ದಕ್ಷ ಐಎಎಸ್ ಅಧಿಕಾರಿಯ ಎತ್ತಂಗಡಿ ಮಾಡಿದ ಸರಕಾರ
ಬೆಂಗಳೂರು, ಅ 8: ಸರಕಾರ ನೀಡುವ ಸವಲತ್ತುಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದ ನ್ಯಾಯಬೆಲೆ ಅಂಗಡಿಯವರಿಗೆ ಸಿಂಹಸ್ವಪ್ನವಾಗಿದ್ದ, ಆಹಾರ ಮತ್ತು ನಾಗರೀಕ ಇಲಾಖೆಯ ಆಯುಕ್ತ ಹರ್ಷ ಗುಪ್ತಾ ಅವರನ್ನು ಸಿದ್ದರಾಮಯ್ಯ ಸರಕಾರ ದಿಢೀರ್ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಪ್ರಮುಖವಾಗಿ ಅಕ್ರಮ ಪಡಿತರ ಚೀಟಿದಾರರ ಮತ್ತು ನ್ಯಾಯಬೆಲೆ ಅಂಗಡಿಯ ಮಾಲೀಕರ ಮೇಲೆ ನಿರ್ದಾಕ್ಷ್ಯಿಣ್ಯ ಕ್ರಮಕ್ಕೆ ಮುಂದಾಗಿದ್ದ ಹರ್ಷ ಗುಪ್ತ ಅವರಿಗೆ ಮುಂದಿನ ಜವಾಬ್ದಾರಿ ಯಾವ ಇಲಾಖೆ ಎನ್ನುವುದನ್ನು ಸರಕಾರ ಇನ್ನೂ ಪ್ರಕಟಿಸಲಿಲ್ಲ. ಹರ್ಷ ಗುಪ್ತಾ ಜಾಗಕ್ಕೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಯಾಗಿದ್ದ ಡಾ.ವಿಶಾಲ್ ಅವರನ್ನು ನೇಮಕ ಮಾಡಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಹತ್ವಾಕಾಂಕ್ಷೆಯ 'ಅನ್ನಭಾಗ್ಯ' ಯೋಜನೆ ಜಾರಿಗೆ ಬಂದಾಗ, ಹರ್ಷ ಗುಪ್ತಾ ಅವರನ್ನು ಆಹಾರ ಮತ್ತು ನಾಗರೀಕ ಇಲಾಖೆಗೆ ಆಯುಕ್ತರನ್ನಾಗಿ ನೇಮಕ ಮಾಡಲಾಗಿತ್ತು. ದಕ್ಷ ಅಧಿಕಾರಿಯೆಂದೇ ಹೆಸರಾಗಿರುವ ಹರ್ಷ ಗುಪ್ತಾ ಅವರನ್ನು ಆ ಸ್ಥಾನಕ್ಕೆ ನೇಮಿಸುವಂತೆ ಖುದ್ದು ಮುಖ್ಯಮಂತ್ರಿಗಳೇ ಆಸಕ್ತಿ ವಹಿಸಿ, ಆದೇಶಿಸಿದ್ದರು.
ಹರ್ಷ ಗುಪ್ತಾ ಜೊತೆ ಇತರ ಐದು ಅಧಿಕಾರಿಗಳನ್ನು ಈ ಕೆಳಗಂಡಂತೆ ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
1. ಡಾ. ಎಂ ವಿ ವೆಂಕಟೇಶ್ - ಜಿಲ್ಲಾಧಿಕಾರಿ (ಚಿಕ್ಕಬಳ್ಳಾಪುರ)
2. ಗೌರವ್ ಗುಪ್ತಾ - ಆಯುಕ್ತರು (ಕೈಗಾರಿಕಾಭಿವೃದ್ದಿ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಬೆಂಗಳೂರು)
3. ರಾಜೇಂದ್ರ ಕುಮಾರ್ ಕಟಾರಿಯಾ - ವ್ಯವಸ್ಥಾಪಕ ನಿರ್ದೇಶಕ ( ರಾಜ್ಯ ಗಣಿ, ಪರಿಸರ ಪುನರ್ನಿಮಾಣ)
4. ಎಂ ಮಹೇಶ್ವರ್ ರಾವ್ - ವ್ಯವಸ್ಥಾಪಕ ನಿರ್ದೇಶಕ (ಕರ್ನಾಟಕ ವಿದ್ಯುತ್ ನಿಗಮ)
5. ರಿತೇಶ್ ಕುಮಾರ್ ಸಿಂಗ್ - ಪ್ರಾದೇಶಿಕ ಆಯುಕ್ತ (ಸಾರಿಗೆ, ಪ್ರಕೃತಿ ವಿಕೋಪ ಬೆಂಗಳೂರು ವಿಭಾಗ)












Click it and Unblock the Notifications