ಕೊನೆಗೂ ರೋಹಿಣಿ ಸಿಂಧೂರಿ ವರ್ಗಾವಣೆ, ರಂದೀಪ್ ಹಾಸನ ಡಿಸಿ

ಹಾಸನ. ಮಾರ್ಚ್ 08: ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೇರಿದಂತೆ 12 ಮಂದಿ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಕರ್ನಾಟಕ ಸರ್ಕಾರವು ಬುಧವಾರ ತಡ ರಾತ್ರಿ ಆದೇಶ ಹೊರಡಿಸಿದೆ.

ಐಎಎಸ್ ಅಧಿಕಾರಿಗಳ ವರ್ಗಾವಣೆಗೆ ಚುನಾವಣಾ ಆಯೋಗ ಅನುಮತಿ ನೀಡುವುದನ್ನೇ ಕಾಯುತ್ತಿದ್ದ ರಾಜ್ಯ ಸರ್ಕಾರ, ಅಧಿಕೃತ ಆದೇಶ ಹೊರಡಿಸಲಿದೆ.

ಈ ಹಿಂದೆ ಮಹಾ ಮಸ್ತಕಾಭಿಷೇಕಕ್ಕೂ ಮುನ್ನ ರೋಹಿಣಿ ಸಿಂಧೂರಿ ಸೇರಿದಂತೆ ಅಧಿಕಾರಗಳ ವರ್ಗಾವಣೆಗೆ ಚುನಾವಣಾ ಆಯೋಗ ತಡೆಯಾಜ್ಞೆ ನೀಡಿತ್ತು.

Govt transfers 12 IAS including Hassan DC Rohini Sindhuri

ಚುನಾವಣಾ ಆಯೋಗದ ಸೂಚನೆ ಮೇರೆಗೆ ತಡೆ ಹಿಡಿಯಲಾಗಿದ್ದ ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೇರಿದಂತೆ 10 ಜಿಲ್ಲಾಧಿಕಾರಿಗಳ ವರ್ಗಾವಣೆ ಮಾಡಿ ಮಾರ್ಚ್ 03ರಂದು ಬಂದಿದ್ದ ಆದೇಶವೂ ರದ್ದಾಗಿತ್ತು. ಆದರೆ, ಈಗ ಮಾರ್ಚ್ 07ರಂದು ಅಧಿಕೃತ ಆದೇಶ ಹೊರಡಿಸಲಾಗಿದೆ.

ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ದಾಸರಿ ಅವರನ್ನು ಬೆಂಗಳೂರಿನ ಉದ್ಯೋಗಿಗಳ ತರಬೇತಿ ಇಲಾಖೆಗೆ ವರ್ಗಾಯಿಸಲಾಗಿದೆ. ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರಣದೀಪ್ ಅವರನ್ನು ಹಾಸನ ಜಿಲ್ಲಾಧಿಕಾರಿಯಾಗಿ ವರ್ಗಾಯಿಸಲಾಗಿದೆ.

ಮತದಾರರ ಅಂತಿಮ ಪಟ್ಟಿ ಸಿದ್ಧಗೊಂಡ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅಧಿಕಾರಿಗಳ ವರ್ಗಾವಣೆಗೆ ಸಿದ್ಧತೆ ಮಾಡಿಕೊಂಡಿದ್ದು, ಚುನಾವಣಾ ಆಯೋಗಕ್ಕೆ ಪಟ್ಟಿ ಕಳುಹಿಸಿದೆ. ಚುನಾವಣಾ ಆಯೋಗದ ಒಪ್ಪಿಗೆ ದೊರೆತ ನಂತರ ಸರ್ಕಾರ ಅಧಿಕೃತ ವರ್ಗಾವಣೆ ಆದೇಶ ಹೊರಡಿಸಲಾಗಿದೆ.

ವರ್ಗಾವಣೆಯಾದ ಐಎಎಸ್ ಅಧಿಕಾರಿಗಳು- ಎಲ್ಲಿಂದ-ಎಲ್ಲಿಗೆ
* ರಣದೀಪ್ ಡಿ-ಮೈಸೂರು ಜಿಲ್ಲಾಧಿಕಾರಿ ಸ್ಥಾನದಿಂದ -ಹಾಸನ ಡಿಸಿ

* ಕಾವೇರಿ ಬಿ.ಬಿ-ಸಿಇಒ, ಜಿ.ಪಂ ಕೋಲಾರ-ಚಾಮರಾಜನಗರ ಡಿಸಿ

* ಶೆಟ್ಟನವರ್ ಎಸ್.ಬಿ- ಅಂತರ್ಜಲ ವಿಭಾಗ, ನಿರ್ದೇಶಕ- ಬೆಂಗಳೂರು-ವಿಜಯಪುರ ಡಿಸಿ
* ರೋಹಿಣಿ ಸಿಂಧೂರಿ ದಾಸರಿ-ಹಾಸನ ಡಿಸಿ-ಉದ್ಯೋಗ ಮತ್ತು ತರಬೇತಿ ಇಲಾಖೆ, ಬೆಂಗಳೂರು ಆಯುಕ್ತರು

* ಶಿವಕುಮಾರ್ ಕೆ.ಬಿ- ವಿಜಯಪುರ ಡಿಸಿ- ಮೈಸೂರು ಡೆಪ್ಯುಟಿ ಕಮಿಷನರ್

* ರಾಮು ಬಿ-ಚಾಮರಾಜನಗರ ಡಿಸಿ- ಪಶು ಸಂಗೋಪಣೆ ಇಲಾಖೆ ಆಯುಕ್ತರು.

* ಕ್ಯಾ. ಕೆ ರಾಜೇಂದ್ರ - ಕಂದಾಯ ಇಲಾಖೆ ವಿಶೇಷ ಸೆಲ್ ನಿರ್ದೇಶಕ-ರಾಮನಗರ ಜಿಲ್ಲಾಧಿಕಾರಿ

* ಡಾ. ಮಮತಾ ಬಿ. ಆರ್-ರಾಮನಗರ ಡಿಸಿ-ಕೆಎಸ್ ಅಂಡ್ ಡಿಎಲ್ ವ್ಯವಸ್ಥಾಪಕ ನಿರ್ದೇಶಕ, ಬೆಂಗಳೂರು.

* ಡಾ. ಎನ್ ಶಿವಶಂಕರ್- ಬೆಂಗಳೂರು ನಗರಾಭಿವೃದ್ಧಿ ಸಚಿವರ ಪಿಎಸ್-ಕ್ರೀಡಾ ಮತ್ತು ಯುವಜನ ಇಲಾಖೆ ಆಯುಕ್ತರು

* ಅರುಂಧತಿ ಚಂದ್ರಶೇಖರ್-ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಹೆಚ್ಚುವರಿ ನಿರ್ದೇಶಕರು-ಅದೇ ಇಲಾಖೆಯ ಆಯುಕ್ತರು.

* ಆರ್ ಲತಾ-ಸಿಇಒ ಜಿಪಂ ರಾಮನಗರ- ಸಿಇಒ, ಜಿ.ಪಂ ಬೆಂಗಳೂರು ಗ್ರಾಮಾಂತರ ಜಿಲ್ಲೆ

* ದಯಾನಂದ ಕೆ-ಸಿಇಒ, ಜಿ.ಪಂ ಬೆಂಗಳೂರು ಗ್ರಾಮಾಂತರ ಜಿಲ್ಲೆ- ಸಿಇಒ ಬೆಂಗಳೂರು ನಗರ ಜಿಲ್ಲೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+