ಬೆಂಗಳೂರಿನ ಗತವೈಭವ ಸಾರುವ ಫಲಪುಷ್ಪ ಪ್ರದರ್ಶನಕ್ಕೆ ಸಾಕ್ಷಿಯಾದ ರಾಜ್ಯಪಾಲರು

ಬೆಂಗಳೂರು,ಜನವರಿ21: ಬೆಂಗಳೂರು ನಗರದ ಇತಿಹಾಸ ವಿಷಯಾಧಾರಿತ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನ-2023ಕ್ಕೆ ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಸಾಕ್ಷಿಯಾದರು.

ಶುಕ್ರವಾರ ನಗರದ ಲಾಲ್ ಬಾಗ್ ಗೆ ಭೇಟಿ ನೀಡಿದ ಅವರು, ಗಣರಾಜ್ಯೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಫಲಫುಷ್ಪ ಪ್ರದರ್ಶನದಲ್ಲಿ ದೇಶದ ವಿವಿಧ ಬಗೆಯ ಪುಷ್ಪಗಳ ಮೂಲಕ ನಿರ್ಮಿಸಲಾದ ಮಣ್ಣಿನ ಕೋಟೆ, ಕೆಂಪೇಗೌಡ ಗೋಪುರಗಳು, ಟಿಪ್ಪು ಸುಲ್ತಾನನ ಬೇಸಿಗೆ ಅರಮನೆ, ಹೈಕೋರ್ಟ್ ಕಟ್ಟಡ, ಬೇಗೂರು ಶಾಸನ ಮತ್ತು ಬೆಂಗಳೂರು ಅರಮನೆ ಸೇರಿದಂತೆ ಸುಂದರವಾಗಿ ಮೂಡಿ ಬಂದಿರುವ ಹಾಗೂ ಗತವೈಭವ ಸಾರುವ ಪ್ರತಿಕೃತಿಗಳನ್ನು ವೀಕ್ಷಿಸಿದರು.

ನಂತರ ತೋಟಗಾರಿಕೆ ಇಲಾಖೆಯ ಈ ಕಾರ್ಯಕ್ಕೆ ಪ್ರಶಂಸಿದ ಅವರು ಅಧಿಕಾರಿಗಳು, ಸಿಬ್ಬಂದಿಗಳು, ಪ್ರದರ್ಶನಕಾರರು ಹಾಗೂ ಎಲ್ಲಾ ಬೆಳೆಗಾರರನ್ನು ಅಭಿನಂದಿಸಿದರು. ಈ ಸಂದರ್ಭದಲ್ಲಿ ತೋಟಗಾರಿಕೆ ನಿರ್ದೇಶಕರಾದ ಶ್ರೀ ನಾಗೇಂದ್ರ ಪ್ರಸಾದ್.ಕೆ, ಲಾಲ್ ಬಾಗ್ ನ ಕಾರ್ಯನಿರ್ವಾಹಕ ನಿರ್ದೇಶಕ ಪರಶಿವಮೂರ್ತಿ ಕೆ.ಎಂ ಸೇರಿದಂತೆ ಮುಂತಾದ ಅಧಿಕಾರಿಗಳು ಉಪಸ್ಥಿತರಿದ್ದರು.

Governor Witnessed The Flower Show Of Bangalores Past Glory

ಇನ್ನೂ ಈ ಬಾರಿಯೂ ಅದ್ದೂರಿ ಫಲಪುಷ್ಪಪ್ರದರ್ಶನಕ್ಕೆ ಸಿದ್ದಗೊಂಡಿದ್ದು, ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನದಲ್ಲಿ ಬೆಂಗಳೂರು ನಗರದ ಚಿತ್ರಣ ಕಂಗೊಳಿಸಲಿದೆ. ಲಾಲ್ ಬಾಗ್ ನಲ್ಲಿ 1,500 ವರ್ಷಗಳ ಬೆಂಗಳೂರು ಇತಿಹಾಸದ ಚಿತ್ರಣ ಸೃಷ್ಟಿಯಾಗಲಿದ್ದು, ವರ್ಟಿಕಲ್ ಗಾರ್ಡನ್ ರೂಪದಲ್ಲಿ ಐತಿಹಾಸಿಕ ಬೆಂಗಳೂರು ಗಡಿ ಗೋಪುರ ಅನಾವರಣಗೊಂಡಿದೆ.ಇಂದಿನಿಂದ ಆರಂಭವಗಿರುವ ಫಲಪುಷ್ಪ ಪ್ರದರ್ಶನ 10 ದಿನ ಜ. 30ರವರೆಗೆ ನಡೆಯಲಿದೆ.

Governor Witnessed The Flower Show Of Bangalores Past Glory

ಇನ್ನೂ ಟಿಕೆಟ್ ದರವನ್ನು ಹೆಚ್ಚಿಸಲಾಗಿಲ್ಲ.ವಯಸ್ಕರಿಗೆ ಸಾಮಾನ್ಯ ದಿನಗಳಲ್ಲಿ 70 ರೂಪಾಯಿ, ರಾಜಾ ದಿನಗಳಲ್ಲಿ ‌75 ರೂಪಾಯಿ ನಿಗದಿ ಮಾಡಲಾಗಿದೆ.ಇನ್ನೂ 12 ವರ್ಷ ಒಳಗಿನ ಮಕ್ಕಳಿಗೆ ಎಲ್ಲಾ ದಿನಗಳಲ್ಲಿ 30 ರೂಪಾಯಿ ಫಿಕ್ಸ್ ಮಾಡಲಾಗಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ನಾಲ್ಕು ಗೇಟ್ ಗಳಲ್ಲಿಯೂ ಟಿಕೆಟ್ ಕೌಂಟರ್ ವ್ಯವಸ್ಥೆ ಹಾಗೂ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+