50% discount on traffic fines : ದಂಡ ಉಳಿಸಿಕೊಂಡವರಿಗೆ 50% ಅಡಿ ಪಾವತಿಗೆ ಮತ್ತೊಂದು ಅವಕಾಶ ನೀಡಿದ ಸರ್ಕಾರ
ಫೆಬ್ರವರಿ 11ರವರೆಗೆ ಸಂಚಾರ ನಿಯಮ ಉಲ್ಲಂಘಟನೆಯ ದಂಡ ಕಟ್ಟದೇ ಬಕಿ ಉಳಿಸಿಕೊಂಡವರಿಗೆ 50% ಅಡಿ ದಂಡ ಪಾವತಿಗೆ ರಾಜ್ಯ ಸರ್ಕಾರ ಮತ್ತೊಂದು ಅವಕಾಶ ನೀಡಿ ಆದೇಶಿಸಿದೆ. ಎಷ್ಟು ದಿನ, ಯಾವಾಗ ದಂಡ ಪಾವತಿ ಆರಂಭ? ತಿಳಿಯಿರಿ.
ಬೆಂಗಳೂರು, ಮಾರ್ಚ್ 03: ಸಂಚಾರ ನಿಯಮ ಉಲ್ಲಂಘನೆಯ ದಂಡದ ಮೇಲೆ ಶೇ. 50ರಷ್ಟು ರಿಯಾಯಿತಿ ಘೋಷಣೆ ಬಳಿಕ ವ್ಯಕ್ತವಾದ ಭಾರೀ ಸ್ಪಂದನೆಯಿಂದಾಗಿ ರಾಜ್ಯ ಸರ್ಕಾರ ದಂಡ ಪಾವತಿಗೆ ಮತ್ತೊಂದು ಅವಕಾಶ ನೀಡಿದೆ. ನಿಯಮ ಉಲ್ಲಂಘಿಸಿದ ದಂಡ ಕಟ್ಟದೆ ಇರುವವರಿಗೆ ಇದು ಮತ್ತೊಂದು ಸುವರ್ಣ ಅವಕಾಶವಾಗಿದೆ.
ಹೌದು, ಈ ಹಿಂದೆ ಫೆಬ್ರವರಿ 2 ರಿಂದ 11ರವರೆಗೆ ಸಂಚಾರ ನಿಯಮ ಉಲ್ಲಂಘಿಸಿದವರಿಗೆ ದಂಡದ ಅರ್ಧದಷ್ಟು ಮಾತ್ರವೇ ಕಟ್ಟಲು ಅವಕಾಶ ನೀಡಲಾಗಿತ್ತು. ಇದರಿಂದಾಗಿ ಸರ್ಕಾರದ ಭೋಕ್ಕಸಕ್ಕೆ ಭಾರಿ ಪ್ರಮಾಣದಲ್ಲಿ ಹಣ ಸಂಗ್ರಹವಾಗಿತ್ತು. ಇದಾದ ಬಳಿಕ ಅವಧಿ ವಿಸ್ತರಣೆಗೆ ಸಾಕಷ್ಟು ಮನವಿಗಳು, ಬೇಡಿಕೆ ಕೇಳಿ ಬಂದಿತ್ತು.

ಬೇಡಿಕೆಯಂತೆ ರಾಜ್ಯ ಸಾರಿಗೆ ಇಲಾಖೆ, ಪೊಲೀಸ್ ಇಲಾಖೆ ನೇತೃತದಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ನ್ಯಾಯಾಮೂರ್ತಿ ಬಿ.ವೀರಪ್ಪ ಅವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ದಂಡ ಪಾವತಿಗೆ ಮತ್ತೆ ಅವಕಾಶ ನೀಡಲಾಗಿದೆ. ಇದೇ ಮಾರ್ಚ್ 04ರಿಂದ ಮುಂದಿನ 15 ದಿನ ಶೇ. 50ರಷ್ಟು ರಿಯಾಯಿತ ದರದಲ್ಲಿ ದಂಡ ಪಾವತಿಗೆ ಅವಕಾಶ ಕಲ್ಪಿಸಿಒ ಸರ್ಕಾರ ಆದೇಶಿಸಿದೆ.
ಫೆಬ್ರವರಿ 11 ರೊಳಗೆ ದಂಡ ಕಟ್ಟಲು ಸಾಧ್ಯವಾಗದವರು ಈ ಭಾರಿ ದಂಡ ಕಟ್ಟುವ ಮೂಲಕ ಇದರ ಪ್ರಯೋಜನ ಪಡೆಯಬೇಕು.
ಈ ಹಿಂದೆ ಇಂಥದ್ದೇ ಅವಕಾಶ ನೀಡಿದಾಗ ಕೋಟ್ಯಂತರ ರೂಪಾಯಿ ದಂಡ ಸಂಗ್ರಹವಾಗಿತ್ತು. ಆನ್ಲೈನ್, ಆಫ್ಲೈನ್ ಮೂಲಕ ಜನ ದಂಡ ಕಟ್ಟಿದ್ದರು. ಬೆಂಗಳೂರು ಸೇರಿದಂತೆ ಕರ್ನಾಟಕದ ಸಂಚಾರಿ ಪೊಲೀಸರ ಬಳಿಗೆ ತೆರಳಿ ಜನರು ಮುಗಿಬಿದ್ದು ದಂಡ ಪಾವತಿಸಿದ್ದರು. ದಂಡ ಪಾವತಿಗೆ ಪೊಲೀಸ್ ಠಾಣೆ, ಸಂಚಾರ ನಿಯಂತ್ರಣ ಕೇಂದ್ರ ಮುಂದೆಲ್ಲ ಸರತಿ ಸಾಲಿನಲ್ಲಿ ನಿಂತದ್ದು ಸಾಮಾನ್ಯವಾಗಿತ್ತು.

ಕಳೆದ ಬಾರಿ ಸುಮಾರು 44 ತರಹದ ನಿಯಮಗಳ ಉಲ್ಲಂಘಟನೆಗೆ ದಂಡದಲ್ಲಿ ರಿಯಾಯಿತಿ ನೀಡಲಾಗಿತ್ತು. ಈ ಬಾರಿಯೂ ಅದು ಹಾಗೆಯೇ ಮುಂದುವರಿಯಲಿದೆ. ಸವಾರರು ಕರ್ನಾಟಕ ಒನ್ ವೆಬ್ಸೈಟ್ನಲ್ಲಿ ವಿವರಗಳನ್ನು ಪಡೆದು ದಂಡ ಪಾವತಿಸಲು ಅವಕಾಶ ನೀಡಲಾಗಿದೆ. ಪೇಟಿಎಂ ಆ್ಯಪ್ ನಡಿ ಉಲ್ಲಂಘನೆ ಬಗ್ಗೆ ಪೂರ್ಣ ಮಾಹಿತಿ ಪಡೆದು ಹಣ ಕಟ್ಟಬಹುದು. ಹತ್ತಿರ ಸಂಚಾರ ಪೊಲೀಸ್ ಠಾಣೆಗಳಲ್ಲಿ ದಂಡ ಪಾವತಿಸಿದ್ದೇ ಆದಲ್ಲಿ ವಾಹನ ಸಂಖ್ಯೆಯ ಮೇಲೆ ರಶೀದಿ ಪಡೆಯುವಂತೆ ಸರ್ಕಾರ ತಿಳಿಸಿದೆ.












Click it and Unblock the Notifications