Government Employee: ಸರ್ಕಾರಿ ನೌಕರರಿಗೆ ಈ ಕಾರಣಕ್ಕೆ ಬಡ್ತಿಗೆ ಹಿನ್ನಡೆ!
ರಾಜ್ಯದಲ್ಲಿ ಸರ್ಕಾರಿ ನೌಕರರು ಹಾಗೂ 30ಕ್ಕೂ ಹೆಚ್ಚು ಇಲಾಖೆಗಳಲ್ಲಿ ಕಳೆದ ಮೂರು ವರ್ಷಗಳಿಂದ ನಿಯಮ ಪಾಲನೆ ಆಗದೆ ಇರುವ ಬಗ್ಗೆ ಇದೀಗ ಚರ್ಚೆ ಜೋರಾಗಿದೆ. ಆಡಳಿತ ಸುಧಾರಣೆಯ ಭಾಗವಾಗಿ ಅನುಸರಿಬೇಕಾದ ಕೆಲವು ಪ್ರಮುಖ ನಿಯಮಗಳನ್ನು ಒಂದಲ್ಲ ಎರಡಲ್ಲ ಬರೋಬ್ಬರಿ 30ಕ್ಕೂ ಹೆಚ್ಚು ಇಲಾಖೆಗಳಲ್ಲಿ ಪಾಲನೆ ಮಾಡುತ್ತಿಲ್ಲ ಎನ್ನುವ ಅಂಶವು ಇದೀಗ ಬೆಳಕಿಗೆ ಬಂದಿದೆ. ಆಡಳಿತದಲ್ಲಿ ಸುಧಾರಣೆ ತರುವ ಉದ್ದೇಶದಿಂದ ಪ್ರತಿ 3 ವರ್ಷಗಳಿಗೆ ಪಾಲನೆ ಮಾಡಬೇಕಾದ ನಿಯಮವನ್ನು ಪಾಲನೆ ಮಾಡುತ್ತಿಲ್ಲ ಎನ್ನುವ ವಿಷಯವು ಇದೀಗ ಬಹಿರಂಗವಾಗಿದೆ. ಅಲ್ಲದೆ ಸರ್ಕಾರಿ ಉದ್ಯೋಗಿಗಳು ಯಾವ ಕಾರಣಕ್ಕೆ ಬಡ್ತಿಯಿಂದ ವಂಚಿತರಾಗುತ್ತಿದ್ದಾರೆ ಎನ್ನುವ ಅಂಶವೂ ಬಹಿರಂಗವಾಗಿದೆ.
ಸರ್ಕಾರದ ಪ್ರಮುಖ ನಿಯಮವನ್ನೇ ಸರಿಯಾಗಿ ಪಾಲನೆ ಮಾಡದೆ ಇರುವುದರಿಂದಾಗಿ ಸರ್ಕಾರಿ ನೌಕರರಿಗೆ ಇರುವ ಮುಖ್ಯ ಉದ್ದೇಶವೇ ಈಡೇರುತ್ತಿಲ್ಲ ಎಂದು ಹೇಳಲಾಗಿದೆ. ಆಡಳಿತ ಸುಧಾರಣೆಯನ್ನು ಮಾಡುವ ಉದ್ದೇಶದಿಂದಾಗಿ ಕರ್ನಾಟಕದಲ್ಲಿ ವೃಂದ ಹಾಗೂ ನೇಮಕಾತಿಗಳಲ್ಲಿ ಕೆಲವೊಂದು ಪ್ರಮುಖ ನಿಯಮಗಳು ಇವೆ. ಅದರಲ್ಲಿ ಪ್ರಮುಖವಾದದ್ದು ಪ್ರತಿ ಮೂರು ವರ್ಷಗಳಿಗೆ ಒಮ್ಮೆ ಪರಿಷ್ಕರಣೆಯನ್ನು ಮಾಡುವುದು. ಆದರೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಲ್ಲೇ ಈ ನಿಯಮ ಪಾಲನೆ ಮಾಡಿಲ್ಲ ಎನ್ನುವ ವಿಷಯ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.

ನಿಯಮ ಉಲ್ಲಂಘನೆ: ಸರ್ಕಾರದ ನಿಯಮಾನುಸಾರ ಪ್ರತಿ ಮೂರು ವರ್ಷಗಳಿಗೆ ಒಮ್ಮೆ ವೃಂದ ಹಾಗೂ ನೇಮಕಾತಿ ನಿಯಮಗಳನ್ನು ಪರಿಷ್ಕರಣೆ ಮಾಡಬೇಕು ಎಂದಿದೆ. ಆದರೆ 30 ಇಲಾಖೆಗಳು ಈ ನಿಯಮವನ್ನು ಪಾಲನೆ ಮಾಡುತ್ತಿಲ್ಲ ಅಥವಾ ಈ ವಿಷಯವನ್ನೇ ಮರೆತಿವೆ. 2024ರಲ್ಲೇ ಈ ವಿಷಯವಾಗಿ ಸೂಚನೆ ನೀಡಲಾಗಿದೆ. ಆದರೆ ಬರೋಬ್ಬರಿ 5 ವರ್ಷ ಸಮೀಪಿಸುತ್ತಿದ್ದರೂ ನಿಯಮಗಳ ಪಾಲನೆಯಾಗಿಲ್ಲ ಎನ್ನುವ ವಿಷಯ ಬೆಳಕಿಗೆ ಬಂದಿದೆ.
ಇದೀಗ 2020ರಿಂದ 30 ಇಲಾಖೆಗಳು ವೃಂದ ಮತ್ತು ನೇಮಕಾತಿ ನಿಯಮಗಳ ಸಮಗ್ರ ಪರಿಷ್ಕರಣೆ ಆಗಬೇಕಿದೆ ಎಂದು ಸರ್ಕಾರವೇ ಹೇಳಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಸರ್ಕಾರದ 30 ಇಲಾಖೆಗಳ ಅಡಿಯ 72 ಕ್ಷೇತ್ರ ಇಲಾಖೆಗಳು 2020ರಿಂದ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಸಮಗ್ರವಾಗಿ ಪರಿಷ್ಕರಿಸುವುದು ಬಾಕಿ ಉಳಿದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ನೇಮಕಾತಿ ಕೊರತೆ ಒತ್ತಡ: ಇನ್ನು ಕರ್ನಾಟಕದಲ್ಲಿ ಬರೋಬ್ಬರಿ 2.50 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳದೆ ಇರುವುದರಿಂದ ಸರ್ಕಾರಿ ನೌಕರರಿಗೆ ಉದ್ಯೋಗದಲ್ಲಿ ಸಮಸ್ಯೆ ಆಗುತ್ತಿದೆ ಎಂದು ಹೇಳಲಾಗಿದೆ. ರಾಜ್ಯ ಕಾಂಗ್ರೆಸ್ ಸರ್ಕಾರವು ಪ್ರಣಾಳಿಕೆಯಲ್ಲೇ ಈ ಬಗ್ಗೆ ಭರವಸೆ ನೀಡಿತ್ತು. ಅಲ್ಲದೆ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವುದಾಗಿಯೂ ಹೇಳಿತ್ತು. ಆದರೆ, ಈ ವಿಷಯ ಇನ್ನೂ ನನೆಗುದ್ದಿಗೆ ಬಿದ್ದಿದೆ. ಅಲ್ಲದೆ ಇದರಿಂದ ಸರ್ಕಾರಿ ಅಧಿಕಾರಿ ಮತ್ತು ಸಿಬ್ಬಂದಿಯ ಸಿಬ್ಬಂದಿ ಅರ್ಹತೆ ಮತ್ತು ಸೇವಾ ಅನುಭವಕ್ಕೆ ಅನುಗುಣವಾಗಿ ಬಡ್ತಿಯಿಂದ ವಂಚಿತರಾಗುತ್ತಿದ್ದಾರೆ ಎಂದು ಹೇಳಲಾಗಿದೆ.












Click it and Unblock the Notifications