ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಬಂಡಾಯ ಶಮನಕ್ಕೆ ಪಾಂಡವಪುರ ಸಕ್ಕರೆ ಕಾರ್ಖಾನೆ ಕೊಡುಗೆ!

|
Google Oneindia Kannada News

ಬೆಂಗಳೂರು, ಜೂ. 06: ಬಂಡಾಯ ಶಮನಕ್ಕೆ ಸಕ್ಕರೆ ಕಾರ್ಖಾನೆಯನ್ನೆ ಕೊಡುಗೆ ಕೊಡ್ತಾರಾ? ಹಾಗೊಂದು ಚರ್ಚೆ ಇದೀಗ ಶುರುವಾಗಿದೆ. ರಾಜಕೀಯ ಪಕ್ಷಗಳಿಗೆ ಬಂಡಾಯ ಎಂಬುದು ಇತ್ತಿಚೆಗೆ ಸರ್ವೆ ಸಾಮಾನ್ಯ. ಕಳೆದ ವಿಧಾನಸಭೆ ಚುನಾವಣೆ ಬಳಿಕ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿದ್ದ ಮೈತ್ರಿ ಸರ್ಕಾರ ಪತನವಾಗಿದ್ದು ಶಾಸಕರ ಬಂಡಾಯದಿಂದಲೇ. ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರ ಅಸಮಾಧಾನ ಮುಂದೆ ಅತೃಪ್ತಿಯಾಯಿತು. ನಂತರ ಭಿನ್ನಮತವಾಗಿ ಶಾಸಕ ಸ್ಥಾನಕ್ಕೆ 17 ಜನರು ರಾಜೀನಾಮೆಯನ್ನು ಕೊಟ್ಟಿದ್ದರು. ಆ ಮೂಲಕ ಮೈತ್ರಿ ಸರ್ಕಾರ ಪತವಾಗಿತ್ತು.

Recommended Video

ಹೋಟೆಲ್ ಹಾಗು ರೆಸ್ಟೋರೆಂಟ್ ತೆರೆಯಲು ಅವಕಾಶ , ಆದರೆ !! | Hotel & Restaurants to Reopen | Oneindia Kannada

ನಂತರ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಬಿಜೆಪಿ ಹಿರಿಯ ಶಾಸಕರಲ್ಲೂ ಅಸಮಾಧಾನ ಶುರುವಾಗಿದೆ. ಕೊರೊನಾ ವೈರಸ್ ತಂದಿಟ್ಟಿದ್ದ ಭಯದ ಹಿನ್ನೆಲೆಯಲ್ಲಿ ಬಿಜೆಪಿ ಬಂಡಾಯ ಕಳೆದ ಕೆಲ ತಿಂಗಳುಗಳಿಂದ ತಣ್ಣಗಾಗಿತ್ತು. ಆದರೆ ಲಾಕ್‌ಡೌನ್‌ ಸಡಿಲಿಕೆ ಆಗುತ್ತಿದ್ದಂತೆಯೆ ಬಿಜೆಪಿ ಬಂಡಾಯ ಮುನ್ನೆಲೆಗೆ ಬಂದಿದೆ. ಮತ್ತೆ ಬಂಡಾಯ ಶಮನಕ್ಕೆ ಹೊಸ ಅಸ್ತ್ರ ಬಳಕೆ ಆಗಿದೆ ಎಂದು ಚರ್ಚೆ ರಾಜಕೀಯ ವಲಯದಲ್ಲಿ ನಡೆದಿದೆ.

ಸಕ್ಕರೆ ಕಾರ್ಖಾನೆ ಕೊಡುಗೆ?

ಸಕ್ಕರೆ ಕಾರ್ಖಾನೆ ಕೊಡುಗೆ?

ಮಂಡ್ಯ ಜಿಲ್ಲೆಯ ಪಾಂಡವಪುರ ಸಕ್ಕರೆ ಕಾರ್ಖಾನೆ ಕಳೆದ ಹಲವು ವರ್ಷಗಳಿಂದ ನಷ್ಠದಲ್ಲಿತ್ತು. ರಾಜ್ಯದಲ್ಲಿ ಖಾಸಗಿ ಸಕ್ಕರೆ ಕಾರ್ಖಾನೆಗಳು ಲಾಭದ ಮೇಲೆ ಲಾಭ ಮಾಡಿಕೊಳ್ಳುತ್ತಿದ್ದರೆ ಸಹಕಾರಿ ಹಾಗೂ ಸರ್ಕಾರಿ ಒಡೆತನದ ಸಕ್ಕರೆ ಕಾರ್ಖಾನೆಗಳು ಯಾವಾಗಲೂ ನಷ್ಠದಲ್ಲಿಯೆ ಇರುತ್ತವೆ. ಅದು ಬೇರೆ ಮಾತು. ಇದೀಗ ನಷ್ಠ ಭರಿಸಲು ಮುಂದಾಗದ ರಾಜ್ಯ ಬಿಜೆಪಿ ಸರ್ಕಾರ ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಖಾನೆ (PSSK)ಯನ್ನು ಖಾಸಗಿಯವರಿಗೆ ಹಸ್ತಾಂತರಿಸಿದೆ.

ರಾಜ್ಯ ಬಿಜೆಪಿ ಕೋರ್‌ ಕಮಿಟಿ ಸದಸ್ಯರಿಗೆ ಕೊರೊನಾ ವೈರಸ್ ಭಯ!ರಾಜ್ಯ ಬಿಜೆಪಿ ಕೋರ್‌ ಕಮಿಟಿ ಸದಸ್ಯರಿಗೆ ಕೊರೊನಾ ವೈರಸ್ ಭಯ!

ಮುಂದಿನ 40 ವರ್ಷಗಳ ಅವಧಿಗೆ ಪಿಎಸ್‌ಎಸ್‌ಕೆಯನ್ನು ಖಾಸಗಿ ಆಡಳಿತ ಮಂಡಳಿ ವಹಿಸಿಕೊಂಡಿದೆ. ಖಾಸಗಿ ಆಡಳಿತ ಮಂಡಳಿ ಸಕ್ಕರೆ ಕಾರ್ಖಾನೆ ಲೀಸ್‌ ಪಡೆಯುವುದಕ್ಕೂ ಬಿಜೆಪಿ ಬಂಡಾಯಕ್ಕೂ ಏನು ಸಂಬಂಧ?

ನಿರಾಣಿ ಶುಗರ್ಸ್ ಪಾಲಾದ PSSK

ನಿರಾಣಿ ಶುಗರ್ಸ್ ಪಾಲಾದ PSSK

ಹೌದು! ಬಿಜೆಪಿ ಶಾಸಕ, ಮಾಜಿ ಸಚಿವ ಹಾಗೂ ಸಧ್ಯ ಬಿಜೆಪಿ ಸರ್ಕಾರದಲ್ಲಿ ಮಂತ್ರಿಸ್ಥಾನದ ಪ್ರಬಲ ಆಕಾಂಕ್ಷಿ ಮುರುಗೇಶ್ ನಿರಾಣಿ ಅವರ ಪಾಲುದಾರಿಕೆಯ ನಿರಾಣಿ ಗ್ರೂಪ್‌ ಆಫ್ ಕಂಪನೀಸ್ ಒಡೆತನಕ್ಕೆ ಪಾಂಡವಪುರ ಸಕ್ಕರೆ ಕಾರ್ಖಾನೆಯನ್ನು ಹಸ್ತಾಂತರ ಮಾಡಲಾಗಿದೆ. ಇದು ಬಂಡಾಯ ಶಮನ ಮಾಡಲು ರಾಜ್ಯ ಸರ್ಕಾರ ಕೈಗೊಂಡಿರುವ ನಿರ್ಧಾರ ಎಂದು ಮಂಡ್ಯದ ಕಬ್ಬು ಬೆಳೆಗಾರರು ಆರೋಪಿಸುತ್ತಿದ್ದಾರೆ.

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನಲ್ಲಿರುವ ಸಕ್ಕರೆ ಕಾರ್ಖಾನೆಯನ್ನು 40 ವರ್ಷಗಳ ಅವಧಿಗೆ ನಿರಾಣಿ ಶುಗರ್ಸ್ ಲೀಸ್ ಪಡೆದುಕೊಂಡಿದೆ. ಶೀಘ್ರವೇ ಕಾರ್ಖಾನೆ ಆರಂಭಿಸಲು ನಿರಾಣಿ ಶುಗರ್ಸ್ ಸಿದ್ಧತೆ ನಡೆಸಿದೆ. ಜನಪ್ರತಿನಿಧಿಗಳು, ಸಂಘಟನೆಗಳ ಕಿತ್ತಾಟದಿಂದ ನಷ್ಠಕ್ಕೆ ಸಿಲುಕಿದ್ದ ಸಹಕಾರಿ ತತ್ವದ ಮೇಲೆ ಶುರುವಾಗಿದ್ದ ಮತ್ತೊಂದು ಸಕ್ಕರೆ ಕಾರ್ಖಾನೆ ಸಹಕಾರಿ ಖಾಸಗಿಯವರ ಪಾಲಾಗಿದೆ.

ಸರ್ಕಾರದ ನಡೆ ಅನುಮಾನಕ್ಕೆಡೆ

ಸರ್ಕಾರದ ನಡೆ ಅನುಮಾನಕ್ಕೆಡೆ

ರಾಜ್ಯಸಭೆ ಚುನಾವಣೆ, ವಿಧಾನ ಪರಿಷತ್ ಚುನಾವಣೆ ಹಾಗೂ ಮಂತ್ರಿಮಂಡಲ ವಿಸ್ತರಣೆ ಹಿನ್ನೆಲೆಯಲ್ಲಿ ಬಿಜೆಪಿ ಬಂಡಾಯ ಸಭೆ ಬೆಂಗಳೂರಿನಲ್ಲಿ ನಡೆದಿತ್ತು. ರಾಜ್ಯದಲ್ಲಿ ಸಿಎಂ ಬದಲಾವಣೆ ಕುರಿತು ಬಂಡಾಯ ಸಭೆಯಲ್ಲಿ ಚರ್ಚೆ ನಡೆದಿತ್ತು ಎಂಬ ಮಾಹಿತಿಯಿತ್ತು. ಆದರೆ ನಂತರ ಕ್ಷೇತ್ರಗಳಿಗೆ ಅನುದಾನದ ಕೊರತೆ ಹಾಗೂ ವಿಧಾನ ಪರಿಷತ್, ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಭೆ ಸೇರಲಾಗಿತ್ತು ಎಂಬ ವಿವರಣೆಯನ್ನು ಸಭೆಯಲ್ಲಿದ್ದವರು ಕೊಟ್ಟಿದ್ದರು.

ಸೋತ ಕಲಿಗಳಿಗೆ ಬಿಜೆಪಿಯಲ್ಲಿ ಅನ್ಯಾಯ: ಸಚಿವ ಗೋಪಾಲಯ್ಯ ಹೇಳಿದ್ದೇನು?ಸೋತ ಕಲಿಗಳಿಗೆ ಬಿಜೆಪಿಯಲ್ಲಿ ಅನ್ಯಾಯ: ಸಚಿವ ಗೋಪಾಲಯ್ಯ ಹೇಳಿದ್ದೇನು?

ಬಂಡಾಯ ಸಭೆ ನಡೆದ ಬಳಿಕ ರಾಜ್ಯ ಸರ್ಕಾರ ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಖಾನೆ ಖಾಸಗಿ ಕಂಪನಿಗೆ ಹಸ್ತಾಂತರಿಸಲು ತೀರ್ಮಾನ ಮಾಡಿದೆ. ಸರ್ಕಾರದ ತೀರ್ಮಾನ ಇದೀಗ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

ಯೂಟರ್ನ್ ಹೊಡೆದಿದ್ದ ನಿರಾಣಿ

ಬಂಡಾಯ ಸಭೆಯಲ್ಲಿ ಮಾಜಿ ಸಚಿವ, ಶಾಸಕ ಮುರುಗೇಶ್ ನಿರಾಣಿ ಅವರು ಭಾಗವಹಿಸಿದ್ದರು ಎನ್ನಲಾಗಿತ್ತು. ಆದರೆ ಸಭೆ ನಡೆದು ಎರಡ್ಮೂರು ದಿನಗಳ ಬಳಿಕ ಸ್ಪಷ್ಟನೆ ಕೊಟ್ಟಿದ್ದ ಬಿಜೆಪಿ ಶಾಸಕ ಮುರುಗೇಶ್ ನಿರಾಣಿ ನಾನು ಸಭೆಯಲ್ಲಿ ಭಾಗವಹಿಸಿರಲಿಲ್ಲ ಎಂದು ಸುದ್ದಿಗೋಷ್ಠಿ ನಡೆಸದೆ ವಿಡಿಯೊ ಹರಿಬಿಡುವ ಮೂಲಕ ಸ್ಪಷ್ಟನೆಯನ್ನು ಕೊಟ್ಟಿದ್ದರು. ಅವರು ಹೇಳಿದ್ದು ಇಷ್ಟು.

ಮಾಧ್ಯಮಗಳಲ್ಲಿ ಮುರುಗೇಶ್ ನಿರಾಣಿ, ರಾಮದಾಸ್ ಮತ್ತು ಉಮೇಶ್ ಕತ್ತಿ ಅವರು ಸಭೆ ಸೇರಿ ಒಂದು ಅಸಮಾಧಾನದ ಗ್ರೂಪ್‌ಗಳನ್ನು ಮಾಡುತ್ತಿದ್ದಾರೆ ಎಂಬುದನ್ನುನ ಮಾಧ್ಯಮಗಳ ಮುಖಾಂತರ ನಾನು ನೋಡುತ್ತಿದ್ದೇನೆ. ಇವತ್ತು ಸ್ಪಷ್ಟೀಕರಣ ಕೊಡುವಂಥದ್ದು ಇಷ್ಟೇನೆ, ಸನ್ಮಾನ್ಯ ಶಾಸಕರಾಗಿರುವಂತ ರಾಮದಾಸ್ ಅವರು ಹಿರಿಯ ಶಾಸಕರಾಗಿರುವ ಸನ್ಮಾನ್ಯ ಉಮೇಶ್ ಕತ್ತಿ ಅವರು ನಮ್ಮ ಮನೆಯಲ್ಲಿ ಎರಡೂವರೆ ತಿಂಗಳ ಹಿಂದೆ ಕೂಡಿರುವಂಥದ್ದು ನಿಜಾ. ಆದರೆ ನಾವು ಅವತ್ತು ಸೇರಿರುವಂಥದ್ದು ಯಾವುದೇ ರಾಜಕಾರಣದ ಅಸಮಾಧಾನದ ಗ್ರೂಪ್‌ಗಾಗಲಿ, ಸರ್ಕಾರ ಬದಲಾವಣೆ ಮಾಡುವಂಥಾದ್ದಾಗಲಿ, ಸಿಎಂ ಯಡಿಯುರಪ್ಪ ಅವರ ವಿರೋಧವಾಗಿ ಸೇರಿ ಚರ್ಚೆ ಮಾಡಿಲ್ಲ. ನಾವೆಲ್ಲ ಒಂದೇ ಪಕ್ಷದವರು.

ಪರಿಷತ್ ಚುನಾವಣೆ: ಯುಟರ್ನ್ ಹೊಡೆದ ಎಸ್‌.ಟಿ. ಸೋಮಶೇಖರ್?ಪರಿಷತ್ ಚುನಾವಣೆ: ಯುಟರ್ನ್ ಹೊಡೆದ ಎಸ್‌.ಟಿ. ಸೋಮಶೇಖರ್?

ಅದನ್ನೇ ಮಾಧ್ಯಮದವರು ಏನೊ ದೊಡ್ಡ ಸಾಧನೆ, ರಹಸ್ಯ ಕಾರ್ಯಾಚರಣೆ ಎಂಬಂತೆ ತೋರಿಸುವುದು ಪ್ರಜ್ಞಾವಂತ ಮಿಡಿಯಾದ ಹಿರಿಯರಿಗೆ ಸೂಕ್ತವಲ್ಲ. ಉಮೇಶ್ ಕತ್ತಿ ಅವರು ಹಿರಿಯರು ಅವರನ್ನು ಮಂತ್ರಿ ಮಾಡಿರಿ ಎಂದು ನಾನು ಮನವಿ ಮಾಡಿಕೊಳ್ಳುತ್ತೇನೆ. ನನ್ನನ್ನು ಸಚಿವನನ್ನಾಗಿ ಮಾಡದೇ ಹೋದರೂ ನಾನು ಅಸಮಾಧಾನ ಗೊಳ್ಳುವುದಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದರು.

English summary
The government has leased Pandavapura Co-operative Sugar Factory to Nirani Group Of Companies, owned by BJP leader Murugesh Nirani,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X