ಸರ್ಕಾರಿ ಬಸ್ ಪ್ರಯಾಣಿಕರು ಟಿಕೆಟ್ ದರ ಏರಿಕೆಗೆ ಸಜ್ಜಾಗಿ

ಬೆಂಗಳೂರು, ಸೆಪ್ಟೆಂಬರ್ 04: ಸತತವಾಗಿ ಡೀಸೆಲ್ ದರ ಏರುತ್ತಿರುವ ಕಾರಣ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಟಿಕೆಟ್ ದರ ಏರಿಸಲಾಗುವುದು ಎಂದು ಸಾರಿಗೆ ಸಚಿವ ತಮ್ಮಣ್ಣ ಇಂದು ಹೇಳಿದರು.

ಸುದ್ದಿಗೋಷ್ಠಿ ಕರೆದು ಮಾತನಾಡಿದ ಅವರು, ಟಿಕೆಟ್ ದರ ಏರಿಕೆ ಬಗ್ಗೆ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಪ್ರಸ್ತಾವನೆಗೆ ಅಂಕಿತ ಬಿದ್ದ ಕೂಡಲೇ ಬೆಲೆ ಏರಿಸಲಾಗುವುದು ಎಂದರು.

ಕಳೆದ ಎರಡು ತಿಂಗಳ ಹಿಂದೆಯೇ 18% ಟಿಕೆಟ್ ದರ ಏರಿಸಲೆಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಡೀಸೆಲ್ ದರ ಏರುಮುಖವಾಗಿಯೇ ಹೋಗುತ್ತಿರುವ ಕಾರಣ ಬೇರೆ ವಿಧಿಯಿಲ್ಲದೆ ಟಿಕೆಟ್ ದರ ಏರಿಸಲಬೇಕಿದೆ ಎಂದು ಅವರು ಹೇಳಿದರು.

Government hiking KSRTC and BMTC bus fair

ಡೀಸೆಲ್ ದರ ಏರಿಕೆಯಿಂದಾಗಿ ಕೆಎಸ್‌ಆರ್‌ಟಿಸಿಗೆ ಮೂರು ತಿಂಗಳ ಅವಧಿಯಲ್ಲಿ 186 ಕೋಟಿ ನಷ್ಟವಾಗಿದೆ. ಹಾಗಾಗಿ ಸಾರಿಗೆ ಸಂಸ್ಥೆಗೂ ನಷ್ಟವಾಗದ ಹಾಗೆ, ಹಾಗೂ ಪ್ರಯಾಣಿಕರಿಗೂ ಹೊರೆ ಆಗದಂತೆ ಪ್ರಯಾಣ ದರ ಏರಿಸಲಾಗುವುದು ಎಂದು ತಮ್ಮಣ್ಣ ಅವರು ಮಾಹಿತಿ ನೀಡಿದರು.

ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಕೊಡುವ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ಮಾಡಿ ಇನ್ನೊಂದು ವಾರದಲ್ಲಿ ತೀರ್ಮಾನ ಮಾಡುತ್ತೇವೆ ಎಂದು ಅವರು ಹೇಳಿದರು.

ದೂರದ ಮಾರ್ಗಗಳಿಗೆ ಸ್ಲೀಪರ್ ಕೋಚ್‌ನ ಬೇಡಿಕೆ ಹೆಚ್ಚಿರುವ ಕಾರಣ ಹೊಸದಾಗಿ 40 ಸ್ಲೀಪರ್ ಕೋಚ್‌ ಬಸ್ಸುಗಳನ್ನು ಖರೀದಿಸಲಾಗುವುದು. ರಜಾ ದಿನಗಳಲ್ಲಿ ದೂರದ ಮಾರ್ಗಗಳಿಗೆ ಸ್ಲೀಪರ್ ಕೋಚ್‌ ಬಸ್ಸುಗಳನ್ನು ಹೆಚ್ಚಿಗೆ ಓಡಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+