎಂದರೆ ಶುಲ್ಕ ಇರಲ್ಲ. ಈ ತಿಂಗಳು ಬಿಲ್‌ ತಯಾರು ಆಗಿರುವುದರಿಂದ ಮುಂದಿನ ತಿಂಗಳು ಜುಲೈ 1ರಿಂದ ಇದು ಜಾರಿ ಬರಲಿದೆ. ಇಲ್ಲಿವರೆಗೂ (ಜುಲೈ) ಉಳಿಸಿರುವ ಬಾಕಿಯನ್ನು ಅವರೇ ಕಟ್ಟಬೇಕು. ಇಲ್ಲಿ ಬಾಡಿಗೆದಾರರಿಗೂ ಉಚಿತ ವಿದ್ಯುತ್‌ ಅನ್ವಯವಾಗುತ್ತದೆ ಎಂದರು.

Gruha Jyothi Scheme: 200 Units Free Electricity Even For the Rental Tenants in karnataka

ನಾವು ಈ ಸಂಬಂಧ ಕ್ಯಾಬಿನೆಟ್ ಸಭೆ ನಡೆಸಿದ್ದೇವೆ. ನಾವು ಎಲ್ಲಾ ಐದು ಭರವಸೆಗಳ ಬಗ್ಗೆ ಕೂಲಂಕಷವಾಗಿ ಚರ್ಚಿಸಿದ್ದೇವೆ. ನಾವು ಪ್ರಸ್ತುತ ಆರ್ಥಿಕ ವರ್ಷದಲ್ಲಿ ಎಲ್ಲಾ ಐದು ಭರವಸೆಗಳನ್ನು ಜಾರಿಗೆ ತರಲು ನಾವು ನಿರ್ಧರಿಸಿದ್ದೇವೆ. ನಾವು ಚುನಾವಣೆಯ ಸಮಯದಲ್ಲಿ ಮತ್ತು ಅದಕ್ಕೂ ಮೊದಲು 5 ಭರವಸೆಗಳನ್ನು ಘೋಷಿಸಿದ್ದೇವೆ. ನಮ್ಮ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ನಾನು ಖಾತರಿ ಕಾರ್ಡ್‌ಗಳಿಗೆ ಸಹಿ ಮಾಡಿದ್ದೇವೆ ಮತ್ತು ನಾವು ಎಲ್ಲಾ ಭರವಸೆಗಳನ್ನು ಜಾರಿಗೆ ತರುತ್ತೇವೆ ಮತ್ತು ಜನರಿಗೆ ತಲುಪುವಂತೆ ಮಾಡುತ್ತೇವೆ ಎಂದು ಭರವಸೆ ನೀಡಿದ್ದೇವೆ, ನಾವು ಖಾತರಿ ಕಾರ್ಡ್‌ಗಳನ್ನು ಸಹ ವಿತರಿಸಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+