Government Employee: ಅಧ್ಯಕ್ಷೀಯ ಚುನಾವಣೆ, ಸರ್ಕಾರಿ ನೌಕರರಿಗೆ ಸಿಕ್ಕ ಭರವಸೆಗಳು
ಬೆಂಗಳೂರು, ಡಿಸೆಂಬರ್ 24: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರು ಹಾಗೂ ರಾಜ್ಯ ಖಜಾಂಚಿ ಆಯ್ಕೆಗೆ ಡಿಸೆಂಬರ್ 27ರಂದು ಚುನಾವಣೆ ನಡೆಯಲಿದೆ. 2024-29 ಅವಧಿಯ ರಾಜ್ಯಾಧ್ಯಕ್ಷ ಹಾಲಿ ಅಧ್ಯಕ್ಷರಾಗಿರುವ ಸಿ. ಎಸ್. ಷಡಾಕ್ಷರಿ ಮತ್ತು ರಾಜ್ಯ ಖಜಾಂಚಿ ಸ್ಥಾನಕ್ಕೆ ಕೊಪ್ಪಳ ಜಿಲ್ಲಾಧ್ಯಕ್ಷರಾದ ನಾಗರಾಜ್ ಜುಮ್ಮಣ್ಣನವರ ಅಭ್ಯರ್ಥಿಯಾಗಿದ್ದಾರೆ.
ಚುನಾವಣೆ ಹಿನ್ನಲೆಯಲ್ಲಿ ಸಿ. ಎಸ್. ಷಡಾಕ್ಷರಿ ಮತ್ತು ನಾಗರಾಜ್ ಜುಮ್ಮಣ್ಣನವರ ಸರ್ಕಾರಿ ನೌಕರರಿಗೆ ಭರವಸೆಗಳನ್ನು ನೀಡಿದ್ದಾರೆ. 'ಇದು ಭರವಸೆಯಲ್ಲ ಸಂಕಲ್ಪ' ಎಂದು ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.

ಚುನಾವಣಾ ಪ್ರಣಾಳಿಕೆ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ 2024-2029ನೇ ಅವಧಿಗೆ ದಿನಾಂಕ 27-12-2024 ರಂದು ರಾಜ್ಯ ಸಂಘದ ರಾಜ್ಯಾಧ್ಯಕ್ಷ ಹಾಗೂ ರಾಜ್ಯ ಖಜಾಂಚಿ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ನಾವಿಬ್ಬರೂ ಸ್ಪರ್ಧಿಸಿರುತ್ತೇವೆ. ಸಂಘದ ಸ್ಥಾನಗಳನ್ನು ಅಧಿಕಾರವೆಂದು ತಿಳಿಯದೆ ಸರ್ಕಾರಿ ನೌಕರರ ಸಮಸ್ಯೆ - ಸವಾಲುಗಳನ್ನು ಆದ್ಯತೆಯ ಮೇಲೆ ಪರಿಹರಿಸಲು ನಮಗೆ ದೊರೆತ ಅವಕಾಶ ಮತ್ತು ಜವಾಬ್ದಾರಿಯೆಂದು ಭಾವಿಸಿದ್ದೇವೆ. ಸಂಘಟನೆಯ ಕಾರ್ಯವೈಖರಿ ಹಾಗೂ ಮನೋಧರ್ಮ ಹೊಸತನದ ಸುಧಾರಣೆಯತ್ತ ಬದಲಾಗಬೇಕು. ಅದಕ್ಕಾಗಿ, ನಾವೆಲ್ಲರೂ ಹೊಸ ಮನ್ವಂತರದತ್ತ ವಿಕಾಸಶೀಲ ಹೆಜ್ಜೆಗಳನ್ನಿಡಲು ಬದಲಾವಣೆಗಾಗಿ ಕೈ ಜೋಡಿಸೋಣ ಎಂದು 2019ರಲ್ಲಿ ಹೊರಟಾಗ ತಾವೆಲ್ಲರೂ ಬೆಂಬಲಿಸಿ, ಆಶೀರ್ವದಿಸಿದ್ದೀರಿ.
ಅವಕಾಶ ಸಿಕ್ಕಾಗ ಅತ್ಯಂತ ಪ್ರಾಮಾಣಿಕವಾಗಿ ಹಾಗೂ ಪಾರದರ್ಶಕವಾಗಿ ಸಂಘಟನೆಯನ್ನು ಮುನ್ನಡೆಸಿರುವ ತೃಪ್ತಿ ನಮಗಿದೆ. ಮತ್ತೊಮ್ಮೆ 2024-29ರ ಅವಧಿಗೆ ನಿಮ್ಮ ಅಮೂಲ್ಯವಾದ ಮತವನ್ನು ನೀಡುವ ಮೂಲಕ ನಮ್ಮನ್ನು ಬೆಂಬಲಿಸಿದಲ್ಲಿ ಅಹರ್ನಿಶಿ ಸರ್ಕಾರಿ ನೌಕರರ ಶ್ರೇಯೋಭಿವೃದ್ಧಿಗಾಗಿ ಸೇವಾಭಾವದಿಂದ ಕಾರ್ಯ ನಿರ್ವಹಿಸುತ್ತೇವೆಂದು ಸಂಕಲ್ಪ ಮಾಡುತ್ತೇವೆ. ನವ ಮನ್ವಂತರದ ಇನ್ನಷ್ಟು ಸಾಧನೆಗಳಿಗಾಗಿ ಕೈ ಜೋಡಿಸಬೇಕೆಂದು ಕೈ ಜೋಡಿಸಬೇಕೆಂದು ಕೋರುತ್ತಾ, ತಮ್ಮ ಅಮೂಲ್ಯವಾದ ಮತಗಳನ್ನು ನಮಗೆ ನೀಡಬೇಕಾಗಿ ಪ್ರಾರ್ಥಿಸುತ್ತೇವೆ ಎಂದು ಹೇಳಿದ್ದಾರೆ.
ಆತ್ಮೀಯ ಚುನಾಯಿತ ಪ್ರತಿನಿಧಿಗಳವರೇ, ತಮಗೆ ಗೌರವಪೂರ್ವಕ ನಮಸ್ಕಾರಗಳು. ದೇಶದಲ್ಲಿಯೇ ಬಹುದೊಡ್ಡ ಸರ್ಕಾರಿ ನೌಕರರ ಸಂಘಟನೆ ಎಂಬ ಹೆಮ್ಮೆಯ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆಗಳಲ್ಲಿ ಜಿಲ್ಲೆಗಳ ಜಿಲ್ಲಾಧ್ಯಕ್ಷರು, ಬೆಂಗಳೂರು ನಗರ ರಾಜ್ಯ ಪರಿಷತ್ ಸದಸ್ಯರು, ತಾಲ್ಲೂಕು ಅಧ್ಯಕ್ಷರು, ಜಿಲ್ಲಾ ಸಂಘದ ಕಾರ್ಯದರ್ಶಿಗಳು, ಖಜಾಂಚಿ, ರಾಜ್ಯ ಪರಿಷತ್ ಸದಸ್ಯರು ಹಾಗೂ ತಾಲ್ಲೂಕು ಸಂಘದ ಕಾರ್ಯದರ್ಶಿ, ಖಜಾಂಚಿ, ರಾಜ್ಯ ಪರಿಷತ್ ಸದಸ್ಯರು ಹಾಗೂ ಯೋಜನಾ ಶಾಖೆಗಳ ಅಧ್ಯಕ್ಷರುಗಳಾಗಿ ನೂತನವಾಗಿ ಆಯ್ಕೆಯಾಗಿರುವ ತಮಗೆಲ್ಲರಿಗೂ ಹೃತೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತಾ ಮುಂದಿನ ನಿಮ್ಮ ಬದುಕು ಯಶಸ್ಸಿನತ್ತ ಸಾಗಲೆಂದು ಶುಭ ಹಾರೈಸುತ್ತೇನೆ.
ಸರ್ವರಿಗೂ ಸಮಪಾಲು-ಸರ್ವರಿಗೂ ಸಮಬಾಳು ಎಂಬ ಸಂವಿಧಾನದ ಆಶಯವನ್ನು ದಿಲ್ಲಿಯಿಂದ ಗಲ್ಲಿಯವರೆಗೆ ಮುಖ್ಯವಾಹಿನಿಯಾಗಿ ಅನುಷ್ಠಾನಗೊಳಿಸುವ ಸರ್ಕಾರಿ ಸೇವೆ ದೊರೆತದ್ದು ನಮ್ಮ ಪುಣ್ಯ. ಸರ್ಕಾರಿ ನೌಕರಿ ಕೇವಲ ವೃತ್ತಿಯಲ್ಲ, ಅದೊಂದು ಸಮಾಜ ಸೇವೆ, ಇಡೀ ಬದುಕನ್ನು ಆವರಿಸಿಕೊಂಡಿರುವ ಮಹೋನ್ನತ ಜೀವನಧರ್ಮ. ಜಾಗತೀಕರಣ ಸೃಷ್ಟಿಸಿದ ಹೊಸ-ಹೊಸ ಉದ್ಯೋಗಾವಕಾಶಗಳು ಸರ್ಕಾರಿ ನೌಕರಿಯ ಅನಿವಾರ್ಯತೆಯನ್ನು ಕಡಿಮೆ ಮಾಡಿವೆ. ಕಾರ್ಪೋರೇಟ್ ಮಾದರಿಯ ಖಾಸಗಿ ನೌಕರಿಗಳು ಆಕರ್ಷಣೀಯ ಸಂಬಳ, ಸವಲತ್ತುಗಳು, ಸ್ವಚ್ಛ-ಸುಂದರ-ಒತ್ತಡಮುಕ್ತ ಕೆಲಸದ ವಾತಾವರಣ, ಸಾಮರ್ಥ್ಯ ಆಧಾರಿತ ಗಳಿಕೆ-ಬಡ್ತಿಗಳಿಂದ ಹೆಚ್ಚು ಜನಪ್ರಿಯವಾಗುತ್ತಿವೆ.
ಆದರೆ ಸಮಾಜದ ಎಲ್ಲಾ ಸೇವಾಕಾರ್ಯಗಳು ಹಾಗೂ ಅಭಿವೃದ್ಧಿ ಸಂಬಂಧಿತ ಯೋಜನೆಗಳ ನಿರ್ವಹಣೆ ಸರ್ಕಾರಿ ನೌಕರರಿಂದ ಮಾತ್ರ ಸಾಧ್ಯ. ಒಂದೇ ಒಂದು ಕ್ಷಣ ಸರ್ಕಾರಿ ವ್ಯವಸ್ಥೆ ಸ್ಥಗಿತಗೊಂಡಲ್ಲಿ ಊಹಿಸಲೂ ಅಸಾಧ್ಯವಾದ ಪರಿಣಾಮಗಳನ್ನು ಎಲ್ಲರೂ ಎದುರಿಸಬೇಕಾಗುತ್ತದೆ. ಆದ್ದರಿಂದ ಇಡೀ ಸಾಮಾಜಿಕ ವ್ಯವಸ್ಥೆಗೆ ಅತ್ಯಗತ್ಯವಾದ ಕಾರ್ಯಾಂಗದ ವ್ಯವಸ್ಥೆಯನ್ನು ಎಲ್ಲಾ ರೀತಿಯ ಸುಧಾರಣಾ ಕ್ರಮಗಳ ಮೂಲಕ ಕಾರ್ಪೋರೇಟ್ ಮಾದರಿಯಲ್ಲಿ ಸಜ್ಜುಗೊಳಿಸಬೇಕಿದೆ. ಅಂತಹುದರಲ್ಲಿ ಸರ್ಕಾರಿ ನೌಕರಿಯ ಪ್ರಮುಖ ಭದ್ರತೆಯಾಗಿದ್ದ ಪಿಂಚಣಿ ವ್ಯವಸ್ಥೆಯನ್ನು ರದ್ದು ಮಾಡಿ, ನೌಕರರನ್ನು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿಸಲಾಗಿದೆ.
ಅಸಂಬದ್ಧ ವರ್ಗಾವಣೆ ನೀತಿ, ದಿನಕ್ಕೊಂದು ಅಸಮರ್ಪಕ ನಿಯಮ, ಸುಸಜ್ಜಿತವಲ್ಲದ ಕಛೇರಿಯ ಭೌತಿಕ-ಬೌದ್ಧಿಕ-ಮಾನಸಿಕ ಪರಿಸರ, ದೈಹಿಕ ಹಾಗೂ ಮಾನಸಿಕ ಒತ್ತಡ, ಸಾರ್ವಜನಿಕರ ಅತಿಯಾದ ನಿರೀಕ್ಷೆಗಳು ಸೃಷ್ಟಿಸುವ ಹಲ್ಲೆಯಂತಹ ಪ್ರಕರಣಗಳು, ಮೂಗರ್ಜಿಗಳು, ಆರ್‌ಟಿಐ ದುರ್ಬಳಕೆ, ಅನೇಕ ತನಿಖಾಸಂಸ್ಥೆಗಳ ಅತಿಯಾದ, ದೀರ್ಘಕಾಲೀನ ವಿಚಾರಣಾ ಪದ್ಧತಿಗಳು, ದಿನಕ್ಕೊಂದು ಹೊಸ ಉಪಕರಣಗಳು ತಯಾರಾಗಿ ಅವುಗಳನ್ನು ಬಳಸಲು ಸೂಕ್ತ ವ್ಯವಸ್ಥೆ, ನೈಪುಣ್ಯ, ತರಬೇತಿಗಳ ಕೊರತೆ, ಒಂದೇ ಸಾಮಾಜಿಕ ಪರಿಸರದಲ್ಲಿ ಬದುಕುವ ಎಲ್ಲಾ ರೀತಿಯ ನೌಕರರ ಜೀವನ ನಿರ್ವಹಣೆಗೆ ಕೊರತೆಯೆನಿಸುವಂತಹ ವೇತನ-ಭತ್ಯೆಯ ವ್ಯತ್ಯಾಸಗಳು ಇನ್ನೂ ಮುಂತಾದ ಕಾರಣಗಳಿಂದ ಇಂದಿನ ಸರ್ಕಾರಿ ನೌಕರರು ಅತ್ಯಂತ ಕಷ್ಟದ ಪರಿಸ್ಥಿತಿಗಳನ್ನು ದಿನನಿತ್ಯವೂ ಎದುರಿಸುವಂತಾಗಿದೆ. ಇವೆಲ್ಲವುಗಳ ನಿವಾರಣೆಗೆ ತಕ್ಷಣ ನಿರ್ಣಾಯಕ ಹೋರಾಟ ನಡೆಸಲು ಚಿಂತಿಸಬೇಕಿದೆ. ಆ ಮೂಲಕ ಎಲ್ಲಾ ನೌಕರರಿಗೆ ನೆಮ್ಮದಿಯ ಬದುಕು ನೀಡುವುದು, ನನ್ನ ನೌಕರಿ - ನನ್ನ ಹೆಮ್ಮೆ ಎಂಬ ಅಭಿಮಾನ ತುಂಬಿದ ಘನತೆಯತ್ತ ಎಲ್ಲರನ್ನೂ ಕೊಂಡೊಯ್ಯುವುದು ನಮ್ಮ ಸಂಕಲ್ಪವಾಗಿದೆ.
ಜಗತ್ತು ಪ್ರತೀ ಕ್ಷಣವೂ ಹೊಸತುಗಳನ್ನು ಸೃಷ್ಟಿಸಿಕೊಂಡು ಮುನ್ನಡೆಯುತ್ತಿರುವ ಸಂದರ್ಭದಲ್ಲಿ ನಮ್ಮ ಸರ್ಕಾರಿ ನೌಕರರ ಸಂಘಟನೆಯು ಆಲೋಚನೆ ಹಾಗೂ ಅನುಷ್ಠಾನದಲ್ಲಿ ಕಾರ್ಪೋರೇಟ್ ಮಾದರಿಯ ಹೊಸತನದೊಂದಿಗೆ ಮುನ್ನುಗ್ಗಬೇಕು. ಸಾಮಾನ್ಯ ನೌಕರನಿಗೂ ಸಂಘಟನೆ 'ನನ್ನದೇ' ಎಂಬ ಅಭಿಮಾನ ಮೂಡುವಂತೆ ಮಾಡುವುದು ನಮ್ಮ ಮೊದಲ ಆದ್ಯತೆ. ಸ್ನೇಹಿತರೇ, ಕಿರಿಯ ವಯಸ್ಸಿನಲ್ಲಿಯೇ ವಿವಿಧ ಹಂತಗಳಲ್ಲಿ ಸರ್ಕಾರಿ ನೌಕರರ ಹಾಗೂ ಸಾರ್ವಜನಿಕ ಸೇವೆಯನ್ನು ಮಾಡುವ ಅವಕಾಶ ದೊರೆತಿದ್ದು ನನ್ನ ಭಾಗ್ಯ. ಈ ವೃತ್ತಿಪಯಣದಲ್ಲಿ ಎಲ್ಲಾ ರೀತಿಯ ಸರ್ಕಾರಿ ನೌಕರರ ಸಂಪರ್ಕವು ಅವರೆಲ್ಲರ ನೋವು-ನಲಿವು, ಸವಾಲುಗಳನ್ನು ಪ್ರತ್ಯಕ್ಷ ನೋಡುವ ಹಾಗೂ ಪರಿಹಾರ ಕಂಡುಕೊಳ್ಳುವ ಮಾರ್ಗವನ್ನು ದರ್ಶಿಸಿದೆ. ಆ ಅನುಭವಗಳನ್ನು ನೌಕರರ ಒಳಿತಿಗಾಗಿ ಬಳಸಿಕೊಳ್ಳುವ ಏಕೈಕ ಆಸಕ್ತಿಯಿಂದ ಪ್ರಾಮಾಣಿಕ ಸೇವೆಗಾಗಿ ಸಂಘಟನೆಗೆ ಬಂದಿದ್ದೇನೆ ಎಂದು ಹೇಳಿದ್ದಾರೆ.
ಕಳೆದ ಹತ್ತು ವರ್ಷಗಳಿಂದ ಶಿವಮೊಗ್ಗ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷನಾಗಿ ಪ್ರೀತಿ ಮತ್ತು ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸಿ, ನೂರಾರು ಕಾರ್ಯಕ್ರಮಗಳ ಮೂಲಕ ಶಿವಮೊಗ್ಗ ಜಿಲ್ಲಾ ಘಟಕವನ್ನು ರಾಜ್ಯದಲ್ಲಿಯೇ ಮಾದರಿ ಸಂಘಟನೆಯಾಗಿ ರೂಪಿಸಲಾಗಿದೆ. ನೌಕರರು ಹಾಗೂ ಎಲ್ಲಾ ಹಿತೈಷಿಗಳ ಪ್ರೀತಿ ತುಂಬಿದ ಆಶಯದಂತೆ ಶಿವಮೊಗ್ಗ ಮಾದರಿಯನ್ನು ರಾಜ್ಯಮಟ್ಟಕ್ಕೆ ವಿಸ್ತರಿಸುವ, ನಿರಂತರ ಸೇವೆ-ಸಂಘಟನೆ ಮೂಲಕ ಸರ್ಕಾರಿ ನೌಕರರ ಸವಾಲುಗಳಿಗೆ ನಿರ್ಣಾಯಕ ಪರಿಹಾರ ದೊರಕಿಸಲು ಅತ್ಯಂತ ಉತ್ಸುಕನಾಗಿದ್ದೇನೆ. ಒಂದು ಅವಧಿಯಲ್ಲಿ ರಾಜ್ಯ ಸಂಘದ ಖಜಾಂಚಿಯಾಗಿ ಕೆಲಸ ಮಾಡುವ ಮೂಲಕ ನಾಡಿನ ಹಾಗೂ ಸಂಘಟನೆಯ ನೈಜ ಪರಿಚಯ ಮಾಡಿಕೊಂಡಿದ್ದೇನೆ ಹಾಗೂ 2019-24ನೇ ಅವಧಿಯಲ್ಲಿ ರಾಜ್ಯ ಸಂಘದ ರಾಜ್ಯಾಧ್ಯಕ್ಷನಾಗಿ ಸುಮಾರು 26 ಸರ್ಕಾರಿ ಆದೇಶಗಳು, ರಾಜ್ಯ 7ನೇ ವೇತನ ಆಯೋಗ ಜಾರಿಗೊಳಿಸುವ ಕಾರ್ಯ ನಿಮ್ಮೆಲ್ಲರ ಸಹಕಾರದಿಂದ ಸಾಧ್ಯವಾಗಿದೆ.
ಈಗ 2024-2029ನೇ ಅವಧಿಯ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು, ನನ್ನೊಂದಿಗೆ ನಾಗರಾಜ ಆರ್. ಜುಮ್ಮನ್ನವರ ರಾಜ್ಯ ಖಜಾಂಚಿ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದಾರೆ. ತಮ್ಮ ಅಮೂಲ್ಯವಾದ ಸಲಹೆ-ಸಹಕಾರ ಹಾಗೂ ಮತವನ್ನು ನೀಡುವ ಮೂಲಕ ನಮ್ಮಿಬ್ಬರನ್ನೂ ಜಯಶಾಲಿಗಳನ್ನಾಗಿ ಮಾಡಬೇಕೆಂದು ವಿನಮ್ರವಾಗಿ ವಿನಂತಿಸುತ್ತೇನೆ ಎಂದು ಮನವಿ ಮಾಡಿದ್ದಾರೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications