ಯುಗಾದಿ ಹಬ್ಬವನ್ನು ಧಾರ್ಮಿಕ ದಿನ ಎಂದು ಆಚರಿಸಲು ಬಿಜೆಪಿ ನಿರ್ಧಾರ
ಬೆಂಗಳೂರು, ಮಾರ್ಚ್ 25: ಈ ಬಾರಿ ಯುಗಾದಿ ಹಬ್ಬವನ್ನು ಧಾರ್ಮಿಕ ದಿನವೆಂದು ಆಚರಿಸಲು ರಾಜ್ಯ ಬಿಜೆಪಿ ಸರ್ಕಾರ ನಿರ್ಧರಿಸಿದೆ. ಈ ದಿನದಂದು ದೇವಾಲಯಗಳಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲು ರಾಜ್ಯ ಬಿಜೆಪಿ ಸರ್ಕಾರ ನಿರ್ಧರಿಸಿದೆ ಎಂದು ಟ್ವೀಟ್ ಮಾಡಿದೆ. ಯುಗಾದಿ ಹಬ್ಬವನ್ನು ಈ ವರ್ಷ ಏಪ್ರಿಲ್ 2 ರಂದು ಆಚರಿಸಲಾಗುತ್ತದೆ. ಕಳೆದ ಎರಡು ವರ್ಷದಿಂದ ರಾಜ್ಯದಲ್ಲಿ ಕೊರೊನಾ ಹಾವಳಿಯಿಂದಾಗಿ ಯುಗಾದಿ ಹಬ್ಬವನ್ನು ಸರಿಯಾಗಿ ಆಚರಿಸಲು ಸಾಧ್ಯವಾಗಿರಲಿಲ್ಲ.
ದೇವಸ್ಥಾನಗಳು ತೆರೆದಿರಲ್ಲ. ದೇವಸ್ಥಾನಗಳಿಗೆ ಹೋಗಲು ಜನರಿಗೆ ಅವಕಾಶ ಇರಲಿಲ್ಲ. ಹೋದರು ದೇವಸ್ಥಾನಗಳಲ್ಲಿ ಪ್ರಸಾದದ ವ್ಯವಸ್ಥೆ ಇರಲಿಲ್ಲ. ಹೀಗೆ ನಿರ್ಬಂಧಗಳನ್ನು ಹೇರಲಾಗಿತ್ತು. ಸದ್ಯ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿದ್ದಂತೆ ರಾಜ್ಯದಲ್ಲಿ ಜನ ಜೀವನ ಸಹಜ ಸ್ಥಿತಿಯತ್ತ ಸಾಗುತ್ತಿದೆ. ಜೊತೆಗೆ ನಿರ್ಬಂಧಗಳನ್ನು ಹಂತ ಹಂತವಾಗಿ ಸಡಿಲಗೊಳಿಸಲಾಗಿದೆ. ಹಿಂದೂ ಆಚರಣೆಗಳಲ್ಲಿ ಹೊಸ ವರ್ಷವೆಂದು ಕರೆಯಲ್ಪಡುವ ಯಗಾದಿ ಹಬ್ಬವನ್ನು ಈ ಬಾರಿ ವಿಜೃಂಭಣೆಯಿಂದ ಆಚರಿಸಲು ಯೋಜಿಸಲಾಗುತ್ತಿದೆ.
ಯುಗಾದಿ ಹಬ್ಬವನ್ನು ಧಾರ್ಮಿಕ ದಿನ ಎಂದು ಆಚರಿಸಲು ರಾಜ್ಯ ಬಿಜೆಪಿ ಸರ್ಕಾರ ನಿರ್ಧರಿಸಿದೆ, ಈ ದಿನದಂದು ದೇವಾಲಯಗಳಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲು ರಾಜ್ಯ ಬಿಜೆಪಿ ಸರ್ಕಾರ ನಿರ್ಧರಿಸಿದೆ.#Ugadi #ಯುಗಾದಿ pic.twitter.com/Qn2EFJhjCM
— BJP Karnataka (@BJP4Karnataka) March 24, 2022
ಯುಗಾದಿ ಎಂಬ ಹೆಸರು ಯುಗ (ಹೊಸ ವರ್ಷ) ಮತ್ತು ಆದಿ (ಪ್ರಾರಂಭ) ಎಂಬ ಎರಡು ಶಬ್ದಗಳಿಂದ ಕೂಡಿದೆ. ಯುಗಾದಿ ಎಂಬ ಶಬ್ದವು "ಹೊಸ ಯುಗದ ಆರಂಭ" ಎಂಬ ಸಂಸ್ಕೃತ ಪದದಿಂದ ಬಂದಿದೆ. ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ ಗುಜರಾತ್‌ಗಳಲ್ಲಿ ಚಂದ್ರಮಾನ ಯುಗಾದಿ ಆಚರಿಸಿದರೆ ತಮಿಳುನಾಡು, ಕೇರಳ ಮತ್ತು ಉತ್ತರ ಭಾರತದ ಕೆಲವು ಸ್ಥಳಗಳಲ್ಲಿ ಸೌರಮಾನ ಯುಗಾದಿ ಆಚರಿಸುತ್ತಾರೆ.

ಉತ್ತರ ಭಾರತದಲ್ಲಿ ಕಾರ್ತಿಕ ಶುದ್ಧ ಪಾಡ್ಯಮಿಯನ್ನು ಯುಗಾದಿಯೆನ್ನುವರು. ಈ ಹಬ್ಬವನ್ನು ಭಾರತದಲ್ಲಿ ಬೇರೆ-ಬೇರೆ ಹೆಸರಿನಿಂದ ಆಚರಿಸುವರು. ಕರ್ನಾಟಕದಲ್ಲಿ 'ಯುಗಾದಿ', ಮಹಾರಾಷ್ಟ್ರದಲ್ಲಿ 'ಗುಢಿಪಾಡವಾ' (gudi padwa), ಆಂಧ್ರ್ರಪ್ರದೇಶ ಹಾಗೂ ತಮಿಳುನಾಡಿನಲ್ಲಿ 'ಹೊಸ ವರ್ಷದ ಹಬ್ಬ'ವೆಂದು, ಉತ್ತರ ಭಾರತದಲ್ಲಿ 'ಬೈಸಾಖಿ' ಎಂದು ಇದು ಆಚರಿಸಲ್ಪಡುತ್ತದೆ.
ಹೊಸ ವರ್ಷದ ಪ್ರಾರಂಭದ ಸಂಕೇತವಾದ ಯುಗಾದಿಯನ್ನು ಬಡವ-ಬಲ್ಲಿದರೆಂಬ ತಾರತಮ್ಯವಿಲ್ಲದೇ ಎಲ್ಲಾ ಹಿಂದೂಗಳೂ ಆಚರಿಸುತ್ತಾರೆ. ರೈತರು ಎತ್ತುಗಳನ್ನು ಶೃಂಗರಿಸಿ ಸಂಭ್ರಮದಿಂದ ಹಬ್ಬವನ್ನು ಆಚರಿಸುತ್ತಾರೆ. ವ್ಯಾಪಾರಿಗಳು ಹಾಗೂ ಇನ್ನಿತರರು ಕೂಡ ಅಂದಿನ ದಿನವೇ ಶುಭ ಕಾರ್ಯವನ್ನು ಮಾಡುತ್ತಾರೆ.

ದಂತಕಥೆಗಳ ಪ್ರಕಾರ, ಭಗವಾನ್ ಬ್ರಹ್ಮನು ಈ ದಿನದಂದು ವಿಶ್ವವನ್ನು ಸೃಷ್ಟಿಸಿದನು ಎಂದು ನಂಬುಲಾಗುತ್ತದೆ. ಹಿಂದೂಗಳ ಪುರಾಣಗಳ ಪ್ರಕಾರ, ಬ್ರಹ್ಮಾಂಡ ವಿಕಾಸದ ಸಮಯದಲ್ಲಿ, ಸೃಷ್ಟಿಕರ್ತ ಬ್ರಹ್ಮ ಈ ದಿನದಂದು ಸೃಷ್ಟಿ ಕಾರ್ಯವನ್ನು ಪ್ರಾರಂಭಿಸಿದನು. ಇನ್ನೂ ಹಿಂದೂಗಳ ನಂಬಿಕೆಯ ಪ್ರಕಾರ, ಬ್ರಹ್ಮ ದೇವರು ಇಡೀ ವಿಶ್ವವನ್ನು ಸೃಷ್ಟಿಸಿದನು ಮತ್ತು ಭೂಮಿಯ ಮೇಲಿನ ನಮ್ಮ ಒಂದು ವರ್ಷವು ಬ್ರಹ್ಮ ದೇವರಿಗೆ ಒಂದು ದಿನಕ್ಕೆ ಸಮಾನವಾಗಿರುತ್ತದೆ. ಆದ್ದರಿಂದ, ನಾವು ಹೊಸ ವರ್ಷದ ಶುಭ ವರ್ಷವನ್ನು ಪ್ರಾರಂಭಿಸಿದಾಗ ಬ್ರಹ್ಮ ದೇವರು ಹೊಸ ದಿನವನ್ನು ಪ್ರಾರಂಭಿಸುತ್ತಾನೆ.

Recommended Video
ಯುಗಾದಿಯ ದಿನದ ಹಿಂದೆ ಪೌರಾಣಿಕ ಕಥೆಯೂ ಇದೆ. ಒಂದಾನೊಂದು ಕಾಲದಲ್ಲಿ ಸಂಭಬಕಾಸುರನೆಂಬ ರಾಕ್ಷಸನಿದ್ದ. ಈ ರಾಕ್ಷಸನು ಬ್ರಹ್ಮನ ವೇದಗಳನ್ನು ತೆಗೆದುಕೊಂಡು ಒಂದು ದಿನ ಸಮುದ್ರದಲ್ಲಿ ಬಚ್ಚಿಟ್ಟನು. ಭಗವಾನ್ ವಿಷ್ಣು ರಾಕ್ಷಸ ಬ್ರಹ್ಮನ ವೇದಗಳನ್ನು ತೆಗೆದುಕೊಂಡಿದ್ದಾನೆ ಎಂದು ತಿಳಿದನು. ಆಗ ವಿಷ್ಣುವು ಮತ್ಸ್ಯ ರೂಪವನ್ನು ಧರಿಸಿ ಸಮುದ್ರದ ಕೆಳಗೆ ದೈತ್ಯಾಕಾರದ ರಾಕ್ಷಸನ ವಿರುದ್ಧ ಹೋರಾಡಿದನು. ಆ ಮೃಗವನ್ನು ತನ್ನ ಚಕ್ರದಿಂದ ಕತ್ತು ಹಿಸುಕಿ ಕೊಂದನು. ವೇದಗಳನ್ನು ಹಿಂದಕ್ಕೆ ತೆಗೆದುಕೊಂಡು ಬಂದನು. ನಂತರ ಅವರು ಬ್ರಹ್ಮ ದೇವರಿಗೆ ಅದನ್ನು ಹಿಂತಿರುಗಿಸಿದನು. ಇದೆಲ್ಲವೂ ಚೈತ್ರ ಮಾಸದ ಮೊದಲ ದಿನದಂದು ಸಂಭವಿಸಿತು. ಈ ದಿನ ಬ್ರಹ್ಮನು ವೇದಗಳನ್ನು ಪುನಃ ಪಡೆದುಕೊಂಡನು ಮತ್ತು ಬ್ರಹ್ಮಾಂಡವನ್ನು ಸೃಷ್ಟಿಸಿದನು. ಪರಿಣಾಮವಾಗಿ, ನಾವು ಈ ದಿನ ಹೊಸ ವರ್ಷದ ಸಂಭ್ರಮವನ್ನು ಆಚರಿಸುತ್ತೇವೆ.












Click it and Unblock the Notifications