ಕರ್ನಾಟಕದಲ್ಲಿ 'ಸಮಗ್ರ ಶಿಶು ಅಭಿವೃದ್ಧಿ ಯೋಜನೆ'ಗೆ ಹಿನ್ನಡೆ: ECCE ತರಗತಿಗೆ ಸೂಚನೆ
ಬೆಂಗಳೂರು, ಜೂನ್ 26: ರಾಜ್ಯದ ಕಲ್ಯಾಣ ಕರ್ನಾಟಕ ಪ್ರದೇಶದ 1008 ಸರ್ಕಾರಿ ಶಾಲೆಗಳು ಹಾಗೂ ಕರ್ನಾಟಕದ ಇನ್ನಿತರ ಕಡೆಗಳಲ್ಲಿನ ಶಾಲೆಗಳಲ್ಲಿ ECCE ತರಗತಿಗಳನ್ನು ಆರಂಭಿಸುವಂತೆ ಕರ್ನಾಟಕ ಸರ್ಕಾರ ಇತ್ತೀಚೆಗೆ ಆದೇಶ ಹೊರಡಿಸಿದೆ.
ಸರ್ಕಾರದ 'ಸಮಗ್ರ ಶಿಶು ಅಭಿವೃದ್ಧಿ ಯೋಜನೆ'ಗೆ ಈ ಸಂಬಂಧ ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಾಲಾ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವ, ಇಲಾಖೆ ಅಧ್ಯಕ್ಷರು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದರು.

ನಗರ, ಗ್ರಾಮೀಣ ಪ್ರದೇಶಗಳಲ್ಲಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ICDS) ನಿರ್ವಹಿಸುವ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಅಂಗನವಾಡಿಯರ ಸಂಘವು ಈ ಯೋಜನೆಗೆ ಹಿನ್ನಡೆ ಆಗುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿವೆ. ಇದನ್ನು ಸರ್ಕಾರದ ಗಮನಕ್ಕೆ ತರುತ್ತಿದ್ದಂತೆ ಸಿಎಂ ನೇತೃತ್ವದಲ್ಲಿ ಸಭೆ ನಡೆಸಿ ಕೆಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಯಿತು.
ಕೈಗೊಂಡ ನಿರ್ಧಾರ-ಸಭೆ ಅಂಶಗಳ ಪಟ್ಟಿ
* ಶಿಶುವಿಹಾರ ಶಿಕ್ಷಣಕ್ಕಾಗಿ ಪೋಷಕರಲ್ಲಿ ಬಲವಾದ ಬೇಡಿಕೆ ಬಂದಿದೆ ಮತ್ತು ಮಕ್ಕಳ ಶಾಲಾ ಸಿದ್ಧತೆಯನ್ನು ಖಚಿತಪಡಿಸಿಕೊಳ್ಳಲು ಶಾಲೆಗಳಲ್ಲಿ ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ಸರಿಯಾದ ಇಸಿಸಿಇ ತರಗತಿ ನಡೆಸುವ ಬಗ್ಗೆ ಕ್ರಮ ವಹಿಸಬೇಕು.
* ಎಲ್‌ಕೆಜಿ/ಯುಕೆಜಿಗೆ ಪೋಷಕರಿಂದ ಬೇಡಿಕೆ ಇರುವುದನ್ನು ಖಾಸಗಿ ನರ್ಸರಿ ಶಾಲೆಗಳಲ್ಲಿ ಹೆಚ್ಚುತ್ತಿರುವ ದಾಖಲಾತಿಯಿಂದ ತಿಳಿದು ಬರುತ್ತಿದೆ.
* ಶಾಲಾ ಶಿಕ್ಷಣ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ (WCD) ಎರಡೂ ಇಲಾಖೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಇಸಿಸಿಇಯ ಅಗತ್ಯ ಮತ್ತು ಮಹತ್ವವನ್ನು ಎತ್ತಿ ತೋರಿಸುತ್ತಾ, ಶಿಕ್ಷಣವನ್ನು ನೀಡುವಲ್ಲಿ ಮತ್ತು ಮಕ್ಕಳ ಪೌಷ್ಠಿಕಾಂಶದ ಆಗತ್ಯತೆಗಳನ್ನು ಪೂರೈಸುವಲ್ಲಿ ಎರಡೂ ಇಲಾಖೆಗಳು ಪ್ರಮುಖ ಪಾತ್ರ ನಿರ್ವಹಿಸಬೇಕು.

* WCD ಎರಡೂ ಇಲಾಖೆಗಳು ಇಸಿಸಿಇಯ ಅಗತ್ಯ ಮತ್ತು ಮಹತ್ವವನ್ನು ಎತ್ತಿ ತೋರಿಸೇಕು. ಈ ಶಿಕ್ಷಣವನ್ನು ನೀಡುವಲ್ಲಿ ಮತ್ತು ಮಕ್ಕಳ ಪೌಷ್ಟಿಕಾಂಶದ ಅಗತ್ಯತೆಗಳನ್ನು ಪೂರೈಸಲು ಮತ್ತಷ್ಟು ಶ್ರಮಿಸಬೇಕು.
* ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ಐಸಿಡಿಎಸ್) ಮುಂದುವರಿಯಲಿದೆ. ಆಧುನಿಕ ದಿನಮಾನಗಳ ಅಗತ್ಯಗಳನ್ನು ಪೂರೈಸುವ ಸಲುವಾಗಿ ವಿಭಿನ್ನ ರೂಪದಲ್ಲಿ ಸದರಿ ಕಾರ್ಯಕ್ರಮವನ್ನು ಉತ್ತೇಜಿಸುವ ಬಗ್ಗೆ ಪ್ರಮುಖ ಚರ್ಚಿಸಲಾಯಿತು.
* ಎರಡೂ ಇಲಾಖೆಗಳ ಒಡಂಬಡಿಕೆಯ ಮಾದರಿಯನ್ನು ಅಭಿವೃದ್ಧಿಪಡಿಸುವುದು. ಎರಡೂ ಇಲಾಖೆಗಳು ಸಾಧ್ಯವಾದಷ್ಟು ಸಹಯೋಗದೊಂದಿಗೆ ಕೆಲಸ ಮಾಡಲು ಸಾಧ್ಯವಾದರೆ, ಸಮಗ್ರ ಮಕ್ಕಳ ಅಭಿವೃದ್ಧಿಯ ಉದ್ದೇಶಿತ ಪ್ರಯೋಜನವನ್ನು ಅದು ಇಸಿಸಿಇ ಮೂಲಕ ಸಾಧಿಸುತ್ತದೆ.
ಅನುಸರಿಸಲಾಗುತ್ತಿರುವ ಕ್ರಮಗಳ ಪಟ್ಟಿ
* ಶಾಲೆಗಳೊಂದಿಗೆ ಹೊಂದಿಕೊಂಡಿರುವಂತಹ ಅಂಗನವಾಡಿಗಳಲ್ಲಿ ಇಸಿಸಿಇ ತರಗತಿಗಳು ನಡೆಸಬೇಕು. ಎಲ್ಲೆಲ್ಲಿ ಅಂಗನವಾಡಿಗಳು ಪ್ರಾಥಮಿಕ ಶಾಲೆಗಳೊಂದಿಗೆ ಹೊಂದಿಕೊಂಡಿರುತ್ತವೆಯೋ ಅಲ್ಲಲ್ಲಿ ಇಸಿಸಿಇ ತರಗತಿಗಳನ್ನು ಅಂಗನವಾಡಿಗಳ ಸಮನ್ವಯದೊಂದಿಗೆ ನಡೆಸಬಹುದು.
* ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಶಿಕ್ಷಣ ಇಲಾಖೆಯು ಇತ್ತೀಚೆಗೆ ಪ್ರಾರಂಭಿಸಿದ 1008 ಇಸಿಸಿಇ ಶಾಲೆಗಳಲ್ಲಿ, ಪ್ರಾಥಮಿಕ ಶಾಲೆಗಳ ಆವರಣದಲ್ಲಿಯೇ 321 ಅಂಗನವಾಡಿ ಸಹಯೋಗಕ್ಕಾಗಿ/ಸಮನ್ವಯಕ್ಕಾಗಿ ಪರಿಗಣಿಸಲಾಗುವುದು.
* ಈ ಕೇಂದ್ರಗಳಲ್ಲಿನ ಅಂಗನವಾಡಿ ಕಾರ್ಯಕರ್ತೆಯರು ಕನಿಷ್ಠ ದ್ವಿತೀಯ ಪಿಯುಸಿ ಶೈಕ್ಷಣಿಕ ಆರ್ಹತೆಯನ್ನು ಹೊಂದಿರಬೇಕು. ಆದ್ದರಿಂದ. ಇಸಿಸಿಇ ತರಗತಿಗಳಿಗೆ ಅಂಗನವಾಡಿಗಳೊಂದಿಗೆ ಹೊಂದಿಕೊಂಡಿರುವಂತಹ ಶಾಲೆಗಳಲ್ಲಿ ಕನಿಷ್ಠ ಪಿಯುಸಿ ಅಧ್ಯಯನ ಮಾಡಿದ ಅಂಗನವಾಡಿ ಕಾರ್ಯಕರ್ತೆಯರನ್ನು ಪರಿಗಣಿಸಲಾಗುವುದು.
* ಅಗತ್ಯ ವಿದ್ಯಾರ್ಹತೆ ಹೊಂದಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ ಇ.ಸಿ.ಸಿ.ಇ ತರಗತಿಗಳಿಗೆ ತರಬೇತಿ ನೀಡಲಾಗುವುದು.
* ಅಸ್ತಿತ್ವದಲ್ಲಿರುವ ಅಂಗನವಾಡಿ ಕಟ್ಟಡವನ್ನು ಎಲ್‌ಕೆಜಿ ಕೇಂದ್ರವಾಗಿ ಬಳಸಿಕೊಳ್ಳಲಾಗುವುದು. ಅಂಗನವಾಡಿ ಕೇಂದ್ರಗಳು ಯುಕೆಜಿ ಕೊಠಡಿಯಲ್ಲಿಯೂ ಮಕ್ಕಳಿಗೆ ರೋಗನಿರೋಧಕ ಲಸಿಕೆ ಮತ್ತು ಪೌಷ್ಟಿಕಾಂಶದ ಸೇವೆಗಳನ್ನು ಪೂರೈಸುವುದನ್ನು ಮುಂದುವರಿಸಲಾಗುವುದು.
* ಶಾಲೆಗಳೊಂದಿಗೆ ಹೊಂದಿಕೊಂಡಿರುವ ಕೇಂದ್ರಗಳಲ್ಲಿ ಎರಡೂ ಇಲಾಖೆಗಳು ಜವಾಬ್ದಾರಿಗಳನ್ನು ಹಂಚಿಕೊಳ್ಳಲಾಗುವುದು.
* ಅಂಗನವಾಡಿ ಕೇಂದ್ರಗಳಲ್ಲಿ ಪೂರ್ವ ಪ್ರಾಥಮಿಕ ಕಲಿಕಾ ಪ್ರಕ್ರಿಯೆಯನ್ನು ಮುಖ್ಯೋಪಾಧ್ಯಾಯರು ಮೇಲ್ವಿಚಾರಣೆ ಮಾಡುತ್ತಾರೆ ಮತ್ತು ಡಬ್ಲ್ಯುಸಿಡಿ ಮೇಲ್ವಿಚಾರಕರು ಮತ್ತು ಎಸಿಡಿಪಿಒ ಒಟ್ಟಾರೆ ಮೇಲ್ವಿಚಾರಣೆ ಮಾಡುತ್ತಾರೆ.












Click it and Unblock the Notifications