ಕರ್ನಾಟಕದಲ್ಲಿ ಸ್ಥಿರ ಆಸ್ತಿಗಳ ಮಾರ್ಗದರ್ಶಿ ಮೌಲ್ಯದಲ್ಲಿ ಶೇ.10ರಷ್ಟು ಕಡಿತ
ಬೆಂಗಳೂರು, ಜನವರಿ 3: ರಾಜ್ಯದಲ್ಲಿ ಆಸ್ತಿ ಸಂಪಾದನೆ ಮತ್ತು ಆರ್ಥಿಕತೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಮಹತ್ವದ ಉಡುಗೊರೆಯನ್ನು ನೀಡಿದೆ. ಕರ್ನಾಟಕದಲ್ಲಿ ಹೊಸ ವರ್ಷಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಮಹತ್ವದ ಬಂಪರ್ ಕೊಡುಗೆ ನೀಡಿದೆ.
ರಾಜ್ಯದಾದ್ಯಂತ ಸ್ಥಿರ ಆಸ್ತಿಗಳ ಮಾರ್ಗದರ್ಶಿ ಮೌಲ್ಯದಲ್ಲಿ ಶೇ.10ರಷ್ಟು ಕಡಿತಗೊಳಿಸಲಾಗುವುದು ಎಂದು 2022ರ ಜನವರಿ 1ರಂದು ತಿಳಿಸಿದೆ. ಕೊವಿಡ್-19 ಸಾಂಕ್ರಾಮಿಕ ಪಿಡುಗಿನಿಂದಾಗಿ ಸೃಷ್ಟಿ ಆಗಿರುವ ಆದಾಯದಲ್ಲಿನ ನಷ್ಟವನ್ನು ವಾಪಸ್ ಪಡೆಯುವುದಕ್ಕೆ ಇದರಿಂದ ಸಹಕಾರಿ ಆಗಲಿದೆ.
ಕಳೆದ ಡಿಸೆಂಬರ್ 8, 2021ರಂದು ಮುದ್ರಾಂಕ ಮತ್ತು ನೋಂದಣಿ ಇಲಾಖೆಯ ಪ್ರಗತಿಯನ್ನು ಪರಿಶೀಲಿಸಿದ ಸಂದರ್ಭದಲ್ಲಿ, 2019-20ರ ಆದಾಯ ಸಂಗ್ರಹದಲ್ಲಿ 2,021 ಕೋಟಿ ರೂಪಾಯಿ ಕೊರತೆ ಕಂಡು ಬಂದಿದೆ. ಆದಾಯ ಉತ್ಪಾದನೆಯಲ್ಲಿ ಹೆಚ್ಚಳಕ್ಕೆ ಕಾರಣವಾದ ಮಾರ್ಗದರ್ಶಿ ಮೌಲ್ಯವನ್ನು ಶೇಕಡಾ 20 ರಷ್ಟು ಕಡಿತಗೊಳಿಸುವ ದೆಹಲಿ ಸರ್ಕಾರದ ನಿರ್ಧಾರವನ್ನೇ ಇಲ್ಲಿಯೂ ಜಾರಿಗೊಳಿಸಲಾಗುತ್ತಿದ್ದು, ಅದನ್ನು 20ರ ಬದಲಿಗೆ ಶೇ.10ರಷ್ಟು ಕಡಿಕೊಳಿಸಲು ರಾಜ್ಯ ಸರ್ಕಾರ ಪ್ರಸ್ತಾವನೆಯನ್ನು ಸಲ್ಲಿಸಿತ್ತು. ನೋಂದಣಿ ವಿಭಾಗದ ಮಹಾನಿರೀಕ್ಷಕ ರವೀಂದ್ರ ಪಿಎನ್ ಶನಿವಾರ ಈ ಬಗ್ಗೆ ಆದೇಶ ಹೊರಡಿಸಿದ್ದಾರೆ.

ಮೂರು ತಿಂಗಳವರೆಗೆ ಮಾತ್ರ ಆದೇಶ ಜಾರಿ:
ಸ್ಥಿರ ಆಸ್ತಿಗಳ ಮಾರ್ಗದರ್ಶಿ ಮೌಲ್ಯದಲ್ಲಿ ಶೇ.10ರಷ್ಟು ಕಡಿತಗೊಳಿಸುವ ಈ ನಿಯಮ ಮೂರು ತಿಂಗಳವರೆಗೆ ಜಾರಿಯಲ್ಲಿರುತ್ತದೆ ಎಂದು ಅಂದಾಜು ಕೇಂದ್ರೀಯ ಮೌಲ್ಯಮಾಪನ ಸಮಿತಿಯ ಅಧ್ಯಕ್ಷ ರವೀಂದ್ರ ಪಿಎನ್ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರು ನಗರ, ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳಲ್ಲಿನ ಆಸ್ತಿಗಳಿಗೆ ಜನವರಿ 1, 2019 ರಂದು ಮಾರ್ಗದರ್ಶಿ ಮೌಲ್ಯವನ್ನು ನವೀಕರಿಸಲಾಗಿದೆ, ಆದರೆ ಇದನ್ನು ಇತರ ಜಿಲ್ಲೆಗಳಿಗೆ ಡಿಸೆಂಬರ್ 5, 2018ರಂದು ಪರಿಷ್ಕರಿಸಲಾಗಿದೆ ಎಂದು ತಿಳಿಸಿದ್ದಾರೆ.
ಆರ್ಥಿಕತೆಗೆ ಉತ್ತೇಜನ ನೀಡುವುದರ ಜೊತೆಗೆ, ಈ ನಿರ್ಧಾರವು ಕಾರ್ಮಿಕ-ತೀವ್ರ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ. ರಿಯಲ್ ಎಸ್ಟೇಟ್ ಡೆವಲಪರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಕ್ರೆಡೈ) ಸಹ ಇದೇ ರೀತಿಯ ಪ್ರಸ್ತಾವನೆಯನ್ನು ಇಲಾಖೆಗೆ ಸಲ್ಲಿಸಿದ್ದು, ಪ್ರಗತಿ ಪರಿಶೀಲನೆ ನಡೆಸಿದಾಗ ಆಸ್ತಿಗಳ ಮಾರುಕಟ್ಟೆ ಮೌಲ್ಯ ಕುಸಿದಿರುವುದು ಕಂಡು ಬಂದಿದೆ.
"ಸರ್ಕಾರದ ಕ್ರಮವನ್ನು ನಾವು ಸ್ವಾಗತಿಸುತ್ತೇವೆ, ಏಕೆಂದರೆ ಇದು ಆಸ್ತಿಯನ್ನು ಖರೀದಿಸುವ ಗ್ರಾಹಕರಿಗೆ ಹೆಚ್ಚು ಪ್ರಯೋಜನಕಾರಿ ಆಗಿರುತ್ತದೆ. ಏಕೆಂದರೆ ಅವರು ಆಸ್ತಿ ಮೌಲ್ಯದ ಮೇಲೆ ಶೇಕಡಾ 5ರಷ್ಟು ಸ್ಟ್ಯಾಂಪ್ ಸುಂಕವನ್ನು ಉಳಿಸಲು ಸಾಧ್ಯವಾಗುತ್ತದೆ. ಏಕೆಂದರೆ ಮಾರ್ಗದರ್ಶನ ಮೌಲ್ಯದಲ್ಲಿ ಶೇಕಡಾ 10 ರಷ್ಟು ಕಡಿತವಾಗುತ್ತದೆ" ಎಂದು ಕ್ರೆಡಾಯ್, ಬೆಂಗಳೂರು ಚಾಪ್ಟರ್ ಅಧ್ಯಕ್ಷ ಸುರೇಶ್ ಹರಿ ಹೇಳಿದ್ದಾರೆ.
ಆಸ್ತಿ ಮಾರ್ಗದರ್ಶಿ ಮೌಲ್ಯ ಕಡಿತ ಹೇಗೆ ಸಹಾಯಕ?:
ಹಿಂದಿನ ಮಾರ್ಗಸೂಚಿ ಮೌಲ್ಯ ರೂ.1 ಲಕ್ಷ ಮತ್ತು ಶೇ.5ರ ಮುದ್ರಾಂಕ ಶುಲ್ಕ ಹೊಂದಿರುವ ಆಸ್ತಿಗೆ ಖರೀದಿದಾರರು ರೂ.5,000 ಪಾವತಿಸಬೇಕಿತ್ತು. ಈಗ, ಅವರು 4,500 ರೂ.ಗಳನ್ನು ಪಾವತಿಸಬೇಕಾಗುತ್ತದೆ, ಏಕೆಂದರೆ ಮಾರ್ಗದರ್ಶಿ ಮೌಲ್ಯವು 10 ಪರ್ಸೆಂಟ್ ಕಡಿತದಿಂದ 90,000ಕ್ಕೆ ಇಳಿಯುತ್ತದೆ, 500 ರೂ ಉಳಿತಾಯವಾಗುತ್ತದೆ.












Click it and Unblock the Notifications