ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿದ್ದರಾಮಯ್ಯಗೆ ರಾಜ್ಯಪಾಲರು ನೀಡಿದ ಸಲಹೆ ಏನು?

|
Google Oneindia Kannada News

ಬೆಂಗಳೂರು, ಜೂನ್ 3 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜ್ಯಪಾಲರು ಮತ್ತೊಮ್ಮೆ ಕಿವಿಹಿಂಡಿ ಕಳಿಸಿದ್ದಾರೆ. ಎಡಿಜಿಪಿ ರವೀಂದ್ರನಾಥ್ ಪ್ರಕರಣ, ಕಸ ವಿಲೇವಾರಿ ಸಮಸ್ಯೆ ಮುಂತಾದವುಗಳ ಕುರಿತು ಮಾತುಕತೆ ನಡೆಸಿರುವ ರಾಜ್ಯಪಾಲರು, ಸರ್ಕಾರ ಪದೇ ಪದೇ ಎಡವುತ್ತಿರುವುದು ಸರಿಯಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ರಾಜಭವನಕ್ಕೆ ರಾಜ್ಯಪಾಲ ಹಂಸರಾಜ್‌ ಭಾರದ್ವಾಜ್‌, ಸರ್ಕಾರದ ಕಾರ್ಯ ವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಸದ್ಯ ಭಾರೀ ವಿವಾದ ಎದ್ದಿರುವ ಎರಡು ಪ್ರಕರಣಗಳ ಬಗ್ಗೆ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದರು. [ಪೊಲೀಸರ ಗಲಾಟೆ: ಸರಕಾರದ ಕಿವಿಹಿಂಡಿದ ಗವರ್ನರ್]

HR Bhardwaj

ಎಡಿಜಿಪಿ ಪ್ರಕರಣದ ಕುರಿತು ಅಸಮಾಧಾನ ವ್ಯಕ್ತಪಡಿಸಿದ ರಾಜ್ಯಪಾಲರು, ಮೊದಲು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದರೆ, ದೊಡ್ಡ ವಿವಾದವಾಗುತ್ತಿರಲಿಲ್ಲ. ಮಾಧ್ಯಮಗಳಲ್ಲಿ ಈ ಕುರಿತು ಸುದ್ದಿ ಪ್ರಸಾರವಾಗುತ್ತಿರುವುದು ಕರ್ನಾಟಕ ಪೊಲೀಸ್‌ ಇಲಾಖೆಗೆ ಕೆಟ್ಟ ಹೆಸರು ತಂದಿದೆ ಎಂದು ಅತೃಪ್ತಿ ವ್ಯಕ್ತಪಡಿಸಿದರು ಎಂದು ತಿಳಿದುಬಂದಿದೆ.

ಬಿಬಿಎಂಪಿ ಏನು ಮಾಡುತ್ತಿದೆ? : ಬೆಂಗಳೂರು ಕಸದ ಸಮಸ್ಯೆ ಬಗ್ಗೆ ಸಿದ್ದರಾಮಯ್ಯ ಅವರ ಬಳಿ ಮಾಹಿತಿ ಪಡೆದ ರಾಜ್ಯಪಾಲರು ನಗರದ ಕಸದ ಸಮಸ್ಯೆ ಬಗೆಹರಿಸಲು ಶಾಶ್ವತ ಪರಿಹಾರವನ್ನು ಹುಡುಕಬೇಕೆಂದು ಸಲಹೆ ನೀಡಿದ್ದಾರೆ. ಕಸದ ಸಮಸ್ಯೆ ಬಗೆಹರಿಸಲಾರದ ಬಿಬಿಬಿಎಂಪಿ ಏನು ಮಾಡುತ್ತಿದೆ ? ಎಂದು ಎಚ್.ಆರ್.ಭಾರದ್ವಾಜ್ ಪ್ರಶ್ನಿಸಿದ್ದಾರೆ.

ಮುಖ್ಯಮಂತ್ರಿಗಳ ಉತ್ತರ : ಸಿಎಂ ಸಿದ್ದರಾಮಯ್ಯ ಎಡಿಜಿಪಿ ಪ್ರಕರಣದ ತನಿಖೆಯನ್ನು ಸಿಐಡಿ ನಡೆಸುತ್ತಿದ್ದು, ತ್ವರಿತವಾಗಿ ತನಿಖೆ ಮುಕ್ತಾಯಗೊಳ್ಳಲಿದೆ. ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಕಸದ ಸಮಸ್ಯೆ ನಿವಾರಣೆ ಬಗ್ಗೆ ಬಿಬಿಎಂಪಿ ಜತೆ ಚರ್ಚಿಸಲಾಗಿದೆ ಎಂದು ರಾಜ್ಯಪಾಲರಿಗೆ ಉತ್ತರ ನೀಡಿದ್ದಾರೆ.

ಸರ್ಕಾರ ಪದೇ ಪದೇ ಇಂತಹ ವಿವಾದಗಳಿಂದ ಸುದ್ದಿಯಾಗಬಾರದು ಈ ಬಗ್ಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯಪಾಲರು ಸಲಹೆ ನೀಡಿದ್ದಾರೆ. ಅಂದಹಾಗೆ ರಾಜ್ಯಪಾಲರು ಪದೇ ಪದೇ ಕಾಂಗ್ರೆಸ್ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರ ಅವಧಿ ಜೂನ್ 29ಕ್ಕೆ ಕೊನೆಗೊಳ್ಳಲಿದ್ದು, ನಂತರ ಕರ್ನಾಟಕಕ್ಕೆ ಹೊಸ ರಾಜ್ಯಪಾಲರು ನೇಮಕವಾಗಲಿದ್ದಾರೆ.

English summary
Karnataka Governor H.R. Bhardwaj expressed displeasure over the state of affairs Karnataka. On Monday, June 2 Chief Minister Siddaramaiah met H.R. Bhardwaj, this time governor expressed his anguish over ADGP P Ravindranaths photo flash episode and Bangalore's burgeoning garbage disposal problem.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X