ಕರ್ನಾಟಕ 'ರಾಜ್ಯ ಧ್ವಜ'ದ ವಿನ್ಯಾಸಕ್ಕೆ ತಜ್ಞರ ಸಮಿತಿ ರಚನೆ

Subscribe to Oneindia Kannada

ಬೆಂಗಳೂರು, ಜುಲೈ 18: ಕರ್ನಾಟಕ ರಾಜ್ಯದ ನೂತನ ಧ್ವಜ ವಿನ್ಯಾಸಗೊಳಿಸಲು ಸರಕಾರ 9 ಜನ ತಜ್ಞರ ಸಮಿತಿ ರಚನೆ ಮಾಡಿದೆ. ಈ ಮೂಲಕ ಅಧಿಕೃತ ಧ್ವಜ ಪಡೆಯುವ ಸನ್ನಾಹದಲ್ಲಿದೆ ಕರ್ನಾಟಕ.

ಸಂವಿಧಾನಸ 370ನೇ ವಿಧಿ ಪ್ರಕಾರ ವಿಶೇಷ ಸ್ಥಾನಮಾನ ಪಡೆದಿರುವ ಜಮ್ಮು ಮತ್ತು ಕಾಶ್ಮೀರ ರಾಜ್ಯ ಮಾತ್ರ ಈ ರೀತಿಯ ವಿಶೇಷ ಧ್ವಜವನ್ನು ಹೊಂದಿದೆ ಎಂಬುದು .

ಕರ್ನಾಟಕ ರಾಜ್ಯಕ್ಕೆ ಅಧಿಕೃತ ಬಾವುಟ ಇಲ್ಲ

Govt of Karnataka has constituted a 9 member committee to design a ‘state' flag

ಈ ಹಿಂದೆ 2012ರಲ್ಲಿ ಬಿಜೆಪಿ ಅಧಿಕಾರವಧಿಯಲ್ಲಿ ಕರ್ನಾಟಕ ಹೈಕೋರ್ಟಿಗೆ ಅಫಿಡವಿಟ್ ಸಲ್ಲಿಸಿದ್ದ ಸರಕಾರ, ಕೆಂಪು ಮತ್ತು ಹಳದಿ ಬಣ್ಣದ ಧ್ವಜವನ್ನು ರಾಜ್ಯದ ಅಧಿಕೃತ ಧ್ವಜವಾಗಿ ಸ್ವೀಕರಿಸುವ ಸಲಹೆಯನ್ನು ಒಪ್ಪಿಕೊಂಡಿಲ್ಲ. ಇದು 'ದೇಶದ ಏಕತೆ ಮತ್ತು ಸಮಗ್ರತೆ'ಗೆವಿರುದ್ಧವಾದುದು ಎಂದು ಹೇಳಿಕೆ ನೀಡಿತ್ತು.

ಈ ಸಂಬಂಧ ವಿಧಾನಸಭೆಯಲ್ಲಿ ಚರ್ಚೆ ನಡೆದಾಗ ಅಂದಿನ ಕನ್ನಡ ಮತ್ತು ಸಂಸ್ಕೃತಿ ಸಚಿವ ಗೋವಿಂದ್ ಎಂ ಕಾರಜೋಳ, "ದೇಶದ ಧ್ವಜ ಸಂಹಿತಿಯಲ್ಲಿ ಪ್ರತ್ಯೇಕ ರಾಜ್ಯ ಧ್ವಜಗಳಿಗೆ ಅವಕಾಶವಿಲ್ಲ ಎಂದು ಹೇಳಿದ್ದರು. ರಾಷ್ಟ್ರ ಧ್ವಜ ದೇಶದ ಏಕತೆ ಮತ್ತು ಸಮಗ್ರತೆಯ ಪ್ರತೀಕ," ಎಂದು ಹೇಳಿದ್ದರು.

ಸದ್ಯದಲ್ಲೇ ಕನ್ನಡ ಧ್ವಜವಾಗಲಿದೆ 'ರಾಜ್ಯ ಧ್ವಜ' : ಸಿದ್ದರಾಮಯ್ಯ

ಇದೀಗ ಜೂನ್ 6ರಂದು ಆದೇಶ ಹೊರಡಿಸಿರುವ ಸರಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಅಧ್ಯಕ್ಷರಾಗಿರುವ 9 ಜನ ತಜ್ಞರ ಸಮಿತಿ ರಚನೆ ಮಾಡಿದೆ. 'ಈ ಸಮಿತಿ ಧ್ವಜದ ವಿನ್ಯಾಸವನ್ನು ಮಾಡಬೇಕು ಮತ್ತುಅದಕ್ಕಿರುವ ಕಾನೂನು ಮಾನ್ಯತೆ ಬಗ್ಗೆ ವರದಿ ನೀಡುವಂತೆ,' ಸರಕಾರ ತನ್ನ ಸುತ್ತೋಲೆಯಲ್ಲಿ ತಿಳಿಸಿದೆ.

ಈ ಹಿಂದೆ 2014ರಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಪಾಟೀಲ್ ಪುಟ್ಟಪ್ಪ ಮತ್ತು ಆರ್.ಟಿ.ಐ ಕಾರ್ಯಕರ್ತ ಭೀಮಪ್ಪ ಗುಂಡಪ್ಪ ಗಡಾದ ಕರ್ನಾಟಕಕ್ಕೆ ಪ್ರತ್ಯೇಕ ಧ್ವಜ ವಿನ್ಯಾಸಗೊಳಿಸುವಂತೆ ನಿಯೋಗದ ಮೂಲಕ ಮನವಿ ಸಲ್ಲಿಸಿದ್ದರು.

ಚುನಾವಣೆಗೂ ಧ್ವಜಕ್ಕೂ ಸಂಬಂಧವಿಲ್ಲ

ಇನ್ನು ಈ ಕುರಿತು ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, "ಸಂವಿಧಾನದ ಯಾವ ವಿಧಿ ರಾಜ್ಯಗಳು ಧ್ವಜ ಹೊಂದದಂತೆ ನಿರ್ಬಂಧ ವಿಧಿಸುತ್ತದೆ?" ಎಂದು ಪ್ರಶ್ನಿಸಿದ್ದಾರೆ.

ರಾಜ್ಯ ಧ್ವಜ ಹೊಂದುವುದಕ್ಕೂ ಚುನಾವಣೆಗೂ ಸಂಬಂಧವಿಲ್ಲ. ಒಂದೊಮ್ಮೆ ಬಿಜೆಪಿ ಇದನ್ನು ವಿರೋಧಿಸುವುದಾದರೆ ಅವರು ರಾಜ್ಯ ಧ್ವಜದ ವಿರುದ್ಧ ಇದ್ದೇವೆ ಎಂದು ಬಹಿರಂಗವಾಗಿ ಹೇಳುತ್ತಾರಾ?," ಎಂದು ಬಿಜೆಪಿಯನ್ನು ಪ್ರಶ್ನಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Congress led Karnataka government has constituted a nine member committee to design a ‘state' flag and submit a report on providing it a legal sanctity.
Please Wait while comments are loading...