ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪರಿಷತ್ ನಾಮ ನಿರ್ದೇಶನ: ಇಬ್ಬರ ಹೆಸರು ಒಕೆ, ಲಿಂಗಪ್ಪ ಹೆಸರು ಯಾಕೆ?

By Sachhidananda Acharya
|
Google Oneindia Kannada News

ಬೆಂಗಳೂರು, ಮೇ 17: ವಿಧಾನಪರಿಷತ್ ಗೆ ಮೂವರ ಹೆಸರನ್ನು ನಾಮ ನಿರ್ದೇಶನ ಮಾಡಿ ಕರ್ನಾಟಕ ಸರಕಾರ ಕಳುಹಿದ್ದ ಕಡತದಲ್ಲಿ ಇಬ್ಬರ ಹೆಸರನ್ನು ರಾಜ್ಯಪಾಲರು ಒಪ್ಪಿದ್ದು ಒಬ್ಬರ ಹೆಸರನ್ನು ವಾಪಸ್ಸು ಕಳುಹಿಸಿದ್ದಾರೆ.

ಶಿಕ್ಷಣ, ಸಮಾಜ ಸೇವೆ ಕೋಟಾದಲ್ಲಿ ಸಿಎಂ ಲಿಂಗಪ್ಪ ಹೆಸರನ್ನು ಸಿದ್ದರಾಮಯ್ಯ ಸರಕಾರ ಮೇಲ್ಮನೆಗೆ ನಾಮ ನಿರ್ದೇಶನ ಮಾಡಿತ್ತು. ಆದರೆ ಅವರು ಶಿಕ್ಷಣ ಮತ್ತು ಸಮಾಜ ಸೇವೆ ಕೋಟಾದಲ್ಲಿ ಬರಲ್ಲ ಎಂದಿರುವ ರಾಜ್ಯಪಾಲ ವಜೂಭಾಯಿ ವಾಲಾ ಸ್ಪಷ್ಟನೆ ಕೋರಿ ಅವರ ಹೆಸರನ್ನು ಮರು ಪರಿಶೀಲನೆಗೆ ಸರಕಾರಕ್ಕೆ ವಾಪಸ್ ಕಳುಹಿಸಿದ್ದಾರೆ.

Governor Vajubhai Vala rejects CM Lingappa’s name for Vishan Parishat nomination

ಇನ್ನು ಮೋಹನ್ ಕೊಂಡಜ್ಜಿ, ಪಿ.ಆರ್ ರಮೇಶ್ ಹೆಸರನ್ನು ರಾಜ್ಯಪಾಲರು ಒಪ್ಪಿದ್ದಾರೆ. ಇದರಿಂದ ಇವರಿಬ್ಬರು ವಿಧಾನ ಪರಿಷತ್ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಅಂಬರೀಶ್ ಗೆ ನೊಟೀಸ್ ಜಾರಿ

ಅಂಬರೀಶ್ ಶಾಸಕ ಸ್ಥಾನ ರದ್ದು ಕೋರಿ ಮಂಡ್ಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿಎಸ್ ಗೌಡ 8ದಿನದ ಹಿಂದೆ ವಿಧಾನಸಭಾ ಸ್ಪೀಕರ್ ಕೆ.ಬಿ ಕೋಳಿವಾಡ್ ಗೆ ಪತ್ರ ಬರೆದಿದ್ದರು. ಅದರಂತೆ ನಿಮ್ಮ ಶಾಸಕ ಸ್ಥಾನ ಯಾಕೆ ರದ್ದು ಮಾಡಬಾರದು ಎಂದು ಪ್ರಶ್ನಿಸಿ ಸ್ಪೀಕರ್ ಕೋಳಿವಾಡ್ ಅಂಬರೀಶ್ ಗೆ ನೊಟೀಸ್ ಜಾರಿ ಮಾಡಿದ್ದಾರೆ.

English summary
Karnataka Governor Vajubhai Vala rejected CM Lingappa’s nomination for Vidhan Parishat. Earlier state government sent 3 names to Governor for the nomination seats in Vidhan Parishat. But Vala approved only Mohan Kondajji and PR Ramesh names for the vacant seats.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X